Just In
- 46 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 18 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
Breaking: ಯುಪಿ ಉಪಚುನಾವಣೆ: ರಾಂಪುರದಲ್ಲಿ ಎಸ್ಪಿ ಅಭ್ಯರ್ಥಿ, ಅಜಂಗಢದಲ್ಲಿ ಬಿಜೆಪಿ ಮುನ್ನಡೆ
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಥರ್ಡ್ ಪಾರ್ಟಿ ಇನ್ಸುರೆನ್ಸ್: ಜೂನ್ 1ರಿಂದ ವಾಹನ ಮಾಲೀಕತ್ವ ಮತ್ತಷ್ಟು ದುಬಾರಿ!
ಕೋವಿಡ್‌ನಿಂದಾಗಿ ಇನ್ಸುರೆನ್ಸ್ ದರ ಹೆಚ್ಚಳ ಪ್ರಸ್ತಾಪವನ್ನು ಕೈಬಿಟ್ಟಿದ್ದ ಕೇಂದ್ರ ಸರ್ಕಾರವು ಇದೀಗ ಹೆಚ್ಚಳಕ್ಕೆ ಮುಂದಾಗಿದ್ದು, ಜೂನ್ 1ರಿಂದ ಹೊಸ ದರ ಅನ್ವಯವಾಗಲಿದೆ.

ಕಳೆದ ಎರಡು ವರ್ಷಗಳಿಂದ ಇನ್ಸುರೆನ್ಸ್ ರೆಗ್ಯೂಲೆಟರಿ ಆ್ಯಂಡ್ ಡೆವೆಲಪ್ಮೆಂಟ್ ಅಥಾರಟಿ ಆಫ್ ಇಂಡಿಯಾ(IRDAI) ಸಂಸ್ಥೆಯು ಪ್ರಸ್ತಾಪಿಸುತ್ತಿರುವ ವಾಹನ ವಿಮಾ ಹೆಚ್ಚಳ ಪ್ರಸ್ತಾಪವನ್ನು ಇದೀಗ ಪರಿಷ್ಕರಣೆ ಮಾಡಿರುವ ಕೇಂದ್ರ ಸರ್ಕಾರವು ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ.

ಮೂರನೇ ವ್ಯಕ್ತಿಯ ವಾಹನ ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ಕಾರುಗಳು, ಬೈಕ್‌ಗಳು ಮತ್ತು ವಾಣಿಜ್ಯ ವಾಹನಗಳಿಗೆ ಹೊಸ ಪ್ರೀಮಿಯಂ ದರಗಳನ್ನು ತಿಳಿಸಲಾಗಿದೆ.

ಹೊಸ ಅಧಿಸೂಚನೆಯ ಪ್ರಕಾರ ಜೂನ್ 1, 2022 ರಿಂದ ಜಾರಿಗೆ ಬರುವಂತೆ 150 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಮೇಲೆ ಮೂರನೇ ವ್ಯಕ್ತಿಯ ವಿಮಾ ಪ್ರೀಮಿಯಂ ದರವು ಶೇ. 15 ರಷ್ಟು ಹೆಚ್ಚಿಸಲಾಗಿದ್ದು, 150 ಸಿಸಿ ಒಳಗಿನ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

150 ಸಿಸಿಯಿಂದ 350 ಸಿಸಿ ಒಳಗಿನ ದ್ವಿಚಕ್ರ ವಾಹನಗಳಿಗೆ ಹೆಚ್ಚಳವಾದ ಪ್ರೀಮಿಯಂ ದರ ಪಟ್ಟಿಯಲ್ಲಿ ರೂ. 1,366 ವಿಧಿಸಲಾಗುತ್ತಿದ್ದು, 350 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ರೂ. 2,804 ವಿಧಿಸಲು ನಿರ್ಧರಿಸಿದೆ.

