ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದೆ.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ದೇಶಿಯ ಮಾರುಕಟ್ಟೆಯಲ್ಲಿನ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಇದೀಗ ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿಯನ್ನು ಹೊಸ ಬದಲಾವಣೆಯೊಂದಿಗೆ ಪರಿಚಯಿಸಿದ್ದು, ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿನ ಹೊಸ ಬದಲಾವಣೆಗಳ ನಂತರ ವಾಣಿಜ್ಯ ಪಿಕಪ್ ಟ್ರಕ್‌ಗಳ ಶ್ರೇಣಿಯನ್ನು ಸಹ ನವೀಕರಿಸಿದೆ.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ವಾಹನಗಳಲ್ಲಿ ಯೋಧಾ 2.0 ಪಿಕ್ಅಪ್ ಟ್ರಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷ ಬೆಲೆ ಹೊಂದಿದ್ದರೆ ವಿ50 ಮತ್ತು ವಿ20 ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.67 ಲಕ್ಷ ಬೆಲೆ ಹೊಂದಿವೆ.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಹೊಸ ವಾಣಿಜ್ಯ ವಾಹನಗಳು ತಮ್ಮ ವಿಭಾಗದಲ್ಲಿಯೇ ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಹೆಚ್ಚು ಲಾಭದಾಯಕ ಅಂಶಗಳನ್ನು ಖಚಿತಪಡಿಸುತ್ತವೆ. ಸುಲಭ ಬಳಕೆ, ಕಡಿಮೆ ನಿರ್ವಹಣಾನ ವೆಚ್ಚ ಮತ್ತು ಅಧಿಕ ಲಾಭಾಂಶಗಳಿಂದಾಗಿಯೇ ಟಾಟಾದ ವಾಣಿಜ್ಯ ವಾಹನಗಳು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದ್ದು, ಹೊಸ ಆವೃತ್ತಿಗಳು ಸುಧಾರಿತ ವೈಶಿಷ್ಟ್ಯಗಳು ಮತ್ತು ನಾವೀನ್ಯತೆಗಳೊಂದಿಗೆ ಖರೀದಿಗೆ ಲಭ್ಯವಾಗಿವೆ.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಯೋಧಾ 2.0 ವಿಶೇಷತೆಗಳು!

ಯೋಧಾ 2.0 ಮಾದರಿಯು ನವೀಕೃತ ಮಾದರಿಯು ಈ ಹಿಂದಿನ ಮಾದರಿಗಿಂತಲೂ ಕೆಲವು ವಿಶೇಷ ವಿನ್ಯಾಸಗಳನ್ನು ಹೊಂದಿದ್ದು, ಮುಂಭಾಗದಲ್ಲಿ ದೊಡ್ಡದಾದ ಕ್ರೋಮ್ ಬಾರ್ ಜೊತೆಗೆ ಹೊಸ ಗ್ರಿಲ್ ಜೋಡಣೆ ಹೊಂದಿದೆ.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಜೊತೆಗೆ ಹೊಸ ಯೋಧಾ ಮಾದರಿಯಲ್ಲಿ ಹೆಡ್‌ಲೈಟ್‌ ವಿನ್ಯಾಸವು ಸ್ಪೋರ್ಟಿ ವಿನ್ಯಾಸ ಹೊಂದಿದ್ದು, ಮುಂಭಾಗದ ತುದಿಯ ಕೆಳಭಾಗವು ಟ್ವೀಕ್ ಮಾಡಲಾದ ಏರ್ ಇನ್‌ಟೆಕ್ ಜೊತೆಗೆ ಆಯತಾಕಾರದ ವಿನ್ಯಾಸದಲ್ಲಿ ಫಾಗ್ ಲ್ಯಾಂಪ್ ಜೋಡಿಸಲಾಗಿದೆ.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಯೋಧಾ 2.0 ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಈ ಬಾರಿ ಹೊಸ ಬಂಪರ್ ಮತ್ತು ಫೆಂಡರ್‌ಗಳನ್ನು ಮಿಶ್ರಲೋಹದಿಂದ ತಯಾರಿಸಲಾಗಿದ್ದು, ಗ್ರಾಹಕರು ಹೊಸ ಪಿಕಪ್ ಟ್ರಕ್ ಅನ್ನು ಸಿಂಗಲ್ ಕ್ಯಾಬ್ ಇಲ್ಲವೇ ಪ್ರಯಾಣಿಕ ಸಾಗಾಣಿಕೆಯ ಕ್ಯಾಬ್ ಮಾದರಿಯಾಗಿ ಆಯ್ಕೆ ಮಾಡಬಹುದು.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಯೋಧಾ 2.0 ಪಿಕಪ್ ಟ್ರಕ್ ಮಾದರಿಯು ಟಾಟಾ ಕಂಪನಿಯ ಈ ಹಿಂದಿನ 2.2-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 100ಬಿಎಚ್‌ಪಿ ಮತ್ತು 250ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಹೊಸ ಪಿಕ್ಅಪ್ ಮಾದರಿಯು 4x4 ಮತ್ತು 4x2 ಡ್ರೈವ್‌ಸಿಸ್ಟಂ ಆಯ್ಕೆ ಹೊಂದಿರಲಿದ್ದು, ಹೊಸ ವಾಹನವು ಕಠಿಣವಾದ ಭೂಪ್ರದೇಶವನ್ನು ಸುಲಭವಾಗಿ ನಿಭಾಯಿಸಬಲ್ಲದು ಎಂದು ಟಾಟಾ ಹೇಳಿಕೊಂಡಿದೆ.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಯೋಧಾ 2.0 ಮಾದರಿಯು ಈ ವಿಭಾಗದಲ್ಲಿಯೇ ಗರಿಷ್ಠ 2 ಸಾವಿರ ಕೆಜಿ (2 ಟನ್‌ಗಳು) ಸರಕು ಸಾಗಾಣಿಕೆ(ಪೇಲೋಡ್) ಸಾಮರ್ಥ್ಯ ಹೊಂದಿದ್ದು, ಹೊಸ ಮಾದರಿಯನ್ನು ಇನ್ನು ಮಾದರಿಯ ಪೇಲೋಡ್ ಆಯ್ಕೆಯಲ್ಲಿ ಖರೀದಿಸಬಹುದು. 2000 ಕೆಜಿ ಸಾಮಾರ್ಥ್ಯ ಮಾದರಿಯು ಬೇಡವಾದಲ್ಲಿ 1,200 ಕೆ.ಜಿ 1,500 ಕೆಜಿ ಇಲ್ಲವೇ 1,700 ಕೆ.ಜಿ ಪೇಲೋಡ್ ಆಯ್ಕೆಗಳಲ್ಲೂ ಸಹ ಖರೀದಿಗೆ ಲಭ್ಯವಿದೆ.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇಂಟ್ರಾ ವಿ50 ಮತ್ತು ವಿ20 ವಿಶೇಷತೆಗಳು!

