India
YouTube

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಸ್ಕೋಡಾ ಕಂಪನಿಯು ಸ್ಲಾವಿಯಾ ಸೆಡಾನ್ ಮಾದರಿಯೊಂದಿಗೆ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರು ಬಿಡುಗಡೆ ಮಾಡಿದ ಎರಡು ತಿಂಗಳ ಅವಧಿಯಲ್ಲಿ ಬೆಲೆ ಹೆಚ್ಚಳ ಘೋಷಣೆ ಮಾಡಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಸ್ಲಾವಿಯಾ ಸೆಡಾನ್ ಮಾದರಿಯ ಮೂಲಕ ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಳಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಸ್ಕೋಡಾ ಕಂಪನಿಯು ಸಂಭಾವ್ಯ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದ್ದು, ಹೊಸ ದರಪಟ್ಟಿಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 60 ಸಾವಿರ ತನಕ ಬೆಲೆ ಏರಿಕೆ ಪಡೆದುಕೊಂಡಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಸ್ಲಾವಿಯಾ ಸೆಡಾನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಇದುವರೆಗೆ ಸುಮಾರು 12 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ವಿತರಣೆ ಆರಂಭದ ನಂತರ ಇದುವರೆಗೆ ಕಂಪನಿಯು ಸುಮಾರು 3 ಸಾವಿರ ಯುನಿಟ್ ವಿತರಿಸಿದ್ದು, ಹೊಸದಾಗಿ ವಿತರಣೆಗಾಗಿ ಕಾಯುತ್ತಿರುವ ಗ್ರಾಹಕರಿಗೆ ಕಂಪನಿಯು ಬೆಲೆ ಏರಿಕೆಯ ಶಾಕ್ ಜೊತೆಗೆ ಪ್ರಮುಖ ಫೀಚರ್ಸ್ ಕೈಬಿಟ್ಟಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಬಿಡಿಭಾಗಗಳ ವೆಚ್ಚ ಹೆಚ್ಚಳ ಕಾರಣದಿಂದಾಗಿ ಸ್ಲಾವಿಯಾ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.40 ಸಾವಿರದಿಂದ ರೂ.60 ಸಾವಿರ ತನಕ ಹೆಚ್ಚಳ ಮಾಡಲಾಗಿದ್ದು, ಹೊಸ ಕಾರಿನಲ್ಲಿ ರೂ.60 ಸಾವಿರ ಹೆಚ್ಚಳ ಮಾಡಿದ ನಂತರವೂ ಕಂಪನಿಯು ಪ್ರಮುಖ ಫೀಚರ್ಸ್‌ಗಳಾದ 10 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಬದಲಾಗಿ 8 ಇಂಚಿನ ಆಫ್ಟರ್ ಮಾರ್ಕೆಟ್ ಪ್ಯಾನಸೊನಿಕ್ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಹಾಗೆಯೇ ಹೊಸ ಕಾರಿನ ಮತ್ತೊಂದು ಪ್ರೀಮಿಯಂ ಫೀಚರ್ಸ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಸಹ ತೆಗೆದುಹಾಕುವ ಮೂಲಕ ಸಾಮಾನ್ಯ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪೋರ್ಟ್ ಮಾತ್ರ ನೀಡಲಾಗಿದೆ. ಗ್ರಾಹಕರ ಅಸಮಾಧಾನಕ್ಕೆ ಉತ್ತರಿಸಿರುವ ಸ್ಕೋಡಾ ಸಿಇಒ ಜಾಕ್ ಹೋಲಿಸ್ ಸೆಮಿಕಂಡಕ್ಟರ್ ಕೊರತೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕಂಪನಿಯ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಜಾಗತಿಕ ಮಾರುಕಟ್ಟೆಯಲ್ಲಿ ತಲೆದೊರಿರುವ ಸೆಮಿಕಂಡಕ್ಟರ್ ಕೊರತೆಯು ಕಾರು ಉತ್ಪಾದನೆಗೆ ತೀವ್ರ ಹಿನ್ನಡೆ ಉಂಟು ಮಾಡುತ್ತಿರುವ ಕುರಿತು ಮಾತನಾಡಿರುವ ಸ್ಕೋಡಾ ಇಂಡಿಯಾ ಮುಖ್ಯಸ್ಥರು ಫೋಕ್ಸ್‌ವ್ಯಾಗನ್ ಗ್ರೂಪ್ ಸೂಚಿಸಿರುವ ಮಾರ್ಗಸೂಚಿಯೆಂತೆ ಹೊಸ ಕಾರುಗಳ ಫೀಚರ್ಸ್ ನೀಡಲಾಗುತ್ತಿದೆ ಎಂದಿದ್ದಾರೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಸದ್ಯ ಮಾರುಕಟ್ಟೆಯಲ್ಲಿ ಸೆಮಿಕಂಡಕ್ಟರ್ ಕೊರತೆಯ ಸಮಸ್ಯೆಯು ಸ್ಕೋಡಾ ಕಂಪನಿಗೆ ಮಾತ್ರವಲ್ಲ ಬಹುತೇಕ ಕಾರು ಕಂಪನಿಗಳು ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿದ್ದು, ಹೊಸ ಕಾರುಗಳಿಗೆ ಬೇಡಿಕೆಯಿದ್ದರೂ ಸೆಮಿಕಂಡಕ್ಟರ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ಕಾರುಗಳ ಬೆಲೆ ಹೆಚ್ಚಳದೊಂದಿಗೆ ವಿತರಣೆಯಲ್ಲೂ ನಿಧಾನವಾಗುತ್ತಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಸೆಮಿಕಂಡಕ್ಟರ್ ಆಧರಿಸಿರುವ ಫೀಚರ್ಸ್‌ಗಳನ್ನು ತೆಗೆದುಹಾಕಿರುವ ಕೆಲವು ಕಾರು ಕಂಪನಿಯು ಪೂರೈಕೆ ಹೆಚ್ಚಳ ನಂತರ ಹೊಸ ಫೀಚರ್ಸ್ ಸೇಪರ್ಡೆಗೊಳಿಸುವುದಾಗಿ ಭರವಸೆ ನೀಡುತ್ತಿದ್ದು, ಅವಶ್ಯಕ ಫೀಚರ್ಸ್‌ಗಳನ್ನು ಮಾತ್ರ ಜೋಡಣೆ ಮಾಡಿ ಮಾರಾಟಗೊಳಿಸುತ್ತಿವೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಇದೀಗ ಸ್ಕೋಡಾ ಸ್ಲಾವಿಯಾ ಮಾದರಿಗೂ ಸೆಮಿಕಂಡಕ್ಟರ್ ಕೊರತೆಯ ಬಿಸಿ ತಟ್ಟಿದ್ದು, ಕುಶಾಕ್ ಮಾದರಿಯಲ್ಲೂ ಕಂಪನಿಯು ಕೆಲ ತಿಂಗಳ ಹಿಂದೆ ಪ್ರಮುಖ ಫೀಚರ್ಸ್ ಕೈಬಿಟ್ಟಿತ್ತು. ಇದೀಗ ಸ್ಲಾವಿಯಾ ಮಾದರಿಯು ಕೆಲವು ಫೀಚರ್ಸ್‌ಗಳಿಲ್ಲದೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಬೆಲೆ ಏರಿಕೆ ಕೂಡಾ ಕಾರು ಮಾಲೀಕತ್ವವನ್ನು ಮತ್ತಷ್ಟು ಹೊರೆಯಾಗಿಸಲಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಇನ್ನು ಸ್ಲಾವಿಯಾ ಕಾರು ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.39 ಲಕ್ಷ ಬೆಲೆ ಹೊಂದಿದ್ದರೆ 1.5 ಲೀಟರ್ ಮಾದರಿಯು ಆರಂಭಿಕವಾಗಿ ರೂ. 16.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.39 ಲಕ್ಷ ಬೆಲೆ ಹೊಂದಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

1.0 ಲೀಟರ್ ಮಾದರಿಯು ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌‌ಗಳಲ್ಲಿ ಖರೀದಿಗೆ ಲಭ್ಯವಿದ್ದರೆ 1.5 ಲೀಟರ್ ಮಾದರಿಯು ಕೇವಲ ಸ್ಟೈಲ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, 1.5 ಲೀಟರ್ ಮಾದರಿಯು 1.0 ಲೀಟರ್ ಮಾದರಿಗಿಂತಲೂ ತುಸು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಸ್ಲಾವಿಯಾ ಕಾರಿನ ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಬೆಲೆಯಲ್ಲೂ ಹೆಚ್ಚಳ ಮಾಡಿದ ಸ್ಕೋಡಾ

1.5 ಲೀಟರ್ ಮಾದರಿಯು ನಾಲ್ಕು ಸಿಲಿಂಡರ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda slavia sedan price hiked upto rs 60000 details
Story first published: Friday, June 3, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X