2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ಕಾರ್ಯವನ್ನು ಆಯಾ ರಾಜ್ಯ ಸರ್ಕಾರಗಳು ತೀರ್ವಗೊಳಿಸಿವೆ. ಇದರ ಭಾಗವಾಗಿ ಬೃಹತ್ ಎಲೆಕ್ಟ್ರಿಕ್ ವಾಹನಗಳನ್ನು ಸಹ ಪರಿಚಯಿಸಲಾಗುತ್ತಿದೆ. ಇದೀಗ ಮುಂಬೈನಲ್ಲಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್ ಕಂಪನಿ ತಿಳಿಸಿದೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಭಾರತವನ್ನು ಕಾರ್ಬನ್ ಮುಕ್ತಗೊಳಿಸುವ ಕಾರ್ಯ ವೇಗಗೊಳ್ಳುತ್ತಿದೆ. ಹಲವು ಇವಿ ತಯಾರಕರು ತಮ್ಮ ಹೊಸ ಮಾದರಿಗಳೊಂದಿಗೆ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿದ್ದರೇ, ಇತ್ತೀಚೆಗೆ ಸ್ವಿಚ್ ಮೊಬಿಲಿಟಿ ಕೂಡ ಇವಿ ಬಸ್‌ಗಳನ್ನು ಬಿಡುಗಡೆ ಮಾಡಿತ್ತು. ಈ ಬಸ್‌ಗಳು ಒಂದೇ ಬಾರಿ ಚಾರ್ಜ್‌ ಮಾಡಿದರೆ 500 ಕಿ.ಮೀ. ಮೈಲೇಜ್ ನೀಡುತ್ತವೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಅಲ್ಲದೇ ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ ಮತ್ತು ಬ್ಯಾಟರಿಯು ದೀರ್ಘಾವಧಿಯ ಬ್ಯಾಟರಿ ಬಾಳಿಕೆಯೊಂದಿಗೆ ಉತ್ಕೃಷ್ಟ ದಕ್ಷತೆಯನ್ನು ಖಚಿತಪಡಿಸುತ್ತವೆ. ಸ್ವಿಚ್ ಮೊಬಿಲಿಟಿ ಲಿಮಿಟೆಡ್ ಹೊಸ ಪೀಳಿಗೆಯ ಕಾರ್ಬನ್ ನ್ಯೂಟ್ರಲ್ ಬಸ್ 'SWITCH EiV 12' ಬಸ್‌ EiV 12 ಲೋ ಫ್ಲೋರ್ ಮತ್ತು EiV 12 ಸ್ಟ್ಯಾಂಡರ್ಡ್ ಎಂಬ ಎರಡು ರೂಪಾಂತರಗಳನ್ನು ಬಿಡುಗಡೆ ಮಾಡಿದೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಮುಂಬೈನಲ್ಲಿ ಡಬಲ್ ಡೆಕ್ಕರ್

