ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ಫ್ರೆಂಚ್ ವಾಹನ ತಯಾರಕ ಕಂಪನಿಯಾದ ರೆನಾಲ್ಟ್ ಕಳೆದ ವರ್ಷ ತನ್ನ ಕಿಗರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಹೆಚ್ಚು ಸ್ಪರ್ಧಾತ್ಮಕ ಸಬ್‌ಕಾಂಪ್ಯಾಕ್ಟ್ ಯುವಿ ವಿಭಾಗದಲ್ಲಿ ರೆನಾಲ್ಟ್ ಕಿಗರ್ ಬಿಡುಗಡೆಗೊಂಡು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ರೆನಾಲ್ಟ್ ಕಿಗರ್ ಕಾರು ನೀಲಿ, ಬೆಳ್ಳಿ, ಬಿಳಿ, ಕಂದು, ಬೂದು ಮತ್ತು ಕೆಂಪು ಎಂಬ 6 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ, ಆದರೆ ಕಪ್ಪು ಬಣ್ಣದ ಕಿಗರ್ ಡೀಲರ್ ಬಳಿ ಕಾಣಿಸಿಕೊಂಡಿದೆ. ಯುಟ್ಯೂಬ್ ಚಾನೆಲ್ ರಾಫ್ತಾರ್ 7811 ಹಂಚಿಕೊಂಡಿದೆ. ಇದು ರೆನಾಲ್ಟ್ ಕಿಗರ್ ಮಾರಾಟವನ್ನು ಹೆಚ್ಚಿಸಲು, ಹೊಸ ಬಣ್ಣದ ಆಯ್ಕೆಗಳು, ವಿಶೇಷ ಆವೃತ್ತಿಗಳು ಇತ್ಯಾದಿಗಳನ್ನು ಪ್ರಾರಂಭಿಸಲು ಯೋಜಿಸಿರಬಹುದು. ಇದು ಹೊಸ ಬಣ್ಣದ ಆಯ್ಕೆಯೇ ಅಥವಾ ಕಿಗರ್‌ನ ವಿಶೇಷ ಡಾರ್ಕ್ ಆವೃತ್ತಿಯೇ ಎಂಬುದು ಸ್ಪಷ್ಟವಾಗಿಲ್ಲ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ರೆನಾಲ್ಟ್ ಇಂಡಿಯಾ ವೆಬ್‌ಸೈಟ್ ಕಿಗರ್‌ಗಾಗಿ ಕಪ್ಪು ಬಣ್ಣದ ಯಾವುದೇ ಉಲ್ಲೇಖವನ್ನು ಹೊಂದಿಲ್ಲ. ಇದು ಡೀಲರ್ ಮಟ್ಟದ ಮಾರ್ಪಾಡು ಆಗಿರುವ ಸಾಧ್ಯತೆಯೂ ಇದೆ. ಆದರೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಹೊಸ ಬಣ್ಣಗಳ ಆಯ್ಕೆಯನ್ನು ರೆನಾಲ್ಟ್ ಕಿಗರ್ ಕಾರು ಪಡೆಯಲಿವೆ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ರೆನಾಲ್ಟ್ ಕಿಗರ್ ಕಾರಿನಲ್ಲಿ 1.0-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಸಾಮಾನ್ಯ ಪೆಟ್ರೋಲ್ ಎಂಜಿನ್ 72 ಬಿಹೆಚ್‍ಪಿ ಪವರ್ ಮತ್ತು ಟರ್ಬೋ ಪೆಟ್ರೋಲ್ ಎಂಜಿನ್ 100 ಬಿಜೆಚ್‍ಪಿ ಪವರ್ ಅನ್ನು ಉತ್ಪಾಸುತ್ತದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ರೆನಾಲ್ಟ್ ಕಿಗರ್ ಕಾರು ಪ್ರತಿಸ್ಪರ್ಧಿಮಾದರಿಗಳಂತೆ ಹಲವಾರು ಆಕರ್ಷಕ ಫೀಚರ್ಸ್ ಗಳನ್ನು ಒಳಗೊಂಡಿದೆ. ಈ ಕಿಗರ್ ಕಾರಿನಲ್ಲಿ ಆಕರ್ಷಕವಾದ ಬ್ಯಾನೆಟ್, ಹನಿಕೊಂಬ್ ಆಕಾರದಲ್ಲಿರುವ ಗ್ರಿಲ್ ಕ್ರೋಮ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್ ಮತ್ತು ರೂಫ್‌ರೈಲ್ಸ್ ಅನ್ನು ಒಳಗೊಂಡಿದೆ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ಈ ಕಿಗರ್ ಕಾರಿನಲ್ಲಿ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್ ಹೊಂದಿದ್ದು ಕಾರಿನ ಒಳಭಾಗದಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು 7 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ಇದರೊಂದಿಗೆ ಈ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5-ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಕಿ ಲೆಸ್ ಎಂಟ್ರಿ, ಪುಶ್ ಬಟನ್ ಆನ್/ಆಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, 3ಡಿ ಸೌಂಡ್ ಸಿಸ್ಟಂ, ಪಿಎಂ 2.5 ಏರ್ ಫಿಲ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌‌ರೂಫ್ ಅನ್ನು ಹೊಂದಿರಲಿದೆ,