ಅದೇ ರೀತಿ ಕಾರುಗಳ ವಿಭಾಗದಲ್ಲಿ 1000 ಸಿಸಿಯಿಂದ 1500 ಸಿಸಿ ಕಾರುಗಳು ಅಥವಾ ಎಸ್‌ಯುವಿಗಳಂತಹ ಖಾಸಗಿ ನಾಲ್ಕು ಚಕ್ರದ ವಾಹನಗಳ ವಿಮಾ ಮೊತ್ತವನ್ನು ಶೇಕಡಾ 6 ರಷ್ಟು ಹೆಚ್ಚಿಸಲಾಗುತ್ತಿದ್ದು, ಈ ಮೊದಲಿನ ರೂ. 3,221 ಪ್ರೀಮಿಯಂ ಮೊತ್ತವು ರೂ. 3,416 ಕ್ಕೆ ಏರಿಕೆಯಾಗಲಿದೆ.

ಅದೇ ಸಮಯದಲ್ಲಿ ವಿಮೆ ದರ ಪರಿಷ್ಕರಣಾ ಪಟ್ಟಿಯಲ್ಲಿ 1500 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಖಾಸಗಿ ಕಾರುಗಳ ಮೇಲಿನ ಪ್ರೀಮಿಯಂನಲ್ಲಿ ಅಲ್ಪ ಪ್ರಮಾಣದ ಕಡಿತವನ್ನು ಮಾಡಲಾಗಿದ್ದು, 1,500 ಸಿಸಿ ಮೇಲ್ಪಟ್ಟ ಕಾರುಗಳುಗಳಿದ್ದ ಪ್ರೀಮಿಯಂ ದರವು ರೂ. 7,890 ರಿಂದ ರೂ. 7,897ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಮುಂದಿನ ತಿಂಗಳಿನಿಂದ ಖರೀದಿಸುವ ಹೊಸ ಕಾರುಗಳ ಮೇಲಿನ ಮೂರನೇ ವ್ಯಕ್ತಿಯ ವಿಮಾ ಪ್ರೀಮಿಯಂ ದರವು ಶೇ. 23 ರಷ್ಟು ಹೆಚ್ಚು ದುಬಾರಿಯಾಗಲಿದ್ದು, 3 ವರ್ಷಗಳವರೆಗೆ ವಿಮೆಯನ್ನು ತೆಗೆದುಕೊಳ್ಳುವುದರಿಂದ ಸಾಕಷ್ಟು ಹೊರೆಯಾಗಲಿದೆ.

ಅದೇ ರೀತಿ ಮುಂದಿನ ತಿಂಗಳಿನಿಂದ ಖರೀದಿಸುವ ಹೊಸ ದ್ವಿಚಕ್ರ ವಾಹನಗಳಿಗಾಗಿ ಖರೀದಿಸಲಾಗುವ ಮೂರನೇ ವ್ಯಕ್ತಿಯ ವಿಮಾ ಪ್ರೀಮಿಯಂ ದರಗಳಲ್ಲಿ ಶೇ.17ರಷ್ಟು ದುಬಾರಿಯಾಗಲಿದ್ದು, ಮೂರನೇ ವ್ಯಕ್ತಿಯ ವಿಮಾ ಪ್ರೀಮಿಯಂ ಹೆಚ್ಚಳವು ವಾಹನದ ಅಂತಿಮ ಮೌಲ್ಯವನ್ನು ಹೆಚ್ಚಿಸುತ್ತದೆ.

ಹೈಬ್ರಿಡ್ ಕಾರುಗಳಿಗೆ ವಿನಾಯ್ತಿ
ಹೊಸ ವಾಹನ ವಿಮೆಯಲ್ಲಿ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ರಿಯಾಯಿತಿ ಸಿಗಲಿದ್ದು, ಮುಂದಿನ ತಿಂಗಳು ಖರೀದಿಸುವ ಹೊಸ ಹೈಬ್ರಿಡ್ ಎಲೆಕ್ಟ್ರಿಕ್ ಕಾರುಗಳಿಗೂ ಗ್ರಾಹಕರು ವಿಮಾ ಪ್ರೀಮಿಯಂನಿಂದ ಸ್ವಲ್ಪ ವಿನಾಯ್ತಿ ಪಡೆಯಬಹುದು.

