ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಎಲೆಕ್ಟ್ರಿಕ್ ಕಾರುಗಳು ಬರಲಿದೆ. ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಉಪಕರಣಗಳಲ್ಲಿ ಪರಿಣತಿಯನ್ನು ಹೊಂದಿರುವ ಅನೇಕ ತಂತ್ರಜ್ಞಾನ ಕಂಪನಿಗಳು ಈಗ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಜ್ಜೆ ಹಾಕಲು ಯೋಜಿಸುತ್ತಿವೆ. ಪ್ರಮುಖ ಬ್ರಾಂಡ್‌ಗಳಲ್ಲಿ ಒಂದಾದ ಸೋನಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ವಿಷನ್-ಎಸ್ ಕಾನ್ಸೆಪ್ಟ್ ಅನ್ನು 2020ರ ಆರಂಭದಲ್ಲಿ ಪರಿಚಯಿಸಿತು.

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಇದೀಗ ಜಪಾನಿನ ತಂತ್ರಜ್ಞಾನದ ದೈತ್ಯ ಕಂಪನಿ ಸೋನಿ ತನ್ನ ಎರಡನೇ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರನ್ನು ವಿಷನ್-ಎಸ್ 02 ರೂಪದಲ್ಲಿ ಪೂರ್ವವೀಕ್ಷಣೆ ಮಾಡಿದೆ. ವಿಷನ್-ಎಸ್ ಎಲೆಕ್ಟ್ರಿಕ್ ಸೆಡಾನ್‌ಗಿಂತ ಭಿನ್ನವಾಗಿ, ವಿಷನ್-ಎಸ್ 02 ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯ ಮೂಲಮಾದರಿಯ ರೋಡ್ ಟೆಸ್ಟ್ ಪ್ರಾರಂಭಿಸಿದೆ

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಇನ್ನು ಎಲೆಕ್ಟ್ರಿಕ್ ಸೆಡಾನ್ ಉತ್ಪಾದನಾ ಹಂತವನ್ನು ತಲುಪುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಮತ್ತೊಂದೆಡೆ, ಭವಿಷ್ಯದಲ್ಲಿ ವಿಷನ್-ಎಸ್ 02 ಉತ್ಪಾದನೆಯನ್ನು ತಲುಪಬಹುದು ಎಂಬ ಹೇಳಲಾಗುತ್ತಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಅದರ ಸೆಡಾನ್ ಮಾದರಿಯ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ನಾಲ್ಕು ಮತ್ತು ಏಳು-ಸೀಟುಗಳ ವಿನ್ಯಾಸವನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಈ ಹೊಸ ಸೋನಿ ಎಸ್‍ಯುವಿಯು 4,895 ಎಂಎಂ ಉದ್ದ, 1,930 ಎಂಎಂ ಅಗಲ ಮತ್ತು 1,651 ಎಂಎಂ ಎತ್ತರವನ್ನು ಹೊಂದಿದೆ. ಇದು ಟೆಸ್ಲಾ ಮಾಡೆಲ್ ವೈ ಮಾದರಿಯಂತೆಯೇ ಅದೇ ಬಾಲ್ ಪಾರ್ಕ್ನಲ್ಲಿ ಇರಿಸುತ್ತದೆ. ಕಾನ್ಸೆಪ್ಟ್ ರೂಪದಲ್ಲಿ, ವಿಷನ್-ಎಸ್ 