ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಕೊರಿಯಾದ ವಾಹನ ತಯಾರಕರಾದ ಕಿಯಾ, ಭಾರತೀಯ ಮಾರುಕಟ್ಟೆಗಳಿಗೆ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಅನೇಕ ಹೊಸ ಯುಟಿಲಿಟಿ ವಾಹನಗಳನ್ನು ಸಿದ್ಧಪಡಿಸುತ್ತಿದೆ.

Recommended Video

New Maruti Alto K10 KANNADA Review | What’s New On The Affordable Hatchback? Mileage & Comfort

ಕಿಯಾ ಕಂಪನಿಯು ಇತ್ತೀಚೆಗೆ ತನ್ನ ಬಹುನಿರೀಕ್ಷಿತ ಜಾಗತಿಕ ಎಲೆಕ್ಟ್ರಿಕ್ ಎಸ್‍ಯುವಿಯಾದ ಇವಿ6 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಹೊಸ ಜನರೇಷನ್ ಕಿಯಾ ಕಾರ್ನಿವಲ್ ಎಂಪಿವಿ ಜೊತೆಗೆ ಅದರ ಅಸ್ತಿತ್ವದಲ್ಲಿರುವ ಎಸ್‍ಯುವಿ ಸರಣಿಯ ಹೊಸ ವಿಶೇಷ ಆವೃತ್ತಿಗಳು ಮತ್ತು ನವೀಕರಿಸಿದ ಆವೃತ್ತಿಗಳನ್ನು ಸಹ ಪರಿಚಯಿಸುತ್ತದೆ. ಈ ಮೂಲಕ ಕಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಬಲ್ಯವನ್ನು ಸಾಧಿಸಿದೆ. 2022-23ರಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಟಾಪ್ 3 ಹೊಸ ಕಿಯಾ ಕಾರುಗಳ ಪಟ್ಟಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಕಿಯಾ ಸೊನೆಟ್ ಎಕ್ಸ್-ಲೈನ್‌

