Just In
- 1 hr ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 15 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 16 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 16 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Movies
'ದಿ ಡರ್ಟಿ ಪಿಕ್ಟರ್' ಸೀಕ್ವೆಲ್ ಫಿಕ್ಸ್: ನಾಯಕಿ ಯಾರು?
- News
UIDAI ಹೊಸ ಸುತ್ತೋಲೆ: ಸರ್ಕಾರಿ ಸವಲತ್ತು, ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ
- Travel
ಕರ್ನಾಟಕದ ಭದ್ರಾವತಿಯಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯವು ಒಂದು ಪ್ರಾಚೀನ ಅದ್ಬುತಕ್ಕೆ ಸಾಕ್ಷಿ!
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
ಜುಲೈ 1ರಿಂದ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಳ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ಮುಂದಿನ ತಿಂಗಳು ಜುಲೈ 1ರಿಂದ ತನ್ನ ಪ್ರಮುಖ ವಾಣಿಜ್ಯ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದು, ಹೊಸ ವಾಣಿಜ್ಯ ವಾಹನಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗುವ ಸುಳಿವು ನೀಡಿದೆ.

ಪ್ರಯಾಣಿಕ ಕಾರುಗಳ ಬೆಲೆ ಹೆಚ್ಚಳದ ನಂತರ ಇದೀಗ ಕಂಪನಿಯು ವಾಣಿಜ್ಯ ವಾಹನಗಳ ಬೆಲೆಯಲ್ಲಿ ಹೆಚ್ಚಳಕ್ಕೆ ನಿರ್ಧರಿಸಿದ್ದು, ಜುಲೈ 1ರಂದಿಲೇ ಅನ್ವಯಿಸುವಂತೆ ಹೊಸ ದರ ಪಟ್ಟಿ ಸಿದ್ದಪಡಿಸಿದೆ. ಹೊಸ ದರ ಪಟ್ಟಿಯಲ್ಲಿ ಟಾಟಾ ವಾಣಿಜ್ಯ ಬೆಲೆಯಲ್ಲಿ ವಿವಿಧ ಮಾದರಿಗಳಿಗೆ ಅನುಗುಣವಾಗಿ ಶೇ. 1.50 ರಿಂದ ಶೇ. 2.50 ರಷ್ಟು ಹೆಚ್ಚಿಸುವ ಸುಳಿವು ನೀಡಿದೆ.

ಕಳೆದ ಮಾರ್ಚ್ನಲ್ಲಿ ಕಾರು ಬೆಲೆಯಲ್ಲಿ ಶೇ. 1ರಿಂದ ಶೇ.2 ಹೆಚ್ಚಳ ಘೋಷಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ವಾಣಿಜ್ಯ ವಾಹನ ಬೆಲೆ ಏರಿಕೆಗೂ ಸಿದ್ದವಾಗಿದ್ದು, ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಲೇ ಇವೆ.

ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದ್ದು, ಟಾಟಾ ಪ್ರಮುಖ ವಾಣಿಜ್ಯ ವಾಹನಗಳ ವಿವಿಧ ವೆರಿಯೆಂಟ್ಗಳ ಬೆಲೆಯಲ್ಲಿ ಸುಮಾರು ಗರಿಷ್ಠ ರೂ. 20 ಸಾವಿರದಿಂದ ರೂ. 60 ಸಾವಿರ ತನಕ ಹೆಚ್ಚಳವಾಗಬಹುದಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕಂಪನಿಯು ವಿವಿಧ ವಾಣಿಜ್ಯ ವಲಯಗಳಲ್ಲಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಸುಮಾರು 12 ವಾಹನಗಳನ್ನು ಮಾರಾಟ ಮಾಡುತ್ತಿದೆ.

ವಾಣಿಜ್ಯ ವಾಹನಗಳ ಪಟ್ಟಿಯಲ್ಲಿರುವ ಏಸ್ ಗೋಲ್ಡ್, ಇಂಟ್ರಾ ವಿ-10, ಇಂಟ್ರಾ ವಿ-30, ಯೋಧಾ ಪಿಕ್ಅಪ್, ಎಲ್ಸಿವಿ ಟ್ರಕ್, ಐಸಿವಿ ಟ್ರಕ್, ಐಸಿವಿ ಲೋಡಿಂಗ್ ಟ್ರಕ್, ಅಲ್ಟ್ರಾ ಐಸಿವಿ, ಐಎಲ್ಸಿವಿ ಟಿಪ್ಲರ್, ಎಂಅಂಡ್ಹೆಚ್ಸಿವಿ ರಿಗಿಡ್ ಟ್ರಕ್, ಎಂಅಂಡ್ಹೆಚ್ಸಿವಿ ಟ್ರ್ಯಾಕ್ಟರ್ ಟಿಲ್ಲರ್, ಎಂಅಂಡ್ಹೆಚ್ಸಿವಿ ಕನ್ಸ್ಟ್ರಕಟ್ ಮತ್ತು ಅಲ್ಟ್ರಾ ಎಂಹೆಚ್ಸಿವಿ ಟ್ರಕ್ ಮಾರಾಟ ಹೊಂದಿದೆ.

