Just In
- 2 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 3 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 4 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 4 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಹುನಿರೀಕ್ಷಿತ 2022ರ Skoda Kodiaq ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಬಹುನಿರೀಕ್ಷಿತ 2022ರ ಕೊಡಿಯಾಕ್ ಫೇಸ್ಲಿಫ್ಟ್ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ (Skoda Kodiaq ) ಎಸ್ಯುವಿಯ ಆರಂಬಿಕ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.34.99 ಲಕ್ಷವಾಗಿದೆ.
ಕರೋನಾ ಆರ್ಭಟ ಮತ್ತು ಸೆಮಿಕಂಡಕ್ಟರ್ ಚಿಪ್ಗಳ ಕೊರತೆಯಿಂದ ಉಂಟಾದ ಅನಿರೀಕ್ಷಿತ ಸಂದರ್ಭಗಳಿಂದಾಗಿ ಹೊಸ ಸ್ಕೋಡಾ ಕೊಡಿಯಾಕ್ ಫೇಸ್ಲಿಫ್ಟ್ ಎಸ್ಯುವಿಯ ಬಿಡುಗಡೆಯು ವಿಳಂಬವಾಗಿತ್ತು, ಆದರೆ ಇದೀಗ ಸ್ಕೋಡಾ ಕಂಪನಿಯು ಈ ಹೊಸ ಕೊಡಿಯಾಕ್ ಎಸ್ಯುವಿಯನ್ನು ಕೊನೆಗೂ ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ, ಈ ಹೊಸ ಸ್ಕೋಡಾ ಕೊಡಿಯಾಕ್ ಫೇಸ್ಲಿಫ್ಟ್ ಎಸ್ಯುವಿಯಲ್ಲಿ 2.0 ಲೀಟರ್, ನಾಲ್ಕು-ಸಿಲಿಂಡರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿಹೆಚ್ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ.
2022ರ ಸ್ಕೋಡಾ ಕೊಡಿಯಾಕ್ ಎಸ್ಯುವಿಯು ಸ್ಟೈಲ್, ಸ್ಪೋರ್ಟ್ಲೈನ್ ಮತ್ತು ಲಾರಿನ್ & ಕ್ಲೆಮೆಂಟ್ ಎಂಬ ರೂಪಾಂತರಗಳಲ್ಲಿ ಲಭ್ಯವಿರಲಿದೆ. ಈ ಹೊಸ ಎಸ್ಯುವಿಯ 4,699 ಎಂಎಂ ಉದ್ದ, 1,882 ಎಂಎಂ ಅಗಲ ಮತ್ತು 1,685 ಎಂಎಂ ಎತ್ತರ ಮತ್ತು 2,791 ಎಂಎಂ ವೀಲ್ಬೇಸ್ ಅನ್ನು ಹೊಂದಿದೆ.
ಸ್ಕೋಡಾ ಕೊಡಿಯಾಕ್ ಮಾದರಿಯು 7-ಸೀಟರ್ ಎಸ್ಯುವಿಯಾಗಿದೆ. ಈ ಪ್ರೀಮಿಯಂ ಮೂರು-ಸಾಲಿನ ಎಸ್ಯುವಿಯಲ್ಲಿನ ನವೀಕರಣಗಳು ಪ್ರಸ್ತುತ ಮಾದರಿಯಲ್ಲಿ ಸೌಂದರ್ಯವರ್ಧಕ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಒಳಗೊಂಡಿದೆ. ಅದರ ಬಾಹ್ಯ ವಿನ್ಯಾಸದಿಂದ ಪ್ರಾರಂಭಿಸಿ, ಹೊಸ ಕೊಡಿಯಾಕ್ ಫೇಸ್ಲಿಫ್ಟ್ ಮೊದಲ ಬಾರಿಗೆ ಸಮಗ್ರ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಂಬೆಡ್ ಮಾಡಲಾದ ಪೂರ್ಣ-ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ಲೈಟ್ಗಳನ್ನು ಪಡೆದುಕೊಂಡಿದೆ,
ಈ ನವೀಕರಿಸಿದ ಎಸ್ಯುವಿಯ ಮುಂಭಾಗವು ಪರಿಷ್ಕೃತ ಸ್ಕೋಡಾ ಬಟರ್ಫ್ಲೈ ರೇಡಿಯೇಟರ್ ಗ್ರಿಲ್ ಮತ್ತು ಮೆಶ್-ಪ್ಯಾಟರ್ನ್ ಏರ್ ಇನ್ಟೇಕ್ ವೆಂಟ್ಗಳೊಂದಿಗೆ ರಿಪ್ರೊಫೈಲ್ಡ್ ಫ್ರಂಟ್ ಬಂಪರ್ ಅನ್ನು ಪಡೆಯುತ್ತದೆ. ಎಸ್ಯುವಿಯ ಬಾನೆಟ್ ವಿನ್ಯಾಸವನ್ನು ಸಹ ಸ್ವಲ್ಪಮಟ್ಟಿಗೆ ಟ್ವೀಕ್ ಮಾಡಲಾಗಿದೆ.
