ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಮಾರುತಿ ಸುಜುಕಿಯು ಹಲವಾರು ವರ್ಷಗಳಿಂದ ಭಾರತದ ಅತ್ಯುತ್ತಮ ಮಾರಾಟದ ಕಾರು ತಯಾರಕ ಕಂಪನಿಯಾಗಿ ಗುರ್ತಿಸಿಕೊಂಡಿದೆ. ಅಲ್ಲದೇ ದೇಶೀಯ ಜನರ ವಿಶ್ವಾಸಾರ್ಹ ಕಂಪನಿಯಾಗಿದ್ದು, ಹೆಚ್ಚಿನ ಮಾರುತಿ ಸುಜುಕಿ ಉತ್ಪನ್ನಗಳು ಪ್ರತಿ ವಿಭಾಗದಲ್ಲಿಯೂ ಹೆಚ್ಚು ಮಾರಾಟವಾಗವ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಆದರೆ ಕೆಲವು ಮಾರುತಿ ಸುಜುಕಿ ಮಾದರಿಗಳು ಮಾತ್ರ ತುಂಬಾ ಯಶಸ್ವಿಯಾಗಿವೆ, ಯಾವ ಮಟ್ಟಿಗೆ ಅಂದರೆ ಪ್ರಯಾಣಿಕ ವಾಹನಗಳ ಮಾರಾಟ ಪಟ್ಟಿಯನ್ನು ಮುನ್ನಡೆಸುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತರ ಯಾವುದೇ ಕಂಪನಿಯ ಮಾದರಿಗಳು ಮಾರಾಟವಾಗದ ರೀತಿಯಲ್ಲಿ ಜುಲೈ 2022 ರಲ್ಲಿ ಮಾರುತಿ ಸುಜುಕಿಯ ಈ 3 ಕಾರುಗಳು ಮಾರಾಟವಾಗಿವೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಮಾರುತಿ ಸುಜುಕಿ ಸ್ವಿಫ್ಟ್

ಜುಲೈ 2022 ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಮೂರನೇ ಕಾರಾಗಿ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಹೊರಹೊಮ್ಮಿದೆ. ಇದು ಪ್ರಾಯೋಗಿಕ ಕಾರು ಎಂದು ಸಾಬೀತಾಗಿದೆ, ನಗರದಲ್ಲಿ ಅಥವಾ ಪ್ರವಾಸಕ್ಕೆ ಹೋಗಲು ಎಲ್ಲಾ ರೀತಿಯಲ್ಲು ಪ್ರಯಾಣಿಕರಿಗೆ ಉತ್ತಮ ಚಾಲಾನಾ ಅನುಭವ ನೀಡುತ್ತದೆ. ಇದು 89 bhp 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಮಾರುತಿ ಸುಜುಕಿಯು ಜುಲೈ 2021 ರಲ್ಲಿ ಮಾರಾಟ ಮಾಡಿದ 18,434 ಯುನಿಟ್‌ಗಳಿಗೆ ಹೋಲಿಸಿದರೆ ಜುಲೈ 2022 ರಲ್ಲಿ 17,539 ಸ್ವಿಫ್ಟ್‌ಗಳನ್ನು ಮಾರಾಟ ಮಾಡಿದೆ. ಇದು ಶೇಕಡಾ 5 ರಷ್ಟು ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಆದರೂ ಕೂಡ ಮಾರುತಿ ಸುಜುಕಿ ಸ್ವಿಫ್ಟ್ ಜುಲೈ 2022 ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಮೂರನೇ ಪ್ರಯಾಣಿಕ ವಾಹನವಾಗಿದೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಮಾರುತಿ ಸುಜುಕಿ ಬಲೆನೋ

ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಹ್ಯುಂಡೈ i20, ಟಾಟಾ ಆಲ್ಟ್ರೊಜ್ ಮತ್ತು ಟೊಯೊಟಾ ಗ್ಲಾನ್ಜಾಗಳೊಂದಿಗೆ ಸ್ಪರ್ಧಿಸುಗತ್ತಿದೆ. ಜುಲೈ 2022 ರಲ್ಲಿ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಆಗಲು ಎಲ್ಲವನ್ನೂ ಮೀರಿಸುವಲ್ಲಿ ಬಲೆನೋ ಯಶಸ್ವಿಯಾಗಿದೆ. ಜುಲೈ 2021 ರಲ್ಲಿ ಮಾರಾಟ ಮಾಡಿದ್ದ 14,729 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 22 ಬೆಳವಣಿಗೆಯನ್ನು ದಾಖಲಿಸಿದೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಬಲೆನೊ ಇತ್ತೀಚಿಗೆ ನವೀಕರಣಗೊಂಡ ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಇದು ಕಾರು ತಯಾರಕರು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗೆ ವಿನ್ಯಾಸ ಟ್ವೀಕ್, CVT ಯುನಿಟ್ ಅನ್ನು ಬದಲಿಸಿದ ಹೊಸ AMT ಗೇರ್‌ಬಾಕ್ಸ್ ಮತ್ತು ಹೆಡ್-ಅಪ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ ಮತ್ತು ಸಂಪರ್ಕಿತ ಕಾರ್ ವೈಶಿಷ್ಟ್ಯಗಳಂತಹ ತಂತ್ರಜ್ಞಾನದ ಹೋಸ್ಟ್ ಅನ್ನು ನೀಡಿದ್ದರು. ಮಾರುತಿ ಸುಜುಕಿ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ 1.2-ಲೀಟರ್, 88 bhp ಪೆಟ್ರೋಲ್ ಎಂಜಿನ್ ಅನ್ನು ಇದು ಹಾಗೇ ಉಳಿಸಿಕೊಂಡಿದೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ ಸುಜುಕಿ ವ್ಯಾಗನ್ ಆರ್ ಅತ್ಯುತ್ತಮ-ಮಾರಾಟದ ಪ್ರಯಾಣಿಕ ವಾಹನವಾಗಿದೆ, ಜುಲೈ 2022 ರಲ್ಲಿ ಹೆಚ್ಚು ಮಾರಾಟವಾದ ಮಾರುತಿ ಸುಜುಕಿಯ ಪ್ರಯಾಣಿಕ ವಾಹಗಳಲ್ಲಿ ಅಗ್ರ ಸ್ಥಾನದಲ್ಲಿದೆ. ಕಳೆದ ವರ್ಷ ಜುಲೈನಲ್ಲಿ ಮಾರಾಟವಾದ 22,836 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ತಿಂಗಳು 22,588 ಯುನಿಟ್‌ಗಳನ್ನು ಮಾರಾಟವಾಗಿವೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಶೇ1 ರಷ್ಟು ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದರೂ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ. ವ್ಯಾಗನ್ ಆರ್‌ನ ಎತ್ತರದ ವಿನ್ಯಾಸವು ಪ್ರಾಯೋಗಿಕವಾಗಿದೆ ಎಂದು ಸಾಬೀತಾಗಿದೆ. ಏಕೆಂದರೆ ಇದು ಸಾಕಷ್ಟು ಹೆಡ್‌ರೂಮ್ ಅನ್ನು ನೀಡುತ್ತದೆ ಮತ್ತು ಅದರ ಇತ್ತೀಚಿನ ನವೀಕರಣವು ವ್ಯಾಗನ್ ಆರ್‌ನ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ವ್ಯಾಗನ್ R ಅನ್ನು ಐಚ್ಛಿಕ CNG ಘಟಕದೊಂದಿಗೆ 66 bhp 1.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ ಹೆಚ್ಚು ಶಕ್ತಿಶಾಲಿ 88 bhp 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಖರೀದಿಸಬಹುದು. ಮಾರುತಿ ಸುಜುಕಿ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳನ್ನು ಸಹ ನೀಡುತ್ತದೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಇನ್ನು ಮಾರುತಿ ಸುಜುಕಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನು ಸಹ ಮಾರಾಟ ಮಾಡುತ್ತಿದ್ದು ಇವು ಕೂಡ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ. ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಕಂಪನಿಯ ಕಾರುಗಳನ್ನು ನೋಡುವುದಾದರೆ, ಮಾರುತಿ ಸುಜುಕಿ ಸೆಲೆರಿಯೊ ಹಾಗೂ ಎಸ್-ಪ್ರೆಸ್ಸೊ ಕಾರುಗಳು ಕಂಪನಿಯ ಉತ್ತಮ ಉತ್ಪನ್ನಗಳಾಗಿವೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

