ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಗ್ರಾಹಕರಿಂದ ದೂರುಗಳು

ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಬಹುನಿರೀಕ್ಷಿತ ಮಹೀಂದ್ರಾ ಸ್ಕಾರ್ಪಿಯೊ-ಎನ್‌ ಕೊನೆಗೂ ಗ್ರಾಹಕರಿಗೆ ಡೆಲಿವರಿಯಾಗುತ್ತಿದೆ. ಆದರೆ ಡೆಲಿವರಿ ಪಡೆದ ಕೆಲವೇ ದಿನಗಳಲ್ಲಿ ಗ್ರಾಹಕರು ಕಾರಿನಲ್ಲಿ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರುಗಳನ್ನು ನೀಡುತ್ತಿದ್ದಾರೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಇದಕ್ಕೆ ಉದಾಹರಣೆಯೆಂಬಂತೆ ಕೆಲವೇ ದಿನಗಳ ಹಿಂದೆ ಮೊದಲ ವಿತರಣೆ ಪಡೆದ ಗ್ರಾಹಕರೊಬ್ಬರು ಕೇವಲ ಒಂದೇ ದಿನದಲ್ಲಿ ತಮ್ಮ ಹೊಚ್ಚಹೊಸ ಸ್ಕಾರ್ಪಿಯೋ-ಎನ್‌ನ ಕ್ಲಚ್ ಕೆಲಸ ಮಾಡದೇ ತೊಂದರೆ ಅನುಭವಿಸಿದ್ದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಕುರಿತು ಡ್ರೈವ್‌ಸ್ಪಾರ್ಕ್‌ನಲ್ಲಿಯೂ ವರದಿ ಮಾಡಲಾಗಿತ್ತು. ಇದೀಗ ಮತ್ತೊಬ್ಬ ಮಾಲೀಕರು ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಸ್ಟಾರ್ಟ್ ಮಾಡಿದ ಐದೇ ನಿಮಿಷಗಳಲ್ಲಿ ಹೊಚ್ಚಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಅಧಿಕ ಬಿಸಿಯಾಗುತ್ತಿದೆ ಎಂದು ಕಳೆದ ಬುಧವಾರ ಅಂಶುಮಾನ್ ಬಿಷ್ಣೋಯ್ ಎಂಬುವರು ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ ಮಹೀಂದ್ರಾ ಸ್ಕಾರ್ಪಿಯೋ-ಎನ್ ಹೆಚ್ಚು ಬಿಸಿಯಾಗಿದೆ ಮತ್ತು ಕೂಲಂಟ್ ಕಣ್ಮರೆಯಾಗಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಇದು ಹೋಸ್‌ನಲ್ಲಿನ ಸೋರಿಕೆಯ ಕಾರಣದಿಂದಾಗಿರಬಹುದಾದರೂ ಇಲ್ಲಿ ಸಮಸ್ಯೆಗಳು ಅದಕ್ಕಿಂತ ಹೆಚ್ಚಾಗಿರುವಂತೆ ಕಾಣುತ್ತಿವೆ. ಬಿಷ್ಣೋಯ್ ಅವರು ಸ್ಕಾರ್ಪಿಯೊ-ಎನ್‌ನ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದು, AC ಸ್ವಿಚ್ ಆನ್ ಮಾಡಿಕೊಂಡು ಐದು ನಿಮಿಷಗಳ ಕಾಲ ಹೈಡ್ಲಿಂಗ್ ಕೊಟ್ಟರೇ ಸಾಕು ಕಾರಿನ ಡಿಸ್ಪ್ಲೇಯಲ್ಲಿ ಓವರ್‌ಹೀಟಿಂಗ್ ಎಚ್ಚರಿಕೆಯನ್ನು ತೋರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಹೊಚ್ಚಹೊಸ ಕಾರು ಈ ರೀತಿ ಕೈ ಕೊಡುತ್ತಿರುವುದರಿಂದ ಬೇಸತ್ತ ಬಿಷ್ಣೋಯ್, ಮೊದಲು ಕಾರನ್ನು ಸರ್ವೀಸ್ ಸೆಂಟರ್‌ಗೆ ಕೊಂಡೊಯ್ಯಲು ಯೋಚಿಸಿದರಾದರೂ ಬುಧವಾರ ಹಬ್ಬವಿದ್ದ ಕಾರಣ ನಿನ್ನೆ ಸೇವಾ ಕೇಂದ್ರಗಳನ್ನು ಮುಚ್ಚಲಾಗಿತ್ತು. ಹಾಗಾಗಿ ಬಿಷ್ಣೋಯ್ ವಾಹನವನ್ನು ದುರಸ್ತಿ ಮಾಡಲು ಸಾಧ್ಯವಾಗಿರಲಿಲ್ಲ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

