ಬಹುನಿರೀಕ್ಷಿತ 'MG' ಆಸ್ಟರ್, ZS EV ಫೇಸ್‌ಲಿಫ್ಟ್‌ ಅನಾವರಣ

ಬ್ರಿಟಿಷ್ ಕಾರು ತಯಾರಿಕಾ ಕಂಪನಿ ಮೋರಿಸ್ ಗ್ಯಾರೇಜಸ್ (MG) ಜಾಗತಿಕ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ 'ಆಸ್ಟರ್' ಮತ್ತು 'ZS EV' ಎಸ್‌ಯುವಿಗಳ ನವೀಕರಿಸಿದ ಆವೃತ್ತಿಗಳನ್ನು ಅನಾವರಣ ಮಾಡಿದೆ. ವಿಶೇಷವಾಗಿ ಮುಂಭಾಗದಲ್ಲಿ ಪ್ರಮುಖ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಎಸ್‌ಯುವಿಗಳಲ್ಲಿ ಇನ್ನೂ ಯಾವೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ತಿಳಿಯೋಣ.

2023ರಲ್ಲಿ ಮಾರುಕಟ್ಟೆಗೆ ಬರಲಿರುವ MG ಆಸ್ಟರ್ ಮತ್ತು ZS EV ನೂತನವಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ಡೈಮಂಡ್ ಪ್ಯಾಟರ್ನ್ ಮತ್ತು ದೊಡ್ಡ ಸೈಡ್ ಇನ್‌ಟೇಕ್‌ಗಳನ್ನು ಒಳಗೊಂಡ ಬಂಪರ್ ಅನ್ನು ಹೊಂದಿದೆ. ಮೆಟಾಲಿಕ್ ಇನ್ಸರ್ಟ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು ಮೊದಲಿಗಿಂತಲೂ ಅತ್ಯುತ್ತಮವಾಗಿ ಕಾಣುತ್ತಿದ್ದು, ಕಾರುಗಳಿಗೆ ಆಕರ್ಷಕ ಲುಕ್ ನೀಡಿದೆ. ಅಲಾಯ್ ವೀಲ್ ಹಾಗೆಯೇ ಇದ್ದು, ಸೈಡ್ ಪ್ರೊಫೈಲ್ ಅನ್ನು ಹೆಚ್ಚಾಗಿ ಬದಲಾವಣೆ ಮಾಡಿಲ್ಲ. ಎಸ್‌ಯುವಿಗಳ ಹಿಂಭಾಗದಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಲಾಗಿದೆ.

ಈ ಎಸ್‌ಯುವಿಗಳ ಒಳಭಾಗವನ್ನು ಸಹ ಅತ್ಯುತ್ತಮವಾಗಿ ವಿನ್ಯಾಸ ಮಾಡಲಾಗಿದೆ. ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಜೊತೆ ಬರುವ ಸಾಧ್ಯತೆಯಿದೆ. ಭಾರತದಲ್ಲಿ, MG ZS EV ಅನ್ನು ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ರೂಪಾಂತರಗಳಲ್ಲಿ ಖರೀದಿಗೆ ಸಿಗಲಿದೆ. ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್, ಲೆದರ್ ಸೀಟ್‌ಗಳು, 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಪವರ್ ಫೋಲ್ಡಿಂಗ್ ಮತ್ತು ಹೀಟೆಡ್ ORVMಗಳು, ರೈನ್ ಸೆನ್ಸಿಂಗ್ ವೈಪರ್‌ಗಳು, PM 2.5 AC ಫಿಲ್ಟರ್, i-Smart EV 2.0 ಕನೆಕ್ಟೆಡ್ ಕಾರ್ ವೈಶಿಷ್ಟ್ಯಗಳು, 6-ಸ್ಪೀಕರ್ ಆಡಿಯೋ ಸಿಸ್ಟಮ್ ವೈಶಿಷ್ಟ್ಯಗಳನ್ನು ಹೊಂದಿದೆ.

