ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಕಾಂಪ್ಯಾಕ್ಟ್ ಮತ್ತು ಸಬ್‌-ಕಾಂಪ್ಯಾಕ್ಟ್ ಎಸ್‌ಯುವಿಗಳು ಓಡಿಸಲು ಮೋಜು, ಸ್ಪೋರ್ಟಿ ಅನುಭವ ನೀಡುವುದಿಲ್ಲ ಎಂದು ನೀವು ಭಾವಿಸಿದ್ದರೆ ಖಂಡಿತ ಏಳೆಂಟು ವರ್ಷಗಳ ಹಿಂದಿದ್ದೀರಾ ಅಂತಲೇ ಅರ್ಥ. ಕೆಲವು ವರ್ಷಗಳ ಹಿಂದೆ ಈ ವಿಭಾಗವು 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಡೀಸೆಲ್ ಎಸ್‌ಯುವಿಗಳಿಂದ ಪ್ರಾಬಲ್ಯ ಹೊಂದಿದ್ದವು. ಆದರೆ ಈಗ ಎಲ್ಲವೂ ಬದಲಾಗಿವೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಪ್ರಸ್ತುತ ಸನ್ನಿವೇಶವು ಸಂಪೂರ್ಣವಾಗಿ ವಿಭಿನ್ನವಾಗಿದೆ, ಕಾರು ಉತ್ಸಾಹಿಗಳಿಗೆ ಅನುಗುಣವಾಗಿ ತಯಾರಕರು ಸ್ಪೋರ್ಟಿಯಾಗಿ ಕಾರುಗಳನ್ನು ನಿರ್ಮಿಸುತ್ತಿದ್ದಾರೆ. ಜೊತೆಗೆ ಕಳೆದ ದಶಕದ ದ್ವಿತೀಯಾರ್ಧವು ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ವಾಯು ಮಾಲಿನ್ಯ, AQI ಸೂಚಿಕೆ, PM2.5, ವಾಹನ ಮಾಲಿನ್ಯ ನಿಯಂತ್ರಣಕ್ಕಾಗಿ ಹಲವು ಹೊಸ ಎಂಜಿನ್‌ಗಳನ್ನು ತರಲಾಗಿದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

2020 ರಲ್ಲಿ ಕೋವಿಡ್ ಪ್ರಾರಂಭವಾದ ನಂತರ ಭಾರತದಲ್ಲಿ BS6 ಹೊರಸೂಸುವಿಕೆಯ ಮಾನದಂಡಗಳನ್ನು ಜಾರಿಗೆ ತರಲಾಯಿತು. ಈಗ ಡೀಸೆಲ್ ಎಂಜಿನ್‌ಗಳನ್ನು ಹೊರತೆಗೆಯಲಾಗುತ್ತಿದೆ. ಆಧುನಿಕ ನೀತಿಗಳು ಮತ್ತು ಚಲನಶೀಲತೆಯ ಅಗತ್ಯತೆಗಳೊಂದಿಗೆ ಅವು ಅತ್ಯಂತ ಪ್ರಾಯೋಗಿಕ ಆಯ್ಕೆಯಾಗಿಲ್ಲ, ಹಾಗಾಗಿ ಮಾರುಕಟ್ಟೆಯು ಪೆಟ್ರೋಲ್ ಆಯ್ಕೆಯತ್ತ ತಿರುಗಿದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಆದ್ದರಿಂದ ಇಲ್ಲಿ ನಾವು ಅತಿ ಕಡಿಮೆ ಸಮಯದಲ್ಲಿ 100 ಕಿ.ಮೀ ವೇಗವನ್ನು ತಲುಪುವ ಟಾಪ್ 5 ವೇಗದ ಪೆಟ್ರೋಲ್ ಎಂಜಿನ್ ಹೊಂದಿರುವ SUV ಗಳ ಮೇಲೆ ಕೇಂದ್ರೀಕರಿಸಿದ್ದು, ಇವೆಲ್ಲವು 10 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿವೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ರೆನಾಲ್ಟ್ ಕಿಗರ್ ಟರ್ಬೊ - 10.20 ಸೆಕೆಂಡ್‌ಗಳು

