ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್‌(Tata Motors) ಕಂಪನಿಯು ಹ್ಯಾರಿಯರ್(Harrier) ಮತ್ತು ನ್ಯೂ ಜನರೇಷನ್ ಸಫಾರಿ(Safari) ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಮಧ್ಯಮ ಕ್ರಮಾಂಕದಲ್ಲಿರುವ ಹ್ಯಾರಿಯರ್ ಮತ್ತು ಸಫಾರಿ ಕಾರು ಮಾದರಿಗಳು 75 ಸಾವಿರ ಯುನಿಟ್ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ವಿಭಾಗದಲ್ಲಿನ ಪ್ರತಿಸ್ಪರ್ಧಿ ಮಾದರಿಗಳಾದ ಎಂಜಿ ನಿರ್ಮಾಣದ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಿವೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

2019ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಟಾಟಾ ಹ್ಯಾರಿಯರ್ ಮತ್ತು ಎಂಜಿ ಹೆಕ್ಟರ್ ಮಾರಾಟವು ಆಯಾ ಕಂಪನಿಗಳ ಮಾರಾಟದಲ್ಲಿ ಅಗ್ರಸ್ಥಾನದಲಿದ್ದು, ತನನಂತರ ಬಿಡುಗಡೆಯಾದ ಹೆಕ್ಟರ್ ಪ್ಲಸ್ ಮತ್ತು ಸಫಾರಿ ಎಸ್‌ಯುವಿ ವಿಸ್ತರಿತ ವ್ಹೀಲ್‌ಬೆಸ್‌ನೊಂದಿಗೆ ಬಿಡುಗಡೆಗೊಂಡವು.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಬಿಡುಗಡೆಯ ನಂತರ ಇದುವರೆಗೆ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು 75,694 ಯುನಿಟ್ ಮಾರಾಟಗೊಂಡಿದ್ದರೆ ಇದೇ ಅವಧಿಯಲ್ಲಿ ಪ್ರತಿಸ್ಪರ್ಧಿ ಮಾದರಿಗಳಾದ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳು ಒಟ್ಟು 74,094 ಯುನಿಟ್ ಮಾರಾಟಗೊಂಡಿದ್ದು, ಆರಂಭದಲ್ಲಿಯೇ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದ ಎಂಜಿ ಕಾರುಗಳಿಗೆ ಕಳೆದ ಒಂದು ವರ್ಷದಲ್ಲಿ ಹ್ಯಾರಿಯರ್ ಫೇಸ್‌ಲಿಫ್ಟ್ ಮತ್ತು ನ್ಯೂ ಜನರೇಷನ್ ಸಫಾರಿ ಕಾರುಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಆರಂಭದಲ್ಲಿ ಬಿಎಸ್-4 ಮಾದರಿಯೊಂದಿಗೆ ಬಿಡುಗಡೆಯಾಗಿದ್ದ ಹ್ಯಾರಿಯರ್ ಕಾರು ಮಾದರಿಯು 2020 ಮಧ್ಯಂತರದಲ್ಲಿ ಬಿಎಸ್-6 ಆವೃತ್ತಿಯೊಂದಿಗೆ ಉನ್ನತೀಕರಣಗೊಂಡಿತ್ತು. ಬಿಎಸ್-4 ಮಾದರಿಯಲ್ಲಿ ಕನಿಷ್ಠ ಬೇಡಿಕೆ ಹೊಂದಿದ್ದ ಹ್ಯಾರಿಯರ್ ಕಾರು ಮಾದರಿಯು ಬಿಎಸ್-6 ಮಾದರಿಯ ಬಿಡುಗಡೆಯ ನಂತರ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಬಿಎಸ್-4 ಮಾದರಿಯೊಂದಿಗೆ ಕೇವಲ 17 ಸಾವಿರ ಯುನಿಟ್ ಮಾರಾಟಗೊಂಡಿದ್ದ ಹ್ಯಾರಿಯರ್ ಕಾರು ಮಾದರಿಯು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡ ನಂತರ ಸುಮಾರು 40 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಹಾಗೆಯೇ ಕಳೆದ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ಸಫಾರಿ ಎಸ್‌ಯುವಿ ಡಿಸೆಂಬರ್‌ಗೆ ಕೊನೆಗೊಂಡಂತೆ ಸುಮಾರು 18,358 ಯುನಿಟ್‌ ಮಾರಾಟಗೊಂಡಿದ್ದು, ಸಫಾರಿ ಜೊತೆಗೆ ಟಾಟಾ ನಿರ್ಮಾಣದ ಇತರೆ ಕಾರುಗಳು ಕೂಡಾ ಹೆಚ್ಚಿನ ಬೇಡಿಕೆ ಪಡೆದುಕೊಂಡವು.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಕೋವಿಡ್ ನಂತರ ಸ್ವದೇಶಿ ಕಾರುಗಳ ಬಳಕೆಗಾಗಿ ಭಾರತೀಯ ಗ್ರಾಹಕರಲ್ಲಿ ಉಂಟಾದ ಸ್ಪದೇಶಿ ಅಭಿಯಾನವು ಟಾಟಾ ಕಾರುಗಳ ಬೇಡಿಕೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿತು. ಪರಿಣಾಮ ಟಾಟಾ ಕಾರುಗಳ ಮಾರಾಟವು ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಬೇಡಿಕೆ ದಾಖಲಿಸಿತು.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಹ್ಯಾರಿಯರ್ ಕಾರು ಮತ್ತು ಸಫಾರಿ ಕಾರು ಮಾದರಿಗಳು ಸದ್ಯ ಪ್ರತಿ ತಿಂಗಳು ಕನಿಷ್ಠ ಎರಡೂವರೆ ಸಾವಿರ ಮೂರು ಸಾವಿರ ಯುನಿಟ್ ಮಾರಾಟಗೊಳ್ಳುತ್ತಿದ್ದು, ಟಾಟಾ ಕಾರು ನಿರ್ಮಾಣದ ಬಹುತೇಕ ಕಾರುಗಳು ಇದೀಗ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿನ ಪ್ರಯಾಣಿಕರ ಕಾರು ಮಾರಾಟ ವಿಭಾಗದಲ್ಲಿ ಮಾರುತಿ ಸುಜುಕಿಯು ಅಗ್ರಸ್ಥಾನದಲ್ಲಿ ಮುಂದುವರಿದ್ದು, ಎರಡನೇ ಸ್ಥಾನಕ್ಕಾಗಿ ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಹೆಚ್ಚಿನ ಪೈಪೋಟಿ ನಡೆಸುತ್ತಿವೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಕಳೆದ ಒಂದು ದಶಕದಿಂದಲೂ ಮೊದಲ ಸ್ಥಾನದಲ್ಲಿ ಮಾರುತಿ ಸುಜುಕಿ ಮತ್ತು ಎರಡನೇ ಸ್ಥಾನದಲ್ಲಿ ಮುಂದುವರಿದ್ದ ಹ್ಯುಂಡೈ ಕಂಪನಿಯು ಕಾರು ಮಾರಾಟದಲ್ಲಿ ಶೇ. 70ರಷ್ಟು ಪಾಲನ್ನು ತಮ್ಮದಾಗಿಸಿಕೊಂಡಿರುವ ಎರಡು ಕಂಪನಿಗಳು ಅಧಿಪತ್ಯ ಮುಂದುವರಿಸಿದ್ದು, ಇದೀಗ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ಒಂದು ದಶಕದ ನಂತರ ಹ್ಯುಂಡೈ ಕಂಪನಿಯನ್ನು ಹಿಂದಿಕ್ಕಿ ಪ್ರಯಾಣಿಕರ ಕಾರು ಮಾರಾಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು 2021ರ ಡಿಸೆಂಬರ್ ಅವಧಿಯಲ್ಲಿ ಒಟ್ಟಾರೆ 66,307 ವಾಹನಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ 35,299 ಯುನಿಟ್ ಪ್ರಯಾಣಿಕ ಕಾರು ಮಾದರಿಗಳಾಗಿವೆ. ಕಳೆದ ತಿಂಗಳಿನ ಕಾರು ಮಾರಾಟವನ್ನು 2020ರ ಡಿಸೆಂಬರ್ ಅವಧಿಯಲ್ಲಿನ 23,545 ಯನಿಟ್‌ಗಳ ಪ್ರಯಾಣಿಕರ ಕಾರು ಮಾರಾಟಕ್ಕೆ ಹೋಲಿಕೆ ಮಾಡಿದರೆ ಟಾಟಾ ಕಂಪನಿಯು ಶೇ.50ರಷ್ಟು ಬೆಳಣಿಗೆ ಸಾಧಿಸಿದೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

