Just In
- 1 hr ago ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- 1 hr ago Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- 1 hr ago Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್ಯುವಿ700 ಖರೀದಿಸುವವರಿಗೆ ಸಿಹಿಸುದ್ದಿ.. ಇನ್ನೂ ತಿಂಗಳೇ ಸಾಕು!
- 3 hrs ago Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುರೋಪ್ ಮಾರುಕಟ್ಟೆಗಳಲ್ಲಿ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿಗೆ ಭರ್ಜರಿ ಬೇಡಿಕೆ
ಜೆಕ್ ಕಾರು ಉತ್ಪಾದನಾ ಕಂಪನಿಯಾಗಿರುವ ಸ್ಕೋಡಾ ತನ್ನ ಹೊಸ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ ಮೂಲಕ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಮುಂಬರುವ ಕೆಲವೇ ತಿಂಗಳುಗಳಲ್ಲಿ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗುತ್ತಿದೆ.
ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ವಿವಿಧ ರಾಷ್ಟ್ರಗಳು 2030ರಿಂದಲೇ ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸಹ ಹೆಚ್ಚಿಸಲಾಗುತ್ತಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ನಿರ್ಣಯದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.
ಪ್ರಸಕ್ತ ವರ್ಷದಲ್ಲಿ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಬರೋಬ್ಬರಿ 8 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, 2022ರ ಅವಧಿಗೆ ಇದು ಇನ್ನಷ್ಟು ಹೆಚ್ಚಳವಾಗಿರಲಿದೆ.
ಸ್ಕೋಡಾ ಕಂಪನಿಯು ಸಹ ತನ್ನ ಹೊಸ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ ಕಾರು ಮಾದರಿಯ ಮೂಲಕ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಕಳೆದ ವರ್ಷ 40 ಸಾವಿರ ಯುನಿಟ್ಗಳಿಗೆ ಬೇಡಿಕೆ ಪಡೆದುಕೊಂಡಿದ್ದು, ಉತ್ಪಾದನೆಯನ್ನು ಆಧರಿಸಿ ಪೂರೈಕೆ ತೀವ್ರಗೊಳಿಸಿದೆ.
2025 ವೇಳೆಗೆ ಶೇ.30 ರಷ್ಟು ಕಾರುಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳ ಮಾರಾಟವನ್ನು ಹೊಂದಲು ಯೋಜನೆ ಹೊಂದಿರುವ ಸ್ಕೋಡಾ ಕಂಪನಿಗೆ ಎನ್ಯಾಕ್ ಕಾರು ಮಾದರಿಯು ಉತ್ತಮ ಬೇಡಿಕೆ ತಂದುಕೊಡುತ್ತಿದ್ದು, ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಇವಿ ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.
ಭಾರತದಲ್ಲಿ ಸದ್ಯ ಫೋಕ್ಸ್ವ್ಯಾಗನ್ ಜೊತೆಗೂಡಿ ಸಹಭಾಗಿತ್ವ ಯೋಜನೆಯಡಿಯಲ್ಲಿ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿರುವ ಸ್ಕೋಡಾ ಕಂಪನಿಯು ಹಲವಾರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಪೆಟ್ರೋಲ್ ಕಾರುಗಳ ಜೊತೆಗೆ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ.
ಹೊಸ ಎಲೆಕ್ಟ್ರಿಕ್ ಕಾರುಗಳ ಪೈಕಿ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿಯು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಹೊಸ ಕಾರು ಬಿಡುಗಡೆಗೂ ಎನ್ಯಾಕ್ ಕಾರಿನ ಟೀಸರ್ ಬಿಡುಗಡೆ ಮಾಡಿದೆ. ಜನವರಿ 31ರಂದು ಹೊಸ ಕಾರಿನ ಉತ್ಪಾದನಾ ಮಾದರಿಯು ಅನಾವರಣಗೊಳ್ಳಲಿದ್ದು, ಹೊಸ ಕಾರು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಸ್ಕೋಡಾ ಕಂಪನಿಯು ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗಣವಾಗಿ ಯುರೋಪ್ನ ಪ್ರಮುಖ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿರುವ ಎನ್ಯಾಕ್(Enyaq) ಎಲೆಕ್ಟ್ರಿಕ್ ಎಸ್ಯುವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಇದು ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಮೈಲೇಜ್ನಲ್ಲೂ ಗಮನಸೆಳೆಯುತ್ತಿದೆ.
