Just In
- 32 min ago
ಮನಕಲುಕುವ ಘಟನೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್ನಲ್ಲೇ ಕೊಂಡೊಯ್ದ ಮಗ
- 41 min ago
ಹೊಸ ಆಫ್-ರೋಡರ್ ಆರ್ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ
- 3 hrs ago
ಫೋರ್ಡ್ ಇಂಡಿಯಾದ ಸನಂದ್ ಕಾರ್ಖಾನೆ ಟಾಟಾ ಮೋಟಾರ್ಸ್ ತೆಕ್ಕೆಗೆ: 726 ಕೋಟಿ ರೂ.ಗೆ ಖರೀದಿ
- 4 hrs ago
ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಟಾಟಾ ಕಾರುಗಳು...
Don't Miss!
- News
ಆದಾಯ ತೆರಿಗೆ ರಿಟರ್ನ್ ಇ-ಪರಿಶೀಲನೆ ಕಡ್ಡಾಯ: ಇ-ಪರಿಶೀಲನೆಗೆ ಮಾಡುವುದು ಹೀಗೆ
- Sports
CWG 2022: ಬ್ಯಾಡ್ಮಿಂಟನ್ಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಸಿಂಗಲ್ಸ್ನಲ್ಲಿ ಚಾಂಪಿಯನ್ ಆದ ಲಕ್ಷ್ಯಸೇನ್
- Finance
6 ಲಕ್ಷ ರೂಪಾಯಿ ಗ್ರಾಚ್ಯುಟಿಗೆ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ?
- Technology
ಅತೀ ಕಡಿಮೆ ಬೆಲೆಗೆ ಲಗ್ಗೆ ಇಟ್ಟ 'ಇನ್ಫಿನಿಕ್ಸ್ ಸ್ಮಾರ್ಟ್ 6 HD' ಫೋನ್!
- Movies
ಉತ್ತರದಲ್ಲಿ ವಿಜಯ್ ದೇವರಕೊಂಡ ಸುನಾಮಿ: ಬಾಲಿವುಡ್ಡಿಗರಿಗೆ ಹೊಟ್ಟೆ ಉರಿ!
- Lifestyle
ಬೆಚ್ಚಗಾಗಲು ಬಳಸುವ ರೂಮ್ ಹೀಟರ್ ಎಷ್ಟು ಅಪಾಯಕಾರಿ ಗೊತ್ತಾ?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಟಾಟಾ ಮೋಟಾರ್ಸ್‌ನಿಂದ ಆಡಿವರೆಗೆ ಮುಂಬರಲಿರುವ ಟಾಪ್ 10 ಇವಿ ಕಾರುಗಳ ಬಿಡುಗಡೆ ಮಾಹಿತಿ
ಪ್ರಸ್ತುತ ದೇಶದಲ್ಲಿ ಆಟೋ ವಲಯವು ಬದಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಆಗಮನದಿಂದಾಗಿ ಇವಿ ವಲಯ ಬಲಿಷ್ಟಗೊಳ್ಳುತ್ತಿದೆ. ಸದ್ಯ ಇದರ ಬೆಳವಣಿಗೆ ನಿಧಾನವಾಗಿದ್ದರೂ, ಮುಂಬರುವ ದಿನಗಳಲ್ಲಿ ಇಂಧನ ಚಾಲಿತ ವಾಹನಗಳಿಗೆ ಪೈಪೋಟಿ ನೀಡಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಮಾತನಾಡುವುದಾದರೆ, ಟಾಟಾ ನೆಕ್ಸನ್, ಟಿಗೋರ್‌ನಂತಹ ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳು ಮತ್ತು ಬಿಎಂಡಬ್ಲ್ಯು, ಆಡಿಯಂತಹ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ. ಮುಂಬರುವ ವರ್ಷಗಳಲ್ಲಿ ದೇಶ ಮತ್ತು ವಿದೇಶಗಳ ಅನೇಕ ಕಾರು ಕಂಪನಿಗಳು ಭಾರತದಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಿವೆ.

