ವಾರದ ಸುದ್ದಿ: ಜಾರಿಯಾಗಲಿದೆ ಪೇ ಅಂಡ್ ಪಾರ್ಕ್ ನಿಯಮ, ಹಳೆಯ ವಾಹನಗಳಿಗೆ ಹೊಡೆತ ನೀಡಲಿದೆ ಸ್ಕ್ರ್ಯಾಪ್ ನೀತಿ..

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಪ್ರಮುಖ ಹೊಸ ಕಾರುಗಳ ಬಿಡುಗಡೆ ಜೊತೆಗೆ ಆಟೋಮೊಬೈಲ್ ವಲಯದಲ್ಲಿನ ಪ್ರಮುಖ ಬೆಳವಣಿಗಳು ಹೊಸ ಬದಲಾವಣೆ ಕಾರಣವಾಗಲಿದ್ದು, ಈ ವಾರದ ಪ್ರಮುಖ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಬೆಂಗಳೂರಿನಲ್ಲಿ ಜಾರಿಯಾಗಲಿದೆ ಪೇ ಅಂಡ್ ಪಾರ್ಕ್ ನೀತಿ

ಬೆಂಗಳೂರಿನ ಎಂಟು ವಲಯಗಳಲ್ಲೂ ಪಾವತಿಸಿದ ಪಾರ್ಕಿಂಗ್ ಸೌಲಭ್ಯವನ್ನು ಅನ್ನು ಪರಿಚಯಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಟೆಂಡರ್‌ಗಳನ್ನು ಆಹ್ವಾನಿಸಲು ಸಿದ್ಧವಾಗಿದ್ದು, ಹೊಸ ಉಪಕ್ರಮವು ವಾಹನ ದಟ್ಟಣೆಯನ್ನು ಪರಿಣಾಮಕಾರಿ ತಗ್ಗಿಸಲಿದೆ. ಪೇ ಅಂಡ್ ಪಾರ್ಕ್ ಆರಂಭಿಸಲು ನಗರದ್ಯಾಂತ ಈಗಾಗಲೇ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಹೊಸ ವ್ಯವಸ್ಥೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಉಚಿತ ವಾಹನ ನಿಲುಗಡೆ ಸೌಲಭ್ಯವನ್ನು ಆದಾಯದ ಮೂಲವಾಗಿ ಪರಿವರ್ತಿಸಲು ಮುಂದಾಗಿರುವ ಪಾಲಿಕೆಯು ಫೆಬ್ರವರಿ 2, 2021 ರಂದು ರಾಜ್ಯ ಸರ್ಕಾರವು ಅನುಮೋದಿಸಿರುವ ಪಾರ್ಕಿಂಗ್ ನೀತಿ ಅಡಿಯಲ್ಲಿ ಹೊಸ ಸೌಲಭ್ಯವನ್ನು ಜಾರಿಗೊಳಿಸಲು ಮುಂದಾಗಿದೆ. ಬಿಬಿಎಂಪಿಯು ನಗರ ಭೂ ಸಾರಿಗೆ ನಿರ್ದೇಶನಾಲಯದ (DULT) ವಿವರವಾದ ಅಧ್ಯಯನದ ನಂತರವೇ ಹೊಸ ಯೋಜನೆ ಸಿದ್ಧಪಡಿಸಲಾಗಿದ್ದು, ಹೊಸ ಯೋಜನೆ ಮೂಲಕ ಎಂಟು ವಲಯಗಳಿಂದ ಕನಿಷ್ಠ ರೂ. 188 ಕೋಟಿ ವಾರ್ಷಿಕ ಆದಾಯವನ್ನು ಗಳಿಸುವ ಭರವಸೆ ಹೊಂದಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಬಿಬಿಎಂಪಿ ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಪಾವತಿಸಿದ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿರುವ ರಸ್ತೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತಿದ್ದು, ಪ್ರದೇಶಗಳಿಗೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕವು ಪಾವತಿಸಬೇಕಾಗುತ್ತದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಸ್ಕ್ರ್ಯಾಪ್ ಆಗಲಿವೆ ರಾಜ್ಯದಲ್ಲಿನ 80 ಲಕ್ಷ ಖಾಸಗಿ ವಾಹನಗಳು

ದೇಶದಲ್ಲಿ ಇಂಧನ ಚಾಲಿತ ವಾಹನಗಳ ಹೆಚ್ಚಳದಿಂದ ಮಾಲಿನ್ಯ ಮಿತಿಮೀರಿದ್ದು, 15 ವರ್ಷಕ್ಕಿಂತ ಹಳೆಯ ವಾಹನಗಳ ಫಿಟ್‌ನೆಸ್ ಪರಿಶೀಲಿಸಿ ಸ್ಕ್ರ್ಯಾಪ್ ಮಾಡುವಂತೆ ಕೇಂದ್ರ ಸರ್ಕಾರ ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ತಂದಿದೆ. ಅದರಂತೆ ಕರ್ನಾಟಕದಲ್ಲಿಯೂ ಸುಮಾರು 80 ಲಕ್ಷಕ್ಕೂ ಹೆಚ್ಚು ಹಳೆಯ ವಾಹನಗಳು ಈ ನೀತಿಯಡಿ ಸ್ಕ್ರ್ಯಾಪ್ ಆಗಲಿವೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಕರ್ನಾಟಕದಲ್ಲಿನ 2.8 ಕೋಟಿ ನೋಂದಾಯಿತ ವಾಹನಗಳಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ವಾಹನಗಳು 15 ವರ್ಷಕ್ಕಿಂತಲೂ ಹಳೆಯದಾಗಿವೆ. ಇವುಗಳಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು, ಕರ್ನಾಟಕ ಸರ್ಕಾರವು ಅಂತಿಮವಾಗಿ ಆಗಸ್ಟ್ 2021 ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಕಾರುಗಳ ಬೆಲೆ ಹೆಚ್ಚಳ

