Just In
- 36 min ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 13 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 14 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 15 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- News
ಏಡಿ ಕಣ್ಣಿಂದ ಕ್ಯಾಮೆರಾ- ಸೆಲ್ಫ್ ಡ್ರೈವಿಂಗ್ ಕಾರಿಗೆ ಭರ್ಜರಿ ಪುಷ್ಟಿ
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Education
Distance Education Courses And Colleges : ದೂರ ಶಿಕ್ಷಣ ಮೂಲಕ ಅಧ್ಯಯನಕ್ಕೆ ಉತ್ತಮ ಕೋರ್ಸ್ ಮತ್ತು ಕಾಲೇಜುಗಳ ವಿವರ
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಹೊಸ ಮಾರುತಿ ಬ್ರೆಝಾ-ನ್ಯೂ ಹ್ಯುಂಡೈ ವೆನ್ಯೂ ಯಾವುದು ಬೆಸ್ಟ್: ವಿನ್ಯಾಸ, ವೈಶಿಷ್ಟ್ಯಗಳ ನಡುವಿನ ವ್ಯತ್ಯಾಸ
ಭಾರತದಲ್ಲಿ ಪ್ರಸ್ತುತ ಟಾಟಾ ಮೋಟಾರ್ಸ್, ಹುಂಡೈ ಮತ್ತು ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಮಿಡ್ ಸೈಜ್ ಎಸ್ಯುವಿ ವಿಭಾಗದಲ್ಲಿ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿರುವ ಕಾಂಪ್ಯಾಕ್ಟ್ SUV ಕಾರುಗಳಲ್ಲಿ ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಟಾಟಾ ನೆಕ್ಸಾನ್ ಹೆಚ್ಚು ಜನಪ್ರಿಯವಾಗಿದ್ದು, ಈ ಮಾದರಿಗಳ ನಡುವೆ ಕಠಿಣ ಸ್ಪರ್ಧೆಯಿದೆ.

ಹುಂಡೈ ಹೊಸ ಅವತಾರದಲ್ಲಿ ವೆನ್ಯೂ ಫೇಸ್ಲಿಫ್ಟ್ ಅನ್ನು ಬಿಡುಗಡೆ ಮಾಡಿದ್ದರೆ, ಹೊಸ ಮಾರುತಿ ಬ್ರೆಝಾವನ್ನು ಜೂನ್ 30 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ನೀವು ಹೊಸ ಕಾಂಪ್ಯಾಕ್ಟ್ SUV ಖರೀದಿಸಲು ಯೋಜಿಸುತ್ತಿದ್ದರೆ, ಹೊಸ ಮಾರುತಿ ಬ್ರೆಝಾ ಮತ್ತು ಹೊಸ ಹುಂಡೈ ವೆನ್ಯೂ ನಡುವೆ ಯಾವ ಕಾರು ನಿಮಗೆ ಉತ್ತಮವಾಗಿರುತ್ತದೆ ಎಂಬುದನ್ನು ಇಲ್ಲಿ ತಿಳಿಯಬಹುದು.

ಹೊಸ ಮಾರುತಿ ಬ್ರೆಝಾ vs ಹೊಸ ಹುಂಡೈ ವೆನ್ಯೂ- ವಿನ್ಯಾಸ
ಹೊಸ ಮಾರುತಿ ಬ್ರೆಝಾ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಹಲವು ನವೀಕರಣಗಳನ್ನು ಪಡೆದುಕೊಂಡಿದೆ. ಹೊರಹೊಮ್ಮಿದ ಚಿತ್ರಗಳ ಪ್ರಕಾರ, ಹೊಸ ಬ್ರೆಜ್ಜಾ ಮೊದಲಿಗಿಂತ ಹೆಚ್ಚು ಸ್ಪೋರ್ಟಿಯರ್ ಆಗಿ ಕಾಣುತ್ತಿದೆ. ಇದು ಹೊಸ LED ಹೆಡ್ಲ್ಯಾಂಪ್ಗಳು, ಹೊಸ ಮುಂಭಾಗದ ಗ್ರಿಲ್, ಹೊಸ LED ಟೈಲ್ಲೈಟ್ಗಳು ಮತ್ತು ಮರುವಿನ್ಯಾಸಗೊಳಿಸಲಾದ LED DRL ಗಳನ್ನು ಪಡೆದುಕೊಂಡಿದೆ. ಹೊಸ ಬ್ರೆಝಾವು ರೂಫ್ ರೈಲ್ಗಳು, ಬೂಟ್ಲಿಡ್ನಲ್ಲಿ 'ಬ್ರೆಝಾ' ಅಕ್ಷರಗಳು ಮತ್ತು ಕಾಂಟ್ರಾಸ್ಟ್ ಸ್ಕಿಡ್ ಪ್ಲೇಟ್ಗಳನ್ನು ಸಹ ಪಡೆದುಕೊಂಡು ಸ್ಟೈಲಿಷ್ ಆಗಿ ಕಾಣುತ್ತಿದೆ.