ಸೈಡ್ ಪ್ರೊಫೈಲ್ ನಲ್ಲಿ ಹೊಸ 20-ಇಂಚಿನ ಅಲಾಯ್ ವ್ಹೀಲ್ ಗಳನ್ನು ಟಾಪ್-ಎಂಡ್ ರೂಪಾಂತರಕ್ಕಾಗಿ ತೆಗೆಯಬಹುದಾದ ಕವರ್ಗಳೊಂದಿಗೆ ಬ್ಲ್ಯಾಕ್ -ಔಟ್ ಪಿಲ್ಲರ್ಗಳು ಮತ್ತು ರೂಫ್ ರೈಲ್ಗಳನ್ನು ಪಡೆಯುತ್ತದೆ. ಹಿಂಭಾಗದ ಕಡೆಗೆ ಚಲಿಸುವಾಗ, ಹೊಸ ಕೊಡಿಯಾಕ್ ಫೇಸ್ಲಿಫ್ಟ್ ಹಿಂಭಾಗದ ವಿಂಡ್ಶೀಲ್ಡ್ನ ಬದಿಗಳಲ್ಲಿ ವಿಂಗ್ಲೆಟ್ಗಳೊಂದಿಗೆ ಹೊಸ ಸ್ಪಾಯ್ಲರ್ ಅನ್ನು ಹೊಂದಿದೆ
ಇದು ಎಸ್ಯುವಿಯ ಏರೋಡೈನಾಮಿಕ್ ಗುಣಲಕ್ಷಣಗಳನ್ನು ಉತ್ತಮಗೊಳಿಸುತ್ತದೆ ಮತ್ತು 0.31 ರ ಕಡಿಮೆ ಡ್ರ್ಯಾಗ್ ಗುಣಾಂಕವನ್ನು ನೀಡುತ್ತದೆ. ಇದು ಮರುವಿನ್ಯಾಸಗೊಳಿಸಲಾದ ಸುತ್ತುವ ಎಲ್ಇಡಿ ಟೈಲ್-ಲ್ಯಾಂಪ್ಗಳು, ಪರಿಷ್ಕೃತ ಹಿಂಭಾಗದ ಬಂಪರ್ ಮತ್ತು ಅದರ ಟೈಲ್ ಗೇಟ್ ನಲ್ಲಿ ಸ್ಕೋಡಾ ಎಂದು ಬರೆಯಲಾಗಿದೆ.
ಹೊಸ ಸ್ಕೋಡಾ ಕೊಡಿಯಾಕ್ ಕ್ಯಾಬಿನ್ ಒಳಗೆ, ಕೊಡಿಯಾಕ್ ಫೇಸ್ಲಿಫ್ಟ್ ಅನ್ನು ಐದು ಮತ್ತು ಏಳು-ಆಸನಗಳ ಲೇಔಟ್ಗಳಲ್ಲಿ ನೀಡಲಾಗುವುದು, ಮೆಮೊರಿ ಕಾರ್ಯದೊಂದಿಗೆ ಮಲ್ಟಿವೇ ಎಲೆಕ್ಟ್ರಿಕ್ ಸೀಟ್ ಹೊಂದಾಣಿಕೆ, ಮತ್ತು ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್ ಸೇರಿವೆ. ಕ್ಯಾಬಿನ್ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಜೊತೆಗೆ 8 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇಯನ್ನು ಹೊಂದಿದೆ.