ಟಾಟಾ ಮೋಟಾರ್ಸ್ ಕಂಪನಿಯು ಇಂದು ಬಿಡುಗಡೆ ಮಾಡಿದ ಪಿಕಪ್ ಟ್ರಕ್‌ಗಳಲ್ಲಿ ಇಂಟ್ರಾ ವಿ50 ಎರಡನೆ ಮಾದರಿಯಾಗಿದ್ದು, ಫ್ಲ್ಯಾಗ್‌ಶಿಪ್ ಇಂಟ್ರಾ ಮಾದರಿಯು ಗರಿಷ್ಠ 1,500 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ.

2,960 ಎಂಎಂ ಪೇಲೋಡ್ ಸಾಮರ್ಥ್ಯದೊಂದಿಗೆ ಇದು ಈ ವರ್ಗದಲ್ಲಿ ಅತ್ಯಧಿಕ ಸರಕು ಸಾಗಾಣಿಕೆ ಹೊಂದಿದ್ದು, ವಿ50 ಮಾದರಿಯು 1.5-ಲೀಟರ್ ಡೀಸೆಲ್ ಎಂಜಿನ್‌ ನೊಂದಿಗೆ 220 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇನ್ನು ವಿ20 ಮಾದರಿಯು ದೇಶದ ಮೊದಲ ದ್ವಿ-ಇಂಧನ ಚಾಲಿತ ಪಿಕಪ್ ಟ್ರಕ್ ಮಾದರಿಯಾಗಿ ಹೊರಹೊಮ್ಮಿದ್ದು, 1 ಸಾವಿರ ಕೆಜಿ ಪೇಲೋಡ್ ಸಾಮರ್ಥ್ಯ ಹೊಂದಿದೆ. ಈ ಹೊಸ ವಾಹನದಲ್ಲಿ ಕಂಪನಿಯು ದ್ವಿ-ಇಂಧನ (ಪೆಟ್ರೋಲ್ ಮತ್ತು ಸಿಎನ್‌ಜಿ) ಚಾಲಿತ 1.2 ಲೀಟರ್ ಎಂಜಿನ್ ನೀಡಲಾಗಿದೆ.

ದ್ವಿ-ಇಂಧನ ಆಯ್ಕೆ ಹೊಂದಿರುವ ಹೊಸ ವಿ20 ಮಾದರಿಯು ಗರಿಷ್ಠ 106 ಎನ್ಎಂ ಟಾರ್ಕ್‌ ಉತ್ಪಾದನೆಯೊಂದಿಗೆ ಪ್ರತಿ ಟ್ಯಾಂಕ್ ಭರ್ತಿಯೊಂದಿಗೆ ಗರಿಷ್ಠ 700 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ನೀಡುತ್ತದೆ.

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಹೊಸ ಟ್ರಕ್‌ಗಳಲ್ಲಿ ಹೊಸ ಗ್ರಿಲ್ ಮತ್ತು ಹೊಸ ಲೋವರ್ ಏರ್ ಡ್ಯಾಮ್ ಅನ್ನು ನೀಡುವ ಇಂಟ್ರಾ ಲೈನ್‌ಅಪ್‌ ವಿನ್ಯಾಸವನ್ನು ನವೀಕರಿಸಿದ್ದು, ಅದು ಸಿಲ್ವರ್‌ನೊಂದಿಗೆ ಸಿದ್ದಗೊಂಡಿದೆ. ನಂತರ ಇತರೆ ಬದಲಾವಣೆಗಳೆಂದರೆ ಎಜಿ ಮತ್ತು ಡಿಜಿಟಲ್ ಡ್ರೈವರ್ ಡಿಸ್ಲ್ಪೇ ಮತ್ತು ಆಧುನಿಕಗೊಂಡಿರುವ ಕ್ಯಾಬಿನ್ ಆಕರ್ಷಿಸುತ್ತವೆ.

Most Read Articles

Kannada
English summary
Tata new yodha 2 0 intra v20 bi fuel intra v50 pickup trucks launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X