Just In
- 2 hrs ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 15 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 16 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 16 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- News
Breaking; ಭಾರತದಲ್ಲಿ ಕಡಿಮೆ ಆಯ್ತಾ ಕೊರೊನಾ ಪ್ರಕರಣ?
- Lifestyle
ಮಗುವಿಗೆ ಕೃಷ್ಣನ ವೇಷ ಹಾಕುತ್ತಿದ್ದೀರಾ? ಈ ಟಿಪ್ಸ್ ಸಹಾಯವಾದೀತು
- Movies
'ದಿ ಡರ್ಟಿ ಪಿಕ್ಟರ್' ಸೀಕ್ವೆಲ್ ಫಿಕ್ಸ್: ನಾಯಕಿ ಯಾರು?
- Travel
ಕರ್ನಾಟಕದ ಭದ್ರಾವತಿಯಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯವು ಒಂದು ಪ್ರಾಚೀನ ಅದ್ಬುತಕ್ಕೆ ಸಾಕ್ಷಿ!
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
ಒಂದೇ ದಿನ 51 ಎಲೆಕ್ಟ್ರಿಕ್ ಕಾರುಗಳನ್ನು ವಿತರಣೆ ಮಾಡಿದ ಟಾಟಾ ಮೋಟಾರ್ಸ್
ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ಅಲ್ಲದೇ ದೇಶದಲ್ಲಿ ಇಂಧನ ಬೆಲೆಗಳು ಕೂಡ ಹೆಚ್ಚಾಗಿದೆ. ಇದರಿಂದ ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ.

ಇದರಿಂದ ಬಹುತೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ. ಕೆಲವು ಜನಪ್ರಿಯ ವಾಹನ ತಯಾರಕ ಕಂಪನಿಯು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಕಡೆ ಗಮನಹರಿಸುತ್ತಿದೆ. ಇದರ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಇತ್ತೀಚೆಗೆ ಟಾಟಾ ಮೋಟಾರ್ಸ್ ಕಂಪನಿಯು ನಾಗ್ಪುರದಲ್ಲಿ 51 ಎಲೆಕ್ಟ್ರಿಕ್ ವಾಹನಗಳನ್ನು (9 ಟಿಗೊರ್ ಇವಿ, 39 ನೆಕ್ಸಾನ್ ಇವು ಮತ್ತು 3 ನೆಕ್ಸಾನ್ ಇವಿ ಮ್ಯಾಕ್ಸ್) ಏಕಕಾಲದಲ್ಲಿ ವಿತರಿಸಿದೆ.

ಈ ಎಲೆಕ್ಟ್ರಿಕ್ ಕಾರುಗಳ ವಿತರಣೆಯು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ನಡೆಯಿತು, ಅವರು ಗ್ರಾಹಕರಿಗೆ ಕೀಗಳನ್ನು ಹಸ್ತಾಂತರಿಸಿದರು. ನಾಗ್ಪುರದ ಆದಿತ್ಯ ಆಟೋ ಏಜೆನ್ಸಿಯಲ್ಲಿ ನಡೆದ ಸಮಾರಂಭದಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿಕಾಸ್ ಸಿರ್ಪುರ್ಕರ್, ಮಾಲೀಕರು ಮತ್ತು ಡೀಲರ್ ಪ್ರಿನ್ಸಿಪಾಲ್ ಪ್ರಕಾಶ್ ಜೈನ್ ಮತ್ತು ಇತರ ಉನ್ನತ ಟಾಟಾ ಮೋಟಾರ್ಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಸ್ತುತ, ಟಾಟಾ ಮೋಟಾರ್ಸ್ ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ. ಇದರ ಮಾರುಕಟ್ಟೆ ಪಾಲು 87% ರಷ್ಟಿದೆ (11M, FY 22) ಮತ್ತು 25000 ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಇಲ್ಲಿಯವರೆಗೆ ಕಂಪನಿಯು ವಿತರಿಸಿದೆ.

"ಟಾಟಾ ಯುನಿವರ್ಸ್" ಇವಿ ಪರಿಸರ ವ್ಯವಸ್ಥೆಯ ಭಾಗವಾಗಿ, ಟಾಟಾ ಮೋಟಾರ್ಸ್ ಭಾರತದಲ್ಲಿ ಇವಿಗಳ ಅಳವಡಿಕೆಯನ್ನು ವೇಗಗೊಳಿಸಲು ಸಹಾಯ ಮಾಡಲು ಟಾಟಾ ಪವರ್, ಟಾಟಾ ಕೆಮಿಕಲ್ಸ್, ಟಾಟಾ ಆಟೋ ಕಾಂಪೊನೆಂಟ್ಸ್, ಟಾಟಾ ಮೋಟಾರ್ಸ್ ಫೈನಾನ್ಸ್ ಮತ್ತು ಕ್ರೋಮಾ ಸೇರಿದಂತೆ ಇತರ ಟಾಟಾ ಗ್ರೂಪ್ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ.

ಟಾಟಾ ಎಲೆಕ್ಟ್ರಿಕ್ ಸರಣಿಯಲ್ಲಿ ಟಿಗೋರ್ ಇವಿ, ನೆಕ್ಸಾನ್ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ಒಳಗೊಂಡಿದೆ. ಈ ಸರಣಿಯಲ್ಲಿ ಇತ್ತೀಚಿನ ಸೇರ್ಪಡೆಗೊಂಡ ಮಾದರಿಯು ನೆಕ್ಸಾನ್ ಇವಿ ಮ್ಯಾಕ್ಸ್ ಆಗಿದೆ. ಈ ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.17.74 ಲಕ್ಷವಾಗಿದೆ.

ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಮಾದರಿಗಿಂತಲೂ ಅತ್ಯಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಹಿನ್ನಲೆಯಲ್ಲಿ ಹೊಸ ಕಾರಿಗಾಗಿ ಮ್ಯಾಕ್ಸ್ ನೇಮ್ಪ್ಲೆಮ್ ಬಳಕೆ ಮಾಡಲಾಗಿದೆ. ಎಕ್ಸ್ಜೆಡ್ ಪ್ಲಸ್ ಮತ್ತು ಎಕ್ಸ್ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್ಗಳಲ್ಲಿ ಕಂಪನಿಯು ಎರಡು ಮಾದರಿಯ ಚಾರ್ಜಿಂಗ್ ಆಯ್ಕೆಗಳನ್ನು ನೀಡಲಾಗಿದೆ.

ಎಕ್ಸ್ಜೆಡ್ ಪ್ಲಸ್ ಮತ್ತು ಎಕ್ಸ್ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್ಗಳಲ್ಲಿ 3.3 kW ಮತ್ತು 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ನೀಡಲಾಗಿದೆ. ಇದರಲ್ಲಿ 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಎಕ್ಸ್ಜೆಡ್ ಪ್ಲಸ್ ಮತ್ತು ಎಕ್ಸ್ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್ಗಳು ಸಾಮಾನ್ಯ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾಗಿದೆ.

3.3 kW ಚಾರ್ಜಿಂಗ್ ಆಯ್ಕೆ ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಮಾಡಲು ಕನಿಷ್ಠ 14 ರಿಂದ 15 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಸಮಯಾವಕಾಶ ತೆಗದುಕೊಳ್ಳುತ್ತದೆ. ಒಂದೇ ವೇಳೆ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯನ್ನು ಟಾಟಾ ಪವರ್ ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡುವುದಾದರೆ ಸೊನ್ನೆಯಿಂದ ಶೇ.80 ಚಾರ್ಜ್ ಮಾಡಲು ಕೇವಲ 50 ನಿಮಿಷ ತೆಗೆದುಕೊಳ್ಳಲಿದ್ದು, ಹೋಂ ಚಾರ್ಜರ್ ಸೌಲಭ್ಯವು ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುತ್ತದೆ.

ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಈ ಹಿಂದಿನ 30kWh ಬ್ಯಾಟರಿ ಪ್ಯಾಕ್ ಸ್ಥಾನಕ್ಕೆ ಹೊಸದಾಗಿ 40.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್ಗೆ ಗರಿಷ್ಠ 437 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಸ್ಟ್ಯಾಂಡರ್ಡ್ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಎಕ್ಸ್ಎಂ, ಎಕ್ಸ್ಝಡ್ ಪ್ಲಸ್, ಎಕ್ಸ್ಝಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್ಗಳಿವೆ. ನೆಕ್ಸಾನ್ ಇವಿ ಕಾರಿನಲ್ಲಿ 95kW ಎಲೆಕ್ಟ್ರಿಕ್ ಮೋಟಾರ್ ಮತ್ತು 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, 2020ರ ಆವೃತ್ತಿಯು 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಬಹುದಾಗಿದೆ. ಎಆರ್ಎಐ ಸಂಸ್ಥೆಯು ಪ್ರಮಾಣಿಕರಿಸದಂತೆ 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ನೆಕ್ಸಾನ್ ಇವಿ ಕಾರು ಇಕೋ ಡ್ರೈವ್ ಮೋಡ್ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ನೀಡುತ್ತದೆ.

ಟಿಗೋರ್ ಇವಿ ಮಾದರಿಯು ಹೊಸ ತಂತ್ರಜ್ಞಾನ ಪ್ರೇರಿತ 55kW ಎಲೆಕ್ಟ್ರಿಕ್ ಮೋಟಾರ್ ಮತ್ತು 26kWh ಲೀಥಿಯಂ ಅಯಾನ್ ಜೋಡಣೆ ಹೊಂದಿದೆ.ಹೊಸ ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆಯು ಕಾರಿನ ಕಾರ್ಯಕ್ಷಮತೆ ಹೆಚ್ಚಳದೊಂದಿಗೆ ಮೈಲೇಜ್ನಲ್ಲೂ ಸಾಕಷ್ಟು ಸುಧಾರಣೆಗೊಂಡಿದ್ದು, ಹೊಸ ಕಾರು ಪ್ರತಿ ಚಾರ್ಜ್ಗೆ ಗರಿಷ್ಠ 306 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಇದು ಜಿಪ್ಟ್ರಾನ್ ಪವರ್ಟ್ರೈನ್ ತಂತ್ರಜ್ಞಾನವನ್ನು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಹೊಸ ಪವರ್ಟ್ರೈನ್ನಲ್ಲಿ ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳಿಂದ ಕೂಡಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ. ದಿನದಂದ ದಿನಕ್ಕೆ ಟಾಟಾ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳು ವಿಭಾಗದಲ್ಲಿ ಟಾಟಾ ಮೋಟಾರ್ಸ್ ಪಾರುಪತ್ಯ ಸಾಧಿಸುತ್ತಿದೆ.