ಮುಂಬರುವ ಕೆಲವು ವರ್ಷಗಳಲ್ಲಿ, ಟಾಟಾ ಮೋಟಾರ್ಸ್, ಹ್ಯುಂಡೈ, ಮಹೀಂದ್ರಾ, ಫೋಕ್ಸ್‌ವ್ಯಾಗನ್, BMW, Audi, Mercedes ನಂತಹ ಕಾರು ಕಂಪನಿಗಳು ಭಾರತದಲ್ಲಿ ತಮ್ಮ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ 10 ಎಲೆಕ್ಟ್ರಿಕ್ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಮಹೀಂದ್ರ e-XUV300
ಇತ್ತೀಚೆಗೆ ಹೊಸ ಸ್ಕಾರ್ಪಿಯೋ-ಎನ್ ಅನ್ನು ಬಿಡುಗಡೆ ಮಾಡಿರುವ ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ, ಮುಂಬರುವ ದಿನಗಳಲ್ಲಿ eXUV300 ಅನ್ನು ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಇದು ನೇರವಾಗಿ ಟಾಟಾ ನೆಕ್ಸಾನ್ EV ಯೊಂದಿಗೆ ಸ್ಪರ್ಧಿಸಲಿದೆ.

eXUV300 ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಇದು 4.2-ಮೀಟರ್ ಎತ್ತರದ ಪೆಟ್ರೋಲ್ XUV300 ಗಿಂತ ಸ್ವಲ್ಪ ಉದ್ದವಾಗಿದೆ. ಮಹೀಂದ್ರಾ eXUV300 Nexon EV ಯಂತೆಯೇ ಅದೇ ಶ್ರೇಣಿಯನ್ನು ನೀಡುವ ನಿರೀಕ್ಷೆಯಿದೆ. ಇದರ ಬೆಲೆ 15 ಲಕ್ಷ ರೂ. (ಎಕ್ಸ್ ಶೋ ರೂಂ) ಇರಬಹುದು ಎಂದು ಅಂದಾಜಿಸಲಾಗಿದೆ.

2. ಟಾಟಾ ಮೋಟಾರ್ಸ್
ಟಾಟಾ ಪ್ರಸ್ತುತ Nexon EV ಮತ್ತು Tigor EV ಯೊಂದಿಗೆ ಪ್ರಯಾಣಿಕ ವಿಭಾಗದಲ್ಲಿ EV ಮಾರಾಟವನ್ನು ಮುನ್ನಡೆಸುತ್ತಿದೆ. ಟಾಟಾ ಕಾರು ತಯಾರಕರು ಭಾರತದಲ್ಲಿ ಅತ್ಯಂತ ಯಶಸ್ವಿ EV ತಯಾರಕರಾಗಿ ಗುರ್ತಿಸಿಕೊಂಡಿದ್ದಾರೆ. ಟಾಟಾ ಮೋಟಾರ್ಸ್ ಟಿಯಾಗೊ ಇವಿ, ಸಿಯೆರಾ ಮತ್ತು ಆಲ್ಟ್ರೋಜ್ ಸೇರಿದಂತೆ ಮೂರು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ.

ಎಲ್ಲಾ ಮೂರು ಎಲೆಕ್ಟ್ರಿಕ್ ಕಾರುಗಳು ಜಿಪ್ಟ್ರಾನ್ ತಂತ್ರಜ್ಞಾನವನ್ನು ಆಧರಿಸಿವೆ. ಆಲ್ಟ್ರೋಜ್ ಇವಿ ಬಿಡುಗಡೆಯನ್ನು ಈ ವರ್ಷವೇ ನಿರೀಕ್ಷಿಸಬಹುದು, ಆದರೆ ಸಿಯೆರಾ ಮತ್ತು ಟಿಯಾಗೊ 2023ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಟಾಟಾ ಮೋಟಾರ್ಸ್ Altroz EV ಮತ್ತು ಸಿಯೆರಾ EV ಅನ್ನು ರೂ. 14-15 ಲಕ್ಷಕ್ಕೆ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಬಹುದು.

