ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

2022 ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಮಾದರಿಯ ಎಂಜಿನ್, ಕಾರಿನ ಉದ್ದಳತೆ, ಮೈಲೇಜ್ ಮತ್ತು ಮತ್ತಿತರ ಮಾಹಿತಿಯನ್ನು ಒಳಗೊಂಡಂತೆ ಟಾಪ್ 5 ವಿಷಯಗಳ ಕುರಿತ ಮಾಹಿತಿ ಇಲ್ಲಿದೆ. ಜೊತೆಗೆ ಸ್ಟ್ರಾಂಗ್ ಹೈಬ್ರೀಡ್‌ಗೆ ಬೇಡಿಕೆ ಹೆಚ್ಚಾಗಲು ಕಾರಣವನ್ನು ತಿಳಿಸಲಾಗಿದೆ.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

2022 ರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ಭಾರತ ಬಿಡುಗಡೆಯು ಬಹು-ನಿರೀಕ್ಷಿತವಾಗಿದೆ. ಏಕೆಂದರೆ ಇದು ಭಾರತದಲ್ಲಿ ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಪ್ರಮುಖ SUV ಉತ್ಪನ್ನವಾಗಿದೆ. ಟೊಯೋಟಾ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಕರ್ನಾಟಕದ ಬಿಡದಿಯಲ್ಲಿ ಟೊಯೊಟಾ ಪ್ಲಾಂಟ್‌ನಲ್ಲಿ ವಿಟಾರಾ ಕಾರುಗಳ ನಿರ್ಮಾಣವಾಗಲಿದೆ.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

ಸದ್ಯ ಭಾರತದಲ್ಲಿ ಈ ಎಸ್‌ಯುವಿ ಗ್ರಾಹಕರಲ್ಲಿ ಭಾರೀ ಬೇಡಿಕೆಯನ್ನು ಹುಟ್ಟುಹಾಕಿದ್ದು, ಕಂಪನಿ ಪರಿಚಯಿಸಿರುವ ಮೈಲ್ಡ್ ಹಾಗೂ ಸ್ಟ್ರಾಂಗ್ ಮಾದರಿಗಳಲ್ಲಿ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್ ಮತ್ತು ಮೈಲ್ಡ್ ಹೈಬ್ರಿಡ್ ಆವೃತ್ತಿಗಳ ನಡುವಿನ ವ್ಯತ್ಯಾಸಗಳು ಹಾಗೂ ಮಾರುಕಟ್ಟೆಯಲ್ಲಿ ಅದರ ಪ್ರತಿಸ್ಪರ್ಧಿಗಳೊಂದಿಗಿನ ಹೋಲಿಕೆಯನ್ನು ಈಗಾಗಲೇ ಡ್ರೈವ್‌ಸ್ಪಾರ್ಕ್‌ನ ಹಳೆಯ ಲೇಖನಗಳಲ್ಲಿ ತಿಳಿಸಿದ್ದೇವೆ.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

ಇದೀಗ ಸ್ಟ್ರಾಂಗ್ ಹೈಬ್ರೀಡ್ ಏಕೆ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ ಎಂದಬುದರ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ 2022 ರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾಗೆ ಒಲವು ಸಿಕ್ಕಿರುವುದು ಅದರ ಸೋರಿಕೆಯಾದ ಬೆಲೆಯಿಂದಾಗಿ, ಬೆಲೆಯಲ್ಲಿ ಸೆಗ್ಮೆಂಟ್ ಲೀಡರ್ ಆಗಿರುವ ಹ್ಯುಂಡೈ ಕ್ರೆಟಾವನ್ನು ಗ್ರಾಂಡ್ ವಿಟಾರ ಹಿಂದಿಕ್ಕೆದೆ. ಅಂದರೆ ವಿಟಾರಾವು ಅತಿ ಹೆಚ್ಚು ಮೈಲೇಜ್‌ನೊಂದಿಗೆ ಹಾಗೂ ಹಲವು ಫೀಚರ್ಸ್‌ನೊಂದಿಗೆ ಹ್ಯುಂಡೈ ಕ್ರಟಾಗಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

ಗ್ರ್ಯಾಂಡ್ ವಿಟಾರಾದ ಎರಡು ರೂಪಾಂತರಗಳ ನಡುವೆ ಇನ್ನೂ ಗೊಂದಲಕ್ಕೊಳಗಾದವರಿಗೆ, ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಬಗ್ಗೆ ತಿಳಿದುಕೊಳ್ಳಲು ಟಾಪ್ 5 ವಿಷಯಗಳು ಇಲ್ಲಿವೆ, ಇವು ನಿಮಗೆ ಸರಿಯಾದ ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡಬಹುದು.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಬೆಲೆ

2022ರ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಝೀಟಾ ಪ್ಲಸ್ ಮತ್ತು ಆಲ್ಫಾ ಪ್ಲಸ್ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿರುತ್ತದೆ. ಈ ಎರಡು ರೂಪಾಂತರಗಳು ಭಾರತದಲ್ಲಿನ ಗ್ರ್ಯಾಂಡ್ ವಿಟಾರಾ ಶ್ರೇಣಿಯ ಅಗ್ರ ರೂಪಾಂತರಗಳಾಗಿವೆ. ಕ್ರಮವಾಗಿ ಈ ಎರಡೂ ರೂಪಾಂತರಗಳ ಬೆಲೆಯು ರೂ. 17 ಲಕ್ಷ ಮತ್ತು ರೂ. 18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿವೆ.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

