ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಮಹೀಂದ್ರಾ ಕಂಪನಿಯಿಂದ ಲಾಂಚ್ ಆಗುವ ಬಹುನಿರೀಕ್ಷಿತ ದೊಡ್ಡ ಕಾರುಗಳು ಕೆಲವೊಮ್ಮೆ ಉತ್ಪಾದನಾ ದೋಷಗಳನ್ನು ಒಳಗೊಂಡಿರುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮಹೀಂದ್ರಾ XUV500, ಈ ಕಾರು ಬಿಡುಗಡೆಯ ನಂತರ ಕೆಲವು ಸಮಸ್ಯೆಗಳನ್ನು ಹೊತ್ತುಬಂದಿತ್ತು.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಇದೊಂದೆ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಕೆಲ ಸಮಸ್ಯೆಗಳಿಂದಾಗಿ XUV700 ಮತ್ತು ಥಾರ್ ಅನ್ನು ಕಂಪನಿಯೇ ರೀಕಾಲ್ ಮಾಡಿತ್ತು. ಮಹೀಂದ್ರಾ ಈ ವರ್ಷದ ಆರಂಭದಲ್ಲಿ ತನ್ನ ಮತ್ತೊಂದು ಜನಪ್ರಿಯ SUV ಆದ ಸ್ಕಾರ್ಪಿಯೋ-ಎನ್ ಅನ್ನು ಪರಿಚಯಿಸಿತ್ತು. ಈ ಹೊಸ ಸ್ಕಾರ್ಪಿಯೋ-ಎನ್ ವಿತರಣೆಗಳು ಈ ವಾರದ ಆರಂಭದಲ್ಲಿ ಪ್ರಾರಂಭವಾಗಿದೆ.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಡೆಲಿವರಿ ಆರಂಭವಾದ ಕೇವಲ ಎರಡು ದಿನಗಳಲ್ಲೇ ಗ್ರಾಹಕರೊಬ್ಬರು ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಮಹೀಂದ್ರಾ ಸ್ಕಾರ್ಪಿಯೊ-ಎನ್‌ನ ಮಾಲೀಕರಾದ ಶಿಖಾ ಶ್ರೀವಾಸ್ತವ ಎಂಬುವವರು ಮೊದಲ ಅಧಿಕೃತ ವಿತರಣಾ ದಿನಾಂಕವಾದ ಸೆಪ್ಟೆಂಬರ್ 26 ರಂದು ಕಾರಿನ್ನು ಡೆಲಿವರಿ ಪಡೆದಿದ್ದಾರೆ.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ವಿಚಿತ್ರವೆಂಬತೆ 27 ರಂದು ಕಾರು ಕೈಕೊಟ್ಟಿದೆ. ಈ ಬಗ್ಗೆ ದೂರನ್ನು ನೀಡಲು ಟ್ವಿಟ್ಟರ್‌ ಮೊರೆ ಹೋಗಿರುವ ಅವರು, ಎಂಡಿ ಮತ್ತು ಸಿಇಒ ಹಾಗೂ ಮುಖ್ಯಸ್ಥ ಆನಂದ್ ಮಹೀಂದ್ರಾ ಸೇರಿದಂತೆ ಮಹೀಂದ್ರಾದಲ್ಲಿನ ದೊಡ್ಡ ವ್ಯಕ್ತಿಗಳನ್ನು ಟ್ಯಾಗ್ ಮಾಡಿದ್ದಾರೆ. ಶಿಖಾ ಶ್ರೀವಾಸ್ತವ ಅವರು ಟ್ವಿಟರ್‌ನಲ್ಲಿ ಸಮಸ್ಯೆ ಕುರಿತ ವಿಡಿಯೋ ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.

