Just In
- 1 hr ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 15 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 16 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
- 17 hrs ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
Don't Miss!
- News
ಅಪ್ಪು-ಅಪ್ಪು ಎಂದು ಕೂಗುತ್ತಿದ್ದ ಯುವಕನಿಗೆ ಶಿವಣ್ಣನಿಂದ ಬುದ್ದಿಮಾತು
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Sports
Ind vs Eng: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊರೊನಾ ವೈರಸ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಸೆಮಿಕಂಡಕ್ಟರ್ ಕೊರತೆ: ಸ್ಲಾವಿಯಾ ಕಾರಿನ ಬೆಲೆ ಹೆಚ್ಚಳದೊಂದಿಗೆ ಪ್ರಮುಖ ಫೀಚರ್ಸ್ ಕೈಬಿಟ್ಟ ಸ್ಕೋಡಾ
ಸ್ಕೋಡಾ ಇಂಡಿಯಾ ಕಂಪನಿಯು ಹೊಸ ಸ್ಲಾವಿಯಾ ಸೆಡಾನ್ ಮಾದರಿಯ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಸ್ಲಾವಿಯಾ ಮಾದರಿಗಾಗಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವಾಗಲೇ ಬೆಲೆ ಏರಿಕೆ ಘೋಷಿಸುವುದರ ಜೊತೆಗೆ ಪ್ರಮುಖ ಫೀಚರ್ಸ್‌ಗಳನ್ನು ತಗೆದುಹಾಕಿದೆ.

ಸ್ಲಾವಿಯಾ ಸೆಡಾನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಇದುವರೆಗೆ ಸುಮಾರು 12 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ. ವಿತರಣೆ ಆರಂಭದ ನಂತರ ಇದುವರೆಗೆ ಕಂಪನಿಯು ಸುಮಾರು 3 ಸಾವಿರ ಯುನಿಟ್ ವಿತರಿಸಿದ್ದು, ಹೊಸದಾಗಿ ವಿತರಣೆಗಾಗಿ ಕಾಯುತ್ತಿರುವ ಗ್ರಾಹಕರಿಗೆ ಕಂಪನಿಯು ಬೆಲೆ ಏರಿಕೆಯ ಶಾಕ್ ಜೊತೆಗೆ ಪ್ರಮುಖ ಫೀಚರ್ಸ್ ಕೈಬಿಡುವ ಮೂಲಕ ಗ್ರಾಹಕರ ಅಸಮಾಧಾನಕ್ಕಾಗಿ ಕಾರಣವಾಗಿದೆ.

ಕಾರುಗಳ ಬಿಡಿಭಾಗಗಳ ವೆಚ್ಚ ನಿರ್ವಹಣೆಗಾಗಿ ಬೆಲೆ ಏರಿಕೆಯ ನಂತರವು ಪ್ರಮುಖ ಫೀಚರ್ಸ್ ಕೈಬಿಟ್ಟಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಟ್ವಿಟರ್‌ನಲ್ಲಿ ಸ್ಕೋಡಾ ಸಿಇಒ ಜಾಕ್ ಹೋಲಿಸ್ ಅವರಿಗೆ ಗ್ರಾಹಕರು ತರಾಟೆ ತೆಗೆದುಕೊಂಡಿದ್ದಾರೆ.

ಬಿಡಿಭಾಗಗಳ ವೆಚ್ಚ ಹೆಚ್ಚಳ ಕಾರಣದಿಂದಾಗಿ ಸ್ಲಾವಿಯಾ ಬೆಲೆಯಲ್ಲಿ ಜೂನ್ 1 ರಿಂದ ಅನ್ವಯಿಸುವಂತೆ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಗರಿಷ್ಠ ರೂ.50 ಸಾವಿರ ತನಕ ಹೆಚ್ಚಳ ಮಾಡಲಾಗಿದ್ದು, ಹೊಸ ಕಾರಿನಲ್ಲಿ ರೂ.50 ಸಾವಿರ ಹೆಚ್ಚಳ ಮಾಡಿದ ನಂತರವೂ ಕಂಪನಿಯು ಪ್ರಮುಖ ಫೀಚರ್ಸ್‌ಗಳಾದ 10 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಬದಲಾಗಿ 8 ಇಂಚಿನ ಆಫ್ಟರ್ ಮಾರ್ಕೆಟ್ ಪ್ಯಾನಸೊನಿಕ್ ಇನ್ಪೋಟೈನ್‌ಮೆಂಟ್ ಜೋಡಣೆ ಮಾಡಿದೆ.

