Just In
- 11 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 12 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 13 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 13 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- News Gold & Silver Price: ಮತ್ತೆ ಏರಿದ ಚಿನ್ನದ ದರ, ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ ತಿಳಿಯಿರಿ
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಪೋರ್ಟಿ ವಿನ್ಯಾಸದ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಟಿವಿಸಿ ಬಿಡುಗಡೆ
ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಹೊಸ ಕುಶಾಕ್ ಮಾದರಿಯ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆಗೊಳಿಸಿದ್ದು, ಹೊಸ ಕಾರು ವಿತರಣೆ ಆರಂಭಕ್ಕೂ ಮುನ್ನ ಕಂಪನಿಯು ಹೊಸ ಕಾರಿನ ಟಿವಿ ಜಾಹೀರಾತು ಪ್ರಕಟಿಸಿದೆ.
ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಮಾಂಟೆ ಕಾರ್ಲೊ ಮಾದರಿಗಳನ್ನು ಈಗಾಗಲೇ ತನ್ನ ಪ್ರಮುಖ ಕಾರುಗಳಲ್ಲಿ ಮಾರಾಟ ಮಾಡುತ್ತಿರುವ ಸ್ಕೋಡಾ ಕಂಪನಿಯು ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಕುಶಾಕ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯಲ್ಲೂ ಇಗೀಗ ಸ್ಪೋರ್ಟಿ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಎಡಿಷನ್ ಅನ್ನು ಸಾಮಾನ್ಯ ಮಾದರಿಯ ಟಾಪ್ ಎಂಡ್ ವೆರಿಯೆಂಟ್ಗಳಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಬಿಡುಗಡೆ ಮಾಡಿದೆ.
ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಹೊಸ ಕಾರು ಮಾದರಿಯು ಆಕರ್ಷಕವಾದ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್ ಹೊಂದಿದ್ದು, ಸ್ಕೋಡಾ ವಿವಿಧ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ.
ಹೊಸ ಮಾಂಟೆ ಕಾರ್ಲೊ ಆವೃತ್ತಿಯು ಎರಡು ಎಂಜಿನ್ ಆಯ್ಕೆಯೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳನ್ನು ಒಳಗೊಂಡಿದ್ದು, ಆರಂಭಿಕ ಮಾದರಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಹೊಂದಿವೆ.
ಸ್ಟ್ಯಾಂಡರ್ಡ್ ಕುಶಾಕ್ ಮಾದರಿಗಿಂತಲೂ ಮಾಂಟೆ ಕಾರ್ಲೊ ಮಾದರಿಯು ಸುಮಾರು ರೂ.70 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಬೆಲೆಗೆ ಅನುಗುಣವಾಗಿ ಹೊಸ ಮಾದರಿಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.
ಮಾಂಟೆ ಕಾರ್ಲೊ ಮಾದರಿಯು ಟೊರ್ನಾಡೊ ರೆಡ್ ಮತ್ತು ಕ್ಯಾಂಡಿ ವೈಟ್ ಎನ್ನುವ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಬ್ಲ್ಯಾಕ್ಔಟ್ ಫೀಚರ್ಸ್ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಹೊಸ ಕಾರಿನ ಗ್ರಿಲ್, ಬಂಪರ್, ಏರ್ ಇನ್ಟೆಕ್, ಫ್ರಂಟ್ ಡಿಫ್ಯೂಸರ್ಗಳು ಸ್ಪೋರ್ಟಿ ವಿನ್ಯಾಸವನ್ನು ಹೊಂದಿವೆ.
ಜೊತೆಗೆ ಹೊಸ ಕಾರಿನ ರೂಫ್ ಕಾರ್ಬನ್ ಸ್ಟ್ರಿಲ್ ಪೇಟಿಂಗ್ ಸೌಲಭ್ಯವನ್ನು ಪಡೆದುಕೊಂಡಿದ್ದು, ಸ್ಕೋಡಾ ಜನಪ್ರಿಯ ಸ್ಪೋರ್ಟ್ ಕಾರು ಸೂಪರ್ಬ್ ವಿಆರ್ಎಸ್ ಮಾದರಿಯಲ್ಲಿರುವಂತೆ ಹೊಸ ಕಾರಿನಲ್ಲಿ 17 ಇಂಚಿನ ವೆಗಾ ಅಲಾಯ್ ವ್ಹೀಲ್ ಜೋಡಣೆ ಮಾಡಲಿದೆ.
ಇದರೊಂದಿಗೆ ಹೊಸ ಕಾರಿನ ಫೆಂಡರ್ ಮೇಲೆ ಮಾಂಟೆ ಕಾರ್ಲೊ ಬ್ಯಾಡ್ಜಿಂಗ್ ನೀಡಲಾಗಿದ್ದು, ಫ್ರಂಟ್ ಡಿಸ್ಕ್ ಬ್ರೇಕ್ನಲ್ಲಿ ರೆಡ್ ಕ್ಯಾಲಿಪರ್, ಡ್ಯುಯಲ್ ಟೋನ್ ಟೈಲ್ಗೇಟ್ ಸ್ಪಾಯ್ಲರ್ ಸೇರಿದಂತೆ ಹಲವಾರು ಸ್ಪೋರ್ಟಿ ವಿನ್ಯಾಸಗಳನ್ನು ಹೊಂದಿದೆ.
ಇನ್ನು ಹೊಸ ಕಾರಿನ ಒಳಭಾಗವು ಕೂಡಾ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಆಕರ್ಷಕವಾಗಿದ್ದು, ಬ್ಲ್ಯಾಕ್ ಮತ್ತು ರೂಬಿ ರೆಡ್ ಮೆಟಾಲಿಕ್ ಹೊಂದಿರುವ ಡ್ಯುಯಲ್ ಟೋನ್ ಇಂಟಿರಿಯರ್, ರೆಡ್ ಆಕ್ಸೆಂಟ್ಗಳು, ಡ್ಯುಯಲ್ ಟೋನ್ ಆಸನಗಳು, ರೆಡ್ ಆಂಬಿಯೆಂಟ್, ಅಲ್ಯುಮಿನಿಯಂ ಪೆಡಲ್ಸ್ನೊಂದಿಗೆ ರೆಡ್ ಥಿಮ್ಸ್ ಐಷಾರಾಮಿ ಲುಕ್ ನೀಡಲಿದೆ.
ಇದರೊಂದಿಗೆ ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಎಂಜಿನ್ ಆಯ್ಕೆ ನೀಡಲಾಗಿದ್ದು, 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ.
ಹೊಸ ಕಾರಿನ ಎರಡು ಮಾದರಿಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್ಜಿ ಗೇರ್ಬಾಕ್ಸ್ ಆಯ್ಕೆ ಹೊಂದಿದ್ದು, ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
ಹೊಸ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಮಲ್ಟಿ ಕೂಲಿಷನ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಆರು ಏರ್ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್ಗಳಿವೆ.
ಸ್ಟ್ಯಾಂಡರ್ಡ್ ಮಾದರಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.79 ಲಕ್ಷ ಬೆಲೆ ಹೊಂದಿದ್ದು, ಇದೀಗ ಹೊಸದಾಗಿ ಬಿಡುಗಡೆ ಮಾಡಲಾಗಿರುವ ಮಾಂಟೆ ಕಾರ್ಲೊ ತುಸು ದುಬಾರಿ ಬೆಲೆಯೊಂದಿಗೆ ಮಾರಾಟಗೊಳ್ಳಲಿದೆ.