ಹುಂಡೈನ ಹೊಸ ವೆನ್ಯೂ ಬಗ್ಗೆ ಮಾತನಾಡುವುದಾದರೆ, ಮುಂಭಾಗದಲ್ಲಿ ಹೊಸ ವಿನ್ಯಾಸವನ್ನು ನೀಡಲಾಗಿದೆ. ಇದು ಹೊಸ ಮುಂಭಾಗದ ಗ್ರಿಲ್, LED DRL ಗಳು ಮತ್ತು ಹೊಸ ಬಂಪರ್ ಅನ್ನು ಪಡೆದುಕೊಂಡಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಕನೆಕ್ಟಿಂಗ್ ಟೈಲ್ ಲೈಟ್ ಅನ್ನು ಹೊಂದಿದ್ದು ಇದು ಕಿಯಾ ಸೋನೆಟ್ನಿಂದ ಪ್ರೇರಿತವಾಗಿದೆ. ಇದರ ಬೂಟ್ಲೀಡ್ನಲ್ಲಿ ವೆನ್ಯೂ ಬ್ಯಾಡ್ಜಿಂಗ್ ಅನ್ನು ಸಹ ಪಡೆದುಕೊಂಡಿದ್ದು, ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ. ಒಟ್ಟಾರೆಯಾಗಿ, ಎರಡೂ ಕಾರುಗಳನ್ನು ಸಂಪೂರ್ಣವಾಗಿ ತಾಜಾ ಬಾಹ್ಯ ವಿನ್ಯಾಸದೊಂದಿಗೆ ತರಲಾಗುತ್ತಿದೆ.

ಇಂಟೀರಿಯರ್ ವೈಶಿಷ್ಟ್ಯಗಳು
ಹೊಸ ಮಾರುತಿ ಸುಜುಕಿ ಬ್ರೆಝಾವನ್ನು ಹಳೆಯ ಮಾದರಿಗೆ ಹೋಲಿಸಿದರೆ ಹಲವು ಹೊಸ ವೈಶಿಷ್ಟ್ಯಗಳೊಂದಿಗೆ ತರಲಾಗಿದೆ. ಇದು ಹೊಸ ಮಾರುತಿ ಸುಜುಕಿ ಬಲೆನೊದಂತೆಯೇ ಸಂಪರ್ಕಿತ ಕಾರ್ ತಂತ್ರಜ್ಞಾನ ಮತ್ತು ಸ್ಮಾರ್ಟ್ ವಾಚ್ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿದೆ.

ಇದಲ್ಲದೇ, ಎಲೆಕ್ಟ್ರಿಕ್ ಸನ್ರೂಫ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಸೆಗ್ಮೆಂಟ್ ವೈಶಿಷ್ಟ್ಯದಲ್ಲಿ ಮೊದಲನೆಯದಾಗಿ ನೀಡಲಾಗಿದೆ. ಹೊಸ ಮಾರುತಿ ಬ್ರೆಜ್ಜಾದ ಎಲ್ಲಾ ವೈಶಿಷ್ಟ್ಯಗಳನ್ನು ಜೂನ್ 30 ರಂದು ಬಿಡುಗಡೆ ಮಾಡುವ ಸಮಯದಲ್ಲಿ ಕಂಪನಿ ಬಹಿರಂಗಪಡಿಸಲಿದೆ.

ಹೊಸ ಹುಂಡೈ ವೆನ್ಯೂ ಬಗ್ಗೆ ಮಾತನಾಡುವುದಾದರೆ, ಇದು ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಟೋನ್ ಇಂಟೀರಿಯರ್, ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಎರಡು-ಹಂತದ ರಿಕ್ಲೈನಿಂಗ್ ಹಿಂಬದಿಯ ಸೀಟ್, ಸಂಪರ್ಕಿತ ಕಾರ್ ಟೆಕ್ನೊಂದಿಗೆ 8-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿದೆ.

ಇದಲ್ಲದೆ ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆನ್ಸ್, ವೈರ್ಲೆಸ್ ಚಾರ್ಜಿಂಗ್, ಕೂಲ್ಡ್ ಗ್ಲೋವ್ಬಾಕ್ಸ್, ಹಿಂಭಾಗದ ಎಸಿ ವೆಂಟ್ಗಳು, ಎಲೆಕ್ಟ್ರಿಕ್ ಸನ್ರೂಫ್ನಂತಹ ವೈಶಿಷ್ಟ್ಯಗಳನ್ನು ಸಹ ಪಡೆದುಕೊಂಡಿದೆ. ಹೊಸ ವೆನ್ಯೂ ಈಗ ದೊಡ್ಡ SUV ನಂತಹ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.

ಎಂಜಿನ್
ಹೊಸ ಮಾರುತಿ ಸುಜುಕಿ ಬ್ರೆಝಾದಲ್ಲಿ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದೆ. ಈ ಎಂಜಿನ್ ಗರಿಷ್ಠ 99 bhp ಪವರ್ ಮತ್ತು 136 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬ್ರೆಝಾ ಈಗ 5-ಸ್ಪೀಡ್ ಮ್ಯಾನುವಲ್ ಜೊತೆಗೆ ಹೊಸ 6-ಸ್ಪೀಡ್ ಸ್ವಯಂಚಾಲಿತ ಗೇರ್ಬಾಕ್ಸ್ ಅನ್ನು ಪಡೆದುಕೊಂಡಿದೆ. ಹೊಸ ಬ್ರೆಝಾ ಚಾಲನೆಯನ್ನು ಅತ್ಯಾಕರ್ಷಕವಾಗಿಸಲು, ಈಗ ಕಂಪನಿಯು ಅದರಲ್ಲಿ ಪ್ಯಾಡಲ್ ಶಿಫ್ಟರ್ ಅನ್ನು ಸಹ ನೀಡುತ್ತಿದೆ.

