ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಅಗ್ರಸ್ಥಾನದೊಂದಿಗೆ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಕ್ಯಾಬ್ ಸೇವಾ ಸಂಸ್ಥೆಗಳಿಂದ ಪ್ರಮುಖ ಇವಿ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇತ್ತೀಚೆಗೆ ಇಸಿ ವ್ಹೀಲ್ಸ್ ಇಂಡಿಯಾ ಪ್ರೈ.ಲೀ ಕಂಪನಿಯ ಜೊತೆ ಹೊಸ ಪಾಲುದಾರಿಕೆಯನ್ನು ಘೋಷಿಸಿದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಹೊಸ ಪಾಲುದಾರಿಕೆಯ ಯೋಜನೆ ಅಡಿ ಇಸಿ ವ್ಹೀಲ್ಸ್ ಇಂಡಿಯಾ ಪ್ರೈ.ಲೀ ಕಂಪನಿಯು ಕ್ಯಾಬ್ ಸೇವೆಗಳಿಗಾಗಿ ಟಾಟಾ ಮೋಟಾರ್ಸ್ ನಿರ್ಮಾಣದ ಎಕ್ಸ್‌ಪ್ರೆಸ್-ಟಿ ಇವಿ(XPres-T EV) ಸೆಡಾನ್ ಮಾದರಿಯ 1 ಸಾವಿರ ಯುನಿಟ್‌ಗಳಿಗೆ ಬೇಡಿಕೆ ಸಲ್ಲಿಸಿದ್ದು, ಮುಂದಿನ ಒಂದು ವರ್ಷದೊಳಗಾಗಿ ಬೇಡಿಕೆ ಸಲ್ಲಿಸಲಾಗಿರುವ ಕಾರುಗಳನ್ನು ವಿತರಣೆ ಮಾಡುವುದಾಗಿ ಟಾಟಾ ಕಂಪನಿಯು ವಿಶ್ವಾಸ ವ್ಯಕ್ತಪಡಿಸಿದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಟಾಟಾ ಕಂಪನಿಯು ನೆಕ್ಸಾನ್ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕರ ಬಳಕೆಯ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದರೆ ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯು ಕ್ಯಾಬ್ ಸೇವಾ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಎಕ್ಸ್‌ಪ್ರೆಸ್-ಟಿ ಮಾದರಿಗಾಗಿ ಈಗಾಗಲೇ ಸುಮಾರು ಪ್ರಮುಖ ಕಂಪನಿಗಳಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಯುನಿಟ್‌ಗಳಿಗೆ ಬೇಡಿಕೆ ಸಲ್ಲಿಕೆಯಾಗಿದ್ದು, ಕಂಪನಿಯು ಹಂತ-ಹಂತವಾಗಿ ಬೇಡಿಕೆ ಪೂರೈಕೆಗಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಳ ಮಾಡುತ್ತಿದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಹೊಸ ಪಾಲುದಾರಿಕೆಯೊಂದಿಗೆ ಟಾಟಾ ಮೋಟಾರ್ಸ್ ಫ್ಲೀಟ್ ವಿಭಾಗದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಪಡೆದುಕೊಂಡ ಮೊದಲ ವಾಹನ ತಯಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಪಾಲುದಾರಿಕೆಯು ಭಾರತದಲ್ಲಿ ಫ್ಲೀಟ್ ವಿಭಾಗದಲ್ಲಿ ಎಲೆಕ್ಟ್ರಿಕ್ ಕಾರುಗಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಟಾಟಾ ಮೋಟಾರ್ಸ್ ಭರವಸೆ ವ್ಯಕ್ತಪಡಿಸಿದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಹೆಚ್ಚುತ್ತಿರುವ ಇಂಧನಗಳ ಪರಿಣಾಮ ವಾಹನಗಳ ನಿರ್ವಹಣಾ ವೆಚ್ಚದಲ್ಲೂ ಹೆಚ್ಚುತ್ತಿರುವುದರಿಂದ ಗ್ರಾಹಕರು ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಹೊಸ ಪಾಲುದಾರಿಕೆಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನ ವಿಭಾಗದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಟಾಟಾ ಮೋಟಾರ್ಸ್ ಕಂಪನಿಯು ಫ್ಲೀಟ್ ಗ್ರಾಹಕರಿಗಾಗಿಯೇ ಪ್ರತ್ಯೇಕವಾಗಿ ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಸೆಡಾನ್ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿದ್ದು, ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಕಾರು ಉತ್ತಮ ಶ್ರೇಣಿ, ವೇಗದ ಚಾರ್ಜಿಂಗ್ ಪರಿಹಾರ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಮತ್ತು ಸೌಕರ್ಯದೊಂದಿಗೆ ಬರುತ್ತದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಫ್ಲೀಟ್ ಆಪರೇಟರ್‌ಗಳಿಗೆ ಇದು ವಿಶ್ವಾಸಾರ್ಹ ಕಡಿಮೆ ವೆಚ್ಚದ ಎಲೆಕ್ಟ್ರಿಕ್ ಕಾರ್ ಆಗಿದ್ದು, ಇದರ ಚಾಲನೆಯ ವೆಚ್ಚವು ಪೆಟ್ರೋಲ್ ಕಾರ್‌ಗಿಂತಲೂ ಕಡಿಮೆಯಿರುತ್ತದೆ. ಹೊಸ ಇವಿ ಕಾರು ಫ್ಲೀಟ್ ಆಪರೇಟರ್‌ಗಳ ಲಾಭವನ್ನು ಹೆಚ್ಚಿಸಲು ಸಹಕಾರಿಯಾಗಲಿದ್ದು, ಹೊಸ ಕಾರು ಡೀಸೆಲ್ ಕಾರುಗಳಿಂತಲೂ ಶೇ. 60 ರಷ್ಟು ಕಡಿಮೆ ನಿರ್ವಹಣಾ ವೆಚ್ಚವನ್ನ ಹೊಂದಿದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಟಾಟಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇತ್ತೀಚೆಗೆ ಹೊಸ ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಟಿಗೋರ್ ಇವಿ ಆಧರಿಸಿ ಎಕ್ಸ್‌ಪ್ರೆಸ್-ಟಿ ಮಾದರಿಯನ್ನು ಫ್ಲೀಟ್ ಗ್ರಾಹಕರಿಗಾಗಿಯೇ ಪ್ರತ್ಯೇಕವಾಗಿ ಅಭಿವೃದ್ದಿಗೊಳಿಸಿದ್ದು, XM, XZ, XM + ಹಾಗೂ XZ + ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಕಾರಿನಲ್ಲಿರುವ ಪ್ರಮುಖ ಲಕ್ಷಣವೆಂದರೆ ಈ ಕಾರು 21.5 ಕಿ.ವ್ಯಾ ಹಾಗೂ 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದ್ದು, 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಒಂದು ಮಾದರಿಯ ಬೆಲೆ ರೂ. 9.54 ಲಕ್ಷಗಳಾದರೆ, ಮತ್ತೊಂದು ಮಾದರಿಯ ಬೆಲೆ ರೂ. 10.04 ಲಕ್ಷಗಳಾಗಿದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