ಇನ್ಫೋಟೈನ್ಮೆಂಟ್ ಯೂನಿಟ್ ನೊಂದಿಗೆ ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕಾನ್ಸೆಟಿವಿಟಿ ಹೊಂದಿದೆ. ಇದರೊಂದಿಗೆ ವೈರ್ಲೆಸ್ ಚಾರ್ಜಿಂಗ್ ಪ್ಯಾಡ್ ಮತ್ತು 12-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್ ಸೇರಿವೆ. ಇನ್ನು ಮೂರು-ಜೋನ್ ಕ್ಲೈಮೇಂಟ್ ಕಂಟ್ರೋಲ್, ಪನೋರಮಿಕ್ ಸನ್ರೂಫ್,ಹ್ಯಾಂಡ್ಸ್-ಫ್ರೀ ಪಾರ್ಕಿಂಗ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳನ್ನು ಹೊಂದಿದೆ.
ಹೊಸ ಕೊಡಿಯಾಕ್ ಫೇಸ್ಲಿಫ್ಟ್ ಎಸ್ಯುವಿಯನ್ನು ಭಾರತದಲ್ಲಿ ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಘಟಕವಾಗಿ ನೀಡಲಾಗುವುದು. ಸ್ಕೋಡಾ ಆಟೋ ತನ್ನ ಹೊಸ ಕೊಡಿಯಾಕ್ ಎಸ್ಯುವಿಯ ಉತ್ಪಾದನೆಯನ್ನು ಫೋಕ್ಸ್ವ್ಯಾಗನ್ ಇಂಡಿಯಾದ ಮಹಾರಾಷ್ಟ್ರದ ಔರಂಗಾಬಾದ್ ಮೂಲದ ಘಟಕದಲ್ಲಿ ಜೋಡಿಸಲಾಗುತ್ತಿದೆ.
ಸ್ಕೋಡಾ ಕಂಪನಿಯು ಕೊಡಿಯಾಕ್ ಎಸ್ಯುವಿಯನ್ನು ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಲಾಯಿತು ಮತ್ತು ಕಳೆದ 5 ವರ್ಷಗಳಲ್ಲಿ ಪ್ರಪಂಚದಾದ್ಯಂತ 6 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಕೊಡಿಯಾಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್ಯುವಿಗಳಲ್ಲಿ ಒಂದಾಗಿದೆ.
ಇನ್ನು ಸ್ಕೋಡಾ ತನ್ನ ಬಹುನಿರೀಕ್ಷಿತ ಸ್ಲಾವಿಯಾ ಸೆಡಾನ್ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿರುವ ಹೊಸ ಸ್ಲಾವಿಯಾ ಸೆಡಾನ್ ಹೋಂಡಾ ಸಿಟಿ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಫೋಕ್ಸ್ವ್ಯಾಗನ್ ಗ್ರೂಪ್ನ ಇಂಡಿಯಾ ಪ್ಲಾನ್ 2.0 ಅಡಿಯಲ್ಲಿ ಇದು ಬ್ರಾಂಡ್ನ ಎರಡನೇ ಮಾದರಿಯಾಗಿದೆ, ರ್ಯಾಪಿಡ್ ಸೆಡಾನ್ ಅನ್ನು ಬದಲಿಸಲು ಈ ಹೊಸ ಸ್ಕೋಡಾ ಸ್ಲಾವಿಯಾ ಅನ್ನು ತರುತ್ತಿದೆ.
ಇನ್ನು ಹೊಸ ಸ್ಕೋಡಾ ಕೊಡಿಯಾಕ್ ಎಸ್ಯುವಿಯಲ್ಲಿ ಸುರಕ್ಷತೆಗಾಗಿ, ಒಂಬತ್ತು ಏರ್ಬ್ಯಾಗ್ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮೆಕ್ಯಾನಿಕಲ್ ಬ್ರೇಕ್ ಅಸಿಸ್ಟ್ (MBA) ಜೊತೆಗೆ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ (HBA), ಆಂಟಿ ಸ್ಲಿಪ್ ರೆಗ್ಯುಲೇಶನ್ (ASR), ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಅನ್ನು ಪಡೆಯುತ್ತದೆ. ಹೊಸ ಸ್ಕೋಡಾ ಕೊಡಿಯಾಕ್ ಎಸ್ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್ ವ್ಯಾಗನ್ ಟಿಗ್ಬಾನ್ ಫೇಸ್ಲಿಫ್ಟ್, ಸಿಟ್ರನ್ ಸಿ5 ಏರ್ಕ್ರಾಸ್, ಹ್ಯುಂಡೈ ಟ್ಯೂಸಾನ್ ಮತ್ತು ಬಿಡುಗಡೆಯಾಗಲಿರುವ ಜೀಪ್ ಮೆರಿಡಿಯನ್ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ.