ಹೆಚ್ಚಿನ ಮೈಲೇಜ್, ಹೊಸ ಫೀಚರ್ಸ್‌ನೊಂದಿಗೆ ಬಿಡುಗಡೆಯಾದ ಟಾಟಾ ಟಿಗೊರ್ ಇವಿ

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯವನ್ನು ಮುಂದುವರಿಸಲು ಟಾಟಾ ಮೋಟಾರ್ಸ್ ತನ್ನ Tata Tigor EV ಕಾರನ್ನು ಹೆಚ್ಚಿನ ಮೈಲೇಜ್, ಹೊಸ ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ.

ಟಾಟಾ ಮೋಟಾರ್ಸ್ ಪ್ರಸ್ತುತ ತನ್ನ ಎಲೆಕ್ಟ್ರಿಕ್ ಕಾರುಗಳಾದ ಟಿಗೊರ್ ಇವಿ, ಟಿಯಾಗೊ ಇವಿ, ನೆಕ್ಸಾನ್ ಇವಿ ಪ್ರೈಮ್ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಕಾರುಗಳೊಂದಿಗೆ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಗೆ ಸೆಡ್ಡುಹೊಡೆದು ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿದೆ.

ಹೆಚ್ಚಿನ ಮೈಲೇಜ್, ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಟಾಟಾ ಟಿಗೊರ್ ಇವಿ

ಇತ್ತೀಚೆಗೆ ಇತರ ಕಂಪನಿಗಳ ಪೈಪೋಟಿ ಹೆಚ್ಚಾಗುತ್ತಿರುವ ಕಾರಣ ತನ್ನ ಮಾದರಿಗಳನ್ನು ಅಪ್‌ಡೇಟ್ ಮಾಡುತ್ತಿದೆ. ಅಲ್ಲದೇ ಗ್ರಾಹಕರ ಬೇಡಿಕೆಯಿಂದ ಹೊಸ ಕಾರಿನ ರೇಂಜ್ ಕೂಡ ಹೆಚ್ಚಿಸಲಾಗುತ್ತಿದೆ. ಪ್ರಸ್ತುತ ಮಾರಾಟದಲ್ಲಿರುವ ಟಿಗೊರ್ ಇವಿ 306 ಕಿ.ಮೀ ರೇಂಜ್ ಹೊಂದಿದ್ದರೇ, ಹೊಸ ವೈಶಿಷ್ಟ್ಯಗಳು ಮತ್ತು ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಇದೀಗ ಬಿಡುಗಡೆಯಾಗಿರುವ ಹೊಸ ಟಾಟಾ ಟಿಗೊರ್ ಇವಿ 315 ಕಿ.ಮೀ (ARAI ಪ್ರಮಾಣೀಕೃತ) ವಿಸ್ತೃತ ಶ್ರೇಣಿಯೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

ಕಂಪನಿಯು ಹೊಸ ಟಿಗೋರ್ ಇವಿಯನ್ನು ಆಯ್ಕೆ ಮಾಡಿಕೊಳ್ಳಲು ನಾಲ್ಕು ರೂಪಾಂತರಗಳನ್ನು ಸಹ ಪರಿಚಯಿಸಿದೆ. 2022ರ ಟಾಟಾ ಟಿಗೊರ್ ಇವಿ ಬೆಲೆಯನ್ನು ನೋಡುವುದಾದರೆ, ಬೇಸ್ ಎಕ್ಸ್‌ಇ ರೂಪಾಂತರವು 12.49 ಲಕ್ಷ ರೂ. ಇದೆ. ಇತರ ರೂಪಾಂತರಗಳಾದ XT ರೂಪಾಂತರಕ್ಕೆ 12.99 ಲಕ್ಷ, XZ+ ರೂಪಾಂತರಕ್ಕೆ ರೂ. 13.49 ಲಕ್ಷ ಮತ್ತು XZ+ LUX ರೂಪಾಂತರಗಳಿಗೆ 13.75 ಲಕ್ಷ ರೂ. ಬೆಲೆಯೊಂದಿಗೆ ಖರೀದಿಗೆ ಲಭ್ಯವಿದೆ. ಇವೆಲ್ಲವೂ ಎಕ್ಸ್‌ ಶೋರೂಂ ಬೆಲೆಗಳಾಗಿವೆ.

ಹೆಚ್ಚಿನ ಮೈಲೇಜ್, ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಟಾಟಾ ಟಿಗೊರ್ ಇವಿ

ಕಾರಿನಲ್ಲಿರುವ ಇತರ ಹೆಚ್ಚುವರಿ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಬ್ರ್ಯಾಂಡ್ ಲೆದರ್ ಸೀಟ್ ಅಪ್ಹೋಲ್ಸ್ಟರಿ, ಲೆದರ್ ಸರೌಂಡೆಡ್ ಸ್ಟೀರಿಂಗ್ ವೀಲ್, ರೈನ್ ಸೆನ್ಸಿಂಗ್ ವೈಪರ್‌ಗಳು, ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸೇರಿಸಿದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ಟಿಗೊರ್ ಎಲೆಕ್ಟ್ರಿಕ್ ಸೆಡಾನ್‌ಗೆ ಮ್ಯಾಗ್ನೆಟಿಕ್ ರೆಡ್ ಎಂಬ ಹೊಸ ಬಾಡಿ ಕಲರ್ ಆಯ್ಕೆಯನ್ನು ಪರಿಚಯಿಸಿದೆ. ಇದು ಕೂಡ ಕಾರಿನ ಹೊಸ ಸ್ಟೈಲಿಂಗ್ ಅನ್ನು ಹೆಚ್ಚಿಸಿದ್ದು, ಆಕರ್ಷಕವಾಗಿ ಕಾಣಲಿದೆ.

