ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಅಮೆರಿಕಾದ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಭಾರತದ ಮಾರುಕಟ್ಟೆ ಪ್ರವೇಶಿಸಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದು, ತೆರಿಗೆ ವಿಚಾರವಾಗಿ ಟೆಸ್ಲಾ ಕಂಪನಿಯ ಮನವಿಗೆ ಕೇಂದ್ರ ಸರ್ಕಾರವು ತಳ್ಳಿಹಾಕುತ್ತಿದೆ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಭಾರತದಲ್ಲಿ ಟೆಸ್ಲಾ ಉದ್ಯಮ ಕಾರ್ಯಾಚರಣೆಗಾಗಿ ಕೇಂದ್ರ ಸರ್ಕಾರವು ಕೆಲವು ಷರತ್ತುಗಳನ್ನು ಒಪ್ಪಿಕೊಂಡು ಆಮದು ಮಾಡಿಕೊಳ್ಳುವ ಕಾರುಗಳ ಮೇಲೆ ತೆರಿಗೆಯನ್ನು ಕಡಿತ ಮಾಡಬೇಕೆಂದು ಒತ್ತಾಯಿಸಿದೆ. ಆದರೆ ಸರ್ಕಾರವು ಟೆಸ್ಲಾ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ಎಲ್ಲಾ ವಿದೇಶಿ ಕಂಪನಿಗಳಿಗೆ ಒಂದೇ ತೆರಿಗೆ ನಿಯಮಗಳು ಅನ್ವಯಿಸುತ್ತವೆ ಎಂದು ಖಚಿತಪಡಿಸಿದೆ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಸರ್ಕಾರವು ತನ್ನ ನೀತಿಗಳ ಪ್ರಕಾರ ಭಾರತದಲ್ಲಿನ ಎಲ್ಲಾ ಕಂಪನಿಗಳಿಗೆ ತೆರಿಗೆ ರಿಯಾಯಿತಿಗಳನ್ನು ನೀಡುತ್ತದ್ದು, ಜೊತೆಗೆ ನಮ್ಮದು ಪ್ರಜಾಪ್ರಭುತ್ವವಾದ್ದರಿಂದ ಯಾವುದೇ ಕಂಪನಿಗೆ ನಿರ್ದಿಷ್ಟ ನೀತಿಯನ್ನು ನಿಗದಿಪಡಿಸುವುದಿಲ್ಲ ಎಂದು ಬೃಹತ್ ಕೈಗಾರಿಕೆಗಳ ಸಚಿವಾಲಯವು ಸ್ಪಷ್ಟಪಡಿಸಿದೆ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಟೆಸ್ಲಾ ಕಂಪನಿಯು ಭಾರತದಲ್ಲಿ ಸ್ಥಳೀಯ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ಮುಂದಾಗಬೇಕು ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದಿರುವ ಕೇಂದ್ರ ಸರ್ಕಾರವು ಟೆಸ್ಲಾ ಭಾರತದಲ್ಲಿ ತನ್ನ ಸ್ಥಾವರವನ್ನು ಸ್ಥಾಪಿಸಿದ್ದಲ್ಲಿ ರೂ. 2.3 ಲಕ್ಷ ಕೋಟಿ ಆದಾಯ ಗಳಿಸಲಿದೆ ಎಂದು ಅಂದಾಜಿಸಲಾಗಿದೆ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಎಲೆಕ್ಟ್ರಿಕ್ ವಾಹನ ಉದ್ಯಮವನ್ನು ಉತ್ತೇಜಿಸಲು ಸರ್ಕಾರವು ಇತ್ತೀಚೆಗೆ 42,500 ಕೋಟಿ ರೂ. ಹೂಡಿಕೆ ಮಾಡಿದೆ ಎಂದು ದೊಡ್ಡ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಅರುಣ್ ಗೋಯಲ್ ತಿಳಿಸಿದ್ದಾರೆ. ಸರ್ಕಾರದ ಉತ್ಪಾದನಾ ಉತ್ತೇಜನ ಯೋಜನೆಗೆ ವಿಶೇಷ ಸ್ಪಂದನೆ ದೊರೆಯುತ್ತಿದ್ದು, ದೊಡ್ಡ ಕೈಗಾರಿಕೆಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಸ್ಥಳೀಯ ಉತ್ಪಾದನೆಯನ್ನು ಹೊಂದಿರದ ಮತ್ತು ಹೂಡಿಕೆ ಮಾಡಲು ಮುಂದೆ ಬರದ ಯಾವುದೇ ಉದ್ಯಮವನ್ನು ಭಾರತ ಪ್ರೋತ್ಸಾಹಿಸುವುದಿಲ್ಲ ಎಂದು ಗೋಯಲ್ ಹೇಳಿದ್ದಾರೆ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡಾ ಟೆಸ್ಲಾದ ಹೂಡಿಕೆ ನೀತಿಗಳನ್ನು ಒಪ್ಪಿಕೊಂಡಿಲ್ಲ. ಏಕೆಂದರೆ ಟೆಸ್ಲಾ ಕಾರುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತದಲ್ಲಿ ತನ್ನ ವ್ಯಾಪಾರವನ್ನು ಸ್ಥಾಪಿಸಲು ಕಂಪನಿ ಬಯಸುತ್ತಿದೆ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಆದರೆ ಇದು ದೇಶದ ಆರ್ಥಿಕತೆಗೆ ಹಾನಿಕಾರಕವಾಗಿದ್ದು, ಟೆಸ್ಲಾ ಕಂಪನಿಯು ತನ್ನ ಚೀನೀ ಫಾಕ್ಟರಿಯಿಂದ ಈ ಕಾರುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದರಿಂದ ಟೆಸ್ಲಾ ಮತ್ತು ಚೀನಾ ಸರ್ಕಾರಕ್ಕೆ ಮಾತ್ರ ಪ್ರಯೋಜನವಾಗಲಿದೆ. ಟೆಸ್ಲಾ ಸಾಧ್ಯವಾದಷ್ಟು ಆಮದು ಮಾಡಿದ ಕಾರುಗಳೊಂದಿಗೆ ವ್ಯಾಪಾರ ಮಾಡಲು ನೋಡುತ್ತಿದೆಯೇ ಹೊರತು ಸ್ಥಳೀಯ ಉದ್ಯಮಕ್ಕೆ ಮುಂದಾಗುತ್ತಿಲ್ಲ ಎಂದಿದ್ದಾರೆ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಟೆಸ್ಲಾ ಬೇಡಿಕೆ ಏನು?