ಹೊಸ ದರಗಳ ಪ್ರಕಾರ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಪ್ರೀಮಿಯಂನಲ್ಲಿ ಶೇಕಡಾ 7.5 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದ್ದು, 30kW ವರೆಗಿನ ಬ್ಯಾಟರಿ ಸಾಮರ್ಥ್ಯದ ಖಾಸಗಿ ಎಲೆಕ್ಟ್ರಿಕ್ ಕಾರುಗಳು ರೂ. 1,780 ಪ್ರೀಮಿಯಂ ನಿಗದಿಪಡಿಸಲಾಗುತ್ತಿದ್ದರೆ ಅದೇ ಸಮಯದಲ್ಲಿ 30kW ನಿಂದ 60kW ಬ್ಯಾಟರಿ ಸಾಮರ್ಥ್ಯದ ಖಾಸಗಿ ಎಲೆಕ್ಟ್ರಿಕ್ ಕಾರುಗಳಿಗೆ 2,904 ರೂ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ವಾಣಿಜ್ಯ ವಾಹನಗಳಿಗೂ ಕೂಡಾ ಹೊಸ ವಿಮಾ ದರದಲ್ಲಿ ಪ್ರೀಮಿಯಂ ಮೊತ್ತವನ್ನು ಪರಿಷ್ಕರಣೆ ಮಾಡಲಾಗಿದ್ದು, ವಾಣಿಜ್ಯ ಸರಕುಗಳ ವಾಹನಗಳ ಮೂರನೇ ವ್ಯಕ್ತಿಯ ವಿಮಾ ಪ್ರೀಮಿಯಂ ದರವು ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.10 ರಿಂದ ಶೇ.15 ರಷ್ಟು ಹೆಚ್ಚಿಸಲಾಗಿದೆ.

ಅಪಘಾತಕ್ಕೆ ಒಳಗಾದ ಇತರ ವಾಹನಗಳಿಗೆ ಥರ್ಡ್ ಪಾರ್ಟಿ ವಿಮಾ ರಕ್ಷಣೆ ನೀಡಲಿದ್ದು, ಇದು ಕಡ್ಡಾಯ ವಿಮಾ ರಕ್ಷಣೆಯಾಗಿದೆ. ಹೊಸ ವಾಹನವನ್ನು ಖರೀದಿಸುವಾಗ ವಾಹನ ಮಾಲೀಕರು ಇತರರ ವಾಹನಗಳ ಹಾನಿಯ ಕ್ಲೈಮ್‌ಗಳನ್ನು ಪೂರೈಸಲು ಮೂರನೇ ವ್ಯಕ್ತಿಯ ವಿಮಾ ರಕ್ಷಣೆಯನ್ನು ಕಡ್ಡಾಯವಾಗಿ ಖರೀದಿಸಬೇಕು.

ಇನ್ನೊಂದು ಪ್ರಮುಖ ವಿಚಾರವೆಂದರೆ ಸಾಮಾನ್ಯವಾಗಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು(IRDAI) ಮೂರನೇ ವ್ಯಕ್ತಿಯ ವಾಹನ ವಿಮೆಗೆ ಸಂಬಂಧಿಸಿದ ಅಧಿಸೂಚನೆಯನ್ನು ನೆರವಾಗಿ ಬಿಡುಗಡೆ ಮಾಡುತ್ತದೆ. ಆದರೆ ಥರ್ಡ್ ಪಾರ್ಟಿ ವಾಹನಗಳ ವಿಮಾ ಪ್ರೀಮಿಯಂ ಹೆಚ್ಚಳದ ಬಗ್ಗೆ ಸ್ವತಃ ಸಾರಿಗೆ ಸಚಿವಾಲಯವು ಹೊಸ ಅಧಿಸೂಚನೆಯ ಮೂಲಕ ತಿಳಿಸಿದ್ದು ಇದೇ ಮೊದಲು ಎನ್ನಬಹುದು.