3. ಸ್ಕೋಡಾ
ಫೋಕ್ಸ್‌ವ್ಯಾಗನ್ ಒಡೆತನದ ಸ್ಕೋಡಾ 2023 ರ ಮೊದಲಾರ್ಧದಲ್ಲಿ ಭಾರತದಲ್ಲಿ ಎನ್ಯಾಕ್ ಐವಿ ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. Skoda Enyaq iV ಕಂಪನಿಯ ಮೊದಲ ಎಲೆಕ್ಟ್ರಿಕ್ SUV ಆಗಿದೆ. ಇದು ಸಂಪೂರ್ಣ ಚಾರ್ಜ್‌ನಲ್ಲಿ 520 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. Enyaq iV 82.0 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಸ್ಕೋಡಾ ಎಲೆಕ್ಟ್ರಿಕ್ ಎಸ್‌ಯುವಿಯು ಸುಮಾರು 60 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಇರಬಹುದು ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಇದನ್ನು CBU ಆಗಿ ಭಾರತಕ್ಕೆ ತರಲಾಗುವುದು.

4. ಹುಂಡೈ
ಭಾರತದಲ್ಲಿ ಎಲೆಕ್ಟ್ರಿಕ್ ಕಾರನ್ನು 300 ಕಿ.ಮೀ. ಮೈಲೇಜ್‌ನೊಂದಿಗೆ ಬಿಡುಗಡೆ ಮಾಡಿದ ಮೊದಲ ಕಂಪನಿ ಎಂದು ಹ್ಯುಂಡೈ ಹೆಸರು ಪಡೆದಿದೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕೋನಾ EV ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲು ಕಾರು ತಯಾರಕರು ಯೋಜಿಸಿದ್ದಾರೆ. ಹೊಸ Kona EV ಅನ್ನು ಸುಮಾರು 25 ಲಕ್ಷ ರೂಪಾಯಿಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಬಹುದು.

ಕಂಪನಿಯ ಎರಡನೇ ಬಿಡುಗಡೆಯು Ioniq 5 EV ಆಗಿದೆ, ಇದು ಇತ್ತೀಚೆಗೆ ಬಿಡುಗಡೆಯಾದ Kia EV6 ನ ಅದೇ ಪ್ಲಾರ್ಟ್‌ಫಾಮ್ ಆಧರಿಸಿದೆ. ಹ್ಯುಂಡೈ ಇದರ ಬೆಲೆಯನ್ನು ಸುಮಾರು 60 ಲಕ್ಷ ರೂಪಾಯಿಗೆ (ಎಕ್ಸ್ ಶೋ ರೂಂ) ನಿಗದಿಪಡಿಸಲು ಯೋಜಿಸಿದೆ. ಹ್ಯುಂಡೈ Ioniq 5 EV ಅನ್ನು 2022 ರ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುವುದು.

6. ವೋಲ್ವೊ
ಭಾರತದಲ್ಲಿ XC40 ರೀಚಾರ್ಜ್ ಕುರಿತ ಮಾಹಿತಿಯನ್ನು ಜುಲೈ 26 ರಂದು ಬಿಡುಗಡೆ ಮಾಡುವುದಾಗಿ ಕಂಪನಿ ಘೋಷಿಸಿದೆ. ಕಂಪನಿಯು ಇದನ್ನು ಸುಮಾರು 65 ಲಕ್ಷ ರೂ. (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಿಡುಗಡೆಯ ನಂತರ, ಇದು Kia EV6 ಮತ್ತು ಹುಂಡೈ Ioniq 5 ನೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ.

ವೋಲ್ವೋ XC40 78 kWh ಬ್ಯಾಟರಿ ಪ್ಯಾಕ್ ಮತ್ತು ಪ್ರತಿ ಆಕ್ಸಲ್‌ನಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಹೊಂದಿರಲಿದೆ. 402 bhp ಮತ್ತು 660 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವೋಲ್ವೋ ತನ್ನ ಪೈಪೋಟಿಗೆ ಅನುಗುಣವಾಗಿ 418 ಕಿ.ಮೀ WTLP ಶ್ರೇಣಿಯನ್ನು ನೀಡುವ ತವಕದಲ್ಲಿದೆ. ಈ ಕಾರಿಗಾಗಿ ನೀಡುವ 50 kW DC ಫಾಸ್ಟ್ ಚಾರ್ಜರ್ ಬಳಸಿ ಎರಡೂವರೆ ಗಂಟೆಗಳಲ್ಲಿ ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದಾಗಿದೆ.