21.5 ಕಿ.ವ್ಯಾ ಬ್ಯಾಟರಿ ಹೊಂದಿರುವ ಇತರ ಎರಡು ಮಾದರಿಗಳ ಬೆಲೆ ಕ್ರಮವಾಗಿ ರೂ. 10.14 ಲಕ್ಷ ಹಾಗೂ ರೂ.10.64 ಲಕ್ಷಗಳಾಗಿದೆ. 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 165 ಕಿ.ಮೀಗಳವರೆಗೆ ಚಲಿಸುತ್ತದೆ. ಇನ್ನು 21.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಗರಿಷ್ಠ 213 ಕಿ.ಮೀಗಳವರೆಗೆ ಚಲಿಸುತ್ತದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಈ ಬ್ಯಾಟರಿಗಳನ್ನು 90 ರಿಂದ 110 ನಿಮಿಷಗಳಲ್ಲಿ 0 - 80% ವರೆಗೂ ಚಾರ್ಜ್ ಮಾಡಬಹುದು ಎಂದು ಟಾಟಾ ಕಂಪನಿ ಹೇಳಿದೆ. 15 ಆಂಪಿಯರ್ ಎಲೆಕ್ಟ್ರಿಕ್ ಚಾರ್ಜರ್ ಹಾಗೂ ಫಾಸ್ಟ್ ಚಾರ್ಜರ್ ಗಳಿಂದ ಈ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದು. ವಾಣಿಜ್ಯ ಬಳಕೆಗಾಗಿ ಈ ಕಾರಿನ ಸುತ್ತಲೂ ಬಿಳಿ ಬಣ್ಣದೊಂದಿಗೆ ನೀಲಿ ಸ್ಪರ್ಶವನ್ನು ನೀಡಲಾಗಿದೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ದರಿಂದ ನೋಡುಗರಿಗೆ ಈ ಕಾರು ಎಲೆಕ್ಟ್ರಿಕ್ ಕಾರು ಎಂದು ತಿಳಿಯುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಒಳ ಭಾಗದಲ್ಲಿ ನೀಲಿ ಬಣ್ಣವನ್ನು ನೀಡಲಾಗಿದೆ. ಈ ನೀಲಿ ಹೈಲೈಟ್‌ಗಳೇ ಎಲೆಕ್ಟ್ರಿಕ್ ಕಾರುಗಳನ್ನು ಟಾಟಾ ಕಂಪನಿಯ ಇತರೆ ಫ್ಯೂಯಲ್ ಕಾರುಗಳಿಂದ ಪ್ರತ್ಯೇಕಿಸುತ್ತವೆ.

ಕ್ಯಾಬ್ ಸೇವೆಗಳಿಗಾಗಿ 1 ಸಾವಿರ ಟಾಟಾ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಖರೀದಿಸಿದ ಇಸಿ ವ್ಹೀಲ್ಸ್

ಈ ಹೊಸ ಕಮರ್ಷಿಯಲ್ ಎಲೆಕ್ಟ್ರಿಕ್ ಕಾರಿನ ಒಳಾಂಗಣ ಕ್ಯಾಬಿನ್ ಅನ್ನು ಪ್ರೀಮಿಯಂ ಗುಣಮಟ್ಟದ ಕಪ್ಪು ಬಣ್ಣದಲ್ಲಿರುವ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ನಂತಹ ಫೀಚರ್ ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಈ ಎಲೆಕ್ಟ್ರಿಕ್ ಕಾರು ಡ್ಯುಯಲ್ ಏರ್‌ಬ್ಯಾಗ್‌, ಇಬಿಡಿ ಹೊಂದಿರುವ ಎಬಿಎಸ್‌ನಂತಹ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ.

Most Read Articles

Kannada
English summary
Tata motors to deliver 1 000 xpres t evs for cab services more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X