ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚುವುದರ ಜೊತೆಗೆ ಇವಿ ವಾಹನಗಳ ಪ್ರಯಾಣವು ಹಲವಾರು ಹೊಸ ದಾಖಲೆಗೆ ಕಾರಣವಾಗುತ್ತಿದ್ದು, ಇತ್ತೀಚೆಗೆ ಟಾಟಾ ಮೋಟಾರ್ಸ್ ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಮಾದರಿಯು ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಇಂಡಿಯಾ ಬುಕ್ ಆಫ್ ರೇಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಕೊನೆಯ ಮೈಲಿ ತನಕ ಇವಿ ವಾಹನಗಳ ಚಾಲನೆ ಸಾಧ್ಯತೆಗಳತ್ತ ಗಮನಹರಿಸಿರುವ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಗ್ರಾಹಕ ಬೇಡಿಕೆಯೆಂತೆ ವಿವಿಧ ಇವಿ ಮಾದರಿಗಳನ್ನು ಪರಿಚಯಿಸುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಟಾಟಾ ಮೋಟಾರ್ಸ್ ನಿರ್ಮಾಣದ ನೆಕ್ಸಾನ್ ಇವಿ ಮ್ಯಾಕ್ಸ್ ಎಸ್‌ಯುವಿಯು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಗಮನಸೆಳೆಯುತ್ತಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಆಕರ್ಷಕ ಬೆಲೆ, ಅತ್ಯುತ್ತಮ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಜಗತ್ತಿನ ಅತ್ಯಂತ ಎತ್ತರದ ಮೋಟಾರ್ ಸಂಚಾರಿ ಪ್ರದೇಶವಾಗಿರುವ ಲಡಾಕ್‌ನ ಖರ್ದುಂಗ್‌ ಲಾ ಪಾಸ್ (Khardung La pass) ತಲುಪಿ ಹೊಸ ದಾಖಲೆ ನಿರ್ಮಿಸಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು ಮಾದರಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಸಾಂಪ್ರದಾಯಿಕ ಕಾರು ಮಾದರಿಗಳಿಂತಲೂ ಅತಿ ಕಡಿಮೆ ವೆಚ್ಚದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಸಮುದ್ರ ಮಟ್ಟದಿಂದ 19,024 ಅಡಿ (5,798 ಮೀ) ಎತ್ತರದಲ್ಲಿರುವ ಲಡಾಕ್‌ನ ಖರ್ದುಂಗ್‌ ಲಾ ಪಾಸ್ ಅನ್ನು ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಸೆಪ್ಟೆಂಬರ್ 18ರಂದು ತಲುಪುವಲ್ಲಿ ಯಶಸ್ವಿಯಾಗಿದ್ದು, ಪ್ರತಿಕೂಲಕರ ವಾತಾವರಣದಲ್ಲೂ ಹೊಸ ಇವಿ ಕಾರು ಮಾದರಿಯು ಯಾವುದೇ ಅಡೆತಡೆಗಳಲ್ಲಿದೆ ಹೊಸ ದಾಖಲೆಯನ್ನು ನಿರ್ಮಿಸಿತು.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಮಾದರಿಗಿಂತಲೂ ಅತ್ಯಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಹಿನ್ನಲೆಯಲ್ಲಿ ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳಲ್ಲಿ 3.3 kW ಮತ್ತು 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ನೀಡಲಾಗಿದ್ದು, ಆರಂಭಿಕ ಮಾದರಿಯು ರೂ. 18.34 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 20.04 ಲಕ್ಷ ಬೆಲೆ ಹೊಂದಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಇದರಲ್ಲಿ 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳು ಸಾಮಾನ್ಯ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾಗಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

