ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಹೊಸ ಕಾರು ಮಾದರಿಗಳಲ್ಲಿ ನಿರಂತರವಾಗಿ ಬದಲಾವಣೆ ತರುತ್ತಿದ್ದು, ಕಂಪನಿಯು ಶೀಘ್ರದಲ್ಲೇ ತನ್ನ ಜನಪ್ರಿಯ ಸಫಾರಿ ಎಸ್‌ಯುವಿಯಲ್ಲಿ ಮತ್ತಷ್ಟು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಟಾಟಾ ಸಫಾರಿಯು ಶೀಘ್ರದಲ್ಲೇ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದ್ದು, ಉನ್ನತೀಕರಿಸಿದ ಮಾದರಿಯು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಉನ್ನತೀಕರಿಸಿದ ಸಫಾರಿ ಮಾದರಿಯು ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದ್ದು, ಹೊಸ ಮಾದರಿಯ ಬಿಡುಗಡೆಗೂ ಮುನ್ನ ಟೀಸರ್ ಪ್ರಕಟಿಸಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಮಾಹಿತಿಗಳ ಪ್ರಕಾರ ಉನ್ನತೀಕರಿಸಿದ ಸಫಾರಿ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿ ತಾಂತ್ರಿಕ ಅಂಶಗಳನ್ನು ಒಳಗೊಂಡು ಹೆಚ್ಚುವರಿಯಾಗಿ ಕೆಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದ್ದು, ಕನೆಕ್ಟೆಡ್ ಸಾಫ್ಟ್‌ವೇರ್ ಕೂಡಾ ನವೀಕರಣಗೊಳ್ಳಲಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಮಾದರಿಯಲ್ಲಿ ಈ ಬಾರಿ ಕಂಪನಿಯು ವೈ-ಪೈ ಕನೆಕ್ಟಿಂಗ್, ವೈರ್‌ಲೆಸ್ ಚಾರ್ಜರ್ ಜೊತೆಗೆ ಚಾರ್ಜರ್ ಪಾಡ್, ಏರ್ ಕ್ವಾಲಿಟಿ ಇಂಡೆಕ್ಸ್ (AQI) ರೇಟಿಂಗ್ ಪ್ರದರ್ಶಿಸುವ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ, ಹೊಸ ತಂತ್ರಜ್ಞಾನ ಪ್ರೇರಿತ ಏರ್ ಪ್ಯೂರಿಫೈಯರ್ ಜೊತೆಗೆ ಬೆಲೆಯಲ್ಲೂ ತುಸು ದುಬಾರಿಯಾಗಿರಲಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇದರ ಜೊತೆಗೆ ಹೊಸ ಮಾದರಿಯಲ್ಲಿ ಡಾರ್ಕ್ ಎಡಿಷನ್ ಸಹ ಬಿಡುಗಡೆಯಾಗಬಹುದಾಗಿದೆ ಎನ್ನಲಾಗಿದ್ದು, ಡಾರ್ಕ್ ಎಡಿಷನ್‌ಗಳು ಸದ್ಯ ನೆಕ್ಸಾನ್, ಆಲ್‌ಟ್ರೊಜ್ ಮತ್ತು ಹ್ಯಾರಿಯರ್ ಮಾದರಿಗಳಲ್ಲಿ ಮಾತ್ರ ಮಾರಾಟಗೊಳ್ಳುತ್ತಿವೆ. ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಇದೀಗ ಸಫಾರಿ ಮಾದರಿಯಲ್ಲೂ ಡಾರ್ಕ್ ಎಡಿಷನ್‌ನಲ್ಲೂ ಬಿಡುಗಡೆ ಮಾಡುತ್ತಿದ್ದು, ಹೊಸ ಮಾದರಿಯು ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ. ಡಾರ್ಕ್ ಎಡಿಷನ್‌ಗಳು ಸಂಪೂರ್ಣವಾಗಿ ಕಪ್ಪು ಮಿಶ್ರಿಣ ಬಣ್ಣದೊಂದಿಗೆ ಡಾರ್ಕ್ ಇಂಟಿರಿಯರ್ ಮತ್ತು ಬ್ಲ್ಯಾಕ್ಔಟ್ ವ್ಹೀಲ್‌ಗಳನ್ನು ಪಡೆದುಕೊಳ್ಳಲಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಸಫಾರಿ ಕಾರು ಮಾದರಿಯು