Just In
- 49 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 18 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
Breaking: ಯುಪಿ ಉಪಚುನಾವಣೆ: ರಾಂಪುರದಲ್ಲಿ ಎಸ್ಪಿ ಅಭ್ಯರ್ಥಿ, ಅಜಂಗಢದಲ್ಲಿ ಬಿಜೆಪಿ ಮುನ್ನಡೆ
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಪಂಚ್ ಕಾಜಿರಂಗ ಎಡಿಷನ್ ವಿಜೇತರಿಗೆ ಕೀ ಹಸ್ತಾಂತರಿಸಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ಐಪಿಎಲ್ ಪ್ರಾಜೋಕತ್ವದ ಭಾಗವಾಗಿ ತನ್ನ ಹೊಸ ಪಂಚ್ ಮೈಕ್ರೊ ಎಸ್‌ಯುವಿ ಮಾದರಿಗಾಗಿ ವಿಶಿಷ್ಠ ಪರಿಕಲ್ಪನೆಯೊಂದಿಗೆ ಕಾಜಿರಂಗ ಎಡಿಷನ್ ಪರಿಚಯಿಸಿದ್ದು, ಕಂಪನಿಯು ಹೊಸ ಕಾರು ಮಾದರಿಯ ಹರಾಜು ಪ್ರಕ್ರಿಯೆ ಮುಗಿಸುವ ಮೂಲಕ ಇದೀಗ ವಿಜೇತ ಗ್ರಾಹಕರಗೆ ಹೊಸ ಕಾರಿನ ಕೀ ಹಸ್ತಾಂತರಿಸಿದೆ.

2022ರ ಐಪಿಎಲ್‌ನ ಅಧಿಕೃತ ಪ್ರಾಯೋಜಕತ್ವ ವಹಿಸಿರುವ ಹಿನ್ನಲೆಯಲ್ಲಿ ತನ್ನ ಪ್ರಮುಖ ಎಸ್‌ಯುವಿ ಮಾದರಿಗಳಲ್ಲಿ ಕಾಜಿರಂಗ ಸ್ಪೆಷಲ್ ಎಡಿಷನ್ ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲಿ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಜನಪ್ರಿಯ ಐಪಿಎಲ್ ಸರಣಿಯಲ್ಲಿ ಸತತ ನಾಲ್ಕನೇ ವರ್ಷವೂ ಪ್ರಾಯೋಜಕತ್ವ ವಹಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಈ ಬಾರಿಯ ಐಪಿಎಲ್‌ನಲ್ಲಿ ಹೊಚ್ಚ ಹೊಸ ಪಂಚ್ ಕಾರು ಮಾದರಿಯನ್ನು ಪ್ರದರ್ಶನಗೊಳಿಸುತ್ತಿದ್ದು, ಪ್ರಾಯೋಜಕತ್ವ ವಿಶೇಷತೆಗಾಗಿ ಟಾಟಾ ಕಂಪನಿಯು ಪಂಚ್ ಕಾರಿನಲ್ಲಿ ಕಾಜಿರಂಗ ಎನ್ನುವ ವಿಶೇಷ ಆವೃತ್ತಿಯನ್ನು ಅಭಿವೃದ್ದಿಪಡಿಸಿದೆ.

ಐಪಿಎಲ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಹೊಸ ಪಂಚ್ ಕಾಜಿರಂಗ ಆವೃತ್ತಿಯನ್ನು ಇದೀಗ ಭಾರೀ ಮೊತ್ತಕ್ಕೆ ಹರಾಜು ಮಾಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹರಾಜು ಪ್ರಕ್ರಿಯೆಯಿಂದ ಬಂದಿರುವ ಹಣವನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಂರಕ್ಷಣಾ ವಿಭಾಗದ ಅಭಿವೃದ್ದಿ ಕಾರ್ಯಗಳಿಗೆ ದೇಣಿಯಾಗಿ ನೀಡಲು ನಿರ್ಧರಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯು ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ ಸಾಮಾನ್ಯ ಗ್ರಾಹಕರಿಗೆ ಮಾರಾಟ ಮಾಡಲಾಗುವ ಆವೃತ್ತಿ ಹೊರತುಪಡಿಸಿ ಐಪಿಎಲ್ ಗಾಗಿಯೇ ಪಂಚ್ ಒಂದು ಯುನಿಟ್ ಅನ್ನು ಮಾತ್ರ ವಿಶೇಷ ಸೌಲಭ್ಯಗಳೊಂದಿಗೆ ಭಾರೀ ಮೊತ್ತಕ್ಕೆ ಹರಾಜು ಮಾಡಿದೆ.

ಪುಣೆ ಮೂಲದ ಅಮೀನ್ ಖಾನ್ ಎನ್ನುವವರು ಟಾಟಾ ಪಂಚ್ ಕಾಜಿರಂಗ ಮಾದರಿಯನ್ನು ಸಾಮಾನ್ಯ ಮಾದರಿಯ ಬೆಲೆಗಿಂತಲೂ ಐದು ಪಟ್ಟು ಹೆಚ್ಚು ಪಾವತಿ ಹರಾಜಿನಲ್ಲಿ ಖರೀದಿಸಿದ್ದಾರೆ. ಹೊಸ ಪಂಚ್ ಕಾಜಿರಂಗ ಮಾದರಿಯಲ್ಲಿ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಐಪಿಎಲ್‌ನಲ್ಲಿ ಭಾಗಿಯಾಗಿರುವ ಎಲ್ಲಾ ತಂಡಗಳ ನಾಯಕರ ಸ್ವಹಸ್ತಾಕ್ಷರ ಇದರಲ್ಲಿದೆ.