02 ಮಾದರಿಯು 2,480 ಕೆಜಿ ತೂಕವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಮುಂಬರುವ ಪ್ರೀಮಿಯಂ ವಿಷನ್-ಎಸ್ 02 ಬಹಳ ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ. ಮುಂಭಾಗದಲ್ಲಿ, ಮುಚ್ಚಿದ ನೋಸ್ ಮತ್ತು ಕಣ್ಣಿನ ಆಕಾರದ ಹೆಡ್‌ಲೈಟ್‌ಗಳು ಇದಕ್ಕೆ ಚಮತ್ಕಾರಿ ನೋಟವನ್ನು ನೀಡುತ್ತದೆ. ಸ್ಲೋಂಪಿಗ್ ರೂಫ್ ಲೈನ್ ಸರಿಯಾದ ಕೂಪೆ ಎಸ್‍ಯುವಿ ಲುಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಈ ಹೊಸ ಎಸ್‍ಯುವಿ ಕೆತ್ತಿದ ಬಾನೆಟ್, ಅಗಲವಾದ ಏರ್ ಡ್ಯಾಮ್ ಮತ್ತು ಡ್ಯುಯಲ್-ಟೋನ್ ಪೇಂಟ್ ಸ್ಕೀಮ್‌ನಂತಹ ಇತರ ಬಾಹ್ಯ ಮುಖ್ಯಾಂಶಗಳು ಅದರ ಸ್ಪೋರ್ಟಿ ಸ್ವಭಾವವನ್ನು ಒತ್ತಿಹೇಳುತ್ತವೆ. ಸೈಡ್ ಪ್ರೊಫೈಲ್ ಡಿಸೈನರ್ 20-ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಇದರೊಂದಿಗೆ ಬ್ಲ್ಯಾಕ್-ಔಟ್ ಬಿ-ಪಿಲ್ಲರ್‌ಗಳು ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳಂತಹ ಹೈಲೈಟ್‌ಗಳಿಂದ ಪ್ರಾಬಲ್ಯ ಹೊಂದಿದೆ. ಇನ್ನು ORVM ಗಳ ಬದಲಿಗೆ ವಿಷನ್-ಎಸ್ 02 ಕ್ಯಾಮೆರಾ ಲೆನ್ಸ್‌ಗಳಿಂದ ಪ್ರಯೋಜನ ಪಡೆಯುತ್ತದೆ. ಈ ಸೋನಿ 7 ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿಯ ಹಿಂಭಾಗದ ಸ್ಲೋಂಪಿಗ್ ರೂಫ್ ಲೈನ್ ಮತ್ತು ಟೈಲ್‌ಗೇಟ್‌ನ ಅಗಲದ ಉದ್ದಕ್ಕೂ ಚಾಲನೆಯಲ್ಲಿರುವ ಎಲ್‌ಇಡಿ ಟೈಲ್‌ಲ್ಯಾಂಪ್‌ನ ಉದ್ದನೆಯ ಪಟ್ಟಿಯಿಂದಾಗಿ ವಿಂಡ್‌ಸ್ಕ್ರೀನ್ ಅನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ವಿಷನ್-ಎಸ್ 02 ನಲ್ಲಿ ಸೋನಿ ಬಳಸುವ ವಿನ್ಯಾಸ ಭಾಷೆ ಪೋರ್ಷೆಯಿಂದ ಪ್ರತಿಧ್ವನಿಸುತ್ತದೆ. ಈ ಹೊಸ ಸೋನಿ ಎಲೆಕ್ಟ್ರಿಕ್ ಎಸ್‌ಯುವಿಯ ಒಳಭಾಗವು ಆಕರ್ಷಕವಾಗಿದೆ. ಇದರಲ್ಲಿ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನಗಳೊಂದಿಗೆ ಲೋಡ್ ಆಗಿದೆ. ಮೂರು ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿರುವ ಸಂಪೂರ್ಣ ಡಿಜಿಟಲ್ ಡ್ಯಾಶ್‌ಬೋರ್ಡ್ ಅತ್ಯಂತ ವಿಶಿಷ್ಟವಾದ ಹೈಲೈಟ್ ಆಗಿದೆ.