ಹೊಸ ಎಲೆಕ್ಟ್ರಿಕ್ ಕಾರು ಪ್ರತಿ ಚಾರ್ಜ್ಗೆ ಆರಂಭಿಕ ಆವೃತ್ತಿಯು 389ಕಿ.ಮೀ, ಮಧ್ಯಮ ಕ್ರಮಾಂಕದ ಕಾರು ಮಾದರಿಯು 509 ಕಿ.ಮೀ ಮತ್ತು ಟಾಪ್ ಎಂಡ್ ಮಾದರಿಯು ಪ್ರತಿ ಚಾರ್ಜ್ಗೆ ಗರಿಷ್ಠ 459ಕಿ.ಮೀ ಮೈಲೇಜ್ ರೇಂಜ್ನೊಂದಿಗೆ ಮೊದಲೆರಡು ಮಾದರಿಗಿಂತಲೂ ಉತ್ತಮ ಪರ್ಫಾಮೆನ್ಸ್ ಹೊಂದಿದೆ.
ಹೊಸ ಕಾರಿನಲ್ಲಿ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 179ಕಿ.ಮೀ ಸಿಮಿತಗೊಳಿಸಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 38 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಪಡೆದುಕೊಳ್ಳಬಹುದಾಗಿದೆ.
ಎನ್ಯಾಕ್ ಕಾರು ಬ್ಯಾಟರಿ ಸಾಮರ್ಥ್ಯ ಮತ್ತು ಐಷಾರಾಮಿ ಫೀಚರ್ಸ್ಗಳಿಗೆ ಅನುಗುಣವಾಗಿ ಹೊಸ ಕಾರು ಆರಂಭಿಕವಾಗಿ ಭಾರತೀಯ ಮಾರುಕಟ್ಟೆಯಲ್ಲಿ ರೂ.35 ಲಕ್ಷದಿಂದ ರೂ. 40 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದ್ದು, ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ತೀವ್ರ ಸ್ಪರ್ಧೆ ಹೊಂದಿರುವ ಫೋಕ್ಸ್ವ್ಯಾಗನ್ ಐಡಿ 4 ಮಾದರಿಗೆ ಸಮನಾಗಿ ಹೊಸ ಕಾರು ಗ್ರಾಹಕರನ್ನು ಸೆಳೆಯಲಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತಂತೆ ಈ ಹಿಂದೆಯೂ ಪ್ರಕ್ರಿಯಿಸಿದ್ದ ಸ್ಕೋಡಾ ಕಂಪನಿಯು ಚಾರ್ಜಿಂಗ್ ಮೂಲಭೂತ ಸೌಲಭ್ಯಗಳ ಬೆಳವಣಿಗೆಯ ಆಧಾರದ ಮೇಲೆ ಇವಿ ಕಾರುಗಳ ಪರಿಚಯಿಸುವುದಾಗಿ ಹೇಳಿಕೊಂಡಿತ್ತು.
ಭಾರತದಲ್ಲಿ ಸದ್ಯ ಕೆಲವೇ ಕೆಲವು ನಗರಗಳಲ್ಲಿ ಸಾರ್ವಜನಿಕ ಬಳಕೆಯ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್ಗಳ ಸೌಲಭ್ಯಗಳಿರುವುದು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯು ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಸ್ಕೋಡಾ ಕಂಪನಿಯು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಹೆಚ್ಚುತ್ತಿರುವ ಹಿನ್ನಲೆ ಮುಂಬರುವ ಕೆಲ ವರ್ಷಗಳಲ್ಲಿ ವಿವಿಧ ಇವಿ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.