ವಿಶೇಷ ಕಾರು ಮಾದರಿಗಳ ಮೂಲಕ ಅಳಿವಿಂಚಿನಲ್ಲಿರುವ ಒಂದು ಕೊಂಬಿನ ಘೆಂಡಾಮೃಗಗಳ ಸಂರಕ್ಷಣೆಗೆ ಸಹಕಾರ ನೀಡಲು ಭಾರೀ ಪ್ರಮಾಣದ ದೇಣಿಗೆ ಸಂಗ್ರಹಿಸಲಾಗಿದ್ದು, ಹೊಸ ಕಾರು ಖರೀದಿಸಿದ್ದಕ್ಕಾಗಿ ಟಾಟಾ ಕಂಪನಿಯು ಪಂಚ್ ಕಾಜಿರಂಗ ಮಾಲೀಕನಿಗೆ ನಾಲ್ಕಾ ಬಾರಿ ಕುಟುಂಬ ಸಮೇತರಾಗಿ ಕಾಜಿರಂಗ ಪ್ರವಾಸವನ್ನು ಕೈಗೊಳ್ಳಲು ಆಫರ್ ನೀಡಿದೆ.

ಪಂಚ್ ಕಾಜಿರಂಗ ಮಾದರಿಯನ್ನು ರೂ. 9.49 ಲಕ್ಷದಿಂದ ಹರಾಜು ಪ್ರಕ್ರಿಯೆ ಆರಂಭಿಸಿದ್ದ ಟಾಟಾ ಕಂಪನಿಯು ಭಾರೀ ಮೊತ್ತಕ್ಕೆ ಹರಾಜು ಮಾಡಿದ್ದು, ಹರಾಜು ಮೊತ್ತವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.

ಟಾಟಾ ಕಂಪನಿಯು ಕಾಜಿರಂಗ ಆವೃತ್ತಿಗಳಿಗೆ ಮೆಟೆರಿಯಲ್ ಬ್ರೋಂಜ್ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಬಣ್ಣದ ಜೊತೆಗೆ ಕಾರಿನ ಹಿಂಬದಿಯ ಟೈಲ್‌ಗೇಟ್, ವ್ಹೀಲ್ ಫೆಂಡರ್‌ಗಳು ಮತ್ತು ಇಂಟಿರಿಯರ್‌ನಲ್ಲಿ ರೈನೊ ಬ್ಯಾಜ್ಡ್ ಜೊತೆಗೆ ಕಾರಿನ ಇಂಟಿರಿಯರ್‌ನಲ್ಲಿ ರೈನೊ ಮೋಟಿಫ್ ಜೋಡಿಸಲಾಗಿದೆ.

ಹೊಸ ಆವೃತ್ತಿಗಳು ಆಕರ್ಷಕ ಬಣ್ಣದ ಆಯ್ಕೆ ಜೊತೆಗೆ ಕೆಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇನ್ನುಳಿದಂತೆ ಎಲ್ಲಾ ತಾಂತ್ರಿಕ ಸೌಲಭ್ಯಗಳು ಸಾಮಾನ್ಯ ಕಾರು ಮಾದರಿಯಲ್ಲಿರುವಂತೆಯೇ ಇರಲಿವೆ.

ಪಂಚ್ ಕಾರು ಮಾದರಿಯು ಪ್ರೀಮಿಯಂ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಮೈಕ್ರೊ ಎಸ್‌ಯುವಿ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಬಿಡುಗಡೆಯಾದ ಕೇವಲ ಆರು ತಿಂಗಳ ಅವಧಿಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಯುನಿಟ್ ವಿತರಣೆಗೊಂಡಿವೆ. ಕಳೆದ ವರ್ಷದ ಅಕ್ಟೋಬರ್ ಕೊನೆಯಲ್ಲಿ ವಿತರಣೆ ಆರಂಭಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ.

ಕಳೆದ ತಿಂಗಳು ಸಹ ಪಂಚ್ ಕಾರು ಮಾದರಿಯು 10,132 ಯುನಿಟ್ ಮಾರಾಟದೊಂದಿಗೆ ಟಾಪ್ 10 ಕಾರು ಮಾರಾಟದಲ್ಲಿ ಹತ್ತನೇ ಸ್ಥಾನಪಡೆದುಕೊಂಡಿದ್ದು, ಟಾಪ್ 10 ಕಾರು ಪಟ್ಟಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸತತ ಹತ್ತನೇ ಸ್ಥಾನದಲ್ಲಿ ಮುಂದುವರೆದಿದೆ.

ಪಂಚ್ ಕಾರಿನ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಶೇ.10ರಷ್ಟು ಪಾಲು ಹೊಂದುವ ವಿಶ್ವಾಸದಲ್ಲಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಮತಹತ್ವದ ಬದಲಾವಣೆಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಪಂಚ್ ಕಾರು ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ಎರಡು ಎಡಿಷನ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮೈಕ್ರೊ ಎಸ್‌ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುತ್ತಿದೆ.

ಪಂಚ್ ಕಾರು ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಸ್ಟ್ಯಾಂಡರ್ಡ್ ಮತ್ತು ಕಾಜಿರಂಗ ಎಡಿಷನ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ವಿವಿಧ ಮಾದರಿಗಳ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.83 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದೆ.

ಹೊಸ ಪಂಚ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕಾಜಿರಂಗ ಮಾದರಿಯನ್ನು ಸಹ ಮಾರಾಟ ಮಾಡಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.89 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 9.49 ಲಕ್ಷ ಬೆಲೆ ಹೊಂದಿದೆ.