3.3 kW ಚಾರ್ಜಿಂಗ್ ಆಯ್ಕೆ ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಮಾಡಲು ಕನಿಷ್ಠ 14 ರಿಂದ 15 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಸಮಯಾವಕಾಶ ತೆಗದುಕೊಳ್ಳುತ್ತದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಒಂದೇ ವೇಳೆ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯನ್ನು ಟಾಟಾ ಪವರ್ ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡುವುದಾದರೆ ಸೊನ್ನೆಯಿಂದ ಶೇ.80 ಚಾರ್ಜ್ ಮಾಡಲು ಕೇವಲ 50 ನಿಮಿಷ ತೆಗೆದುಕೊಳ್ಳಲಿದ್ದು, ಹೋಂ ಚಾರ್ಜರ್ ಸೌಲಭ್ಯವು ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುತ್ತದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಈ ಹಿಂದಿನ 30kWh ಬ್ಯಾಟರಿ ಪ್ಯಾಕ್ ಸ್ಥಾನಕ್ಕೆ ಹೊಸದಾಗಿ 40.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 437 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಇಕೋ ಮೋಡ್‌ನಲ್ಲಿ 437 ಕಿ.ಮೀ ಮೈಲೇಜ್ ಹೊಂದಿದ್ದರೂ ಅದು ವಿವಿಧ ಡ್ರೈವಿಂಗ್ ಮೋಡ್ ಮತ್ತು ರಸ್ತೆ ಸೌಲಭ್ಯಕ್ಕೆ ಅನುಗುಣವಾಗಿ ರಿಯಲ್ ವರ್ಲ್ಡ್ ಮೈಲೇಜ್ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಲಿದ್ದು, ಇದು ವಿವಿಧ ಡ್ರೈವ್ ಮೋಡ್ ಮತ್ತು ರಸ್ತೆ ಸೌಲಭ್ಯಗಳಿಗೆ ಅನುಗುಣವಾಗಿ ಕನಿಷ್ಠ 300ರಿಂದ 320 ಕಿ.ಮೀ ಮೈಲೇಜ್ ಅನ್ನು ಅರಾಮವಾಗಿ ಪಡೆದುಕೊಳ್ಳಬಹುದು ಎನ್ನಲಾಗಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಹೊಸ ನೆಕ್ಸಾನ್ ಇವಿ ಮಾಕ್ಸ್ ಮಾದರಿಯಲ್ಲಿ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಮಾದರಿಗಾಗಿ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಅಭಿವೃದ್ದಿಗೊಳಿಸಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಇದರೊಂದಿಗೆ ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಮಾಕ್ಸ್ ಮಾದರಿಯು 95kW ಎಲೆಕ್ಟ್ರಿಕ್ ಮೋಟಾರ್ ಮೂಲಕವೇ ಇದೀಗ 143 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದ್ದು, ಇದು ಹಳೆಯ ಮಾದರಿಗಿಂತಲೂ 14 ಬಿಎಚ್‌ಪಿ ಮತ್ತು 5 ಎನ್ಎಂ ಟಾರ್ಕ್ ಹೆಚ್ಚಳವಾಗಿದೆ.

ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿ ಹೊಸ ದಾಖಲೆ ನಿರ್ಮಿಸಿದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್

ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ವಿಸ್ತರಿತ ಬ್ಯಾಟರಿ ಪ್ಯಾಕ್ ಜೊತೆಗೆ ಪ್ರಮುಖ ಸೇಫ್ಟಿ ಫೀಚರ್ಸ್‌ಗಳನ್ನು ಸಹ ಉನ್ನತೀಕರಿಸಿದ್ದು, ಹೊಸ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಏರ್ ಪ್ಯೂರಿಫೈರ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ವೆರ್‌ಲೆಸ್ ಚಾರ್ಜರ್, ವೆಂಟಿಲೆಟೆಡ್ ಸೀಟುಗಳು ಸೇರಿದಂತೆ ಕೆಲವು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದೆ.

Most Read Articles

Kannada
English summary
Tata nexon ev max makes a landmark entry to india book of records
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X