ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಸ್ಕೋಡಾ ಕಂಪನಿಯು ತನ್ನ ಹೊಸ ಕಾರು ಮಾದರಿಗಳಾದ ಕುಶಾಕ್ ಮತ್ತು ಸ್ಲಾವಿಯಾ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಹೊಸ ಕಾರು ಮಾದರಿಗಳಿಗಾಗಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಸೆಮಿಕಂಡಕ್ಟರ್ ಕೊರೆತಯ ಪರಿಣಾಮ ಹೊಸ ಕಾರು ಮಾದರಿಗಳಲ್ಲಿ ಈ ಹಿಂದಿ ನೀಡಲಾಗುತ್ತಿದ್ದ 10 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಬದಲಾಗಿ ಕಂಪನಿಯು 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಲಾಗುತ್ತಿದೆ. ಹೊಸ ಕಾರುಗಳಲ್ಲಿ ನೀಡಲಾಗುತ್ತಿರುವ ಪರಿಷ್ಕೃತ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವು ಈ ಹಿಂದಿನ ಮಾದರಿಯೆಂತೆ ಹಲವಾರು ಫೀಚರ್ಸ್ ಹೊಂದಿದ್ದು, ಅತಿ ಕಡಿಮೆ ಚಿಪ್‌ಗಳನ್ನು ಹೊಂದಿರಲಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಸೆಮಿಕಂಡಕ್ಟರ್ ಬಳಕೆಯನ್ನು ತಗ್ಗಿಸುವ ಉದ್ದೇಶದಿಂದಲೇ ಕಂಪನಿಯು ಕಡಿಮೆ ಚಿಪ್‌ಗಳನ್ನು ಹೊಂದಿರುವ 8 ಇಂಚಿನ ಇನ್ಪೋಟೈನ್‌ಮೆಂಟ್ ಆಯ್ಕೆ ಮಾಡಿದ್ದು, ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವು ಇತರೆ ಇನ್ಪೋಟೈನ್‌ಮೆಂಟ್ ಸೌಲಭ್ಯಗಳಂತೆ ಡೇಟಾವನ್ನು ಪ್ರಕ್ರಿಯೆಗೊಳಿಸಲು ಡಿಸ್ಪ್ಲೇ ಮತ್ತು ಅದರ ಹಿಂದೆ ಕಂಪ್ಯೂಟ್ ಅಂಶವನ್ನು ಹೊಂದಿರುತ್ತದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಹೀಗಾಗಿ ಹೊಸ ಇನ್ಪೋಟೈನ್‌ಮೆಂಟ್ ಮೂಲಕ ಚಿಪ್ ಕೊರತೆಗೆ ಪರ್ಯಾಯ ಕಂಡುಕೊಂಡಿರುವ ಕಂಪನಿಯು ಕೆಲವು ವೈಶಿಷ್ಟ್ಯತೆಗಳನ್ನು ಕೈಬಿಟ್ಟಿದ್ದು, ಕುಶಾಕ್ ಮಾಂಟೆ ಕಾರ್ಲೊ ಮಾದರಿಯಲ್ಲಿ ಮಾತ್ರವೇ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆಯನ್ನು ಮುಂದುವರಿಸಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಮಾಂಟೆ ಕಾರ್ಲೊ ಎಡಿಷನ್ ಹೊರತುಪಡಿಸಿ ಕುಶಾಕ್ ಮತ್ತು ಸ್ಲಾವಿಯಾದ ಎಲ್ಲಾ ಸ್ಟ್ಯಾಂಡರ್ಡ್ ಮಾದರಿಗಳಲ್ಲೂ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಿದ್ದು, ಡೌನ್‌ಗ್ರೇಡ್ ನಂತರ ಹೊಸ ಕಾರುಗಳ ಬೆಲೆಯಲ್ಲಿ ಕಡಿಮೆ ಮಾಡುವ ಬದಲು ಕಂಪನಿಯು ಮತ್ತಷ್ಟು ದರ ಹೆಚ್ಚಿಸಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಸೆಮಿಕಂಡಕ್ಟರ್ ಕೊರತೆಯ ಪರಿಣಾಮ ಉತ್ಪಾದನಾ ವೆಚ್ಚವನ್ನು ಮುಂದಿಟ್ಟುಕೊಂಡು ಸ್ಕೋಡಾ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಬೆಲೆ ಹೆಚ್ಚಳ ಘೋಷಣೆ ಮಾಡಿದ್ದು, ಹೊಸ ದರ ಪಟ್ಟಿಯಲ್ಲಿ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮತ್ತಷ್ಟು ದುಬಾರಿಯಾಗಿವೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಸ್ಲಾವಿಯಾ ಕಾರು ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.39 ಲಕ್ಷ ಬೆಲೆ ಹೊಂದಿದ್ದರೆ 1.5 ಲೀಟರ್ ಮಾದರಿಯು ಆರಂಭಿಕವಾಗಿ ರೂ. 16.