ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ಬರೆದ ವಿಜೇತೆ ಅವನಿ ಲೆಖರಾ ಅವರಿಗೆ ಮಹೀಂದ್ರಾ & ಮಹೀಂದ್ರಾ ವಿಶೇಷವಾಗಿ ಕಸ್ಟಮೈಸ್ ಮಾಡಿದ ಎಕ್ಸ್‌ಯುವಿ700 ಗೋಲ್ಡ್ ಎಡಿಷನ್ ಎಸ್‍ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ವಿಶೇಷ ಎಕ್ಸ್‌ಯುವಿ700 ಕಸ್ಟಮ್-ನಿರ್ಮಿತ ಫ್ರಂಟ್ ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್‌ಗಳೊಂದಿಗೆ ವಿಕಲಾಂಗರಿಗೆ ಸುಲಭವಾಗಿ ಕಾರಿಗೆ ಪ್ರವೇಶಿಸಬಹುದು. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅವನಿ ಲೆಖಾರಾ ಅವರು ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ಸ್ಟ್ಯಾಂಡಿಂಗ್‌ ಎಸ್‌ಎಚ್‌1 ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಆ ಮೂಲಕ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ದಾಖಲೆಗೆ ಅವನಿ ಭಾಜನರಾಗಿದ್ದಾರೆ. ಚಿನ್ನದ ಪದಕದ ಜೊತೆಗೆ ಭಾರತದ ಪ್ಯಾರಾ ಶೂಟರ್‌ 249.6 ಪಾಯಿಂಟ್ಸ್‌ಗಳೊಂದಿಗೆ ಪ್ಯಾರಾಲಿಂಪಿಕ್ಸ್‌ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

