ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಟಿಯಾಗೋ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಮಾದರಿಯು ತನ್ನ ವಿಭಾಗದಲ್ಲಿಯೇ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಖರೀದಿಗೆ ಲಭ್ಯವಾಗಿದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಹೊಸ ಟಿಯಾಗೋ ಇವಿ ಬಿಡುಗಡೆಗೊಂದಿಗೆ ಅಕ್ಟೋಬರ್ 10ರಿಂದ ಬುಕಿಂಗ್ ಆರಂಭಿಸಲಿರುವ ಟಾಟಾ ಮೋಟಾರ್ಸ್ ಕಂಪನಿಯು 2023ರ ಆರಂಭದಲ್ಲಿ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಹಲವಾರು ವಿಶೇಷತೆಗಳೊಂದಿಗೆ ವಿವಿಧ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೆ ಕಾರಿನಲ್ಲಿ ಹತ್ತು ವಿಶೇಷತೆಗಳು ಯಾವವು? ಮತ್ತು ಟಿಯಾಗೋರ ಇವಿ ಇನ್ನು ಯಾವೆಲ್ಲಾ ಹೊಸ ಫೀಚರ್ಸ್ ನೀಡಬಹುದಿತ್ತು ಎನ್ನುವುದನ್ನು ಚರ್ಚಿಸೋಣ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ವೆರಿಯೆಂಟ್‌ಗಳು ಮತ್ತು ಬೆಲೆ(ಎಕ್ಸ್‌ಶೋರೂಂ)

ಟಿಯಾಗೋ ಇವಿ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್‌ಇ, ಎಕ್ಸ್‌ಟಿ, ಎಕ್ಸ್‌ಜೆಡ್ ಪ್ಲಸ್, ಎಕ್ಸ್‌ಜೆಡ್ ಪ್ಲಸ್ ಟೆಕ್ ಲಕ್ಸ್ ವೆರಿಯೆಂಟ್‌ಗಳನ್ನು ಹೊಂದಿದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಹೊಸ ಕಾರು ಬ್ಯಾಟರಿ ಆಯ್ಕೆಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.79 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಬ್ಯಾಟರಿ ಸಾಮರ್ಥ್ಯ

ಹೊಸ ಟಿಯಾಗೋ ಇವಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 19.2 kWh ಮತ್ತು 24 kWh ಬ್ಯಾಟರಿ ಪ್ಯಾಕ್ ಆಯ್ಕೆ ನೀಡಿದ್ದು, ಇದರಲ್ಲಿ 19.2 kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.09 ಲಕ್ಷ ಬೆಲೆ ಹೊಂದಿದ್ದರೆ 24 kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.79 ಲಕ್ಷ ಬೆಲೆ ಹೊಂದಿದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಮೈಲೇಜ್(ಪ್ರತಿ ಚಾರ್ಜ್‌ಗೆ)

ಟಿಯಾಗೋ ಇವಿಯಲ್ಲಿ ಟಾಟಾ ಕಂಪನಿಯು ಆರಂಭಿಕ ಮಾದರಿಗಳಿಗಾಗಿ 19.2 kWh ಲೀಥಿಯಂ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 250 ಕಿ.ಮೀ ಮೈಲೇಜ್ ನೀಡಲಿದ್ದರೆ ಹೈ ಎಂಡ್ ಮಾದರಿಗಳಲ್ಲಿರುವ 24 kWh ಲೀಥಿಯಂ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಗಳು ಪ್ರತಿ ಚಾರ್ಜ್‌ಗೆ ಗರಿಷ್ಠ 315 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಎಲೆಕ್ಟ್ರಿಕ್ ಮೋಟಾರ್