8. BMW
ಭಾರತದಲ್ಲಿ i7 ಮತ್ತು iX1 EVಗಳನ್ನು ಬಿಡುಗಡೆ ಮಾಡುವ ಯೋಜನೆಯೊಂದಿಗೆ BMW ಮರ್ಸಿಡಿಸ್-ಬೆಂಝ್‌ಗೆ ಕಠಿಣ ಸ್ಪರ್ಧೆಯನ್ನು ನೀಡಲು ಸಿದ್ಧವಾಗಿದೆ. BMW i7 ಸುಮಾರು 2.5 ಕೋಟಿ (ಎಕ್ಸ್ ಶೋ ರೂಂ) ಬೆಲೆ ಹೊಂದಿರಲಿದೆ. ಎರಡೂ BMW ವಾಹನಗಳು 2023ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಪ್ರಸ್ತುತ BMW ಭಾರತದಲ್ಲಿ i4 ಎಲೆಕ್ಟ್ರಿಕ್ ಸೆಡಾನ್ ಅನ್ನು ಮಾರಾಟ ಮಾಡುತ್ತಿದೆ. ಐ4 ಎಲೆಕ್ಟ್ರಿಕ್ ಸೆಡಾನ್ 590 ಕಿ.ಮೀ. ಮೈಲೇಜ್ ನೀಡುತ್ತಿದೆ. ಇದರ ಬೆಲೆ ರೂ. 69.90 ಲಕ್ಷ (ಎಕ್ಸ್ ಶೋ ರೂಂ). ಇದು Kia EV6 ನಂತೆ ಅದೇ ಬೆಲೆಯನ್ನು ಹೊಂದಿದೆ.

7. Mercedes-Benz
ಜರ್ಮನ್ ಐಷಾರಾಮಿ ಕಾರು ತಯಾರಕ ಕಂಪನಿಯಾದ, Mercedes-Benz, ಪ್ರಸ್ತುತ ಭಾರತದಲ್ಲಿ EQC ಮಾದರಿಯನ್ನು ನೀಡುತ್ತದೆ. ಮುಂಬರುವ ತಿಂಗಳುಗಳಲ್ಲಿ, ಕಾರು ತಯಾರಕರು EQS ಮತ್ತು EQA ಎಂಬ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಇವುಗಳ ಅಂದಾಜು ಬೆಲೆ ರೂ. 1.75 ಕೋಟಿ (ಎಕ್ಸ್ ಶೋ ರೂಂ) ಮತ್ತು 60 ಲಕ್ಷ ರೂ. ಇರಬಹುದಾಗಿದೆ. ಈ ಕಾರುಗಳನ್ನು 2023ರ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಿದೆ.

9. ಆಡಿ
ಆಡಿ Q4 e-tron ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪನಿಯ ಟಾಪ್ ಕಾರಾಗಿದೆ. ಇದು 2023 ರ ಮೊದಲಾರ್ಧದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಇ-ಟ್ರಾನ್ ಬೆಲೆ ಸುಮಾರು 80 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಇರಬಹುದು. ಈ ಮಾದರಿ ಬಿಡುಗಡೆಯಾದರೆ Audi Q4 e-tron Volvo XC40 Recharge, Ioniq 5, EV6, ಮತ್ತು Mercedes-Benz ಮತ್ತು BMW ಕಾರುಗಳೊಂದಿಗೆ ಸೆಣಸಾಡಲಿದೆ.

10. ಫೋರ್ಡ್
ಅಮೇರಿಕನ್ ಮೂಲದ ಫೋರ್ಡ್ ಇತ್ತೀಚೆಗೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಕೊನೆಗೊಳಿಸಿ ದೇಶಕ್ಕೆ EV ಗಳನ್ನು ತರುವತ್ತ ಗಮನಹರಿಸುವುದಾಗಿ ಘೋಷಿಸಿತು. ಫೋರ್ಡ್ ಈ ವರ್ಷದ ಕೊನೆಯಲ್ಲಿ ಫೋರ್ಡ್ ಮುಸ್ತಾಂಗ್ ಮ್ಯಾಕ್ ಇ-ಇವಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. Ford Mustang Mach E EV ಅನ್ನು CBU ಮಾರ್ಗದ ಮೂಲಕ ಭಾರತಕ್ಕೆ ತರಲಾಗುವುದು. ಇದರ ಬೆಲೆ ₹ 70 ಲಕ್ಷ (ಎಕ್ಸ್ ಶೋ ರೂಂ) ಇರಬಹುದು.