ರೆನಾಲ್ಟ್ ಕಂಪನಿಯು ತಮ್ಮ ಡಸ್ಟರ್‌ನೊಂದಿಗೆ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಯುಟಿಲಿಟಿ ಭಾಗದಲ್ಲಿ ಭಾರೀ ಪೈಪೋಟಿ ನೀಡಿತ್ತು. ಹಾಗೆಯೇ ಅವರು ತಮ್ಮ ಕ್ವಿಡ್‌ನೊಂದಿಗೆ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ವಿಭಾಗದ ಮೇಲೂ ಪ್ರಭಾವ ಬೀರಿದರು. ತಮ್ಮ ಸಬ್-ಕಾಂಪ್ಯಾಕ್ಟ್ ಮಾದರಿಯಾದ ಕಿಗರ್ ಅನ್ನು ಸ್ಪೋರ್ಟಿಯಾಗಿ ನೀಡಲಾಗಿದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

Renault Kiger turbo 8.92 ಲಕ್ಷದ ಎಕ್ಸ್ ಶೋರೂಂ ಬೆಲೆಯಿಂದ ಪ್ರಾರಂಭವಾಗುತ್ತದೆ. ಇದು 1.0 L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. 98.6 bhp ಮತ್ತು 160 nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದು ಕೇವಲ 10.20 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ನಿಸ್ಸಾನ್ ಮ್ಯಾಗ್ನೈಟ್ ಟರ್ಬೊ - 10.30 ಸೆಕೆಂಡ್‌ಗಳು

ನಿಸ್ಸಾನ್ ಅತ್ಯುತ್ತಮ ಜಪಾನೀಸ್ ವಾಹನ ತಯಾರಕರಲ್ಲಿ ಒಂದಾಗಿದೆ. ನಿಸ್ಸಾನ್ ಮ್ಯಾಗ್ನೈಟ್‌ನ ಟರ್ಬೋಚಾರ್ಜ್ಡ್ ಆವೃತ್ತಿಯು ರೂ. 8.01 ಲಕ್ಷದ ಎಕ್ಸ್ ಶೋ ರೂಂ ಬೆಲೆಯಿಂದ ಪ್ರಾರಂಭವಾಗುತ್ತದೆ. ನೀವು 10 ಲಕ್ಷದೊಳಗೆ ಖರೀದಿಸಬಹುದಾದ ಅತ್ಯಂತ ಮೋಜಿನ ಎಸ್‌ಯುವಿ ಇದಾಗಿದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಇದು 98.6 bhp ಮತ್ತು 160 nm ಟಾರ್ಕ್ ಅನ್ನು ಉತ್ಪಾದಿಸುವ 1.0L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಕೇವಲ 10.30 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಹುಂಡೈ ವೆನ್ಯೂ ಟರ್ಬೊ ಪೆಟ್ರೋಲ್ - 10.70 ಸೆಕೆಂಡ್‌ಗಳು

ಹ್ಯುಂಡೈ ಕಂಪನಿಯು ಇದೀಗ ಕೆಲವು ತ್ವರಿತ ಕಾರುಗಳನ್ನು ಪರಿಚಯಿಸಿದೆ. ಭಾರತದಲ್ಲಿ ತನ್ನ N-ಲೈನ್ ಅನ್ನು ಸಹ ಪರಿಚಯಿಸಿದೆ. ಎನ್-ಲೈನ್ ಕಂಪನಿಯ ಪರ್ಫಾಮೆನ್ಸ್ ವಿಭಾಗವಾಗಿದೆ. ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ವೆನ್ಯೂದ ಟರ್ಬೋಚಾರ್ಜ್ಡ್ ಪೆಟ್ರೋಲ್ ಆವೃತ್ತಿಯ ಬೆಲೆಯು ರೂ 10.00 ಲಕ್ಷದಿಂದ ಪ್ರಾರಂಭವಾಗುತ್ತದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಇದು 118.3 bhp ಮತ್ತು 172 nm ಟಾರ್ಕ್ ಅನ್ನು ಹೊರಹಾಕುವ 1.0 L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಕೇವಲ 10.70 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಟಾಟಾ ನೆಕ್ಸಾನ್ ಪೆಟ್ರೋಲ್ - 11.64 ಸೆಕೆಂಡ್‌ಗಳು