ಟೆಸ್ಲಾ ತನ್ನ ಕಾರುಗಳನ್ನು ಆಮದು ಸುಂಕದಿಂದ ವಿನಾಯಿತಿ ನೀಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ. ಪ್ರಸ್ತುತ ಟೆಸ್ಲಾಗೆ ಭಾರತದಲ್ಲಿ ಕಾರುಗಳನ್ನು ತಯಾರಿಸುವ ಯಾವುದೇ ಯೋಜನೆ ಇಲ್ಲ. ಬದಲಿಗೆ ಕಂಪನಿಯು ತನ್ನ ಕಾರುಗಳನ್ನು ಚೀನಾ ಅಥವಾ ಯುಎಸ್‌ನಿಂದ ಆಮದು ಮಾಡಿಕೊಳ್ಳಲು ನೋಡುತ್ತಿದ್ದು, ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಮೇಲಿನ ಆಮದು ಸುಂಕವನ್ನು ಶೇ 40ಕ್ಕೆ ಇಳಿಸಲು 2021ರ ಜುಲೈನಲ್ಲಿ ಸಾರಿಗೆ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಪತ್ರ ಬರೆದಿತ್ತು.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಪ್ರಸ್ತುತ, ಭಾರತ ಸರ್ಕಾರವು ಎಲೆಕ್ಟ್ರಿಕ್ ಕಾರುಗಳ ಮೇಲೆ ಶೇ 60 ರಿಂದ 100 ರಷ್ಟು ಆಮದು ಸುಂಕವನ್ನು ವಿಧಿಸುತ್ತಿದೆ. ಟೆಸ್ಲಾ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಪ್ರಾರಂಭಿಸಿದರೆ, ಉತ್ಪನ್ನ ಪ್ರಚಾರ ಯೋಜನೆ (ಪಿಎಲ್ಐ) ಅಡಿಯಲ್ಲಿ ಮಾತ್ರ ಪ್ರಯೋಜನಗಳನ್ನು ಒದಗಿಸಲಾಗುವುದು ಎಂದು ಕೈಗಾರಿಕಾ ಸಚಿವಾಲಯ ತಿಳಿಸಿದೆ. ಈ ಮೂಲಕ ಭಾರತದಲ್ಲಿ ಸ್ಥಳೀಯ ತಯಾರಕರಿಂದ ಟೆಸ್ಲಾ 500 ಮಿಲಿಯನ್ ಡಾಲರ್ ಮೌಲ್ಯದ ವಾಹನ ಬಿಡಿಭಾಗಗಳನ್ನು ಖರೀದಿಸಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

