ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ದೇಶೀಯ ಬ್ರಾಂಡ್‌ಗಳು ಯಾವುದೇ ವಿದೇಶಿ ವಾಹನಗಳಿಗೂ ಕಮ್ಮಿಯಿಲ್ಲ ಎಂಬುದನ್ನು ಮತ್ತೆ ಸಾಭೀತು ಪಡಿಸಿವೆ. ವಿನ್ಯಾಸ, ವೈಶಿಷ್ಟ್ಯಗಳ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಭಾರತೀಯ ಕಂಪನಿಗಳು ಯಶಸ್ವಿಯಾಗಿದ್ದು, ಕಳೆದ ಜುಲೈ ತಿಂಗಳ ಮಾರಾಟದಲ್ಲಿ ಮಾರುತಿ, ಟಾಟಾ ಮತ್ತು ಮಹೀಂದ್ರಾ ಟಾಪ್‌ 5 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಕಳೆದ ಜುಲೈನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಟಾಪ್-5 ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮಾರುತಿ ಸುಜುಕಿ ಎಂದಿನಂತೆ ಮೊದಲ ಸ್ಥಾನ ಪಡೆದುಕೊಂಡಿದೆ. ಈ ವರ್ಷದ ಜುಲೈನಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಒಟ್ಟು 1,29,802 ಕಾರುಗಳನ್ನು ಮಾರಾಟ ಮಾಡಿದೆ.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಕಳೆದ ಜುಲೈ 2021 ರಲ್ಲಿ ಮಾರುತಿ ಸುಜುಕಿ ಕೇವಲ 1,23,675 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಶೇ 5ರಷ್ಟು ಪ್ರಗತಿ ಸಾಧಿಸಿದೆ. ಈ ವರ್ಷ ಬಲೆನೊ, ಎರ್ಟಿಗಾ ಮತ್ತು ಬ್ರೆಜ್ಜಾ ಸೇರಿದಂತೆ ವಿವಿಧ ಕಾರುಗಳ ಹೊಸ ಮಾದರಿಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿ ಶೀಘ್ರದಲ್ಲೇ ಆಲ್ಟೊದಂತಹ ಇತರ ಕಾರುಗಳ ಹೊಸ ಮಾದರಿಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಕೂಡ ಮಾರಾಟದಲ್ಲಿ ಶೇಕಡಾ 5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಜುಲೈ 2021 ರಲ್ಲಿ ಹುಂಡೈ ಒಟ್ಟು 48,042 ಕಾರುಗಳನ್ನು ಮಾರಾಟ ಮಾಡಿದ್ದು, ಈ ವರ್ಷದ ಜುಲೈನಲ್ಲಿ 50,500 ಯೂನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಈ ಮೂಲಕ ಎರಡನೇ ಸ್ಥಾನಕ್ಕಾಗಿ ಟಾಟಾದೊಂದಿಗೆ ಸೆಣಸಾಡಿ ಯಶಸ್ವಿಯಾಗಿದೆ.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಹುಂಡೈ ಈ ವರ್ಷದ ಮೊದಲಾರ್ಧದಲ್ಲಿ ವೆನ್ಯೂನಂತಹ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಟಕ್ಸನ್‌ನಂತಹ ಹೊಸ ಮಾದರಿಯ ಕಾರುಗಳನ್ನು ಸಹ ಬಿಡುಗಡೆ ಮಾಡಲಿದೆ. ಇನ್ನು ಟಾಟಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ದಕ್ಕಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯು ಉತ್ತಮ ಮಾರಾಟವನ್ನು ದಾಖಲಿಸುತ್ತಿದೆ.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಇದರಿಂದ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಕಂಪನಿಗೆ ಟಾಟಾ ಕಂಪನಿ ತೀವ್ರ ಬಿಕ್ಕಟ್ಟು ಸೃಷ್ಟಿಸಿದೆ. ಟಾಟಾದ ಅತ್ಯುತ್ತಮ ಕಾರು ಮಾರಾಟವು ಈ ವರ್ಷ ಜುಲೈನಲ್ಲೂ ಮುಂದುವರೆದಿದೆ. ಟಾಟಾ ಮೋಟಾರ್ಸ್ ಜುಲೈ 2021 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 30,184 ಕಾರುಗಳನ್ನು ಮಾರಾಟ ಮಾಡಿತ್ತು.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಆದರೆ ಈ ವರ್ಷ ಜುಲೈನಲ್ಲಿ 47,506 ವಾಹನಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಈ ಮೂಲಕ ವಾರ್ಷಿಕವಾಗಿ ಶೇ57ರಷ್ಟು ಬೆಳವಣಿಗೆಯಾಗೆ ಸಾಧಿಸಿದೆ. ಈ ಪಟ್ಟಿಯಲ್ಲಿ ಟಾಟಾ 3ನೇ ಸ್ಥಾನದಲ್ಲಿದ್ದರೂ ಶೇಕಡವಾರು ಬೆಳವಣಿಗೆಯಲ್ಲಿ ಅಗ್ರಸ್ಥಾನದಲ್ಲಿದೆ.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಅಂದರೆ ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಯು ಮಾರಾಟದಲ್ಲಿ ಟಾಟಾದಷ್ಟು ಬೆಳವಣಿಗೆಯನ್ನು ದಾಖಲಿಸಿಲ್ಲ. ಬೆಳವಣಿಗೆಯ ಶೇಕಡಾವಾರು ವಿಷಯದಲ್ಲಿ, ಟಾಟಾ ಅಗ್ರಸ್ಥಾನದಲ್ಲಿದೆ. ಕಾರು ಮಾರಾಟದಲ್ಲಿ ಟಾಟಾ ಕಂಪನಿಯು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ಈ ಅಂಕಿಅಂಶಗಳು ತೋರಿಸುತ್ತಿವೆ. ಟಾಟಾದ ನೆಕ್ಸಾನ್ ಮತ್ತು ಹೊಸದಾಗಿ ಬಂದ ಪಂಚ್‌ಗಳಂತಹ ಸುರಕ್ಷತಾ ಕಾರುಗಳಿಗೆ ಮಾರುಕಟ್ಟೆಯಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಇನ್ನು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮಹೀಂದ್ರಾ ಕಂಪನಿಯಿದೆ. ಮಹೀಂದ್ರಾ ಜುಲೈ 2021 ರಲ್ಲಿ ಕೇವಲ 17,595 ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಈ ವರ್ಷ ಜುಲೈನಲ್ಲಿ ಈ ಸಂಖ್ಯೆ 24,238 ಕ್ಕೆ ಏರಿಕೆಯಾಗಿದೆ. ಇದು ಶೇ.38 ರಷ್ಟು ಬೆಳವಣಿಗೆ ಸಾಧಿಸಿದೆ. ಭವಿಷ್ಯದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಏಕೆಂದರೆ ಮಹೀಂದ್ರಾ ಕಂಪನಿಯ ಹೊಸ ತಲೆಮಾರಿನ ಥಾರ್, ಎಕ್ಸ್‌ಯುವಿ700 ಕಾರುಗಳು ಭಾರತದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಜೊತೆಗೆ ಭಾರತೀಯ ಗ್ರಾಹಕರು ಮಹೀಂದ್ರಾದ ಹೊಸ ಸ್ಕಾರ್ಪಿಯೋ-ಎನ್ ಕಾರಿಗೆ ಅದ್ದೂರಿ ಸ್ವಾಗತವನ್ನು ನೀಡುತ್ತಿದ್ದಾರೆ. ಆದ್ದರಿಂದ ಮುಂಬರುವ ವರ್ಷಗಳಲ್ಲಿ ಮಹೀಂದ್ರಾ ಮಾರಾಟದಲ್ಲಿ ಭಾರಿ ಬೆಳವಣಿಗೆಯನ್ನು ದಾಖಲಿಸುವ ಸಾಧ್ಯತೆಯಿದೆ.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಇನ್ನು ಪಟ್ಟಿಯಲ್ಲಿನ ಐದನೇ ಸ್ಥಾನವನ್ನು ಕೊರಿಯಾ ಬ್ರಾಂಡ್‌ ಆದ ಕಿಯಾ ಪಡೆದುಕೊಂಡಿದೆ. ಜುಲೈ 2021 ರಲ್ಲಿ ಭಾರತದಲ್ಲಿ ಕಿಯಾ ಕೇವಲ 15,016 ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಈ ವರ್ಷ ಜುಲೈನಲ್ಲಿ ಈ ಸಂಖ್ಯೆ 22,022 ಕ್ಕೆ ಏರಿದೆ. ಈ ಮೂಲಕ ಕೊರಿಯನ್ ತಯಾರಕರು ವಾರ್ಷಿಕವಾಗಿ ಶೇ 47ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದಾರೆ.

