ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಮೈಲೇಜ್ ನೀಡುವ ಟಾಟಾ ಟಿಗೋರ್ ಸಿಎನ್‌ಜಿ ರಿವ್ಯೂ ವಿಡಿಯೋ

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಬಹುನೀರಿಕ್ಷಿತ ಟಿಯಾಗೋ ಮತ್ತು ಟಿಗೋರ್ ಕಾರು ಮಾದರಿಗಳ ಸಿಎನ್‌ಜಿ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಟಿಯಾಗೋ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಮಾದರಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಪ್ಲಸ್ ವೆರಿಯೆಂಟ್ ಹೊಂದಿದ್ದರೆ ಟಿಗೋರ್ ಸಿಎನ್‌ಜಿ ಕಂಪ್ಯಾಕ್ಟ್ ಸೆಡಾನ್ ಮಾದರಿಯು ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ವೆರಿಯೆಂಟ್‌‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಟಿಯಾಗೋ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿ ಮಾದರಿಗಳು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಗಿಂತಲೂ ರೂ. 1 ಲಕ್ಷದಷ್ಟು ದುಬಾರಿಯಾಗಿದ್ದರೂ ಪರಿಸರ ಸ್ನೇಹಿ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಅತ್ಯಧಿಕ ಮೈಲೇಜ್ ಪ್ರೇರಣೆ ಹೊಂದಿವೆ. ಹೊಸ ಟಾಟಾ ಟಿಯಾಗೋ ಸಿಎನ್‌ಜಿ ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6,09,900 ದಿಂದ ಟಾಪ್ ಎಂಡ್ ಮಾದರಿಯು ರೂ. 7,52,900 ಬೆಲೆ ಹೊಂದಿದ್ದರೆ ಟಿಗೋರ್ ಸಿಎನ್‌ಜಿ ಆವೃತ್ತಿಯು ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ಆರಂಭಿಕವಾಗಿ ರೂ. 7,69,900 ದಿಂದ ಟಾಪ್ ಎಂಡ್ ಮಾದರಿಯು ರೂ. 8,29,900 ಬೆಲೆ ಹೊಂದಿದೆ.

ಹೊಸ ಕಾರುಗಳಲ್ಲಿ ಟಾಟಾ ಕಂಪನಿಯು 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್‌ಜಿ ಕಿಟ್ ಜೋಡಣೆ ಮಾಡಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಪೆಟ್ರೋಲ್ ಮಾದರಿಗಿಂತಲೂ ಕಡಿಮೆ ಬಿಎಚ್‌ಪಿ ಉತ್ಪಾದನೆ ಹೊಂದಿದ್ದರೂ ಮೈಲೇಜ್‌ನಲ್ಲಿ ಗಮನಸೆಳೆಯಲಿವೆ.

ಹೆಚ್ಚು ಮೈಲೇಜ್ ನೀಡುವ ಟಾಟಾ ಟಿಗೋರ್ ಸಿಎನ್‌ಜಿ ರಿವ್ಯೂ ವಿಡಿಯೋ

ಹೊಸ ಸಿಎನ್‌ಜಿ ತಂತ್ರಜ್ಞಾನವನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಮತ್ತಷ್ಟು ಬದಲಾವಣೆಗೊಳಿಸಿರುವ ಟಾಟಾ ಕಂಪನಿಯು ಇನ್‌ಕ್ರೆಡೆಬಲ್‌ ಸಿಎನ್‌ಜಿ(ಐ-ಸಿಎನ್‌ಜಿ) ಎಂದು ಘೋಷಣೆ ಮಾಡಿದ್ದು, ಹೊಸ ಕಾರುಗಳಲ್ಲಿ ಯಾವುದೇ ಕಂಪನಿಯು ನೀಡಿರದಂತಹ ಹಲವು ತಾಂತ್ರಿಕ ಸೌಲಭ್ಯಗಳನ್ನು ನೀಡಿದೆ.

ಟಾಟಾ ಕಂಪನಿಯು ಹೊಸ ಸಿಎನ್‌ಜಿ ಕಾರುಗಳಲ್ಲಿ ಪ್ರತ್ಯೇಕವಾಗಿ ನಿಯಂತ್ರಣ ಹೊಂದಿರುವ ಪೆಟ್ರೋಲ್ ಮತ್ತು ಸಿಎನ್‌ಜಿ ಸ್ವಿಚ್‌ಗಳನ್ನು ಜೋಡಣೆ ಮಾಡಿದ್ದು, ವಾಹನ ಮಾಲೀಕರು ಪೆಟ್ರೋಲ್ ಅಥವಾ ಸಿಎನ್‌ಜಿ ಲಭ್ಯತೆ ಆಧಾರದ ಮೇಲೆ ಎರಡು ಆಯ್ಕೆಗಳನ್ನು ಪ್ರತ್ಯೇಕವಾಗಿ ಬಳಕೆ ಮಾಡಿಕೊಳ್ಳಬಹುದು.

ಹೆಚ್ಚು ಮೈಲೇಜ್ ನೀಡುವ ಟಾಟಾ ಟಿಗೋರ್ ಸಿಎನ್‌ಜಿ ರಿವ್ಯೂ ವಿಡಿಯೋ

ಪೆಟ್ರೋಲ್ ಅಥವಾ ಸಿಎನ್‌ಜಿ ಲಭ್ಯತೆಯ ಆಧಾರ ಮೇಲೆ ಕೆಲವೇ ಸೆಕೆಂಡುಗಳಲ್ಲಿ ಸ್ವಿಚ್ ಮೂಲಕ ಪೆಟ್ರೋಲ್/ಸಿಎನ್‌ಜಿ ಮೋಡ್‌ಗೆ ಬದಲಾಯಿಸಿಕೊಳ್ಳಬಹುದಾಗಿದ್ದು, ಇದರ ಹೊರತಾಗಿ ಹೊಸ ಕಾರುಗಳು ಐ-ಸಿಎನ್‌ಜಿ ಬ್ಯಾಜ್ಡ್‌ನೊಂದಿಗೆ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ತಾಂತ್ರಿಕ ಸೌಲಭ್ಯಗಳನ್ನು ಹೊಂದಿವೆ.

Most Read Articles

Kannada
English summary
Tata tiago icng kannada review video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X