ಕಿಯಾ ಇಂಡಿಯಾ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಕಿಯಾ ಇಂಡಿಯಾ ತನ್ನ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಎಕ್ಸ್ ಲೈನ್ ರೂಪಾಂತರವನ್ನು ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ದಕ್ಷಿಣ ಕೊರಿಯಾದ ಆಟೋ ಮೇಜರ್ ಕಳೆದ ವರ್ಷ ಭಾರತದಲ್ಲಿ ಸೆಲ್ಟೋಸ್ ಎಕ್ಸ್ ಲೈನ್ ಅನ್ನು ಪರಿಚಯಿಸಿತು ಮತ್ತು ಇದೇ ಮಾದರಿಯಲ್ಲಿ, ಸೋನೆಟ್ ಎಕ್ಸ್ ಲೈನ್ ನಿಯಮಿತ ರೂಪಾಂತರದಿಂದ ತನ್ನನ್ನು ಪ್ರತ್ಯೇಕಿಸಲು ಹಲವಾರು ಬಾಹ್ಯ ಮತ್ತು ಆಂತರಿಕ ಪರಿಷ್ಕರಣೆಗಳನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಕಿಯಾ ಸೊನೆಟ್ ಎಕ್ಸ್-ಲೈನ್‌ನ ಹೊಸ ಟೀಸರ್‌ನಲ್ಲಿ, ಅದರ ಎಲ್ಇಡಿ ಟೈಲ್‌ಲೈಟ್, ಮೇಲಿನ ಬ್ರೇಕ್ ಲೈಟ್‌ನೊಂದಿಗೆ ಕಾಣಬಹುದಾದ ಹಿಂಭಾಗದ ವಿಭಾಗವನ್ನು ನಾವು ನೋಡಬಹುದು, ಜೊತೆಗೆ ಕಂಪನಿಯು ಎಕ್ಸ್-ಲೈನ್ ರೂಪಾಂತರದ ನೋಟವನ್ನು ಸಹ ನೀಡಿದೆ. ಎಕ್ಸ್-ಲೈನ್‌ನ ವಿಶೇಷವಾದ ಮ್ಯಾಟ್ ಗ್ರ್ಯಾಫೈಟ್ ಬಣ್ಣವನ್ನು ಸೆಲ್ಟೋಸ್ ಎಕ್ಸ್-ಲೈನ್‌ನಲ್ಲಿ ಕಾಣಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಕಿಯಾ ಸೊನೆಟ್ ಎಕ್ಸ್-ಲೈನ್ ಅನ್ನು ಕಪ್ಪು ಬಣ್ಣದಲ್ಲಿ ಇರಿಸಲಾಗುವುದು ಆದರೆ ಮ್ಯಾಟ್ ಬಣ್ಣಗಳು ಸಹ ಅನೇಕ ಸ್ಥಳಗಳಲ್ಲಿ ಕಂಡುಬರುತ್ತವೆ. ನಿಯಮಿತ ಮಾದರಿಯಿಂದ ವಿಭಿನ್ನ ನೋಟವನ್ನು ನೀಡಲು, ಕಂಪನಿಯು ಹೊರಾಂಗಣದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಿದೆ. ಈ ಕಿಯಾ ಸೊನೆಟ್ ಎಕ್ಸ್-ಲೈನ್ ಕಪ್ಪಾಗಿಸಿದ ಟೈಲ್‌ಗೇಟ್ ಅಲಂಕರಣ, ಎಕ್ಸ್-ಲೈನ್ ಬ್ಯಾಡ್ಜಿಂಗ್, ಕಪ್ಪು ಮತ್ತು ಕಾಂಟ್ರಾಸ್ಟ್ ಬಣ್ಣದಲ್ಲಿ ಬಂಪರ್ ಇನ್ಸರ್ಟ್‌ಗಳು ಇತ್ಯಾದಿಗಳೊಂದಿಗೆ ಬರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಕಾಂಟ್ರಾಸ್ಟ್ ಆಕ್ಸೆಂಟ್‌ಗಳೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ. ಇದರೊಂದಿಗೆ ಪ್ರಾಯಶಃ ಗ್ರ್ಯಾಫೈಟ್ ಫಿನಿಶ್ ಲಭ್ಯವಿರಬಹುದು. ಹೊರಭಾಗದಂತೆಯೇ ಒಂದೇ ರೀತಿಯ ಥೀಮ್ ಅನ್ನು ಹೊಂದಿರುವ ಕ್ಯಾಬಿನ್ ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್‌ನಾದ್ಯಂತ ವಿಭಿನ್ನ ಹೊಲಿಗೆ ಮತ್ತು ಕಪ್ಪು ಅಲಂಕಾರದೊಂದಿಗೆ ಹೊಸ ಲೆದರ್ ಸೀಟ್‌ಗಳನ್ನು ಪಡೆಯಬಹುದು. ಈ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ವೆರಿಯೆಂಟ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್