ಹೊಸ ಫೀಚರ್ಸ್ ಅಳವಡಿಕೆ ಹಿನ್ನೆಲೆಯಲ್ಲಿ ಹೊಸ ಕಾರುಗಳ ಬೆಲೆಯು ಸಾಕಷ್ಟು ಹೆಚ್ಚಳವಾಗುತ್ತಿದ್ದು, ಎಂಜಿ ಮೋಟಾರ್, ಫೋಕ್ಸ್‌ವ್ಯಾಗನ್ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಬೆಲೆ ಹೆಚ್ಚಳ ಘೋಷಣೆ ಮಾಡಿವೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ

ಭಾರತದಲ್ಲಿ ವಾಹನಗಳ ಕಾರ್ಬನ್ ಹೊರಸೂಸುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ತರಲು ಸಜ್ಜಾಗುತ್ತಿದೆ. ಇದಕ್ಕಾಗಿ ಭಾರತದಲ್ಲಿನ ಕಾರುಗಳ ಕಾರ್ಬನ್ ಹೊರಸೂಸುವಿಕೆಯನ್ನು ಆಧರಿಸಿ ತೆರಿಗೆಯನ್ನು ವಿಧಿಸಲು ಕೇಂದ್ರವು ಕಾರ್ಯನಿರ್ವಹಿಸುತ್ತಿದೆ ಎಂದು ಬೃಹತ್ ಕೈಗಾರಿಕೆಗಳ ಕಾರ್ಯದರ್ಶಿ ಅರುಣ್ ಗೋಯೆಲ್ ಹೇಳಿದ್ದಾರೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಈ ಹೊಸ ಯೋಜನೆಯು ಕಾರುಗಳ ಪವರ್‌ಟ್ರೇನ್ ಪ್ರಕಾರವನ್ನು ಆಧರಿಸಿರುವುದಕ್ಕಿಂತ ಹೆಚ್ಚಾಗಿ ವಾಹನಗಳು ಹೊರಸೂಸುವ ಕಾರ್ಬನ್ ಮಾನದಂಡಗಳೊಂದಿಗೆ ತೆರಿಗೆ ದರಗಳನ್ನು ನಿಗಧಿಪಡಿಸುತ್ತದೆ. ಇದಕ್ಕಾಗಿ ತಜ್ಞರ ತಂಡವು ಪ್ರಸ್ತುತ ಜಾಗತಿಕ ಮತ್ತು ದೇಶೀಯ ಡೇಟಾವನ್ನು ಪರಿಶೀಲಿಸುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹೈಬ್ರಿಡ್ ಕಾರುಗಳಿಗೆ ಕಡಿಮೆ ಪ್ರಮಾಣದ ತೆರಿಗೆ ವಿಧಿಸುವ ಸಾಧ್ಯತೆಗಳಿವೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆ

ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಅಲ್ಟುರಾಸ್ ಜಿ4 ಲೈನ್-ಅಪ್‌ನಲ್ಲಿ ಹೊಸ ರೂಪಾಂತರವನ್ನು ಪರಿಚಯಿಸಿದೆ. ಈ ಹೊಸ ರೂಪಾಂತರವನ್ನು 2WD ಹೈ ಎಂದು ಕರೆಯಲ್ಪಡುತ್ತದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 30.68 ಲಕ್ಷದಿಂದ ಪ್ರಾರಂಭವಾಗುತ್ತದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಮಹೀಂದ್ರಾ ಅಲ್ಟುರಾಸ್ ಎಸ್‍ಯುವಿಯ ಹೊಸ 2WD ಹೈ ಎಂದು ಕರೆಯಲ್ಪಡುವ ಹೊಸ ರೂಪಾಂತರದೊಂದಿಗೆ ಈ ಹಿಂದೆ ಲಭ್ಯವಿರುವ 4WD ರೂಪಾಂತರವನ್ನು ಬದಲಿಸುವ ಸಾಧ್ಯತೆಯಿದೆ, ಹೊರಹೋಗುವ 4WD ರೂಪಾಂತರಕ್ಕೆ ಹೋಲಿಸಿದರೆ ಅಲ್ಟುರಾಸ್ ಜಿ4 2WD ಹೈ ರೂಪಾಂತರದಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಕಳೆದುಕೊಳ್ಳುತ್ತದೆ. ಈ ಬದಲಾವಣೆಯಿಂದಾಗಿ ರೂ.1.20 ಲಕ್ಷ ಬೆಲೆ ಇಳಿಕೆಯಾಗಿದೆ. ಎಸ್‍ಯುವಿಯ 4WD ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 31.88 ಲಕ್ಷವಾಗಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಬಿಡುಗಡೆಗೆ ಸಿದ್ದವಾದ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೇ ತಿಂಗಳು 28 ರಂದು ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದ್ದು, ಹೊಸ ಇವಿ ಕಾರು ಬಜೆಟ್ ಬೆಲೆಯೊಂದಿಗೆ ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಖರೀದಿಗೆ ಲಭ್ಯವಾಗಲಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಟಿಗೋರ್ ಇವಿ ಮತ್ತು ನೆಕ್ಸಾನ್ ಇವಿ ಬಿಡುಗಡೆಯ ನಂತರ ಮೂರನೇ ಎಲೆಕ್ಟ್ರಿಕ್ ಮಾದರಿಯಾಗಿರುವ ಟಿಯಾಗೋ ಇವಿಯು ಟಿಗೋರ್ ಇವಿ ಮಾದರಿಯಲ್ಲಿ ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಹೊಂದರಲಿದ್ದು, ಇದು ರೂ.10 ಲಕ್ಷ ಬಜೆಟ್‌ನಲ್ಲಿ ಅತ್ಯುತ್ತಮ ಮೈಲೇಜ್ ಹೊಂದಿರುವ ಇವಿ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ವೊಲ್ವೊ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನೀರಿಕ್ಷಿತ 2023ರ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಸರಣಿ ಎಸ್‌ಯುವಿ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಎಸ್‌ಯುವಿ ಮಾದರಿಗಳು ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಹೊಸ ಫೀಚರ್ಸ್ ಹೊಂದಿರುವ ಎಕ್ಸ್‌ಸಿ40 ಎಸ್‌ಯುವಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 45.90 ಲಕ್ಷ ಬೆಲೆ ಹೊಂದಿದ್ದರೆ ಎಕ್ಸ್‌ಸಿ90 ಎಸ್‌ಯುವಿ ಮಾದರಿಯು ರೂ. 94.90 ಲಕ್ಷ ಬೆಲೆ ಹೊಂದಿದೆ. ವೊಲ್ವೊ ಕಂಪನಿಯು ಎಕ್ಸ್‌ಸಿ40 ಹೊಸ ಮಾದರಿಯ ಖರೀದಿಗಾಗಿ ಗ್ರಾಹಕರಿಗೆ ಆಫರ್ ಸಹ ನೀಡಿದ್ದು, ಮುಂಬರುವ ದಸರಾ ಮತ್ತು ದೀಪಾವಳಿಯ ತನಕ ಹೊಸ ಕಾರು ಖರೀದಿದಾರರಿಗೆ ರೂ. 43.20 ಲಕ್ಷ ಬೆಲೆಯಲ್ಲಿ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಬಿಡುಗಡೆಗೆ ಸಿದ್ದವಾದ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ

ಭಾರತದಲ್ಲಿ ಮೊದಲ ಹಂತದಲ್ಲಿ ಇ6 ಎಂಪಿವಿ ಕಾರು ಬಿಡುಗಡೆ ಮಾಡಿದ್ದ ಕಂಪನಿಯು ಇದೀಗ ಎಸ್‌ಯುವಿ ವಿಭಾಗಕ್ಕೆ ಹೊಸ ಅಟ್ಟೊ 3 ಪರಿಚಯಿಸುತ್ತಿದ್ದು, ಹೊಸ ಕಾರು ಮುಂದಿನ ತಿಂಗಳು 11ರಂದು ಭಾರತದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಅಟ್ಟೊ 3 ಎಸ್‌ಯುವಿ ಮಾದರಿಯಲ್ಲಿ ಬಿವೈಡಿ ಕಂಪನಿಯು 60.48kWh ಮತ್ತು 49.92kWh ಬ್ಯಾಟರಿ ಪ್ಯಾಕ್ ಆಯ್ಕೆ ನೀಡುವ ಸಾಧ್ಯತೆಯಿದ್ದು, ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಖರೀದಿಸಬಹುದಾಗಿದೆ. 60.48kWh ಬ್ಯಾಟರಿ ಪ್ಯಾಕ್ ಮಾದರಿಯು ಪ್ರತಿ ಚಾರ್ಜ್‌ಗೆ 420 ಕಿ.ಮೀ ಮೈಲೇಜ್ ಹೊಂದಿದ್ದರೆ 49.92kWh ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಮಾದರಿಯು 320 ಕಿ.ಮೀ ಮೈಲೇಜ್ ಹೊಂದಿದ್ದು, ಉತ್ತಮ ಮೈಲೇಜ್ ಪ್ರೇರಣೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

Most Read Articles

Kannada
English summary
Top auto news of the week paid parking path start soon volvo xc40 xc90 launched and more
Story first published: Saturday, September 24, 2022, 21:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X