ಹೊಸ ಬಿಡುಗಡೆ ಕುರಿತು ಮಾತನಾಡಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ, "ಟಾಟಾ ಟಿಗೊರ್ ಇವಿಯನ್ನು ತಮ್ಮ ಹೊಸ ಫಾರೆವರ್ ತತ್ವಶಾಸ್ತ್ರಕ್ಕೆ ಅನುಗುಣವಾಗಿ ಹೆಚ್ಚಿನ ತಾಂತ್ರಿಕ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ನವೀಕರಿಸಲು ಇದು ಸರಿಯಾದ ಸಮಯವಾಗಿದೆ. ಹೊಸ ನವೀಕರಣಗಳಿಂದ ನಮ್ಮ ಪ್ರತಿಸ್ಪರ್ಧಿಗಳನ್ನು ಸುನಾಯಾಸವಾಗಿ ಎದುರಿಸಲಿದ್ದೇವೆ ಎಂದು ಅವರು ಹೇಳಿದರು.

"ಹೊಸ ನವೀಕರಣಗಳೊಂದಿಗೆ ಬರುತ್ತಿರುವ, 2022 ಮಾಡೆಲ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಸೆಡಾನ್ ಮಲ್ಟಿ-ಮೋಡ್ ರೀಜೆನ್, ಸಂಪರ್ಕಿತ ಕಾರ್ ತಂತ್ರಜ್ಞಾನ (Zconnect), ಸ್ಮಾರ್ಟ್ ವಾಚ್ ಸಂಪರ್ಕ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (iTPMS) ಮತ್ತು ಟೈರ್ ಪಂಕ್ಚರ್ ರಿಪೇರಿ ಕಿಟ್‌ನಂತಹ ಸ್ಮಾರ್ಟ್ ವರ್ಧನೆಗಳನ್ನು ಪಡೆಯುತ್ತದೆ. ಇತ್ತೀಚೆಗೆ ಬಿಡುಗಡೆಯಾದ Tiago EV ಬಿಡುಗಡೆಯಾದ ಒಂದು ತಿಂಗಳೊಳಗೆ 20,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಹಾಗಾಗಿ ಹೊಸ ಟಿಗೋರ್ ಇವಿಗೂ ಭಾರೀ ಪ್ರತಿಕ್ರಿಯೆ ಸಿಗಲಿದೆ ಎಂದು ಕಂಪನಿ ಆಶಿಸುತ್ತಿದೆ.

ಟಾಟಾ ಪ್ರಸ್ತುತ ವಾರ್ಷಿಕ ಆಧಾರದ ಮೇಲೆ 50,000 ಯುನಿಟ್‌ಗಳ ಮಾರಾಟ ಮತ್ತು ಶೇಕಡಾ 89 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಪ್ರಯಾಣಿಕ EV ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ನೆಕ್ಸಾನ್ ಇವಿ ಪ್ರೈಮ್‌ನಂತೆಯೇ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಟಾಟಾ ಅಸ್ತಿತ್ವದಲ್ಲಿರುವ ಟಿಗೋರ್ ಇವಿ ಮಾಲೀಕರಿಗೆ ಉಚಿತ ಫೀಚರ್ ಅಪ್‌ಡೇಟ್ ಪ್ಯಾಕ್ ಅನ್ನು ವಿಸ್ತರಿಸಿರುವುದು ಸ್ವಾಗತಾರ್ಹವಾಗಿದೆ. ಇದು ಡಿಸೆಂಬರ್ 20, 2022 ರಿಂದ ಟಾಟಾದ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.

ಮಲ್ಟಿ-ಮೋಡ್ ರೀಜೆನ್, iTPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಟೈರ್ ಪಂಕ್ಚರ್ ರಿಪೇರಿ ಕಿಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಪ್ರಸ್ತುತ ಗ್ರಾಹಕರು ಅವುಗಳನ್ನು ಅಪ್‌ಗ್ರೇಡ್ ಮಾಡಬಹುದು. ಹೊಸ Tigor EV ಯಲ್ಲಿ 26 kWh ಲಿಕ್ವಿಡ್ ಕೂಲ್ಡ್ ಹೈ ಎನರ್ಜಿ ಡೆನ್ಸಿಟಿ IP67 ರೇಟೆಡ್ Li-ion ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇದು 55 kW ಮತ್ತು 170 Nm ಟಾರ್ಕ್‌ನ ಗರಿಷ್ಠ ವಿದ್ಯುತ್ ಅನ್ನು ಉತ್ಪಾದಿಸುತ್ತದೆ.

ಕಂಪನಿಯು ಜನವರಿ 2023 ರ ವೇಳೆಗೆ Tiago ಮಾರಾಟವನ್ನು ಪ್ರಾರಂಭಿಸಲಿದೆ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲದ್ದರೇ ಕೂಡಲೇ ನಿಮ್ಮ ನೆಚ್ಚಿನ ಆಟೋ ಸುದ್ದಿಗಳನ್ನು ಪಡಿಯಬಹುದು.

Most Read Articles

Kannada
English summary
Tata tigor ev launched with high mileage new features
Story first published: Wednesday, November 23, 2022, 13:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X