2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ 2019ರಲ್ಲಿ ತನ್ನ ಹ್ಯಾರಿಯರ್ ಎಸ್‍ಯುವಿಯನ್ನು ಪರಿಚಯಿಸಲಾಯಿತು. ಟಾಟಾ ಕಂಪನಿಯು ಈ ಹ್ಯಾರಿಯರ್ ಎಸ್‍ಯುವಿಯನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ 2020 ರಲ್ಲಿ ಅಪ್‌ಗ್ರೇಡ್ ಮಾಡಿದರು.

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಟಾಟಾ ಹ್ಯಾರಿಯರ್ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸೇರಿಸಿತು. ಬದಲಾವಣೆಗಳ ನಂತರ, ಹ್ಯಾರಿಯರ್‌ನ ಮಾರಾಟದ ಅಂಕಿಅಂಶಗಳು ಏರಲು ಯಶಸ್ವಿಯಾಗಿದೆ. ಕಳೆದ ವರ್ಷ, ಈ ಟಾಟಾ ಹ್ಯಾರಿಯರ್ ಎಸ್‍ಯುವಿಯ ಒಟ್ಟು 28,038 ಯುನಿಟ್‌ಗಳನ್ನು ತಯಾರಕರು ಮಾರಾಟ ಮಾಡಿದ್ದಾರೆ. 2020ರಲ್ಲಿ, ಟಾಟಾ ಹ್ಯಾರಿಯರ್‌ನ 14,071 ಯೂನಿಟ್‌ಗಳನ್ನು ಮಾರಾಟ ಮಾಡಿಲಾಗಿತ್ತು. ಇದನ್ನು 2021ರ ಮಾರಾಟಕ್ಕೆ ಹೋಲಿಸಿದರೆ ಶೇ.99.26 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಹ್ಯಾರಿಯರ್ ಅನ್ನು ತಯಾರಕರ 2021ರ ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿ ಇರಿಸಿದೆ. ಟಾಟಾ ನೆಕ್ಸಾನ್, ಆಲ್ಟ್ರೋಜ್ ಮತ್ತು ಟಿಯಾಗೊ ನಂತರ ಸ್ಥಾನವಾಗಿದೆ, ಈ ಟಾಟಾ ಹ್ಯಾರಿಯರ್ ಎಸ್‍ಯುವಿಯು ಎಕ್ಸ್ಎಂಎ, ಎಕ್ಸ್ಎಂಎ ಪ್ಲಸ್, ಎಕ್ಸ್'ಝಡ್ಎ ಪ್ಲಸ್ ಎಂಬ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ.

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಪನರೋಮಿಕ್ ಸನ್‌ರೂಫ್ ಅನ್ನು ಹೊಂದಿರುವ ಹೊಸ ಮಿಡ್-ಸ್ಪೆಲ್ ಎಕ್ಸ್‌ಟಿಎ ಮತ್ತು ಎಕ್ಸ್‌ಟಿಎ ಪ್ಲಸ್ ಆಟೋಮ್ಯಾಟಿಕ್ ರೂಪಾಂತರಗಳನ್ನು ಸುಲುಭವಾಗಿ ಕೈಗೆಟುಕುವ ಬೆಲೆಯಲ್ಲಿ ಪಡೆಯಬಹುದು. ಪ್ರಸ್ತುತವಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಪನರೋಮಿಕ್ ಸನ್‌ರೂಫ್ ಕೇವಲ ಟಾಪ್-ಸ್ಪೆಕ್ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದೆ,

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಹೊಸ ರೂಪಾಂತರಗಳು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ಪ್ರೀಮಿಯಂ ಸೌಂಡ್ ಸಿಸ್ಟಂ, ಪನೋರಮಿಕ್ ಸನ್ ರೂಫ್, ಸೆಮಿ-ಡಿಜಿಟಲ್ ಇನ್ಸ್ ಟ್ರೂಮಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಡ್ರೈವ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಮೋಡ್‌ಗಳು ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ.

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಇನ್ನು ಈ ಟಾಟಾ ಹ್ಯಾರಿಯರ್ ಎಸ್‍ಯುವಿಯು ಒಮೆಗಾ (ಆಪ್ಟಿಮಲ್ ಮಾಡ್ಯುಲರ್ ಎಫಿಶಿಯಂಟ್ ಗ್ಲೋಬಲ್ ಅಡ್ವಾನ್ಸ್ಡ್) ಪ್ಲಾಟ್‌ಫಾರ್ಮ್‌ನಿಂದ ಅಭಿವೃದ್ದಿ ಪಡಿಸಲಾಗಿದೆ. ಈ ಟಾಟಾ ಹ್ಯಾರಿಯರ್ ಮಿಡ್ ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಈ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಹ್ಯಾರಿಯರ್ ಎಸ್‍ಯುವಿಯಲ್ಲಿ ಹೊಸದಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಕೂಡ ನೀಡಲಾಗಿದೆ.