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.39 ಲಕ್ಷ ಬೆಲೆ ಹೊಂದಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಹಾಗೆಯೇ ಸ್ಟ್ಯಾಂಡರ್ಡ್ ಕುಶಾಕ್ ಮಾದರಿಯು ಸದ್ಯ ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ಆರಂಭಿಕವಾಗಿ ರೂ. 11.29 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಹೊಸ ಕುಶಾಕ್ ಮತ್ತಿ ಸ್ಲಾವಿಯಾ ಕಾರುಗಳಲ್ಲಿ ಸ್ಕೋಡಾ ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಹೊಸ ದರ ಪಟ್ಟಿಯಲ್ಲಿ ಹೊಸ ಕಾರುಗಳು ಸುಮಾರು ರೂ. 40 ಸಾವಿರದಿಂದ ರೂ. 60 ಸಾವಿರ ತನಕ ಬೆಲೆ ಹೆಚ್ಚಿಸಲಾಗುತ್ತಿದ್ದು, ಹೊಸ ಬೆಲೆಯಲ್ಲಿ ಡೌನ್‌ಗ್ರೆಡ್ ಇನ್ಪೋಟೈನ್‌ಮೆಂಟ್ ಹೊಂದಿರುವ ಮಾದರಿಯ ಖರೀದಿಗೆ ಹಲವು ಗ್ರಾಹಕರು ಸ್ಕೋಡಾ ವಿರುದ್ದ ಅಸಮಾಧಾನ ಹೊರಹಾಕಿದ್ದರು.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಆದರೆ ಕಾರು ಉತ್ಪಾದನೆಗೆ ಇರುವ ಸವಾಲುಗಳ ಕುರಿತಾಗಿ ಮಾತನಾಡಿರುವ ಸ್ಕೋಡಾ ಕಂಪನಿಯು ಗ್ರಾಹಕರ ಆದ್ಯತೆಗಳ ಪೂರೈಕೆ ಬದ್ದತೆಯಿರುವುದಾಗಿ ಸ್ಪಷ್ಟಪಡಿಸಿದ್ದು, ಮುಂಬರುವ ಎಲ್ಲಾ ವಾಹನಗಳಲ್ಲೂ ಹೊಸ 8-ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡುವ ಸುಳಿವು ನೀಡಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಇನ್ನು ಹೊಸ ಕುಶಾಕ್ ಕಾರು ಸ್ಕೋಡಾ ಬಟರ್ ಪ್ಲೈ ಗ್ರಿಲ್‌ನೊಂದಿಗೆ ಆಕರ್ಷಕವಾದ ಮುಂಭಾಗದ ವಿನ್ಯಾಸ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಹೊಸ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಮಲ್ಟಿ ಕೂಲಿಷನ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಏರ್‌ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್‌ಗಳಿವೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾಂಟೆ ಕಾರ್ಲೊ ಎಡಿಷನ್ ಮಾದರಿಯು ಆಕರ್ಷಕವಾದ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್ ಹೊಂದಿದ್ದು, ಸ್ಕೋಡಾ ವಿವಿಧ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಸ್ಲಾವಿಯಾ ಸೆಡಾನ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ 1.0-ಲೀಟರ್ ಟಿಎಸ್ಐ ಮತ್ತು 1.5 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳನ್ನು ಅಭಿವೃದ್ದಿಗೊಳಿಸಲಾಗಿದೆ.

ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಮಾದರಿಗಳಿಗೆ ಹೊಸ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದ ಸ್ಕೋಡಾ

ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರುವ ಸ್ಲಾವಿಯಾ ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.79 ಲಕ್ಷ ಬೆಲೆ ಹೊಂದಿದ್ದರೆ 1.5 ಲೀಟರ್ ಮಾದರಿಯು ಆರಂಭಿಕವಾಗಿ ರೂ. 16.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.39 ಲಕ್ಷ ಬೆಲೆ ಹೊಂದಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda kushaq suv and slavia sedan gets 8 inch touch screen system
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X