T-BHP ಸದಸ್ಯ ಕುಶಗಂಧಿ ಅವರು, 1,000 ಕಿ.ಮೀ ನಂತರ ಕಾರಿನ ಮೊದಲನೇ ಸರ್ವೀಸ್ ವೇಳೆ ಸಮಸ್ಯೆಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಪ್ರಕಾರ, ಮಹೀಂದ್ರಾ ಮೊದಲ ಸರ್ವೀಸ್‌ಗೆ ಬಹಳ ಸಮಯ ತೆಗೆದುಕೊಂಡಿದೆ, ಏಕೆಂದರೆ ಅವರು ಸಾಕಷ್ಟು ಯಾಂತ್ರಿಕ ಕೆಲಸವನ್ನೂ ಮಾಡಿದ್ದಾರೆ. ಮಾಲೀಕರು ಕಾರನ್ನು ಸ್ವೀಕರಿಸಿದ ನಂತರ, ಡ್ರೈವಿಂಗ್ ವೇಳೆ ಹಿಲ್ ಹೋಲ್ಡ್ ವೈಫಲ್ಯವನ್ನು ಎದುರಿಸಿದ್ದಾರೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಬಳಿಕ ಮಾಲೀಕ ವಾಹನವನ್ನು ಮರುಪ್ರಾರಂಭಿಸಿದ ನಂತರ ವಾರ್ನಿಂಗ್ ಲೈಟ್ ಕಣ್ಮರೆಯಾಗಿದೆ. ಇದಾದ ಬಳಿಕ ಕಾರನ್ನು ಲಿಫ್ಟ್ ಮಾಡಿ ನೋಡಿದಾಗ ಮುಂಭಾಗದ ಎಡಭಾಗದಲ್ಲಿ ಪಂಕ್ಚರ್ ಆಗಿದ್ದು, ಗ್ರೀಸ್ ಪೂರ್ತಿಯಾಗಿದೆ ಎಂದು ತಿಳಿದುಬಂದಿದೆ. ರಬ್ಬರ್ ಭಾಗವು ಸರ್ವೀಸ್ ಕೇಂದ್ರದಲ್ಲಿ ಲಭ್ಯವಿಲ್ಲದ ಕಾರಣ ಅವರು ಅದನ್ನು ಮತ್ತೊಂದು ಸೇವಾ ಕೇಂದ್ರದಿಂದ ಪಡೆದಿದ್ದಾರೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಇದಾದ ಬಳಿಕ ಟ್ರಾನ್ಸ್ಮಿಷನ್ ಗ್ಯಾಸ್ಕೆಟ್ ಪೇಸ್ಟ್ ಅನ್ನು ಸರಿಯಾಗಿ ಅಂಟಿಸದ ಕಾರಣ ಸೋರಿಕೆಯಾಗುತ್ತಿದೆ ಎಂದು ಗೊತ್ತಾಗಿದೆ. ಟ್ರಾನ್ಸ್‌ಮಿಷನ್ ಆಯಿಲ್ ಶಿಫಾರಸು ಮಾಡುವುದಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಸರ್ವೀಸ್ ಸೆಂಟರ್ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿದರು. ಆದರೆ ಕಾರಿನ ಗುಣಮಟ್ಟವು ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ಮಾಲೀಕರು ಹೇಳಿದ್ದಾರೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಡೆಲಿವರಿ ಪಡೆದ 2ನೇ ದಿನವೇ ಕೈಕೊಟ್ಟ ಸ್ಕಾರ್ಪಿಯೋ-N