10 ಮಿಲಿಯನ್ ಯುನಿಟ್ ಬ್ಯಾಟರಿಗಳನ್ನು ತಯಾರಿಸಿದ ಟೆಸ್ಲಾ

ಈ ನಡುವೆ ಟೆಸ್ಲಾ ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲು 4680 ಮಾದರಿಯ ಬ್ಯಾಟರಿ ಸೆಲ್‌ಗಳ ಒಂದು ಮಿಲಿಯನ್ (ಹತ್ತು ಲಕ್ಷ) ಯುನಿಟ್‌ಗಳ ಉತ್ಪಾದನೆಯನ್ನು ಈ ವರ್ಷದ ಜನವರಿಯಲ್ಲಿ ಪೂರ್ಣಗೊಳಿಸಿದೆ. ಈ ಹೊಸ ಜನರೇಷನ್ ಬ್ಯಾಟರಿಯನ್ನು ಟೆಸ್ಲಾ ಮಾಡೆಲ್ ವೈನಲ್ಲಿ ಬಳಸಲಾಗುವುದು ಎಂದು ಟೆಸ್ಲಾ ಹೇಳಿಕೊಂಡಿದೆ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರುಗಳನ್ನು ಟೆಕ್ಸಾಸ್, ಯುಎಸ್ಎ ನಲ್ಲಿ ತಯಾರಿಸಲಾಗುತ್ತಿದೆ. ಟೆಸ್ಲಾ ತನ್ನ ನ್ಯೂ ಜನರೇಷನ್ 4680 ಮಾದರಿಯ EV ಬ್ಯಾಟರಿ ಪ್ಯಾಕ್ ಅನ್ನು 2020 ರಿಂದ ತಯಾರಿಸುತ್ತಿದೆ. ಆದರೆ ಇದುವರೆಗೆ ಕಂಪನಿಯು ಈ ಬ್ಯಾಟರಿಯ ಉತ್ಪಾದನಾ ದರವನ್ನು ಬಹಿರಂಗಪಡಿಸಿಲ್ಲ.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

4680 ಮಾದರಿಯ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳು ಹೆಚ್ಚಿನ ಶಕ್ತಿ ಸಾಮರ್ಥ್ಯ ಹೊಂದಿರುವ ಜೊತೆಗೆ ಹೆಚ್ಚಿನ ಶಕ್ತಿಯ ಶೇಖರಣೆ ಮಾಡಿಕೊಳ್ಳುವಂತೆ ತಯಾರಿಸಲಾಗಿದೆ. ಈ ಬ್ಯಾಟರಿಗಳು ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತವೆ. ಇವುಗಳನ್ನು ಆರಂಭದಲ್ಲಿ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲಾಯಿತು. ನಂತರ ಈ ಬ್ಯಾಟರಿಗಳನ್ನು ಇತರ EV ಮಾದರಿಗಳಲ್ಲಿಯೂ ಕಂಪನಿ ಬಳಸಿತು.

ಟೆಸ್ಲಾ ವಿಚಾರದಲ್ಲಿ ಪಟ್ಟುಬಿಡದ ಕೇಂದ್ರ ಸರ್ಕಾರ: ಎಲಾನ್ ಮಸ್ಕ್ ಕನಸು ನನಸಾಗುವುದೇ?

ಟೆಕ್ಸಾಸ್‌ನಲ್ಲಿ ತಯಾರಾದ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರುಗಳು ಈ ತ್ರೈಮಾಸಿಕದ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಸೆಪ್ಟೆಂಬರ್ 2020 ರಲ್ಲಿ ಬ್ಯಾಟರಿ ಡೇ ಈವೆಂಟ್ ‌ನಲ್ಲಿ ಟೆಸ್ಲಾ ಬಹಿರಂಗಪಡಿಸಿದಂತೆ, 4680 ಲಿಥಿಯಂ-ಐಯಾನ್ ಬ್ಯಾಟರಿಯು ಸೆಲ್ ಸ್ಟ್ರಕ್ಚರಲ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಬ್ಯಾಟರಿ ಸೆಲ್‌ಗಳು ದೊಡ್ಡ ಗಾತ್ರದಲ್ಲಿದ್ದು, ಪ್ರಸ್ತುತ ಮಾದರಿಯ 2170 ಬ್ಯಾಟರಿ ಸೆಲ್‌ಗಳಿಗಿಂತ ಐದು ಪಟ್ಟು ಹೆಚ್ಚು ಶಕ್ತಿಯನ್ನು ಸಂಗ್ರಹಿಸಬಲ್ಲದು. ಹಾಗಾಗಿ ಮೂಂದಿನ ದಿನಗಳಲ್ಲಿ ಇವುಗಳ ವ್ಯಾಪ್ತಿಯು ಇನ್ನಷ್ಟು ಹೆಚ್ಚಾಗಲಿದೆ ಎಂದು ಟೆಸ್ಲಾ ತಿಳಿಸಿದೆ.

Most Read Articles

Kannada
Read more on ಟೆಸ್ಲಾ tesla
English summary
Tesla will not get special benefit in india says heavy industry ministry details
Story first published: Thursday, February 24, 2022, 23:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X