ಕಾರಿನ ಈ ಪರಿಸ್ಥಿತಿಯನ್ನು ವೀಕ್ಷಿಸಿ ತಕ್ಷಣ ಕ್ರಮಕ್ಕೆ ವಿನಂತಿಸಿದ್ದಾರೆ. ಮರು ಟ್ವೀಟ್‌ಗಳು ಕೆಲವು ಲೈಕ್‌ಗಳನ್ನು ಹೊರತುಪಡಿಸಿ, ಮಹೀಂದ್ರಾದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಕಂಡುಬಂದಿಲ್ಲ. ಪೋಸ್ಟ್ ಪ್ರಕಾರ, ಆಕೆಯು ಕಾರನ್ನು ಚಾಲನೆ ಮಾಡುವಾಗ ಸಮಸ್ಯೆ ಕಾಣಿಸಿಕೊಂಡಿದೆ.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಕ್ಲಚ್ ಮತ್ತು ಗೇರ್ ಸಿಕ್ಕಿಹಾಕಿಕೊಂಡು ಅವು ಕೆಲಸ ಮಾಡಿಲ್ಲ. ಕ್ಲಚ್ ಪೆಡಲ್ ಕೆಳ ಭಾಗಕ್ಕೆ ಕಚ್ಚಿಕೊಂಡಿದ್ದು, ಕ್ಲಚ್ ಪೆಡಲ್ ಅನ್ನು ಹಿಂದಕ್ಕೆ ಎಳೆಯಲು ತನ್ನ ಪಾದವನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ತೋರಿಸುವ ವಿಡಿಯೋವನ್ನು ಅವರು ಅಪ್‌ಲೋಡ್ ಮಾಡಿದ್ದಾರೆ. ಇದು ಹೈಡ್ರಾಲಿಕ್ ಒತ್ತಡದ ಸಮಸ್ಯೆಯಾಗಿರಬಹುದು ಅಥವಾ ಕ್ಲಚ್‌ನ ಸ್ಲೇವ್ ಸಿಲಿಂಡರ್ ಸೋರಿಕೆಯಾಗಿ ಒತ್ತಡವನ್ನು ಕಳೆದುಕೊಂಡಿರಬಹುದು. ಕ್ಲಚ್ ಸಂಪೂರ್ಣವಾಗಿ ತೊಡಗಿಲ್ಲದ ಕಾರಣ, ಗೇರ್ ಕೂಡ ಅಂಟಿಕೊಂಡಿರುತ್ತದೆ.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಸದ್ಯ ಈ ವಾಹನಗಳ ಬೇಡಿಕೆ ತುಂಬಾ ಹೆಚ್ಚಾಗಿದ್ದು, ಬುಕಿಂಗ್‌ಗಳು ಗರಿಗೆದರಿವೆ. ಮತ್ತೊಂದೆಡೆ ಇವುಗಳಿಗಾಗಿ ಕಾಯುವ ಅವಧಿಯು ವಾರಗಳು, ತಿಂಗಳುಗಳಲ್ಲಿ ಅಲ್ಲ, ಇದೀಗ ಬರೋಬ್ಬರಿ 2 ವರ್ಷಗಳ ಸಮಯ ಹಿಡಿಯುತ್ತಿದೆ.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಅಪಾರ ಜನಪ್ರಿಯತೆ ಹೊಂದಿರುವ SUV ಗಳು ಅಗಾಧವಾದ ದೀರ್ಘ ಕಾಯುವ ಅವಧಿಯನ್ನು ಹೊಂದಿರುತ್ತವೆ ಎಂದು ಗ್ರಾಹಕರಿಗೂ ಗೊತ್ತು. ಆದರೆ ಕಂಪನಿಯು ಇದನ್ನು ಸುಧಾರಿಸುವುದರೊಂದಿಗೆ ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ವೇಗವಾಗಿ ತಲುಪಿಸಲು ಪ್ರಯತ್ನಿಸುತ್ತಿದೆ.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಇದರಿಂದ ತರಾತುರಿತಯಲ್ಲಿ ಕಾರುಗಳ ಉತ್ಪಾದನೆಯಾಗುವಾಗ ಇಂತಹ ಸಂಭವನೀಯ ಸಮಸ್ಯೆಗಳು ಎದರಾಗಬಹುದು. ಹೆಚ್ಚಿನ ಜನರು ಮುಂದಿನ ದಿನಗಳಲ್ಲಿ ಸ್ಕಾರ್ಪಿಯೋ-ಎನ್ ವಿತರಣೆಯನ್ನು ಪಡೆಯುವುದರಿಂದ, ಇದು ದೊಡ್ಡ ಸಮಸ್ಯೆಯೆಂದೇ ಪರಿಗಣಿಸಬೇಕಿದೆ.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಮಹೀಂದ್ರಾ XUV700, ಥಾರ್ ಮತ್ತು XUV300 ರೀಕಾಲ್

ಕಳೆದ ವಾರ ಮಹೀಂದ್ರಾ ಹಿಂಪಡೆಯುವಿಕೆಯಲ್ಲಿ ಕಾರ್ಯನಿರತವಾಗಿತ್ತು. ಕಂಪನಿಯು ಮೊದಲು ಮಹೀಂದ್ರಾ XUV700, ಥಾರ್ ಮತ್ತು XUV300 ಮಾದರಿಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ಇತ್ತೀಚೆಗೆ XUV700 ಡೀಸೆಲ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ರೂಪಾಂತರಗಳು ಮತ್ತು ಥಾರ್ ಡೀಸೆಲ್ ರೂಪಾಂತರಗಳಿಗೆ ಭಾರೀ ರೀಕಾಲ್ ಮಾಡಿದೆ. ಜೊತೆಗೆ ಕಂಪನಿಯು XUV700 ನ ಪೆಟ್ರೋಲ್ ರೂಪಾಂತರಗಳನ್ನು ಸಹ ಹಿಂಪಡೆದಿದೆ.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