ಮುಂಬೈನಲ್ಲಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳು ಶೀಘ್ರದಲ್ಲೇ ಪ್ರಾರಂಭವಾಗಬಹುದು. ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್ (ಬೆಸ್ಟ್) ತನ್ನ ಮೊದಲ ಬ್ಯಾಚ್ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗಳನ್ನು ತನ್ನ ಸಂಸ್ಥಾಪನಾ ದಿನವಾದ ಆಗಸ್ಟ್ 7 ರಂದು ಪ್ರಾರಂಭಿಸಲು ಯೋಜಿಸುತ್ತಿದೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಬೆಸ್ಟ್ ಬಸ್‌ಗಳನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್‌ಗೆ ಪರಿವರ್ತಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರ 900 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುತ್ತಿದೆ. 2028ರ ವೇಳೆಗೆ ನಗರದಲ್ಲಿ ಸಂಚರಿಸುವ ಎಲ್ಲಾ ಡೀಸೆಲ್ ಬಸ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಲು ಸರ್ಕಾರ ಯೋಜಿಸಿದೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ವರದಿಯ ಪ್ರಕಾರ, 2019 ರಲ್ಲಿ ಮುಂಬೈನಲ್ಲಿ 120 ಇದ್ದ ಡಬಲ್ ಡೆಕ್ಕರ್ ಬಸ್‌ಗಳ ಸಂಖ್ಯೆ 2021ರ ವೇಳೆಗೆ ಕೇವಲ 48ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ನಗರದ ಅತ್ಯಂತ ಹಳೆಯ ಸಾರಿಗೆ ಮಾಧ್ಯಮವನ್ನು ಸುರಕ್ಷಿತವಾಗಿಡಲು ಬೆಸ್ಟ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪ್ರಮಾಣಿತ ಇವಿ ಬಸ್‌ಗಳನ್ನು ತರಲು ಮುಂದಾಗಿದೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಎಲ್ಲಾ ಬೆಸ್ಟ್ ಬಸ್‌ಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್‌ನಲ್ಲಿ ಚಲಿಸಲಿವೆ, ಇಲ್ಲವೇ ಹೈಡ್ರೋಜನ್ ಇಂಧನ ಸೆಲ್‌ಗಳ ಮೂಲಕ ಚಲಿಸುತ್ತವೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಬಸ್ಸುಗಳನ್ನು ಓಡಿಸಲು ಯಾವ ಮಾಧ್ಯಮವು ಉತ್ತಮವಾಗಿರುತ್ತದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಸರ್ಕಾರ ಈಗಾಗಲೇ 900 ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಈ ವರ್ಷಾಂತ್ಯಕ್ಕೆ 225 ಬಸ್‌ಗಳನ್ನು ಬಿಡಲಾಗುವುದು. ಅದೇ ಸಮಯದಲ್ಲಿ, ಮುಂದಿನ 225 ಬಸ್‌ಗಳನ್ನು ಮಾರ್ಚ್ 2023 ರಲ್ಲಿ ಪ್ರಾರಂಭಿಸಲಾಗುವುದು ಮತ್ತು ಉಳಿದ 450 ಬಸ್‌ಗಳನ್ನು ಜೂನ್ 2023 ರಲ್ಲಿ ಪ್ರಾರಂಭಿಸಬಹುದು.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

