ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಇಂಡಿಯಾ(Renault India) ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಹೊಸ ವರ್ಷ ಮತ್ತು ಸಂಕ್ರಾಂತಿ ವಿಶೇಷವಾಗಿ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಕೋವಿಡ್‌ ಪರಿಣಾಮ ಕಾರುಗಳ ಮಾರಾಟದಲ್ಲಿ ಏರಿಳಿತ ಕಂಡುಬರುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟವು ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಸುಧಾರಣೆ ಕಂಡಿದೆ. ಹೊಸ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್‌ ಘೋಷಣೆ ಮಾಡಿದ್ದು, ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆರಂಭದಲ್ಲಿಯೇ ಅತ್ಯುತ್ತಮ ಆಫರ್‌ಗಳನ್ನು ಘೋಷಿಸಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯು ಕ್ವಿಡ್(Kwid) ಹ್ಯಾಚ್‌‌ಬ್ಯಾಕ್, ಟ್ರೈಬರ್(Triber) ಮಿನಿ ಎಂಪಿವಿ, ಡಸ್ಟರ್(Duster) ಎಸ್‌ಯುವಿ ಮತ್ತು ಕಿಗರ್(Kiger) ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹೊಸ ವರ್ಷದ ಆಫರ್‌ಗಳನ್ನು ಘೋಷಣೆ ಮಾಡುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಈ ತಿಂಗಳಾಂತ್ಯದ ತನಕ ರೆನಾಲ್ಟ್ ಕಾರುಗಳ ಖರೀದಿ ಮೇಲೂ ಗ್ರಾಹಕರು ಆಕರ್ಷಕ ಆಫರ್ ಪಡೆದುಕೊಳ್ಳಬಹುದಾಗಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಹೊಸ ಆಫರ್‌ಗಳಲ್ಲಿ ಕಿಗರ್ ಕಾರಿನ ಮೇಲೆ ಕನಿಷ್ಠ ಮತ್ತು ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಲಾಗಿದ್ದು, ಆಯ್ದು ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ಲೊಯಾಲಿಟಿ ಆಫರ್ ಕೂಡಾ ಪ್ರಮುಖ ಆಕರ್ಷಕವಾಗಲಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯ ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿಯ ಮೇಲೆ ರೂ.35 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಡಸ್ಟರ್ ಎಸ್‌ಯುವಿ ಕಾರಿನ ಮೇಲೆ ರೂ.1.30 ಲಕ್ಷದ ತನಕ ಆಫರ್ ಪಡೆಯಬಹುದಾಗಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲಿನ ರೂ. 35 ಸಾವಿರ ಮೌಲ್ಯದ ಆಫರ್‌ಗಳಲ್ಲಿ ರೂ. 10 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ. 10 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಕ್ವಿಡ್ ಕಾರಿನ ಮೇಲೆ ಕಂಪನಿಯು ಆಯ್ದ ರಾಜ್ಯಗಳಲ್ಲಿ ಸಾಮಾನ್ಯ ಆಫರ್‌ಗಳಿಂತಲೂ ಕೆಲವು ಹೆಚ್ಚಿನ ಕೊಡುಗೆಗಳನ್ನು ಕೂಡಾ ಪ್ರಕಟಿಸಿದ್ದು, ಹೊಸ ಕಾರು ಖರೀದಿಗೆ ಸಹಕಾರಿಯಾಗುವಂತೆ ಆಕರ್ಷಕ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಇನ್ನು ಬಜೆಟ್ ಬೆಲೆಯಲ್ಲಿ ಸದ್ದು ಮಾಡುತ್ತಿರುವ ಟ್ರೈಬರ್ ಕಾರಿನ ಖರೀದಿಯ ಮೇಲೂ ಕೂಡಾ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಗರಿಷ್ಠ ರೂ.40 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ.10 ಸಾವಿರ ಲೊಯಾಲಿಟಿ ಆಫರ್ ಸೇರಿದಂತೆ ಸ್ಕ್ರ್ಯಾಪೇಜ್ ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚುವರಿ ಆಫರ್ ನೀಡುತ್ತದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯ ಹೊಸ ಕಿಗರ್ ಕಾರು ಖರೀದಿಯ ಮೇಲೂ ವಿವಿಧ ಆಫರ್‌ಗಳು ಲಭ್ಯವಿದ್ದು, ಜನವರಿ ಅವಧಿಯಲ್ಲಿ ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ರೂ. 10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್‌ ನೀಡುತ್ತಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಇನ್ನುಳಿದಂತೆ ಡಸ್ಟರ್ ಕಾರಿನ ಪ್ರಮುಖ ವೆರಿಯೆಂಟ್‌ಗಳ ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ರೂ. 1.30 ಲಕ್ಷ ಮೌಲ್ಯದ ಡಿಸ್ಕೌಂಟ್‌ ಮತ್ತು ರೂ.1.10 ಲಕ್ಷ ಮೌಲ್ಯದ ಲೊಯಾಲಿಟಿ ಕೊಡುಗೆಗಗಳನ್ನು ಘೋಷಣೆ ಮಾಡಿದ್ದು, ಡಸ್ಟರ್ ಕಾರಿನ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಡಿಸ್ಕೌಂಟ್ ಲಭ್ಯವಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಇದರ ಜೊತೆಗೆ ರೆನಾಲ್ಟ್ ಕಂಪನಿಯು ಆರ್ಥಿಕ ಸಂಕಷ್ಟದಿಂದ ಕಾರು ಖರೀದಿಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಅತ್ಯುತ್ತಮ ಫೈನಾನ್ಸ್ ಅಸಿಸ್ಟ್ ಸೌಲಭ್ಯ ಖಾತ್ರಿ ಪಡಿಸಿದ್ದು, ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಅತ್ಯತ್ತಮ ಫೈನಾನ್ಸ್ ಆಯ್ಕೆ ನೀಡಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಸದ್ಯದ ಆರ್ಥಿಕ ಪರಿಸ್ಥಿತಿ ಕಾರು ಖರೀದಿ ಮುಂದೂಡಿರುವ ಗ್ರಾಹಕರಿಗೆ ವಿಶೇಷ ಆಫರ್ ನೀಡಿರುವ ರೆನಾಲ್ಟ್ ಕಂಪನಿಯು ಕ್ವಿಡ್, ಟ್ರೈಬರ್ ಮತ್ತು ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಇಎಂಐ ಮರುಪಾವತಿ ಆಯ್ಕೆ ನೀಡಿದೆ.