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ಇನ್ನು ರೆನಾಲ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಕಾಲಿಟ್ಟು 10 ವರ್ಷಗಳು ಕಳೆದ ವರ್ಷ ಪೂರ್ತಿಯಾಗಿದೆ. ಈ ರೆನಾಲ್ಟ್ ಕಿಗರ್ ಬಜೆಟ್ ಬೆಲೆಯೊಂದಿಗೆ ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಗ್ರಾಹಕರನ್ನು ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ಸೆಳೆದುಕೊಂಡಿದೆ. ಹೊಸ ಕಾರಿನ ಮೂಲಕ ರೆನಾಲ್ಟ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ಈ ರೆನಾಲ್ಟ್ ಕಿಗರ್ ಕಾಂಪ್ಯಾಕ್ಟ್ ಎಸ್‍ಯುವಿಯು ಮಾದರಿಯು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರು ಒಂದೇ ಪ್ಲ್ಯಾಟ್‌ಫಾರ್ಮ್ ಅಭಿವೃದ್ದಿಗೊಳ್ಳುವುದರ ವಿಭಿನ್ನ ಗ್ರಾಹಕರನ್ನು ಸೆಳೆಯಲ್ಲಿ ಯಶಸ್ವಿಯಾಗುತ್ತಿವೆ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ಇನ್ನು ರೆನಾಲ್ಟ್ ಇಂಡಿಯಾ ತನ್ನ 2022ರ ಕ್ವಿಡ್ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.49 ಲಕ್ಷವಾಗಿದೆ. ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2015 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅಂದಿನಿಂದ ಇದು ಸಣ್ಣ ಕುಟುಂಬದ ಕಾರು ಖರೀದಿದಾರರಲ್ಲಿ ಜನಪ್ರಿಯ ಆಯ್ಕೆಯಾಗಿದೆ. ಅಲ್ಲದೇ ರೆನಾಲ್ಟ್ ಕಾರುಗಳ ಸರಣಿಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ 2022ರ ರೆನಾಲ್ಟ್ ಕ್ವಿಡ್ ಬೆಲೆಯು ಹಿಂದಿನ ಮಾದರಿಗಿಂತ ರೂ.25,000 ಹೆಚ್ಚು ದುಬಾರಿಯಾಗಿದೆ. ಆದರೂ ಈ ರೆನಾಲ್ಟ್ ಕ್ವಿಡ್ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯ ಕಾರುಗಳಲ್ಲಿ ಒಂದಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ಈ 2022ರ ರೆನಾಲ್ಟ್ ಕ್ವಿಡ್ ಹ್ಯಾಚ್ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದ ಹೊಸ ಕ್ವಿಡ್ ಕಾರು ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದೆ. ಹೊಸ ಕ್ವಿಡ್ ಕಾರಿನ ಬಣ್ಣಗಳ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು ಮೆಟಲ್ ಮಸ್ಟರ್ಡ್ ಮತ್ತು ಐಸ್ ಕೂಲ್ ವೈಟ್ ಜೊತೆಗೆ ಬ್ಲ್ಯಾಕ್ ರೂಫ್ ಅನ್ನು ಹೊಂದಿದೆ. ಇದರೊಂದಿಗೆ ಮೂನ್‌ಲೈಟ್ ಸಿಲ್ವರ್ ಮತ್ತು ಝನ್ಸ್‌ಕಾರ್ ಬ್ಲೂ ಎಂಬ ಎರಡು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಇದರೊಂದಿಗೆ ಫ್ಲೆಕ್ಸ್ ವ್ಹೀಲ್ ಅನ್ನು ಸಹ ಪಡೆದುಕೊಂಡಿದೆ. 2022ರ ರೆನಾಲ್ಟ್ ಕ್ವಿಡ್ ಕಾರಿನಲ್ಲಿ ಫೀಚರ್ಸ್ ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಡೀಲರ್ ಬಳಿ ಕಾಣಿಸಿಕೊಂಡ ಕಪ್ಪು ಬಣ್ಣದ ರೆನಾಲ್ಟ್ ಕಿಗರ್ ಕಾರು

ಭಾರತದಿಂದಲೇ ರೆನಾಲ್ಟ್ ಕಂಪನಿಯು ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ವಿವಿಧ ಕಾರು ಮಾದರಿಗಳ ರಫ್ತು ಕೈಗೊಳ್ಳುತ್ತಿದ್ದು, ಇದೀಗ ಕಿಗರ್ ಮಾದರಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಸದ್ಯ ಭಾರತದಲ್ಲಿ ಖರೀದಿಗೆ ಲಭ್ಯವಿರುವ ಕಿಗರ್ ಮಾದರಿಯೇ ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿಯು ಮಾರಾಟವಾಗುತ್ತಿದೆ.

Image Courtesy: Raftaar 7811/YouTube

Most Read Articles

Kannada
English summary
Renault kiger black colour spotted at dealer find here all details
Story first published: Tuesday, March 29, 2022, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X