ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಕರ್ವ್ ಕಾನ್ಸೆಪ್ಟ್ ಇವಿ ಕೂಪೆ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದ ನಂತರ ಇದೀಗ ಮತ್ತೊಂದು ಹೊಸ ಅವಿನ್ಯಾ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಟಾಟಾ ಹೊಸ ಕಾನ್ಸೆಪ್ಟ್ ಕಾರು ಅವಿನ್ಯಾ ಎಸ್‌ಯುವಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಇದು ಆಕರ್ಷಕ ಮತ್ತು ಸ್ಪೋರ್ಟಿಯಾಗಿ ಕಾಣುತ್ತದೆ. ಕಾನ್ಸೆಪ್ಟ್ ಕರ್ವ್ ಇವಿ ಕಾರು ಮಾದರಿಗಿಂತಲೂ ಸುಧಾರಿತ ಅಂಶಗಳನ್ನು ಒಳಗೊಂಡಿರುವ ಹೊಸ ಕಾನ್ಸೆಪ್ಟ್ ಕಾರು ಇವಿ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದ್ದು, ಹೊಸ ಕಾರು ಕಂಪನಿಯು ಮೂರನೇ ತಲೆಮಾರಿನ ವಿನ್ಯಾಸವನ್ನು ಪಡೆದುಕೊಳ್ಳಲಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಮೂರನೇ ತಲೆಮಾರಿನ ಹೊಸ ಇವಿ ಕಾರು ಮಾದರಿಗಳಾಗಿ ಕಂಪನಿಯು ತನ್ನ ಸುಧಾರಿತ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಬಳಕೆ ಮಾಡಲಿದ್ದು, ಹೊಸ ಪ್ಲಾಟ್‌ಫಾರ್ಮ್ ಆಧರಿಸಿರುವ ಹೊಸ ಕಾರುಗಳು 2026ರ ವೇಳೆ ಮಾರುಕಟ್ಟೆ ಪ್ರವೇಶಿಸಲಿವೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಸದ್ಯ ಒಂದೇ ತಲೆಮಾರಿನ ಇವಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು 2024ರಿಂದ ಎರಡನೇ ತಲೆಮಾರಿನ ಕಾರುಗಳನ್ನು ಮತ್ತು 2026ರಿಂದ ಮೂರನೇ ತಲೆಮಾರಿನ ಕಾರುಗಳನ್ನು ರಸ್ತೆಗಿಳಿಸಲಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಸದ್ಯ ಅನಾವರಣಗೊಂಡಿರುವ ಹೊಸ ಅವಿನ್ಯಾ ಕಾನ್ಸೆಪ್ಟ್ ಕಾರು ಮೂಲ ಸಂಸ್ಕೃತ ಪದಬಳಕೆ ಹೊಂದಿದ್ದು, ಅವಿನ್ಯಾ ಪದವನ್ನು ಸಂಶೋಧನೆ ಅಥವಾ ಅವಿಷ್ಕಾರ ಎನ್ನುವುದಾಗಿದೆ. ಹೊಸ ಸಂಶೋಧನೆಗಳನ್ನು ಆಧರಿಸಿಯೇ ಟಾಟಾ ಕಂಪನಿಯು ಹೊಸ ಕಾರು ಮಾದರಿಗೆ ಅವಿನ್ಯಾ ಎಂದು ನಾಮಕರಣ ಮಾಡಿದ್ದು, ಇದು 2025ರ ವೇಳೆ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಉತ್ಪಾದನಾ ಮಾದರಿಯನ್ನು ಪಡೆದುಕೊಳ್ಳಲಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಮಧ್ಯಮ ಕ್ರಮಾಂಕದ ಇವಿ ಕಾರುಗಳನ್ನು ಆಧರಿಸಿರುವ ಅವಿನ್ಯಾ ಕಾನ್ಸೆಪ್ಟ್ ಕಾರು 4.3 ಮೀಟರ್ ಉದ್ದಳತೆ ಹೊಂದಿದ್ದು, ವಿಶಾಲವಾದ ಒಳಾಂಗಣ ವಿನ್ಯಾಸದೊಂದಿಗೆ ಅತ್ಯಾರ್ಷಕ ಕಟಿಂಗ್ ಎಡ್ಜ್ ವಿನ್ಯಾಸವನ್ನು ಹೊಂದಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಸದ್ಯಕ್ಕೆ ಇದು ಕೇವಲ ಕಾನ್ಸೆಪ್ಟ್ ಮಾದರಿಯಾಗಿರುವುದರಿಂದ ಹೊಸ ಕಾರನ್ನು ಕೆಲವೇ ತಾಂತ್ರಿಕ ಅಂಶಗಳೊಂದಿಗೆ ಪ್ರದರ್ಶನಗೊಳಿಸಲಾಗಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಇದರೊಂದಿಗೆ ಹೊಸ ಕಾರಿನ ಆಕರ್ಷಣೆಗಾಗಿ ಕಂಪನಿಯು ಆಕರ್ಷಕವಾದ ಟಿ ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್, ಸ್ಲಿಕ್ ಆಕಾರದ ಎಲ್ಇಡಿ ಹೆಡ್‌ಲೈಟ್‌ಗಳು, ಬ್ಲ್ಯಾಕ್ ಪ್ಯಾನೆಲ್ ಹೊಂದಿರುವ ಫ್ರಂಟ್ ಬಂಪರ್, ಆಕರ್ಷಕವಾದ ಅಲಾಯ್ ವ್ಹೀಲ್‌ಗಳು ಹೊಸ ಕಾರಿಗೆ ಐಷಾರಾಮಿ ಲುಕ್ ನೀಡಿವೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಇದರಲ್ಲದೇ ಹೊಸ ಕಾನ್ಸೆಪ್ಟ್ ಕಾರಿನಲ್ಲಿ ಕಂಪನಿಯು ರೋಲ್ಸ್ ರಾಯ್ಸ್ ಕಾರುಗಳನ್ನು ಬಳಸಲಾಗುವ ಬಟರ್‌ಪ್ಲೈ ವಿನ್ಯಾಸದ ಡೋರ್‌ಗಳನ್ನು ನೀಡಲಾಗಿದ್ದು, ಬಿ ಪಿಲ್ಲರ್‌ಗಳಿಲ್ಲ ಹಿನ್ನಲೆಯಲ್ಲಿ ಹೊಸ ಕಾರಿನ ಒಳಗೆ ಹೋಗಲು ಮತ್ತು ಹೊರ ಬರಲು ಸಾಕಷ್ಟು ಸ್ಥಳವಾಕಾಶ ಹೊಂದಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಹಾಗೆಯೇ ಹೊಸ ಕಾರಿನ ಒಳಭಾಗದಲ್ಲಿ ಯಾವುದೇ ಹೆಚ್ಚುವರಿ ವಿನ್ಯಾಸವನ್ನು ನೀಡದಿದ್ದರೂ ಕಡಿಮೆ ವಿನ್ಯಾಸದಲ್ಲೇ ಪ್ರತ್ಯೇಕ ನಿಯಂತ್ರಣಗೊಂದಿಗೆ ಅಚ್ಚುಕಟ್ಟಾದ ಆಸನ ಸೌಲಭ್ಯವನ್ನು ನೀಡಲಾಗಿದ್ದು, ಕಾರಿನ ಡ್ಯಾಶ್‌ಬೋರ್ಡ್ ಕೂಡಾ ಹೆಚ್ಚುವರಿ ಇನ್ಪೋಟೈನ್‌ಮೆಂಟ್ ಸಿಸ್ಟಂ ಡಿಸ್‌ಪ್ಲೇ ಹೊಂದಿಲ್ಲ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಇನ್ನು ಹೊಸ ಕಾನ್ಸೆಪ್ಟ್ ಹಿಂಬದಿಯ ವಿನ್ಯಾಸವು ಕೂಡಾ ಸಾಮಾನ್ಯ ವಿನ್ಯಾಸದಲ್ಲಿಯೇ ಐಷಾರಾಮಿ ಲುಕ್ ಹೊಂದಿದ್ದು, ಟಿ ಆಕಾರದ ಲೈಟ್ ಬಾರ್ ಟೈಲ್‌ಗೆಟ್ ಮೊದಲ ನೋಟದಲ್ಲಿಯೇ ಸೆಳೆಯಲಿದೆ. ಈ ಮೂಲಕ ಹೊಸ ಕಾರು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಮೂರನೇ ತಲೆಮಾರಿನ ಟಾಟಾ ಇವಿ ಕಾರುಗಳು ಗ್ರಾಹಕರಿಗೆ ಐಷಾರಾಮಿ ಕಾರು ಪ್ರಯಾಣದ ಅನುಭವ ನೀಡಲಿವೆ ಎನ್ನಬಹುದು.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಹೊಸ ಅವಿನ್ಯಾ ಇವಿ ಕಾನ್ಸೆಪ್ಟ್ ಮಾದರಿಯನ್ನು ಕಂಪನಿಯು ಸಂಪೂರ್ಣವಾಗಿ ಡಿಜಿಟಲ್ ಡಿಸೈನ್ ಲಾಂಗ್ವೆಜ್ ಆಧರಿಸಿ ಅಭಿವೃದ್ದಿಗೊಳಿಸುತ್ತಿದ್ದು, 2026ರ ವೇಳೆಗೆ ಹೊಸ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಸದ್ಯ ಇವಿ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಒಟ್ಟು 5 ಹೊಸ ಇವಿ ಕಾರು ಮಾದರಿಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಯೋಜನೆಗಾಗಿ ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಕೂಡಾ ಆರಂಭಿಸಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಸಹ ಆರಂಭಿಸಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯನ್ನು ರೂ.1,500 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಸದ್ಯ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಬಳಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಇವಿ ಮಾದರಿಗಳಿಗಾಗಿ ಸಿಗ್ಮಾ ಆರ್ಕಿಟೆಕ್ಚರ್ ಮತ್ತು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿಯೇ ಟಿಗೋರ್ ಇವಿ, ನೆಕ್ಸಾನ್ ಇವಿ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಸಂಪೂರ್ಣವಾಗಿ ಇವಿ ವಾಹನಗಳ ಉತ್ಪಾದನೆಗಾಗಿ ಮೀಸಲಿರಿಸಿದೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಇವಿ ಕಾರು ಮಾದರಿಯಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಸಿಯೆರಾ ಇವಿ ಸೇರಿದಂತೆ ಪ್ರಮುಖ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಸಿಗ್ಮಾ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗುವ ಇವಿ ಕಾರುಗಳು ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಇವಿ ಕಾರುಗಳಿಂತಲೂ ಹೆಚ್ಚು ಹಗುರ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಪಡೆದುಕೊಂಡಿವೆ.

ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ

ಹಾಗೆಯೇ ಕಂಪನಿಯ ಮತ್ತೊಂದು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಳ್ಳಲಿರುವ ಇವಿ ಕಾರುಗಳು ಇನ್ನು ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿರಲಿದ್ದು, ಸದ್ಯಕ್ಕೆ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ನಿಂದ ಸಿಗ್ಮಾ ಪ್ಲಾಟ್‌ಫಾರ್ಮ್‌ಗೆ ಬದಲಾಗುತ್ತಿರುವ ಕಂಪನಿಯು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ಅನ್ನು ಇನ್ನು ಕೆಲವು ವರ್ಷಗಳ ನಂತರ ಬಳಕೆಗೆ ಯೋಜನೆ ರೂಪಿಸಿದೆ.

Most Read Articles

Kannada
English summary
Tata avinya ev concept unveiled exterior interior platform details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X