ಸಂಕ್ರಾಂತಿ ವಿಶೇಷವಾಗಿ ಕಾರು ಖರೀದಿ ಮೇಲೆ ವಿವಿಧ ಆಫರ್‌‌ ಘೋಷಣೆ ಮಾಡಿದ ರೆನಾಲ್ಟ್ ಇಂಡಿಯಾ

ಇದರೊಂದಿಗೆ ರೆನಾಲ್ಟ್ ಕಂಪನಿಯ ಹೊಸ ವಾಹನಗಳ ಖರೀದಿಯನ್ನು ಉತ್ತೇಜಿಸಲು ತನ್ನ ಎಲ್ಲಾ ಕಾರು ಮಾದರಿಗಳ ಮೇಲೂ ರೂ. 10 ಸಾವಿರದಷ್ಟು ಆಫರ್ ಅನ್ನು ವೆಹಿಕಲ್ ಸ್ಕ್ರ್ಯಾಪಿಂಗ್ ಅಡಿ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವ ಗ್ರಾಹಕರಿಗೆ ಪ್ರೋತ್ಸಾಹ ನೀಡುತ್ತಿದ್ದು, ಹಳೆಯ ವಾಹನಗಳನ್ನು ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯಡಿ ಅಳವಡಿಸಿಕೊಳ್ಳಲು ನೆರವಾಗುವಂತೆ ಹೊಸ ಆಫರ್ ನೀಡುತ್ತಿವೆ.

Most Read Articles

Kannada
English summary
Renault india cars discounts and savings offers in january 2022 details
Story first published: Saturday, January 8, 2022, 0:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X