2025 ರ ವೇಳೆಗೆ ಮುಂಬೈನಲ್ಲಿ ಶೇಕಡಾ 15 ರಷ್ಟು ಬಸ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಲಾಗುವುದು ಎಂದು ಮುಂಬೈ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಹೇಳಿದ್ದಾರೆ. ಆದರೆ 2025 ರ ವೇಳೆಗೆ ಶೇಕಡಾ 50 ರಷ್ಟು ಬಸ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಬೆಸ್ಟ್ ಹೇಳಿದೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಮುಂಬೈನಲ್ಲಿ ಸಾರ್ವಜನಿಕ ಸಾರಿಗೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮಹಾರಾಷ್ಟ್ರ ಸರ್ಕಾರವು ಬೆಸ್ಟ್‌ನಲ್ಲಿ ಹೊಸ ಬಸ್‌ಗಳನ್ನು ಸೇರಿಸಲು ಯೋಜಿಸುತ್ತಿದೆ. ನಗರದಲ್ಲಿ ಪ್ರತಿದಿನ 31 ಲಕ್ಷ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನೂ 1-2 ಲಕ್ಷ ಹೆಚ್ಚಾಗಬಹುದು.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಎಲೆಕ್ಟ್ರಿಕ್ ಬಸ್‌ಗಳನ್ನು ಚಾರ್ಜ್ ಮಾಡಲು 55 ಪ್ರದೇಶಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತಿದೆ. ಮುಂದಿನ 3-4 ತಿಂಗಳಲ್ಲಿ ಮುಂಬೈನಲ್ಲಿ ಇಂತಹ ಹಲವು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳು ಸಿದ್ಧಗೊಳ್ಳಲಿವೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಈ ನಿಲ್ದಾಣಗಳಲ್ಲಿ ಜನರು ತಮ್ಮ ಎಲೆಕ್ಟ್ರಿಕ್ ಕಾರುಗಳು, ಬೈಕುಗಳು ಅಥವಾ ಸ್ಕೂಟರ್‌ಗಳನ್ನು ಸಹ ಚಾರ್ಜ್ ಮಾಡಲು ಸಾಧ್ಯವಾಗುವಂತೆ ನಿರ್ಮಿಸಲು ಯೋಜಿಸಲಾಗಿದೆ. ಗರಿಷ್ಠ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಅಗ್ರ ರಾಜ್ಯಗಳಲ್ಲಿ ಮಹಾರಾಷ್ಟ್ರ ರಾಜ್ಯವನ್ನು ಸೇರಿಸುವ ಗುರಿಯನ್ನು ಇಲ್ಲಿನ ಸರ್ಕಾರ ಹೊಂದಿದೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಇದಕ್ಕಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಮಾರ್ಚ್ 2025 ರ ವೇಳೆಗೆ ಎಲ್ಲಾ ಹೊಸ ವಾಹನ ನೋಂದಣಿಗಳಲ್ಲಿ ಶೇಕಡಾ 10 ರಷ್ಟು ಎಲೆಕ್ಟ್ರಿಕ್ ವಾಹನಗಳ ಗುರಿಯೊಂದಿಗೆ ಸರ್ಕಾರವು ತನ್ನ EV ನೀತಿಗಾಗಿ 930 ಕೋಟಿ ರೂಪಾಯಿಗಳನ್ನು ಅನುಮೋದಿಸಿದೆ.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ರಾಜ್ಯದ ಏಳು ಪ್ರಮುಖ ನಗರಗಳು ಮತ್ತು ನಾಲ್ಕು ರಾಷ್ಟ್ರೀಯ ಹೆದ್ದಾರಿಗಳಲ್ಲಿ 2,375 ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸುತ್ತಿದೆ. ಆಗಸ್ಟ್‌ನಲ್ಲಿ, ಆದಿತ್ಯ ಠಾಕ್ರೆ ಅವರು ಮುಂಬೈನ ಕೊಹಿನೂರ್ ಭವನದಲ್ಲಿ EV ಶಕ್ತಗೊಂಡ ಪಾರ್ಕಿಂಗ್ ಸ್ಥಳವನ್ನು ಉದ್ಘಾಟಿಸಿದ್ದರು.

2028ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಗುರಿ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ವಿಶ್ವದ ಬಹುತೇಕ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯು ವೇಗಗೊಂಡಿದೆ. ಭಾರತದಲ್ಲೂ ಈ ಪ್ರಕ್ರಿಯೆ ನೀಧಾನವಾಗಿ ವೇಗಪಡೆದುಕೊಳ್ಳುತ್ತಿದೆ. ಕಾರ್ಬನ್ ಮುಕ್ತ ದೇಶವನ್ನಾಗಿಸಲು ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರಗಳು ಕೂಡ ಶ್ರಮಿಸುತ್ತಿವೆ. ಸದ್ಯ ಕರ್ನಾಟಕವು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ದೇಶದಲ್ಲಿ ಅಗ್ರ ಸ್ಥಾನದಲ್ಲಿದೆ. ಎಲ್ಲವು ಅಂದುಕೊಂಡಂತೆ ಆದರೆ 2025 ರ ವೇಳೆ ಕರ್ನಾಟಕದಲ್ಲಿ ಶೇ 30 ರಷ್ಟು ಎಲೆಕ್ಟ್ರಿಕ್ ವಾಹನಗಳು ಪ್ರಾಬಲ್ಯ ಸಾಧಿಸಲಿವೆ.

Most Read Articles

Kannada
English summary
Targeting full electric double decker buses by 2028
Story first published: Monday, June 20, 2022, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X