2021ರ ಡಿಸೆಂಬರ್ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯಿಂದ ತೀವ್ರ ಪೈಪೋಟಿ ಎದುರಿಸಿದ ಹ್ಯುಂಡೈ ಕಂಪನಿಯು 32,312 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಟಾಟಾ ಕಾರುಗಳ ಮಾರಾಟ ಸಂಖ್ಯೆಗಿಂತಲೂ ಕಡಿಮೆ ಬೇಡಿಕೆಯೊಂದಿಗೆ ಮೂರನೇ ಸ್ಥಾನಕ್ಕೆ ಕುಸಿತ ಕಂಡಿತು.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

2021ರ ಅವಧಿಯಲ್ಲಿ ಒಟ್ಟು 3.31 ಲಕ್ಷ ಕಾರುಗಳನ್ನು ಮಾರಾಟ ಮಾಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಪಂಚ್ ಕಾರಿನ ಮೂಲಕ ಮಾರುಕಟ್ಟೆ ಪಾಲು ಹೆಚ್ಚಿಸಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಹ್ಯಾರಿಯರ್ ಮತ್ತು ಸಫಾರಿ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

ಜೊತೆಗೆ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಪಡೆದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು 2021ರ ಡಿಸೆಂಬರ್ ಅವಧಿಯಲ್ಲಿ ಗರಿಷ್ಠ ಮಟ್ಟದ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ವಿವಿಧ ಮಾದರಿಯ ಇವಿ ಆವೃತ್ತಿಗಳೊಂದಿಗೆ ಅತ್ಯುತ್ತಮ ಬೇಡಿಕೆ ದಾಖಲಿಸಿದೆ.

Most Read Articles

Kannada
English summary
Tata harrier and safari suv cars crosses 75000 units cumulative sales
Story first published: Tuesday, January 25, 2022, 23:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X