ಮತ್ತೊಂದೆಡೆ, ಹುಂಡೈ ವೆನ್ಯೂ ಫೇಸ್ಲಿಫ್ಟ್ ಮೂರು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ, ಇದರಲ್ಲಿ 1.2-ಲೀಟರ್ ನ್ಯಾಚುರಲ್-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಘಟಕ ಸೇರಿವೆ. ಈ ಎಂಜಿನ್ಗಳನ್ನು ಮ್ಯಾನುಯಲ್, IMT ಮತ್ತು DCT ಗೇರ್ಬಾಕ್ಸ್ ಆಯ್ಕೆಗಳಲ್ಲಿ ನೀಡಲಾಗುತ್ತದೆ, ಇದು ಗ್ರಾಹಕರಿಗೆ ಮಾದರಿಯೊಳಗೆ ವ್ಯಾಪಕ ಶ್ರೇಣಿಯ ಆಯ್ಕೆಯನ್ನು ನೀಡುತ್ತದೆ.

ಸುರಕ್ಷತಾ ವೈಶಿಷ್ಟ್ಯಗಳು
ಸರ್ಕಾರ ಇತ್ತೀಚೆಗೆ ಆರು ಏರ್ಬ್ಯಾಗ್ಗಳನ್ನು ಪರಿಚಯಿಸಲು ಆದೇಶಿಸಿದ ನಂತರ ಕಾರು ಉದ್ಯಮವು ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸುತ್ತಿದೆ. ಈ ಪ್ರಕಾರ, ಹೊಸ ವೆನ್ಯೂ ಮತ್ತು ಬ್ರೆಝಾ ಆರು ಏರ್ಬ್ಯಾಗ್ಗಳನ್ನು, ABS ಮತ್ತು EBD ಅನ್ನು ಪ್ರಮಾಣಿತವಾಗಿ ಪಡೆಯುತ್ತವೆ.

ಸ್ಟ್ಯಾಂಡರ್ಡ್ ESC, ಓವರ್ಸ್ಪೀಡ್ ವಾರ್ನಿಂಗ್ ಸಿಸ್ಟಮ್, ರಿವರ್ಸ್ ಕ್ಯಾಮೆರಾ ಮತ್ತು ಸೆನ್ಸಾರ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊಸ ಬ್ರೆಝಾದಲ್ಲಿ ನೀಡಲಾಗಿದೆ. ಮತ್ತೊಂದೆಡೆ, ವೆನ್ಯೂ ಫೇಸ್ಲಿಫ್ಟ್ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಕಾರ್ನರ್ ಲ್ಯಾಂಪ್ಗಳು, ವಾಹನ ಸ್ಥಿರತೆ ನಿರ್ವಹಣೆ, ಮಲ್ಟಿಪಲ್ ಡ್ರೈವ್ ಮೋಡ್ಗಳು, ಸ್ವಯಂಚಾಲಿತ ಹೆಡ್ಲ್ಯಾಂಪ್ಗಳು, ಹಿಲ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಪಡೆಯುತ್ತದೆ. ಹೊಸ ಮಾರುತಿ ಬ್ರೆಝಾ ಜೂನ್ 30 ರಂದು ಯಾವೆಲ್ಲ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಭಾರತೀಯ ಮಾರುಕಟ್ಟೆಯಲ್ಲಿರುವ ಕಾಂಪ್ಯಾಕ್ಟ್ SUV ಕಾರುಗಳಲ್ಲಿ, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಟಾಟಾ ನೆಕ್ಸಾನ್ ನಡುವೆ ಕಠಿಣ ಸ್ಪರ್ಧೆಯಿದೆ. ಈ ಮಾದರಿಗಳು ಹೆಚ್ಚು ಜನಪ್ರಿಯವಾಗಿದ್ದು, ಕಾಲಕ್ಕೆ ತಕ್ಕಂತೆ ವಾಹನ ತಯಾರಕರು ತಮ್ಮ ಮಾದರಿಗಳ ವಿನ್ಯಾಸ, ವೈಶಿಷ್ಟ್ಯಗಳನ್ನು ಅಭಿವೃದ್ಧಿಗೊಳಿಸಿತ್ತಿದ್ದಾರೆ. ಇದೀಗ ಹೊಸ ಮಾರುತಿ ಬ್ರೆಝಾ ಬಿಡುಗಡೆ ನಂತರ ಯಾವ ಮಟ್ಟಿಗೆ ಯಶಸ್ಸು ಕಾಣಲಿದೆ ಕಾದುನೋಡಬೇಕಿದೆ.