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಕಳೆದ ಬಾರಿ ಟಾಟಾ ತನ್ನ ಹ್ಯಾರಿಯರ್ ಎಸ್‍ಯುವಿಯ ಎಕ್ಸ್‌ಟಿ ಪ್ಲಸ್ ಎನ್ನುವ ವೆರಿಯೆಂಟ್‌ವೊಂದನ್ನು ಬಿಡುಗಡೆಗೊಳಿಸಿತು. ಈ ಎಸ್‍ಯುವಿಯಲ್ಲಿ ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್ಎಲ್, ಬಂಪರ್ ನಲ್ಲಿ ಅಳವಡಿಸಲಾದ ಹೆಡ್ ಲ್ಯಾಂಪ್ ಮತ್ತು ಮಸ್ಕ್ಯುಲರ್ ಫ್ರಂಟ್ ಗ್ರಿಲ್ ಎಲ್ಲವೂ ಆಕರ್ಷಕ ಮತ್ತು ಬೋಲ್ಡ್ ಲುಕ್ ನೀಡುತ್ತದೆ.

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಇನ್ನು ಈ ಹ್ಯಾರಿಯರ್ ಎಸ್‍ಯುವಿಯು ಪ್ರೀಮಿಯಂ ಇಂಟಿರಿಯರ್ ಅನ್ನು ಹೊಂದಿದೆ. ಇದರಲ್ಲಿ ಒನ್-ಟಚ್ ಸನ್‌ರೂಫ್, ಲೇಯರ್ಡ್ ಡ್ಯಾಶ್‌ಬೋರ್ಡ್, ಡ್ರೈವ್ ಮೋಡ್‌ಗಳು, ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳು ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ.

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಟಾಟಾ ಹ್ಯಾರಿಯರ್ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಏರ್‍‍ಬ್ಯಾಗ್‍ಗಳು, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಎಂಬ ಫೀಚರ್ ಗಳನ್ನು ಹೊಂದಿವೆ. ಈ ಟಾಟಾ ಹ್ಯಾರಿಯರ್ ಭಾರತದಲ್ಲಿ ಸುರಕ್ಷಿತ ಎಸ್‍ಯುವಿಗಳಲ್ಲಿ ಇದು ಕೂಡ ಒಂದಾಗಿದೆ,

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಟಾಟಾ ಹ್ಯಾರಿಯರ್ ಎಸ್‍ಯುವಿಯ ಡಾರ್ಕ್ ಎಡಿಷನ್ ಮಾದರಿಯನ್ನು ಮಾರಾಟ ಮಾಡಲಾಗುತ್ತಿದೆ. ಈ ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಮಾದರಿಯು ಎಕ್ಸ್‌ಟಿ ಪ್ಲಸ್, ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್‌ಝಡ್ಎ ಪ್ಲಸ್ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಹೊರಭಾಗದಲ್ಲಿ ಒಬೆರಾನ್ ಬ್ಲ್ಯಾಕ್ ಮತ್ತು ಡೀಪ್ ಬ್ಲೂ ಅಸ್ಸೆಂಟ್ ಗಳ ಬಣ್ಣಗಳನ್ನು ಹೊಂದಿವೆ. ಹ್ಯಾರಿಯರ್ ಬ್ಯಾಡ್ಜ್ ಜೊತೆಗೆ ಪಿಯಾನೋ ಬ್ಲ್ಯಾಕ್ ಪಿನಿಶಿಂಗ್ ಅನ್ನು ಹೊಂದಿದೆ. ಇದರೊಂದಿಗೆ 18 ಇಂಚಿನ ಬ್ಲಾಕ್‌ಸ್ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿವೆ. ಸ್ಟ್ಯಾಂಡರ್ಡ್ ಹ್ಯಾರಿಯರ್ ಡಾರ್ಕ್ ಎಡಿಷನ್ ಇಂಟಿರಿಯರ್ ನಲ್ಲಿ, ಡಾರ್ಕ್ ಕ್ರೋಮ್ ಇಂಟಿರಿಯರ್ ಪ್ಯಾಕೇಜ್ ಅನ್ನು ಹೊಂದಿದೆ.

2021ರ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ Tata Harrier ಎಸ್‍ಯುವಿ

ಟಾಟಾ ಹ್ಯಾರಿಯರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 500, ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ ಮತ್ತು ಜೀಪ್ ಕಂಪಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ. ಒಟ್ಟಿನಲ್ಲಿ ಟಾಟಾ ಹ್ಯಾರಿಯರ್ ಎಸ್‍ಯುವಿಯು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಕಂಪನಿಗೆ ಮಾರಾಟದಲ್ಲಿ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಇನ್ನು ಈ ವರ್ಷ ಟಾಟಾ ಹ್ಯಾರಿಯರ್ ಮಾದರಿಯನ್ನು ಹೊಸ ನವೀಕರಣಗಳನ್ಮು ನಡೆಸಬಹುದು.

Most Read Articles

Kannada
English summary
Tata harrier 2021 sales report 28038 units sold details
Story first published: Saturday, January 8, 2022, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X