ಥೈಲ್ಯಾಂಡ್‌ನಲ್ಲಿ, ಆಸ್ಟರ್ ಮತ್ತು ZS EV (VS EV) ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. 2023ರಲ್ಲಿ ಬಿಡುಗಡೆಯಾಗಲಿರುವ ಆಸ್ಟರ್ ಎರಡು ಎಂಜಿನ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. 1.5 ಲೀಟರ್, 4-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 110bhp ಪವರ್ ಹಾಗೂ 144Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.3 ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 140bhp ಪವರ್ ಹಾಗೂ 220Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

MG ZS EV ಫೇಸ್‌ಲಿಫ್ಟ್ 50.3kWh ಬ್ಯಾಟರಿಯನ್ನು ಹೊಂದಿದ್ದು, 176bhp ಪವರ್ ಮತ್ತು 280Nm ಪೀಕ್ ಟಾರ್ಕ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ನಿಂದ ಚಲಿಸುತ್ತದೆ. ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿದರೆ ಗರಿಷ್ಠ 461km ದೂರದವರೆಗೆ ಪ್ರಯಾಣಿಸಬಹುದು. ಪ್ರಸ್ತುತ, ಆಸ್ಟರ್ ಎಸ್‌ಯುವಿ ಬೆಲೆ 10.32 ಲಕ್ಷ ರೂ.ಗಳಿಂದ 18.23 ಲಕ್ಷ ರೂ.ವರೆಗೆ ಇದೆ. ZS EV ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ರೂಪಾಂತರಗಳ ಬೆಲೆ ಕ್ರಮವಾಗಿ 22.58 ಲಕ್ಷ ರೂ. ಮತ್ತು 26.50 ಲಕ್ಷ ರೂ. (ಎಕ್ಸ್ ಶೋರೂಂ ಪ್ರಕಾರ)

ಸದ್ಯಕ್ಕೆ, ಹೊಸ 2023 MG ಆಸ್ಟರ್ ಮತ್ತು ZS EV ಫೇಸ್‌ಲಿಫ್ಟ್‌ಗಳ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. 2023ರ ಆರಂಭದಲ್ಲಿ ಪ್ರವೇಶಿಸಬಹುದು ಎಂದು ಊಹಿಸಲಾಗಿದೆ. ಪ್ರತಿಯೊಂದು ಕಾರು ತಯಾರಿಕಾ ಕಂಪನಿಯು ಎಲೆಕ್ಟ್ರಿಕ್ ವಾಹನ ತಯಾರಿಕೆಯತ್ತ ಆಸಕ್ತಿ ತೋರಿವೆ. MG ZS EV, ಪ್ರಮುಖವಾಗಿ Nexon EV ಮತ್ತು Kona ಎಲೆಕ್ಟ್ರಿಕ್‌ ಕಾರುಗಳಿಗೆ ತೀವ್ರ ಪೈಪೋಟಿ ನೀಡಬಹುದು ಎಂದು ಅಂದಾಜು ಮಾಡಲಾಗಿದೆ.

ಇಷ್ಟೇಅಲ್ಲದೆ, ವಿದೇಶಿ ಕಂಪನಿಗಳಿಗೆ ದೇಶಿಯ ವಾಹನ ತಯಾರಿಕಾ ಕಂಪನಿಗಳು ಸಹ ತೀವ್ರ ಪೈಪೋಟಿಯನ್ನು ನೀಡುತ್ತಿವೆ. 'ಮಹೀಂದ್ರಾ' ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿರುವ XUV400' ಎಲೆಕ್ಟ್ರಿಕ್ ಕಾರಿನ ಟೀಸರ್ ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಈ ಕಾರು, 456 ಕಿ.ಮೀ ಮೈಲೇಜ್ ನೀಡಲಿದೆಯಂತೆ. ಇದರ ಬೆಲೆ 18 ಲಕ್ಷದಿಂದ 23 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕಾರಿನ ಟೆಸ್ಟ್ ಡ್ರೈವ್‌ಗಳು ಇದೇ ತಿಂಗಳು ಮುಂಬೈ, ಹೈದರಾಬಾದ್, ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಪುಣೆ, ಅಹಮದಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
The much awaited mg aster zs ev facelift unveiled
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X