ಕಿಯಾ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಫೇಸ್‌ಲಿಫ್ಟೆಡ್ ಸೆಲ್ಟೋಸ್ ಅನ್ನು ಪರಿಚಯಿಸಿತು. ಈ ವರ್ಷದ ಕೊನೆಯಲ್ಲಿ ಅಥವಾ 2023ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಪ್ರತಿಸ್ಪರ್ಧಿಗಳು ಬರುವುದರೊಂದಿಗೆ ಅದರ ವಿಭಾಗದಲ್ಲಿ ಪೈಪೋಟಿಯು ಹೆಚ್ಚು ತೀವ್ರವಾಗುತ್ತಿದೆ ಮತ್ತು ಬೆಳೆಯುತ್ತಿರುವ ಸ್ಪರ್ಧೆಗೆ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ದಕ್ಷಿಣ ಕೊರಿಯಾದಲ್ಲಿ ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳ ಆಯ್ಕೆಯೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿತು. ಮೊದಲ ಎಂಜಿನ್ ಆಯ್ಕೆಯು 2.0-ಲೀಟರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 148 ಬಿಹೆ‍ಪಿ ಪವರ್ ಮತ್ತು 180 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಮತ್ತೊಂದೆಡೆ, 1.6-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 196 ಬಿಹೆಚ್‍ಪಿ ಪವರ್ ಮತ್ತು 265 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, ಈ ಪವರ್ ಮತ್ತು ಟಾರ್ಕ್ ಫಿಗರ್ ಅನ್ನು ಗರಿಷ್ಠವಾಗಿ ಬಳಸಿಕೊಳ್ಳಲು, ಕಿಯಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಬಳಸಲು ಸಹ ಆಯ್ಕೆ ನೀಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಎರಡೂ ಪವರ್‌ಟ್ರೇನ್ ಆಯ್ಕೆಗಳೊಂದಿಗೆ 2 ವ್ಹೀಲ್ ಡೈವ್ ಮತ್ತು 4 ವ್ಹೀಲ್ ಡ್ರೈವ್ ಸಿಸ್ಟಂಗಳ ಆಯ್ಕೆಯನ್ನು ನೀಡಲಾಗಿದೆ. ದಕ್ಷಿಣ ಕೊರಿಯಾದಲ್ಲಿ ಹೆಚ್ಚು ಪವರ್ ಫುಲ್ 1.6-ಲೀಟರ್, ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿರುವ ಕಿಯಾ ಸೆಲ್ಟೋಸ್ ಆರಂಭಿಕ ಬೆಲೆಯು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ರೂ 13.16 ಲಕ್ಷವಾಗಿದೆ, ಈ ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿಯು ಹೊರಭಾಗವು ಬಹಳಷ್ಟು ಸಣ್ಣ ಬದಲಾವಣೆಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಈ ಹೊಸ ಕಿಯಾ ಸೆಲ್ಟೋಸ್ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಮಾದರಿ ಈಗ ಹೊರಹೋಗುವ ಮಾದರಿಗಿಂತ ಹೆಚ್ಚು ಪ್ರೀಮಿಯಂ ಮತ್ತು ಪ್ರಬುದ್ಧವಾಗಿ ಕಾಣುತ್ತದೆ. ಹೊಸ ನವೀಕರಿಸಿದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಪೂರ್ಣ-ಅಗಲ ಲೈಟ್ ಬಾರ್‌ನೊಂದಿಗೆ ದೊಡ್ಡ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ನ್ಯೂ ಜನರೇಷನ್ ಕಿಯಾ ಕಾರ್ನಿವಲ್

ಕೊರಿಯನ್ ವಾಹನ ತಯಾರಕರು ನ್ಯೂ ಜನರೇಷನ್ ಕಾರ್ನಿವಲ್ ಎಂಪಿವಿಯನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ಇದು ಈಗಾಗಲೇ 2 ವರ್ಷಗಳಿಂದ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ ಮತ್ತು ಇತ್ತೀಚೆಗೆ ಕೆಲವು ಬದಲಾವಣೆಗಳನ್ನು ಸ್ವೀಕರಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರುಗಳಿವು...

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಸ್ತುತ ಕಿಯಾ ಕಾರ್ನಿವಲ್ ಎಂಪಿವಿಯಲ್ಲಿರುವ ಅದೇ 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಸ ಮಾದರಿಯಲ್ಲಿ ಮುಂದುವರೆಸಬಹುದು. ಈ ಎಂಜಿನ್ 200 ಬಿಹೆಚ್‍ಪಿ ಪವರ್ ಮತ್ತು 440 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಿದೆ.

Most Read Articles

Kannada
English summary
Top 3 new kia cars to be launched in india soon details
Story first published: Wednesday, August 31, 2022, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X