ವಾಹನ ಮಾರಾಟದಲ್ಲಿ ವಿದೇಶಿ ಕಾರುಗಳಿಗೆ ಸೆಡ್ಡು: ಟಾಪ್‌ 5 ನಲ್ಲಿ 3 ಭಾರತೀಯ ಬ್ರಾಂಡ್‌ಗಳದ್ದೇ ಹವಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಳೆದ ಎರಡು ವರ್ಷಗಳಿಂದ ಆಟೋ ಉದ್ಯಮವು ತೀವ್ರ ಬಿಕ್ಕಟ್ಟಿಗೆ ಸಿಲುಕಿತ್ತು. ಸೆಮಿಕಂಡಕ್ಟರ್‌ಗಳ ಕೊರತೆ, ಕಚ್ಚ ವಸ್ತುಗಳ ಬೆಲೆ ಏರಿಕೆಯಿಂದಾಗಿ ಭಾರತದಲ್ಲಿ ಬಹುತೇಕ ಕಾರು ಕಂಪನಿಗಳು ತಮ್ಮ ಕಾರುಗಳ ಬೆಲೆ ಏರಿಕೆ ಮಾಡಿದ್ದವು. ಇದರಿಂದ ಕಾರು ಮಾರಟದಲ್ಲಿ ಎಲ್ಲಾ ಕಂಪನಿಗಳು ಹಿನ್ನಡೆ ಅನುಭವಿಸಬೇಕಾಯಿತು. ಇದೀಗ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಆಟೋ ಉದ್ಯಮ ತನ್ನ ಗತವೈಭವವನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿದೆ.

Most Read Articles

Kannada
English summary
Top 5 companies that recorded best sales in the month of July in the Indian market
Story first published: Wednesday, August 3, 2022, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X