ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಎಲೆಕ್ಟ್ರಿಕ್ ವಾಹನಗಳ ಬಳಕೆಯು ತೀವ್ರಗೊಳ್ಳುತ್ತಿದ್ದು, ಆನ್‌ಲೈನ್ ಬಸ್ ಬುಕಿಂಗ್ ಅಪ್ಲಿಕೇಶನ್ ಕಂಪನಿಯಾಗಿರುವ ಚಲೋ ಇದೀಗ ಇವಿ ಬಸ್ ಸೇವೆಗಾಗಿ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್‌ಗಳ ಖರೀದಿಗಾಗಿ ಪಾಲುದಾರಿಕೆ ಪ್ರಕಟಿಸಿದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಸಾಂಪ್ರಾದಾಯಿಕ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದರಿಂದ ಇವಿ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಶೋಕ್ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ವೆಹಿಕಲ್ ಅಂಗ ಸಂಸ್ಥೆಯಾದ ಸ್ವಿಚ್ ಮೊಬಿಲಿಟಿಯು ಚಲೋ ಆ್ಯಪ್ ಕಂಪನಿಯೊಂದಿಗೆ ಹೊಸ ಪಾಲುದಾರಿಕೆ ಅಡಿ ಬೃಹತ್ ಪ್ರಮಾಣದ ಇವಿ ಬಸ್‌ ಮಾದರಿಗಳನ್ನು ರಸ್ತೆಗಿಳಿಸುತ್ತಿದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಹೊಸ ಪಾಲುದಾರಿಕೆ ಯೋಜನೆ ಅಡಿ ಸ್ವಿಚ್ ಮೊಬಿಲಿಟಿ ಕಂಪನಿಯು ಚಲೋ ಕಂಪನಿಗೆ ಒಟ್ಟು 5 ಇವಿ ಬಸ್‌ಗಳನ್ನು ಒದಗಿಸಲಿದ್ದು, ಇವಿ ಬಸ್‌ಗಳ ನಿರ್ಮಾಣಕ್ಕಾಗಿ ಉಭಯ ಕಂಪನಿಗಳು ಬರೋಬ್ಬರಿ 1 ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು ರೂ. 7,969 ಕೋಟಿ ಹೂಡಿಕೆ ಮಾಡುತ್ತಿವೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಒಪ್ಪಂದದ ಪ್ರಕಾರ ಸ್ವಿಚ್ ಮೊಬಿಲಿಟಿ ಕಂಪನಿಯ 5 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಮುಂದಿನ 3 ವರ್ಷಗಳಲ್ಲಿ ಪೂರ್ಣಗೊಳಿಸಲಿದ್ದು, ಹೊಸ ಒಪ್ಪಂದದ ಅಡಿಯಲ್ಲಿ ಸ್ವಿಚ್ ಐ ಇವಿ12 ಅನ್ನು ಪೂರೈಕೆ ಮಾಡಲಿದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಚಲೋ ಆ್ಯಪ್ ಕಂಪನಿಯು ಸ್ವಿಚ್ ಮೊಬಿಲಿಟಿಯ ಹೊಸ ಇವಿ ಬಸ್‌ಗಳನ್ನು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ನಿಯೋಜಿಸಲಿದ್ದು, 5 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಮೂಲಕ ಪ್ರತಿ ವರ್ಷ 2.86 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ದೇಶದಲ್ಲಿ ಪ್ರತಿದಿನ ಸುಮಾರು 150 ಮಿಲಿಯನ್ ಪ್ರಯಾಣಿಕರು ಬಸ್ ಅನ್ನು ಬಳಸುತ್ತಾರೆ, ಆದರೆ ಭಾರತದಲ್ಲಿ ಕಾರ್ಯನಿರ್ವಹಿಸುವ ಬಸ್‌ಗಳು ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ಕಂಪನಿ ಹೇಳಿದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಹೀಗಾಗಿ ಪ್ರಯಾಣಿಕರಿಗೆ ಆನ್‌ಲೈನ್ ಬಸ್ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸಲು ಚಲೋ ಆಪ್ ಇದುವರೆಗೆ 2,500 ಬಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, ಜುಲೈ 2022 ರಲ್ಲಿ ಚಲೋ ತನ್ನ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ 120 ಮಿಲಿಯನ್‌ಗಿಂತಲೂ ಹೆಚ್ಚು ಬಸ್ ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಚಲೋ ಅಪ್ಲಿಕೇಶನ್‌ನಲ್ಲಿ ಪ್ರಸ್ತುತ 15,000 ಕ್ಕೂ ಹೆಚ್ಚು ಬಸ್ ಬುಕಿಂಗ್ ಲಭ್ಯವಿದ್ದು, ಕಂಪನಿಯು ತನ್ನ ಗ್ರಾಹಕರಿಗೆ ಬಸ್‌ನ ಆನ್‌ಲೈನ್ ಟ್ರ್ಯಾಕಿಂಗ್ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ಟ್ರ್ಯಾಕಿಂಗ್ ಸೌಲಭ್ಯವನ್ನು ಒದಗಿಸುವ ನಂಬರ್-1 ಬುಕಿಂಗ್ ಕಂಪನಿ ಎಂದು ಹೇಳಿಕೊಳ್ಳುತ್ತದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಹೀಗಾಗಿ ಮುಂಬರುವ ದಿನಗಳಲ್ಲಿ ಇವಿ ವಾಹನಗಳ ಮೂಲಕ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿರುವ ಕಂಪನಿಯು ಸ್ವಿಚ್ ಮೊಬಿಲಿಟಿ ಜೊತೆಗಿನ ಒಪ್ಪಂದದೊಂದಿಗೆ ಇವಿ ಬಸ್ ಖರೀದಿಸಲು ಒಪ್ಪಿಗೆ ಸೂಚಿಸಿದ್ದು, ಹೊಸ ಇವಿ ಬಸ್ ಸೌಲಭ್ಯದೊಂದಿಗೆ ಹೆಚ್ಚಿನ ಮಟ್ಟದ ನಿರ್ವಹಣಾ ವೆಚ್ಚ ಉಳಿತಾಯದ ನೀರಿಕ್ಷೆ

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಸ್ವಿಚ್ ಮೊಬಿಲಿಟಿ ಲಿಮಿಟೆಡ್ ಕಂಪನಿಯು ಭಾರತದಲ್ಲಿ ಮುಂದಿನ ಪೀಳಿಗೆಯ ಕಾರ್ಬನ್ ನ್ಯೂಟ್ರಲ್ ಬಸ್ 'SWITCH EiV 12' ಅನ್ನು ಬಿಡುಗಡೆ ಮಾಡಿದ್ದು., ಕಂಪನಿಯು ಈ ಬಸ್‌ನ EiV 12 ಲೋ ಫ್ಲೋರ್ ಮತ್ತು EiV 12 ಸ್ಟ್ಯಾಂಡರ್ಡ್ ಎಂಬ ಎರಡು ರೂಪಾಂತರಗಳನ್ನು ಬಿಡುಗಡೆ ಮಾಡಿದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಈ ಎರಡೂ ಸ್ವಿಚ್ ಬಸ್‌ಗಳನ್ನು ಇಂಟ್ರಾಸಿಟಿ, ಇಂಟರ್‌ಸಿಟಿ, ಶಾಲೆ, ಕಾಲೇಜು, ಸಿಬ್ಬಂದಿ ಸಾರಿಗೆ ಜೊತೆ ಮುಂತಾದ ಮುಂತಾದ ಉದ್ದೇಶಗಳಿಗೆ ಬಳಸಬಹುಗಾಗಿದ್ದು, ಈ ಬಸ್‌ಗಳಲ್ಲಿ ಹೆಚ್ಚಿನ ಶ್ರೇಣಿಯನ್ನು ಒದಗಿಸಲು ಕಂಪನಿಯು ಸುಧಾರಿತ ಲಿಥಿಯಂ-ಐಯಾನ್ ಎನ್‌ಎಂಸಿ ಮಾಡ್ಯುಲರ್ ಬ್ಯಾಟರಿಗಳನ್ನು ಬಳಸಿದೆ, ಇದು ಭಾರತೀಯ ಪರಿಸರ ಮತ್ತು ತಾಪಮಾನಕ್ಕೆ ಸರಿಯಾಗಿ ಹೊಂದಿಕೆಯಾಗಲಿದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಬಸ್‌ಗಳು ಕಂಪನಿಯ ಸಂಪರ್ಕಿತ ತಂತ್ರಜ್ಞಾನ 'ಸ್ವಿಚ್ ಐಯಾನ್' ನೊಂದಿಗೆ ಸಂಪರ್ಕ ಹೊಂದಿವೆ, ಇದು ರಿಮೋಟ್ ಟ್ರ್ಯಾಕಿಂಗ್, ರಿಯಲ್-ಟೈಮ್ ಡಯಾಗ್ನೋಸ್ಟಿಕ್ಸ್ ಮತ್ತು ಮಾನಿಟರಿಂಗ್ ಸೇವೆಗಳು ಹಾಗೂ ವಿಶ್ವ ದರ್ಜೆಯ ಡಿಜಿಟಲ್ ಬ್ಯಾಟರಿ ನಿರ್ವಹಣಾ ಸಾಧನಗಳನ್ನು ಸಕ್ರಿಯಗೊಳಿಸುತ್ತದೆ. EiV ಪ್ಲಾಟ್‌ಫಾರ್ಮ್‌ನ EV ಆರ್ಕಿಟೆಕ್ಚರ್ ಇತ್ತೀಚೆಗೆ ಬಿಡುಗಡೆಯಾದ ಯುರೋಪಿಯನ್ ಸ್ವಿಚ್ e1 ಬಸ್‌ನಂತೆಯೇ ಇದೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಕಂಪನಿಯ ಈ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಬಸ್ ಭಾರತದಲ್ಲಿ ಬೆಳೆಯುತ್ತಿರುವ ಸಾರ್ವಜನಿಕ ಸಾರಿಗೆಯನ್ನು ಕಾರ್ಬನ್ ಮುಕ್ತಗೊಳಿಸಲು ಸಹಾಯ ಮಾಡಲಿದೆ. ಸ್ವಿಚ್ ಮೊಬಿಲಿಟಿ ಇದುವರೆಗೆ 600 ಇ-ಬಸ್‌ಗಳಿಗೆ ಆರ್ಡರ್‌ಗಳನ್ನು ಸ್ವೀಕರಿಸಿದೆ. ಸ್ವಿಚ್ ಮೊಬಿಲಿಟಿ ಹೇಳುವಂತೆ SWITCH EiV 12 ಬಸ್‌ಗಳು ತಂತ್ರಜ್ಞಾನ ಮತ್ತು ಪ್ರಯಾಣಿಕರ ಸೌಕರ್ಯದಲ್ಲಿ ಮುಂಚೂಣಿಯಲ್ಲಿರುವ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿವೆ.

1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ

ಈ ಬಸ್‌ಗಳು ಒಂದೇ ಬಾರಿ ಚಾರ್ಜ್‌ ಮಾಡಿದರೆ 500 ಕಿ.ಮೀ. ಮೈಲೇಜ್ ನೀಡಲಿದೆ. ಅಲ್ಲದೇ ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ ಮತ್ತು ಬ್ಯಾಟರಿಯು ದೀರ್ಘಾವಧಿಯ ಬ್ಯಾಟರಿ ಬಾಳಿಕೆಯೊಂದಿಗೆ ಉತ್ಕೃಷ್ಟ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾಪನಾಂಕ ನಿರ್ಣಯಿಸಲಾಗುತ್ತದೆ, ಈ ಮೂಲಕ ಮಾರುಕಟ್ಟೆಯಲ್ಲಿ ಮಾಲೀಕತ್ವದ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ಕಂಪನಿಯ ಪ್ರಕಾರ, ಈ ಇ-ಬಸ್‌ನ ನಿರ್ವಹಣಾ ವೆಚ್ಚವು ಅಗ್ಗವಾಗಿದೆ.

Most Read Articles

Kannada
English summary
Switch mobility to deploy 5000 electric buses with chalo app
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X