ಟಿಯಾಗೋ ಇವಿ ಕಾರಿನಲ್ಲಿರುವ ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವನ್ನು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಇದು ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳೊಂದಿಗೆ ಕಾರಿನ ಗುಣಮಟ್ಟ ಹೆಚ್ಚಿಸುತ್ತದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಜಿಪ್‌ಟ್ರಾನ್ ತಂತ್ರಜ್ಞಾನದ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಜಾಗತಿಕ ಮಟ್ಟದಲ್ಲಿ ಗಮನಸೆಳೆಯುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆ, ಬ್ಯಾಟರಿ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗೊಳಿಸುವಲ್ಲಿ ಯಶಸ್ವಿಯಾಗುತ್ತಿದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಜೊತೆಗೆ ಜಿಪ್‌ಟ್ರಾನ್ ತಂತ್ರಜ್ಞಾನದಲ್ಲಿ ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಕೆ ಮಾಡಿರುವ ಹಿನ್ನಲೆಯಲ್ಲಿ ಬ್ಯಾಟರಿಯ ದೀರ್ಘಕಾಲದ ಬಾಳಿಕೆಗೆ ಸಹಕರಿಸಲಿದ್ದು, ಇದು ಇವಿ ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಹೊಸ ಕಾರಿನಲ್ಲಿರುವ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ IP67 ಮಾನದಂಡಗಳನ್ನು ಪೂರೈಸಿದ್ದು, ಇವು ಧೂಳು ಮತ್ತು ತುಕ್ಕು ನಿರೋಧಕ ವೈಶಿಷ್ಟ್ಯತೆ ಹೊಂದಿವೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಪರ್ಫಾಮೆನ್ಸ್ ಮತ್ತು ಡ್ರೈವ್ ಮೋಡ್

ಹೊಸ ಟಿಯಾಗೋ ಇವಿ ಕಾರಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟಾಟಾ ಕಂಪನಿಯು ಸಿಟಿ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ ನೀಡಿದ್ದು, ಹೊಸ ಕಾರಿನ 19.2 kWh ಬ್ಯಾಟರಿ ಆಯ್ಕೆಯ ಮಾದರಿಯು 60 ಬಿಎಚ್‌ಪಿ ಮತ್ತು 105 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 24 kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು 74 ಬಿಎಚ್‌ಪಿ ಮತ್ತು 114 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಚಾರ್ಜಿಂಗ್ ಅವಧಿ

ಟಿಯಾಗೋ ಇವಿ ಕಾರಿನಲ್ಲಿ 3.3 kW ಎಸಿ ಚಾರ್ಜ್ ಮತ್ತು 7.2 kW ಎಸಿ ಚಾರ್ಜ್ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತಿದ್ದು, 7.2 kW ಎಸಿ ಚಾರ್ಜ್ ಸೌಲಭ್ಯದ ಮೂಲಕ 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಒಂದು ವೇಳೆ 50kW ಸಾಮರ್ಥ್ಯದ ಡಿಸಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 57 ನಿಮಿಷಗಳಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜ್ ಮಾಡಬಹುದಾಗಿದ್ದು, 15ಎಎಂಪಿ ಹೋಂ ಚಾರ್ಜರ್ ಮೂಲಕ ಚಾರ್ಜ್‌ ಮಾಡಿದ್ದಲ್ಲಿ ಕನಿಷ್ಠ 15ರಿಂದ 18 ಗಂಟೆ ತೆಗೆದುಕೊಳ್ಳುತ್ತದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಕಾರಿನ ವಿನ್ಯಾಸ

ಹೊಸ ಕಾರಿನ ಹೆಡ್‌ಲೈಟ್ ಸುತ್ತಲೂ ಬ್ಲ್ಯೂ ಹೈಲೈಟ್ಸ್ ನೀಡಲಾಗಿದ್ದು, ಕಾರಿನ ಒಳಭಾಗದ ವಿನ್ಯಾಸದಲ್ಲೂ ಕೆಲವು ಹೊಸ ಫೀಚರ್ಸ್ ಹೊರತುಪಡಿಸಿ ಸಾಮಾನ್ಯ ಮಾದರಿಯಂತೆಯೇ ಆಕರ್ಷಣೆಯಾಗಿದೆ. ಎಲೆಕ್ಟ್ರಿಕ್ ಮಾದರಿಯಾಗಿ ಗುರುತಿಸಲು ಬ್ಲ್ಯೂ ಆಕ್ಸೆಂಟ್ ಸಹಕಾರಿಯಾಗಿದ್ದು, ಗೇರ್ ಸ್ಥಾನದಲ್ಲಿ ಇದೀಗ ಡ್ರೈವ್ ಮೋಡ್ ಡಯಲ್ ನೀಡಲಾಗಿದೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಫೀಚರ್ಸ್‌ಗಳು