2021 ರಲ್ಲಿ ಮಾರುತಿ ಸುಜುಕಿ ಹೊಸ ತಲೆಮಾರಿನ ಸೆಲೆರಿಯೊವನ್ನು ಬಿಡುಗಡೆ ಮಾಡಿತ್ತು. ಈ ಸೆಲೆರಿಯೊ ಸಂಪೂರ್ಣವಾಗಿ ಹೊಸ ಕಾರಾಗಿದ್ದು, ಹೊಸ ಎಕ್ಸ್‌ಟೀರಿಯರ್, ಇಂಟೀರಿಯರ್ ಮತ್ತು ಹೊಸ ಎಂಜಿನ್ ಹೊಂದಿದೆ. ಸೆಲೆರಿಯೊ 3 ಸಿಲಿಂಡರ್ 1.0 ಲೀಟರ್ K ಸಿರೀಸ್‌ನ ಡ್ಯುಯಲ್ ಜೆಟ್ ಡ್ಯುಯಲ್ VVT ಎಂಜಿನ್ ಅನ್ನು ಹೊಂದಿದ್ದು, 26.68 kmpl ಮೈಲೇಜ್ ನೀಡುತ್ತದೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಇತ್ತೀಚೆಗೆ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಗೆ ಎಸ್-ಪ್ರೆಸ್ಸೊದ ನವೀಕೃತ ಆವೃತ್ತಿಯನ್ನು ಪರಿಚಯಿಸಿದೆ. ಈ ಹೊಸ S-ಪ್ರೆಸ್ಸೊ ಹೊಸ ಸಿಲಿಂಡರ್ 1.0 L K ಸಿರೀಸ್‌ನ ಡ್ಯುಯಲ್ ಜೆಟ್ ಡ್ಯುಯಲ್ VVT ಎಂಜಿನ್‌ನೊಂದಿಗೆ ಬರುತ್ತದೆ, ಇದು ಸುಮಾರು 65.7 bhp ಮತ್ತು 89 nm ಟಾರ್ಕ್ ಅನ್ನು ಹೊರಹಾಕುತ್ತದೆ. ಹೊಸ S-ಪ್ರೆಸ್ಸೊ 25.3 kmpl ಮೈಲೇಜ್ ನೀಡುತ್ತದೆ.

ಅಬ್ಬಬ್ಬಾ ಮಾರುತಿಯ ಈ ಕಾರುಗಳಿಗೆ ಸಖತ್ ಡಿಮ್ಯಾಂಡ್: ಹಳೆಯ ಮಾದರಿಗಳಾದ್ರು ಕ್ರೇಜ್ ಕಡಿಮೆಯಾಗಿಲ್ಲ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಗ್ರಾಹಕರು ಕಾರು ಖರೀದಿಸುವಾಗ ಗಣನೆಗೆ ತೆಗೆದುಕೊಳ್ಳುವ ಪ್ರಮುಖ ಅಂಶವೆಂದರೆ ಕಾರಿನ ಮೈಲೇಜ್, ಹಾಗಾಗಿಯೇ ಪ್ರತಿ ವರ್ಷ ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತವೆ. ಭಾರತದಲ್ಲಿ ಮೈಲೇಜ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಪ್ರಮಾಣಿತ ಕಾರುಗಳನ್ನು ಉತ್ಪಾದಿಸುವಲ್ಲಿ ಮಾರುತಿ ಕಂಪನಿ ಅಗ್ರ ಸ್ಥಾನದಲ್ಲಿದೆ.

Most Read Articles

Kannada
English summary
Top 3 best selling Maruti Suzuki cars in July
Story first published: Saturday, August 6, 2022, 11:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X