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಪನೋರಮಿಕ್ ಇನ್ಫೋಟೈನ್‌ಮೆಂಟ್ ಇಂಟರ್‌ಫೇಸ್ ಅನ್ನು ವೀಡಿಯೋ ಪ್ಲೇಬ್ಯಾಕ್‌ಗಾಗಿ ಅಥವಾ ಸೋನಿ ಪ್ಲೇಸ್ಟೇಷನ್ ಗೇಮಿಂಗ್ ಕನ್ಸೋಲ್‌ಗೆ ರಿಮೋಟ್ ಸಂಪರ್ಕದ ಮೂಲಕ ವಿಡಿಯೋ ಗೇಮ್‌ಗಳನ್ನು ಆಡಲು ಸಹ ಬಳಸಬಹುದು. ಇತರ ವೈಶಿಷ್ಟ್ಯಗಳಲ್ಲಿ ಮೂರು ಆಯಾಮದ ಆಡಿಯೊ ಸಿಸ್ಟಮ್, ಪನರೋಮಿಕ್ ಗ್ಲಾಸ್ ರೂಫ್ ಮತ್ತು ಪ್ರಮುಖವಾಗಿ 2+ ಡ್ರೈವಿಂಗ್ ಅಸಿಸ್ಟ್ ಫೀಛರ್ಸ್ ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ವಿಷನ್-ಎಸ್ 02 ಎರಡು ಎಲೆಕ್ಟ್ರಿಕ್ ಮೋಟರ್‌ಗಳಾಗಿದ್ದು, ಪ್ರತಿ ಆಕ್ಸಲ್‌ನಲ್ಲಿ 536 ಬಿಹೆಚ್‍ಪಿ ಪವರ್ಸಂಯೋಜಿತ ಉತ್ಪಾದನೆಯೊಂದಿಗೆ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಆದರೆ ಬ್ರ್ಯಾಂಡ್ ತನ್ನ ಬ್ಯಾಟರಿ ಕಾನ್ಫಿಗರೇಶನ್ ಮತ್ತು ಶ್ರೇಣಿಯ ಬಗ್ಗೆ ಸ್ಪೆಕ್ಸ್ ಅನ್ನು ಇನ್ನೂ ಬಹಿರಂಗಪಡಿಸಿಲ್ಲ. ಮುಂಬರುವ ಎಲೆಕ್ಟ್ರಿಕ್ ಕ್ರಾಸ್‌ಒವರ್ ಅನ್ನು ಸೋನಿ ಮೊಬಿಲಿಟಿ ಇಂಕ್ ಎಂಬ ಹೊಸ ಆಪರೇಟಿಂಗ್ ಕಂಪನಿಯ ಅಡಿಯಲ್ಲಿ ಮಾರಾಟ ಮಾಡಲಾಗುವುದು ಎಂದು ಸೋನಿ ಬಹಿರಂಗಪಡಿಸಿದೆ,

ಆಕರ್ಷಕ ವಿನ್ಯಾಸದ ಹೊಸ Sony 7-ಸೀಟರ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಸೋನಿ ವಿಷನ್-ಎಸ್ 02 ಕಾನ್ಸೆಪ್ಟ್ ಎಲೆಕ್ಟ್ರಿಕ್ ಎಸ್‍ಯುವಿಯು ಈ ವರ್ಷದ ಮಾರ್ಚ್-ಮೇ ತಿಂಗಗಳುಗಳ ನಡುವೆ ಮಾರುಕಟ್ಟೆಗೆ ಲಗ್ಗೆ ಇಡಬಹುದು. ಆದರೆ ಬಿಡುಗಡೆಯ ಬಗ್ಗೆ ಸೋನಿ ಕಂಪನಿಯು ಯಾವುದೇ ಮಾಹಿತಿಗಳು ಬಹಿರಂಗಪಡಿಸಿಲ್ಲ. ಈ ಕಾನ್ಸೆಪ್ಟ್ ಕಾರಿನ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ, ಈ ಎಲೆಕ್ಟ್ರಿಕ್ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಟೆಸ್ಲಾ ಮಾಡೆಲ್ ವೈ ಮಾದರಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Sony unveiled new vision s 02 electric suv concept details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X