ಟಾಟಾ ಮೋಟಾರ್ಸ್ ನೆಕ್ಸಾನ್ ಅನ್ನು ಪೆಟ್ರೋಲ್, ಡೀಸೆಲ್ ಮತ್ತು ಎರಡು ಟ್ಯೂನ್ ಇವಿ ಪವರ್‌ಟ್ರೇನ್‌ಗಳಲ್ಲಿ ನೀಡುತ್ತಿದೆ. ಇದು ಸುರಕ್ಷಿತ ಕಾರು, ಹೆಚ್ಚು ಇಂಧನ ದಕ್ಷತೆಯ ಕಾರು ಮತ್ತು ವೇಗದ ಕಾರುಗಳ ಪಟ್ಟಿಯಲ್ಲೂ ತನ್ನನ್ನು ಗುರ್ತಿಸಿಕೊಂಡಿದೆ. ಇದು ದೇಶದಲ್ಲಿ ಹೆಚ್ಚು ಮಾರಾಟವಾಗುವ SUV ಗಳಲ್ಲಿ ಒಂದಾಗಿದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಇತ್ತೀಚಿಗೆ ಇದು 4 ಲಕ್ಷ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಅತ್ಯಂತ ವೇಗದ ಕಾರಾಗಿದೆ. ನೆಕ್ಸಾನ್‌ನ ಪೆಟ್ರೋಲ್ ಆವೃತ್ತಿಯು ರೂ. 7.60 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು 1.2L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 118.3 bhp ಮತ್ತು 170 nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದು ಕೇವಲ 11.64 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಟೊಯೋಟಾ ಅರ್ಬನ್ ಕ್ರೂಸರ್ - 12.10 ಸೆಕೆಂಡ್‌ಗಳು

ಟೊಯೊಟಾ ಅರ್ಬನ್ ಕ್ರೂಸರ್ ಮಾರುತಿ ಸುಜುಕಿ ಬ್ರೆಝಾವನ್ನು ಹೋಲುತ್ತದೆ. ಆದರೆ ಬ್ರೆಝಾಗೆ ಹೋಲಿಸಿದರೆ ಇದು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ. ಅರ್ಬನ್ ಕ್ರೂಸರ್ 103.29 bhp ಮತ್ತು 138 nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಆದರೆ ಬ್ರೆಝಾ 101.64 bhp ಮತ್ತು 136.8 nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅರ್ಬನ್ ಕ್ರೂಸರ್ ಕೇವಲ 12.10 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ರೆನಾಲ್ಟ್ ಕಿಗರ್ ಟರ್ಬೊ, ನಿಸ್ಸಾನ್ ಮ್ಯಾಗ್ನೈಟ್ ಟರ್ಬೊ, ಹ್ಯುಂಡೈ ವೆನ್ಯೂ ಟರ್ಬೊ, ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಈ ಎಲ್ಲವೂ 10 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರುವ ಕಾರುಗಳಾಗಿವೆ. ಅಲ್ಲದೇ 100 ಕಿ.ಮೀ ವೇಗವನ್ನು ಕಡಿಮೆ ಸಮಯದಲ್ಲಿ ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಅವಕಾಶ ಸಿಕ್ಕರೆ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

Most Read Articles

Kannada
English summary
Top 5 Fastest SUVs Available to Buy in India Under 10 Lakhs
Story first published: Saturday, September 24, 2022, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X