ವಿವಿಧ ವಾಣಿಜ್ಯ ವಾಹನಗಳೊಂದಿಗೆ ಹಲವು ವರ್ಷಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು 32,818 ಯುನಿಟ್ ವಾಹನ ಮಾರಾಟದೊಂದಿಗೆ ಕಳೆದ ವರ್ಷದ ಮೇ ಅವಧಿಗಿಂತ ಶೇ.188 ರಷ್ಟು ಬೆಳವಣಿಗೆ ಸಾಧಿಸಿದೆ.

32,818 ಯುನಿಟ್ ವಾಣಿಜ್ಯ ವಾಹನಗಳಲ್ಲಿ 31,414 ಯುನಿಟ್ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಇನ್ನುಳಿದ 1,404 ಯುನಿಟ್ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾದ 31,414 ಯುನಿಟ್ ವಾಣಿಜ್ಯ ವಾಹನಗಳಲ್ಲಿ 8,409 ಮಧ್ಯಮ ಕ್ರಮಾಂಕದ ವಾಣಿಜ್ಯ ವಾಹನಗಳಾದರೆ 4,474 ಯುನಿಟ್ ಲಘು ವಾಣಿಜ್ಯ ವಾಹನಗಳು, 3,632 ಯುನಿಟ್ ಪ್ಯಾಸೆಂಜರ್ ಕ್ಯಾರಿಯರ್, 14,899 ಯುನಿಟ್ ಕಾರ್ಗೊ ಮತ್ತು ಪಿಕ್ಅಪ್ ವಾಹನಗಳನ್ನು ಮಾರಾಟ ಮಾಡಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಕೋವಿಡ್ ಪರಿಣಾಮ 11,401 ಯುನಿಟ್ ವಾಣಿಜ್ಯ ವಾಹನಗಳನ್ನು ಮಾತ್ರ ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ವಾಹನ ಮಾರಾಟ ಸುಧಾರಿಸುತ್ತ ಕ್ರಮ ಕೈಗೊಂಡಿದೆ.

ಇದರೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ವಾಣಿಜ್ಯ ವಾಹನಗಳ ನಿರ್ವಹಣಾ ಕಂಪನಿಗಳಿಗೆ ನೇರವಾಗಲು ಕನೆಕ್ವೆಡ್ ಫೀಚರ್ಸ್ ನೀಡಲಿದ್ದು, ಕನೆಕ್ಟೆಡ್ ಫೀಚರ್ಸ್ಗಳು ವಾಣಿಜ್ಯ ವಾಹನಗಳ ನಿರ್ವಹಣೆಯನ್ನು ಮತ್ತಷ್ಟು ಸರಳಗೊಳಿಸುತ್ತದೆ.

ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಗ್ರಾಹಕ ಸ್ನೇಹಿ ಮಾದರಿಯ ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್ಗಳನ್ನು ಬಿಡುಗಡೆ ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಟ್ರಕ್ಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆ ಗ್ರಾಹಕರ ಸ್ನೇಹಿ ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಪ್ಲ್ಯಾಟ್ಫಾರ್ಮ್ ಆಧಾರದ ಮೇಲೆ ಹೊಸ ಟ್ರಕ್ಗಳನ್ನು ಅಭಿವೃದ್ದಿ ಮಾಡಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಟ್ರಕ್ ಮಾದರಿಗಳಿಂತ ಹೊಸ ತಂತ್ರಜ್ಞಾನ ಪ್ರೇರಿತ ಟ್ರಕ್ಗಳು ಎಂಜಿನ್ ಕಾರ್ಯಕ್ಷಮತೆಯಲ್ಲಿ ಉತ್ತಮ ಮಾದರಿಯಾಗಿರಲಿವೆ.

ನೆಕ್ಸ್ಟ್ ಜನರೇಷನ್ ಅಲ್ಟ್ರಾ ರೇಂಜ್ ತಂತ್ರಜ್ಞಾನ ಬಳಕೆ ಹಿನ್ನೆಲೆ ವಾಹನಗಳ ಖರ್ಚು ಅಧಿಕವಾಗಿ ತಗ್ಗಲಿದ್ದು, ಉತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಅತ್ಯುತ್ತಮ ವೆಹಿಕಲ್ ಸರ್ವಿಸ್ಗಳಿಂದಾಗಿ ಅಧಿಕ ಪ್ರಮಾಣ ಲಾಭ ತಂದುಕೊಡಲಿವೆ.

ಇದಲ್ಲದೇ ಅಲ್ಟ್ರಾ ರೇಂಜ್ ಟ್ರಕ್ಗಳಲ್ಲಿ ಜಿಪಿಎಸ್ ಅಳವಡಿಕೆ ಸಹ ಇದ್ದು, ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ವೆಹಿಕಲ್ ಟ್ರ್ಯಾಕ್ ಮಾಡುವ ಮೂಲಕ ಸರ್ವಿಸ್ ನೀಡುವ ಉದ್ದೇಶ ಹೊಂದಿದೆ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಜಿಪಿಎಸ್ ಮುಖಾಂತರ ಟಾಟಾ ಮುಖ್ಯ ಕಛೇರಿಗೆ ಎಸ್ಎಂಎಸ್ ಅಲರ್ಟ್ ರವಾನೆಯಾಗಲಿದ್ದು, ಈ ಮೂಲಕ ಟ್ರಕ್ ಸ್ಥಿತಿಗತಿ ಅರಿಯಲು ಇದು ಸಹಾಯಕ್ಕೆ ಬರಲಿದೆ.