ಹೊಸ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಉದ್ದಳತೆಗಳು

2022 ಗ್ರಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ನ ಆಯಾಮಗಳು ಮೈಲ್ಡ್ ಹೈಬ್ರಿಡ್‌ಗೆ ಹೋಲುತ್ತವೆ. ಈ SUVಯು 4,345 mm ಉದ್ದ, 1,795 mm ಅಗಲ, 1,645 mm ಎತ್ತರ ಮತ್ತು 2,600 mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಹೊಸ ಗ್ರ್ಯಾಂಡ್ ವಿಟಾರಾ 1,185-1,210 ಕೆ.ಜಿ ತೂಕವಿದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

2022 ಗ್ರಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ವಿಶೇಷತೆಗಳು

ಎಂಜಿನ್ ವಿಭಾಗದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಹೊಸ ಗ್ರಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ 1.5-ಲೀಟರ್, ಮೂರು-ಸಿಲಿಂಡರ್ ಟೊಯೋಟಾ ಮೂಲದ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಮೋಟಾರ್ ಅನ್ನು 177.6V ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗೆ ಜೋಡಿಸಲಾಗಿದೆ. ಇದು 114 bhp ಮತ್ತು 122 Nm ಟಾರ್ಕ್‌ನ ಸಂಯೋಜಿತ ಶಕ್ತಿಯನ್ನು eCVT ಸಹಾಯದಿಂದ ನೀಡುತ್ತದೆ. ಬ್ಯಾಟರಿ ವ್ಯವಸ್ಥೆಯು ಸ್ವಯಂ ಚಾರ್ಜಿಂಗ್ ಘಟಕವಾಗಿದ್ದು, ಪ್ಲಗ್ ಇನ್ ಮಾಡುವ ಅಗತ್ಯವಿಲ್ಲ.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

2022 ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಡ್ರೈವ್

ಮಾರುತಿ ಸುಜುಕಿಯು ಹೊಸ ಗ್ರ್ಯಾಂಡ್ ವಿಟಾರಾವನ್ನು ಟೂ-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಆಯ್ಕೆಗಳಲ್ಲಿ ನೀಡುತ್ತದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಕೇವಲ ಟೂ-ವೀಲ್ ಡ್ರೈವ್ ಆಗಿದೆ, ಆದರೂ ಇದು ಹೋಂಡಾ ಸಿಟಿ ಹೈಬ್ರಿಡ್‌ನಂತೆ ಕಂಪ್ಯೂಟರ್‌ಗಳಿಂದ ನಿಯಂತ್ರಿಸಲ್ಪಡುವ ಹೋಂಡಾ ಸಿಟಿ ಹೈಬ್ರಿಡ್‌ನಂತಲ್ಲದೆ, ಬಳಕೆದಾರರು ಆಯ್ಕೆಮಾಡಬಹುದಾದ ಶುದ್ಧ EV ಮೋಡ್ ಅನ್ನು ಹೊಂದಿದೆ.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

ಹೊಸ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮೈಲೇಜ್

2022 ರ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ 27.9 kmpl ಮೈಲೇಜ್ ಅನ್ನು ಹಿಂದಿರುಗಿಸುತ್ತದೆ. ಈ ಮೂಲಕ ಫುಲ್‌ ಟ್ಯಾಂಕ್‌ನಲ್ಲಿ 1,200 km ಗಿಂತ ಹೆಚ್ಚು ವ್ಯಾಪ್ತಿಯನ್ನು ಪಡೆಯಬಹುದು. ಇದು ಇಂದು ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಇಂಧನ-ಸಮರ್ಥ SUV ಆಗಿದೆ. ಇದೇ ಕಾರಣಕ್ಕೆ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಪಡೆಯಲು ವಾದಯೋಗ್ಯವಾಗಿ ಪ್ರಬಲ ಕಾರಣವಾಗಿದೆ.

ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್‌ಗೆ ಏಕಷ್ಟು ಬೇಡಿಕೆ: ಇಲ್ಲಿವೆ ಟಾಪ್ 5 ಕಾರಣಗಳು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಇನ್ಯಾವುದೇ ಕಾರು ಬ್ರಾಂಡ್‌ಗಳಿಗೆ ಇಲ್ಲದ ಬೇಡಿಕೆಯನ್ನು ಹಾಗೂ ವಿಶ್ವಾಸಾರ್ಹತೆಯನ್ನು ಪಡೆದುಕೊಂಡಿವೆ. ಕೈಗೆಟುಕುವ ಬೆಲೆ, ಉತ್ತಮ ವಿನ್ಯಾಸ, ಅಧಿಕ ಮೈಲೇಜ್ ಸೇರಿದಂತೆ ಹಲವು ವಿಭಾಗಗಳಲ್ಲಿ ಮಾರುತಿ ಸುಜುಕಿ ಕಾರುಗಳು ಇತರ ಬ್ರಾಂಡ್‌ಗಳಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ. ಇನ್ನು ಇದೀಗ ಹೈಬ್ರೀಡ್ ವಲಯಕ್ಕೂ ಲಗ್ಗೆಯಿಟ್ಟಿರುವ ಮಾರುತಿ ತನ್ನ ಗ್ರಾಂಡ್‌ ವಿಟಾರ ಮಾದರಿಗಳ ಮೂಲಕ ಮಾರುಕಟ್ಟಯಲ್ಲಿ ಕ್ರಾಂತಿ ಸೃಷ್ಟಿಸಲಿದೆಯೇ ಎಂಬುದನ್ನು ಕಾದುನೋಡಬೇಕು.

Most Read Articles

Kannada
English summary
Top 5 Features of Maruti Grand Vitara Strong Hybrid with Highest Mileage
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X