2021ರ ಆಗಸ್ಟ್ ತಿಂಗಳಿನಲ್ಲಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಮಹಿಳೆಯರ 10 ಮೀಟರ್ಸ್ ಎಆರ್ ಸ್ಟ್ಯಾಂಡಿಂಗ್ ಎಸ್‌ಎಚ್1 ಫೈನಲ್‌ನಲ್ಲಿ ಚಿನ್ನ ಗೆದ್ದ ಅವನಿ ಲೆಖಾರಾ ಅವರಿಗೆ ವಿಶೇಷ ಎಸ್‌ಯುವಿಯನ್ನು ನೀಡುವುದಾಗಿ ಘೋಷಿಸಿದ್ದರು. ಅದರಂತೆ ಅವರಿಗೆ ವಿಶೇಷವಾಗಿ ಕಸ್ಟಮೈಸ್ ಮಾಡಿದ ಎಕ್ಸ್‌ಯುವಿ700 ಗೋಲ್ಡ್ ಎಡಿಷನ್ ಎಸ್‍ಯುವಿಯನ್ನು ಹಸ್ತಾಂತರಿಸಿದ್ದಾರೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಕಂಪನಿಯು ಈ ಕಾರಿನಲ್ಲಿ ವಿಶೇಷ ಆಸನವನ್ನು ಒದಗಿಸಿದೆ. ಈ ವಿಶೇಷ ಆಸನವು ವಿಶೇಷ ಚೇತನರಿಗೆ ಸಹಕಾರಿಯಾಗಲಿದೆ. ಈ ಆಸನದಲ್ಲಿ ಕುಳಿತ ನಂತರ ಅವರು ತಮ್ಮ ಆಸನವನ್ನು ನಿಯಂತ್ರಿಸಬಹುದು. ಕಾರಿನಲ್ಲಿ ಇಳಿಯುವುದನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡಬಹುದು ಎಂಬುದು ಗಮನಾರ್ಹ ವಿಷಯವಾಗಿದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಅವನಿ ಲೆಖಾರಾ ಅವರಿಗೆ ನೀಡಿದ ಎಕ್ಸ್‌ಯುವಿ700 ಗೋಲ್ಡ್ ಎಡಿಷನ್ ಎಸ್‍ಯುವಿಯಲ್ಲಿ ವಿಶೇಷ ಮುಂಭಾಗದ ಆಸನಗಳನ್ನು ಹೊಂದಿದ್ದು ಅದು ಎರಡು ರೀತಿಯ ಫಂಕ್ಷನ್ ಗಳನ್ನು ಹೊಂದಿವೆ. ಇದು ಫಾರ್ವರ್ಡ್ ಮತ್ತು ರಿಟರ್ನ್ ಆಗಿದೆ. ಫಾರ್ವರ್ಡ್ ಫಂಕ್ಷನ್ ಸೀಟನ್ನು ವಾಹನದಿಂದ ಹೊರಕ್ಕೆ ಬರುವಂತೆ ಮಾಡುತ್ತದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ರಿಟರ್ನ್ ಫಂಕ್ಷನ್ ಸೀಟನ್ನು ಹಿಂದಕ್ಕೆ ಚಲಿಸುತ್ತದೆ. ಈ ಕಾರ್ಯವು ಅಂಗವೈಕಲ್ಯ ಹೊಂದಿರುವವರು ಎದುರಿಸುವ ನಿರ್ಣಾಯಕ ಸವಾಲನ್ನು ಪರಿಹರಿಸುತ್ತದೆ ಏಕೆಂದರೆ ಇದು ಪ್ರವೇಶ ಮತ್ತು ಹೊರಹೋಗುವ ಎತ್ತರವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ವ್ಹೀಲ್ ಚೇರ್ ನಿಂದ ಕಾರಿನ ವಿಶೇಷ ಆಸನಕ್ಕೆ ಸುಲಭವಾಗಿ ಪ್ರವೇಶಿಸಬಹುದು.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಸುಮಿತ್ ಆಂಟಿಲ್ ಅವರಿಗೆ ನೀಡಲಾದ ಎಕ್ಸ್‌ಯುವಿ700 ಗೋಲ್ಡ್ ಎಡಿಷನ್ ಗಳಂತೆಯೇ ಇದನ್ನು ಸಹ ಮಹೀಂದ್ರಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಸ್ ವಿನ್ಯಾಸಗೊಳಿಸಿದ್ದಾರೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಮಿಡ್‌ನೈಟ್ ಬ್ಲ್ಯಾಕ್ ಶೇಡ್‌ನಲ್ಲಿ ಬರುವ ಈ ಎಸ್‍ಯುವಿ ಒಳಗೆ ಮತ್ತು ಹೊರಗೆ ವಿಶೇಷ ಚಿನ್ನದ ಅಸ್ಸೆಂಟ್ ಗಳನ್ನು ಹೊಂದಿದೆ ಮತ್ತು ಇದು ಉತ್ತಮ ಕಾರ್ಯಕ್ಷಮತೆಯ ದಾಖಲೆಯನ್ನು ಹೊಂದಿದೆ, ಇದನ್ನು ಫೆಂಡರ್ ಮತ್ತು ಟೈಲ್‌ಗೇಟ್‌ನಲ್ಲಿ ಚಿನ್ನದ ಬ್ಯಾಡ್ಜ್ ರೂಪದಲ್ಲಿ ಕಾಣಬಹುದು ಮತ್ತು ಎಲ್ಲಾ ಆರರಲ್ಲಿ ಗೋಲ್ಡನ್ ಥ್ರೆಡ್ ಕಸೂತಿಯನ್ನು ಕಾಣಬಹುದು.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಹೆಡ್‌ರೆಸ್ಟ್‌ಗಳು ಮತ್ತು ಮುಂಭಾಗದ ಡ್ಯಾಶ್‌ಬೋರ್ಡ್. ವಿಶೇಷ ಎಕ್ಸ್‌ಯುವಿ700 ಮುಂಭಾಗದ ಗ್ರಿಲ್‌ನಲ್ಲಿ ಚಿನ್ನದ ಲೇಪಿತ ಲಂಬ ಸ್ಲ್ಯಾಟ್‌ಗಳು, ಚಿನ್ನದ ಲೇಪಿತ ಮಹೀಂದ್ರಾ ಲೋಗೋ ಮತ್ತು ಸೀಟ್‌ಗಳ ಮೇಲೆ ಚಿನ್ನದ ಅಸ್ಸೆಂಟ್ ಮತ್ತು ಐಪಿ ಪ್ಯಾನೆಲ್‌ಗಳನ್ನು ಅಸ್ಸೆಂಟ್ ಗಳನ್ನು ಹೊಂದಿದೆ,

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್‍ಯುವಿಯಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದೆ. ಈ ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಇದರಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ 198 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, 2.2 ಲೀಟರ್ ಡೀಸೆಲ್ ಎಂಜಿನ್ 183 ಬಿಹೆಚ್‌ಪಿ ಪವರ್ ಹಾಗೂ 420 ಎನ್ಎಂ ಟಾರ್ಕ್ (6 ಸ್ಪೀಡ್ ಎಂಟಿ),450 ಎನ್ಎಂ ಟಾರ್ಕ್ (6 ಸ್ಪೀಡ್ ಎಟಿ) ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಹೊಸ ಕಾರಿನಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ. ಈ ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಈ ಎಸ್‍ಯುವಿ ಇಂಟಿರಿಯರ್ ನಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅವನಿ ಲೆಖಾರಾಗೆ ಕಸ್ಟಮೈಸ್ XUV700 ಕಾರು ನೀಡಿದ Mahindra

ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಪ್ರಮುಖ ಸುರಕ್ಷಾ ಫೀಚರ್ಸ್ ಗಳನ್ನು ಒಳಗೊಂಡಿದೆ. ಅವುಗಳು 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಆಗಿದೆ.

Most Read Articles

Kannada
English summary
The special mahindra xuv700 gold edition presented to paralympic medallist avani lekhara details
Story first published: Thursday, January 20, 2022, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X