ಸದ್ಯ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಒಮೆಗಾ ಪ್ಲ್ಯಾಟ್‌ ಫಾರ್ಮ್‌ನಿಂದಾಗಿ ಟಾಟಾ ಹೊಸ ಕಾರಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಕಾರಿನ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಗರಿಷ್ಠ ಸುರಕ್ಷತೆಗೆ ಒತ್ತು ನೀಡಿದ್ದು, ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎರಡು ಮಾದರಿಗಳಲ್ಲೂ ಒಂದೇ ಮಾದರಿಯ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇನ್ನು ಟಾಟಾ ಕಂಪನಿಯು ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಮಾದರಿಯ ಬಿಡುಗಡೆಯ ನಂತರ ಎರಡನೇ ಬಾರಿಗೆ ದರ ಏರಿಕೆ ಮಾಡಿದ್ದು, ಪೂರ್ವ ನಿಗದಿಯೆಂತೆ ಕಂಪನಿಯು ಸಫಾರಿ ಕಾರಿನ ಪ್ರಮುಖ ವೆರಿಯೆಂಟ್‌ಗಳ ಬೆಲೆ ಹೆಚ್ಚಳ ಮಾಡಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೆಚ್ಚುತ್ತಿರುವ ಬಿಡಿಭಾಗಗಳ ಬೆಲೆಯಿಂದಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಪ್ರಯಾಣಿಕ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ಹೊಸ ದರವನ್ನು ಇಂದಿನಿಂದಲೇ ಅನ್ವಯವಾಗುವಂತೆ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿರುವ ಟಾಟಾ ಮೋಟಾರ್ಸ್ ಕಂಪನಿಯು ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಕಾರುಗಳ ಬೆಲೆಗೆ ಅನುಗುಣವಾಗಿ ಶೇ.1 ರಿಂದ ಶೇ.1.50 ರಷ್ಟು ದರ ಏರಿಕೆ ಮಾಡಲಾಗಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ವಿವಿಧ ಕಾರು ಮಾದರಿಗಳೊಂದಿಗೆ ಇತ್ತೀಚೆಗೆ ಬಿಡುಗಡೆಯಾದ ಸಫಾರಿ ಎಸ್‌ಯುವಿ ಕಾರು ಮಾದರಿಯ ಬೆಲೆಯಲ್ಲೂ ಹೆಚ್ಚಿಸಿದ್ದು, ಸಫಾರಿ ಕಾರು ಇದೀಗ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡಿದೆ.

ಸಫಾರಿ ಡಾರ್ಕ್ ಎಡಿಷನ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ದರ ಪಟ್ಟಿಯಲ್ಲಿ ಸಫಾರಿ ಕಾರಿನ ಆರಂಭಿಕ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.19 ಲಕ್ಷ ಬೆಲೆ ಪಡೆದುಕೊಂಡಿದ್ದು, ಬೆಲೆ ಏರಿಕೆಯ ನಂತರ ಸಫಾರಿ ಕಾರಿನ ಬೆಲೆಯು ರೂ. 10 ಸಾವಿರದಿಂದ ರೂ. 35 ಸಾವಿರದಷ್ಟು ಹೆಚ್ಚುವರಿ ಪಡೆದುಕೊಂಡಿದೆ.

Most Read Articles

Kannada
English summary
Tata teased upcoming safari dark edition suv details
Story first published: Friday, January 14, 2022, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X