ಹೊಸ ಇವಿ ಕಾರಿನಲ್ಲಿ 7 ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೇ, ಅಂಡ್ರಾಯಿಡ್ ಮತ್ತು ಆಟೋ ಕಾರ್ ಪ್ಲೇ, 8 ಸ್ಪೀಕರ್ಸ್ ಹರ್ಮನ್ ಆಡಿಯೋ ಸಿಸ್ಟಂ, ಜೆಡ್ ಕನೆಕ್ಟ್ ಟೆಲಿಮ್ಯಾಟಿಕ್ ಸಿಸ್ಟಂ ಹೊಂದಿದ್ದು, ಪ್ರೀಮಿಯಂ ಅನುಭವಕ್ಕಾಗಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್ಸ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಸ್ಟಾರ್ಟ್ ಮತ್ತು ಸ್ಟಾಪ್ ಪುಶ್ ಬಟನ್ ಸೌಲಭ್ಯಗಳಿವೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಸುರಕ್ಷಾ ಸೌಲಭ್ಯಗಳು

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, 4 ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳಿದ್ದು, ಗ್ರಾಹಕರು ಹೊಸ ಕಾರನ್ನು ಟೀಲ್ ಬ್ಲ್ಯೂ, ಡೇ ಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಮಿಡ್‌ನೈಟ್ ಪ್ಲಮ್ ಮತ್ತು ಟ್ರೋಪಿಕಲ್ ಮಿಸ್ಟ್ ಬಣ್ಣಗಳಲ್ಲಿ ಖರೀದಿಸಬಹುದು.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ವಾರಂಟಿ

ಜೊತೆಗೆ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಮೇಲೆ ಕಂಪನಿಯು 8 ವರ್ಷ ಅಥವಾ 1.60 ಲಕ್ಷ ಕಿ.ಮೀ ಗಳಿಗೆ ಅನ್ವಯಿಸುವಂತೆ ವಾರಂಟಿ ಘೋಷಣೆ ಮಾಡಿದ್ದು, ಡಿಸಿ ಫಾಸ್ಟ್ ಚಾರ್ಜ್‌ ಸರ್ಪೊಟ್ ಹೊಂದಿರಲಿವೆ.

ಪ್ರತಿ ಚಾರ್ಜ್‌ಗೆ 315 ಕಿ.ಮೀ ಮೈಲೇಜ್ ಹೊಂದಿರುವ ಟಾಟಾ ಟಿಯಾಗೋ ಇವಿಯ ಹತ್ತು ವಿಶೇಷತೆಗಳಿವು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ, ನೆಕ್ಸಾನ್ ಮ್ಯಾಕ್ಸ್ ಇವಿ, ಟಿಗೋರ್ ಇವಿ ಮತ್ತು ಎಕ್ಸ್‌ಪ್ರೆಸ್ಸ್-ಟಿ ಇವಿ ಕಾರುಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂಂತೆ ಬಜೆಟ್ ಬೆಲೆಯೊಳಗೆ ಟಿಯಾಗೋ ಇವಿ ಮಾದರಿಯನ್ನು ಹೊರತಂದಿದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಇವಿ ಕಾರುಗಳಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ಬಯಸುತ್ತಿರುವ ಗ್ರಾಹಕರಿಗೆ ಟಿಯಾಗೋ ಇವಿ ಕಾರಿನ ಮೈಲೇಜ್ ಪ್ರಮಾಣವು ಆಯ್ಕೆ ಹಿನ್ನಡೆ ಉಂಟುಮಾಡಬಹುದಾಗಿದ್ದು, ಕನಿಷ್ಠ 350 ಕಿ.ಮೀ ತನಕ ಮೈಲೇಜ್ ಪ್ರಮಾಣ ನೀಡಿದ್ದರೆ ಇನ್ನು ಉತ್ತಮವಾಗಿರುತ್ತಿತ್ತು ಎನ್ನುವುದು ಹಲವು ಗ್ರಾಹಕರ ಅಭಿಪ್ರಾಯವಾಗಿದೆ.

Most Read Articles

Kannada
English summary
Tata tiago ev top 10 things detail
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X