ಮಹೀಂದ್ರಾ ಸ್ಕಾರ್ಪಿಯೊ-ಎನ್‌ನ ಮಾಲೀಕರಾದ ಶಿಖಾ ಶ್ರೀವಾಸ್ತವ ಎಂಬುವವರು ಮೊದಲ ಅಧಿಕೃತ ವಿತರಣಾ ದಿನಾಂಕವಾದ ಸೆಪ್ಟೆಂಬರ್ 26 ರಂದು ಕಾರಿನ್ನು ಡೆಲಿವರಿ ಪಡೆದಿದ್ದಾರೆ. ವಿಚಿತ್ರವೆಂಬತೆ 27 ರಂದು ಕಾರು ಕೈಕೊಟ್ಟಿದೆ. ಈ ಬಗ್ಗೆ ದೂರನ್ನು ನೀಡಲು ಟ್ವಿಟ್ಟರ್‌ ಮೊರೆ ಹೋಗಿರುವ ಅವರು, ಎಂಡಿ ಮತ್ತು ಸಿಇಒ ಹಾಗೂ ಮುಖ್ಯಸ್ಥ ಆನಂದ್ ಮಹೀಂದ್ರಾ ಸೇರಿದಂತೆ ಮಹೀಂದ್ರಾದಲ್ಲಿನ ದೊಡ್ಡ ವ್ಯಕ್ತಿಗಳನ್ನು ಟ್ಯಾಗ್ ಮಾಡಿದ್ದಾರೆ. ಶಿಖಾ ಶ್ರೀವಾಸ್ತವ ಅವರು ಟ್ವಿಟರ್‌ನಲ್ಲಿ ಸಮಸ್ಯೆ ಕುರಿತ ವಿಡಿಯೋ ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಕಾರಿನ ಈ ಪರಿಸ್ಥಿತಿಯನ್ನು ವೀಕ್ಷಿಸಿ ತಕ್ಷಣ ಕ್ರಮಕ್ಕೆ ವಿನಂತಿಸಿದ್ದಾರೆ. ಮರು ಟ್ವೀಟ್‌ಗಳು ಕೆಲವು ಲೈಕ್‌ಗಳನ್ನು ಹೊರತುಪಡಿಸಿ, ಮಹೀಂದ್ರಾದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಕಂಡುಬಂದಿಲ್ಲ. ಪೋಸ್ಟ್ ಪ್ರಕಾರ, ಆಕೆಯು ಕಾರನ್ನು ಚಾಲನೆ ಮಾಡುವಾಗ ಸಮಸ್ಯೆ ಕಾಣಿಸಿಕೊಂಡಿದೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಕ್ಲಚ್ ಮತ್ತು ಗೇರ್ ಸಿಕ್ಕಿಹಾಕಿಕೊಂಡು ಅವು ಕೆಲಸ ಮಾಡಿಲ್ಲ. ಕ್ಲಚ್ ಪೆಡಲ್ ಕೆಳ ಭಾಗಕ್ಕೆ ಕಚ್ಚಿಕೊಂಡಿದ್ದು, ಕ್ಲಚ್ ಪೆಡಲ್ ಅನ್ನು ಹಿಂದಕ್ಕೆ ಎಳೆಯಲು ತನ್ನ ಪಾದವನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ತೋರಿಸುವ ವಿಡಿಯೋವನ್ನು ಅವರು ಅಪ್‌ಲೋಡ್ ಮಾಡಿದ್ದಾರೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಇದು ಹೈಡ್ರಾಲಿಕ್ ಒತ್ತಡದ ಸಮಸ್ಯೆಯಾಗಿರಬಹುದು ಅಥವಾ ಕ್ಲಚ್‌ನ ಸ್ಲೇವ್ ಸಿಲಿಂಡರ್ ಸೋರಿಕೆಯಾಗಿ ಒತ್ತಡವನ್ನು ಕಳೆದುಕೊಂಡಿರಬಹುದು. ಕ್ಲಚ್ ಸಂಪೂರ್ಣವಾಗಿ ತೊಡಗಿಲ್ಲದ ಕಾರಣ, ಗೇರ್ ಕೂಡ ಅಂಟಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಮಹೀಂದ್ರಾ ಸ್ಕಾರ್ಪಿಯೊ-N ಕಾರುಗಳಲ್ಲಿ ಸಮಸ್ಯೆ: ಡೆಲಿವರಿ ಪಡೆದ 2-3 ದಿನಗಳಲ್ಲೇ ಹೆಚ್ಚಾದ ದೂರುಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಕಂಪನಿಯಿಂದ ಲಾಂಚ್ ಆಗುವ ಬಹುನಿರೀಕ್ಷಿತ ದೊಡ್ಡ ಕಾರುಗಳು ಕೆಲವೊಮ್ಮೆ ಉತ್ಪಾದನಾ ದೋಷಗಳನ್ನು ಒಳಗೊಂಡಿರುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮಹೀಂದ್ರಾ XUV500, ಈ ಕಾರು ಬಿಡುಗಡೆಯ ನಂತರ ಕೆಲವು ಸಮಸ್ಯೆಗಳನ್ನು ಹೊತ್ತುಬಂದಿತ್ತು. ಇದೊಂದೆ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಕೆಲ ಸಮಸ್ಯೆಗಳಿಂದಾಗಿ XUV700 ಮತ್ತು ಥಾರ್ ಅನ್ನು ಕಂಪನಿಯೇ ರೀಕಾಲ್ ಮಾಡಿತ್ತು. ಇದೀಗ ಸ್ಕಾರ್ಪಿಯೋ-N ಕೂಡ ರೀಕಾಲ್ ಆಗುವ ಸಾಧ್ಯತೆಗಳಿವೆ.

Most Read Articles

Kannada
English summary
Problem with Mahindra Scorpio N cars Complaints are increasing within 2 3 days of delivery
Story first published: Thursday, October 6, 2022, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X