XUV700 ಮತ್ತು ಥಾರ್ ಡೀಸೆಲ್ ರೂಪಾಂತರಗಳು ಹೊಸ ಟರ್ಬೋಚಾರ್ಜರ್ ಆಕ್ಯೂವೇಟರ್ ಲಿಂಕ್ ಅನ್ನು ಪಡೆಯುತ್ತವೆ. ಪೆಟ್ರೋಲ್ XUV700 ಅನ್ನು ಗ್ಯಾಸ್ ವೆಂಟ್ ಪೈಪ್‌ಗಳು ಮತ್ತು ಬಾಕ್ಸ್‌ನಲ್ಲಿ ಟಿ-ಬ್ಲಾಕ್ ಕನೆಕ್ಟರ್ ಸ್ಥಾಪನೆಗಳಿಗಾಗಿ ಪರಿಶೀಲಿಸಲಾಗುತ್ತಿದೆ. ಕಂಪನಿಯು ಸಮಸ್ಯೆಯಿರುವ ಯೂನಿಟ್‌ಗಳ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಮಹೀಂದ್ರ XUV700 ಗೆ ಇದು ನಾಲ್ಕನೇ ರೀಕಾಲ್ ಆಗಿದೆ. ಈ ಹಿಂದೆ, ಮಹೀಂದ್ರಾ XUV700 ಗೆ ಆಲ್ಟರ್ನೇಟರ್ ಬೆಲ್ಟ್ ಮತ್ತು ಆಟೋ-ಟೆನ್ಷನರ್ ಪುಲ್ಲಿಯನ್ನು ಸರಿಪಡಿಸಲು ನಿರ್ಣಾಯಕ ರೀಕಾಲ್ ಎಚ್ಚರಿಕೆಯನ್ನು ನೀಡಿತ್ತು. ಕೊನೆಯದಾಗಿ ರೀಕಾಲ್ ಮಾಡಲಾದಾಗ ಎಲೆಕ್ಟ್ರಾನಿಕ್ ಸ್ಟೀರಿಂಗ್ ಕಾಲಮ್ ಲಾಕ್ ಅಥವಾ ESCL ಅನ್ನು ಸಹ ಉದ್ದೇಶಿಸಲಾಗಿತ್ತು.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

XUV700 ನ ಆಲ್-ವೀಲ್ ಡ್ರೈವ್ ರೂಪಾಂತರಗಳಿಗಾಗಿ ಎರಡು ಬಾರಿ ರೀಕಾಲ್ ಮಾಡಿತ್ತು. ಈ ವೇಳೆ ಮಹೀಂದ್ರಾ ಪ್ರಾಪ್ ಶಾಫ್ಟ್ ಅನ್ನು ಪರಿಶೀಲಿಸಿದ್ದು ಅಗತ್ಯವಿದ್ದ ಭಾಗವನ್ನು ಬದಲಾಯಿಸಿತ್ತು. COVID-19 ಲಾಕ್‌ಡೌನ್‌ಗಳಿಂದಾಗಿ ಪರೀಕ್ಷೆಗೆ ಹೆಚ್ಚುವರಿ ಸಮಯವನ್ನು ಪಡೆದುಕೊಂಡಿದ್ದೇವೆ ಎಂದು ಮಹೀಂದ್ರಾ ಎಂಜಿನಿಯರ್‌ಗಳು ಹೇಳಿದ್ದರು.

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N: ಆನಂದ್ ಮಹೀಂದ್ರಾಗೆ ವಿಡಿಯೋ ಟ್ಯಾಗ್ ಮಾಡಿದ ಗ್ರಾಹಕ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಕ್ಲಚ್ ಸಮಸ್ಯೆಗಳನ್ನು ಸರಿಪಡಿಸಲು XUV300 ಅನ್ನು ಹಿಂಪಡೆದಿದೆ. ಇದೇ ಸಮಸ್ಯೆಗಳು ಸ್ಕಾರ್ಪಿಯೋ-ಎನ್‌ನಲ್ಲೂ ಕಾಣಿಸಿಕೊಂಡಿವೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಸದ್ಯ ಈ ಸಮಸ್ಯೆಗೆ ಮಹೀಂದ್ರಾ ಕಂಪನಿ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Read Articles

Kannada
English summary
Problem on second day of delivery customer tagged video to anand mahindra
Story first published: Thursday, September 29, 2022, 13:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X