ಹಾಗೆಯೇ ಹೊಸ ಕಾರಿನ ಮತ್ತೊಂದು ಪ್ರೀಮಿಯಂ ಫೀಚರ್ಸ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಸಹ ತೆಗೆದುಹಾಕುವ ಮೂಲಕ ಸಾಮಾನ್ಯ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪೋರ್ಟ್ ಮಾತ್ರ ನೀಡಲಾಗಿದೆ. ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್ ಕೈಬಿಟ್ಟಿರುವ ಕುರಿತು ಗ್ರಾಹಕರು ಟ್ವಿಟರ್‌ನಲ್ಲಿ ಸ್ಕೋಡಾ ಇಂಡಿಯಾ ಮುಖ್ಯಸ್ಥರಿಗೆ ತರಾಟೆ ತೆಗೆದುಕೊಂಡಿದ್ದು, ಗ್ರಾಹಕರಿಗೆ ಪ್ರಶ್ನೆಗಳಿಗೆ ಉತ್ತರಿಸಿರುವ ಜಾಕ್ ಹೋಲಿಸ್ ಸೆಮಿಕಂಡಕ್ಟರ್ ಕೊರತೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕಂಪನಿಯ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ತಲೆದೊರಿರುವ ಸೆಮಿಕಂಡಕ್ಟರ್ ಕೊರತೆಯು ಕಾರು ಉತ್ಪಾದನೆಗೆ ತೀವ್ರ ಹಿನ್ನಡೆ ಉಂಟು ಮಾಡುತ್ತಿರುವ ಕುರಿತು ಮಾತನಾಡಿರುವ ಸ್ಕೋಡಾ ಇಂಡಿಯಾ ಮುಖ್ಯಸ್ಥರು ಫೋಕ್ಸ್‌ವ್ಯಾಗನ್ ಗ್ರೂಪ್ ಸೂಚಿಸಿರುವ ಮಾರ್ಗಸೂಚಿಯೆಂತೆ ಹೊಸ ಕಾರುಗಳ ಫೀಚರ್ಸ್ ನೀಡಲಾಗುತ್ತಿದೆ ಎಂದಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಸೆಮಿಕಂಡಕ್ಟರ್ ಕೊರತೆಯ ಸಮಸ್ಯೆಯು ಸ್ಕೋಡಾ ಕಂಪನಿಗೆ ಮಾತ್ರ ಬಹುತೇಕ ಕಾರು ಕಂಪನಿಗಳು ಸೆಮಿಕಂಡಕ್ಟರ್ ಕೊರತೆ ಎದುರಿಸುತ್ತಿದ್ದು, ಹೊಸ ಕಾರುಗಳಿಗೆ ಬೇಡಿಕೆಯಿದ್ದರೂ ಸೆಮಿಕಂಡಕ್ಟರ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಕಾರು ವಿತರಣೆಯ ನಿಧಾನವಾಗುತ್ತಿದೆ.

ಕಾರು ವಿತರಣೆ ನಿಧಾನದಿಂದಾಗಿ ಕಂಪನಿಗಳ ಮಾರಾಟ ಪ್ರಮಾಣವು ಸಹ ಕುಸಿತದೊಂದಿಗೆ ನಷ್ಟ ಅನುಭವಸುತ್ತಿದ್ದು, ಈ ಹಿನ್ನಲೆ ಪ್ರಮುಖ ಕಾರು ಕಂಪನಿಯು ಸೆಮಿಕಂಡಕ್ಟರ್ ಲಭ್ಯತೆ ಆಧರಿಸಿ ಕೆಲವು ಫೀಚರ್ಸ್ ತೆಗೆದುಹಾಕಿ ಕಾರು ವಿತರಣೆ ಮಾಡುತ್ತಿವೆ.

ಸೆಮಿಕಂಡಕ್ಟರ್ ಆಧರಿಸಿರುವ ಫೀಚರ್ಸ್‌ಗಳನ್ನು ತೆಗೆದುಹಾಕಿರುವ ಕೆಲವು ಕಾರು ಕಂಪನಿಯು ಪೂರೈಕೆ ಹೆಚ್ಚಳ ನಂತರ ಹೊಸ ಫೀಚರ್ಸ್ ಸೇಪರ್ಡೆಗೊಳಿಸುವುದಾಗಿ ಭರವಸೆ ನೀಡುತ್ತಿದ್ದು, ಅವಶ್ಯಕ ಫೀಚರ್ಸ್ ಮಾತ್ರ ಜೋಡಣೆ ಮಾಡಿ ಮಾರಾಟಗೊಳಿಸುತ್ತಿವೆ.

ಇದೀಗ ಸ್ಕೋಡಾ ಸ್ಲಾವಿಯಾ ಮಾದರಿಗೂ ಸೆಮಿಕಂಡಕ್ಟರ್ ಕೊರತೆಯ ಬಿಸಿ ತಟ್ಟಿದ್ದು, ಕುಶಾಕ್ ಮಾದರಿಯಲ್ಲೂ ಕಂಪನಿಯು ಕೆಲ ತಿಂಗಳ ಹಿಂದೆ ಪ್ರಮುಖ ಫೀಚರ್ಸ್ ಕೈಬಿಟ್ಟಿತ್ತು. ಇದೀಗ ಸ್ಲಾವಿಯಾ ಮಾದರಿಯು ಕೆಲವು ಫೀಚರ್ಸ್‌ಗಳಿಲ್ಲದೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಬೆಲೆ ಏರಿಕೆ ಕೂಡಾ ಕಾರು ಮಾಲೀಕತ್ವವನ್ನು ಮತ್ತಷ್ಟು ಹೊರೆಯಾಗಿಸಲಿದೆ.

ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರುವ ಸ್ಲಾವಿಯಾ ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.39 ಲಕ್ಷ ಬೆಲೆ ಹೊಂದಿದ್ದರೆ 1.5 ಲೀಟರ್ ಮಾದರಿಯು ಆರಂಭಿಕವಾಗಿ ರೂ. 16.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.79 ಲಕ್ಷ ಬೆಲೆ ಹೊಂದಿದೆ.

1.0 ಲೀಟರ್ ಮಾದರಿಯು ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದರೆ 1.5 ಲೀಟರ್ ಮಾದರಿಯು ಕೇವಲ ಸ್ಟೈಲ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, 1.5 ಲೀಟರ್ ಮಾದರಿಯು 1.0 ಲೀಟರ್ ಮಾದರಿಗಿಂತಲೂ ತುಸು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

1.5 ಲೀಟರ್ ಮಾದರಿಯು ನಾಲ್ಕು ಸಿಲಿಂಡರ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.