ವಾರದ ಸುದ್ದಿ: ಟಾಟಾ ಟಿಯಾಗೋ ಇವಿ ಬಿಡುಗಡೆ, 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಪ್ರಮುಖ ಹೊಸ ಕಾರುಗಳ ಬಿಡುಗಡೆ ಜೊತೆಗೆ ಆಟೋಮೊಬೈಲ್ ವಲಯದಲ್ಲಿನ ಪ್ರಮುಖ ಬೆಳವಣಿಗಳು ಹೊಸ ಬದಲಾವಣೆ ಕಾರಣವಾಗಲಿದ್ದು, ಈ ವಾರದ ಪ್ರಮುಖ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ, ನೆಕ್ಸಾನ್ ಮ್ಯಾಕ್ಸ್ ಇವಿ, ಟಿಗೋರ್ ಇವಿ ಮತ್ತು ಎಕ್ಸ್‌ಪ್ರೆಸ್ಸ್-ಟಿ ಇವಿ ಕಾರುಗಳ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಟಿಯಾಗೋ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಿಯಾಗೋ ಎಲೆಕ್ಟ್ರಿಕ್ ಕಾರು ಮಾದರಿಯು ಎಕ್ಸ್‌ಇ, ಎಕ್ಸ್‌ಟಿ, ಎಕ್ಸ್‌ಜೆಡ್ ಪ್ಲಸ್, ಎಕ್ಸ್‌ಜೆಡ್ ಪ್ಲಸ್ ಟೆಕ್ ಲಕ್ಸ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಬ್ಯಾಟರಿ ಆಯ್ಕೆಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.79 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ

ಆಟೋ ಉದ್ಯಮದಲ್ಲಿ ಹೊಸ ಬದಲಾಣೆಗಾಗಿ ನಿರಂತರ ಬದಲಾವಣೆಗಳನ್ನು ಘೋಷಣೆ ಮಾಡುತ್ತಿರುವ ಕೇಂದ್ರ ಸರ್ಕಾರವು ಹೊಸ ಕಾರುಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ಕಡ್ಡಾಯವಾಗಿ 6 ಏರ್‌ಬ್ಯಾಗ್ ಅಳವಡಿಕೆಯನ್ನು ಜಾರಿಗೆ ತರುತ್ತಿದ್ದು, ಮುಂದಿನ ತಿಂಗಳು ಅಕ್ಟೋಬರ್ 1ರಿಂದ ಜಾರಿಯಾಬೇಕಿದ್ದ ಹೊಸ ನಿಯಮವನ್ನು ಕಾರಣಾಂತರಗಳಿಂದ 2023ರ ಅಕ್ಟೋಬರ್ 1ರಿಂದ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ರಸ್ತೆ ಅಪಘಾತಗಳಲ್ಲಿ ಪ್ರಾಣಹಾನಿಯನ್ನು ತಗ್ಗಿಸಲು ಹೊಸ ವಾಹನಗಳ ಸುರಕ್ಷಾ ನಿಯಮವನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿರುವ ಕೇಂದ್ರ ಸರ್ಕಾರವು ಇದೀಗ ಗರಿಷ್ಠ ಏರ್‌ಬ್ಯಾಗ್ ಅಳವಡಿಕೆಗೆ ಸುಗ್ಗಿವಾಜ್ಞೆ ಹೊರಡಿಸಿದ್ದು, ಮುಂದಿನ ವರ್ಷದ ಅಕ್ಟೋಬರ್ 1ರಿಂದ ಎಂ-1 ವರ್ಗದಲ್ಲಿರುವ ಪ್ರತಿ ಕಾರುಗಳಲ್ಲೂ ಕಡ್ಡಾಯವಾಗಿ ಆರು ಏರ್‌ಬ್ಯಾಗ್ ಹೊಂದಿರಬೇಕಾಗುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಇಕ್ಯೂಎಸ್ 580 4 ಮ್ಯಾಟಿಕ್ ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 1.55 ಕೋಟಿ ಬೆಲೆ ಹೊಂದಿದೆ. ಇಕ್ಯೂಎಸ್ 580 4 ಮ್ಯಾಟಿಕ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಮರ್ಸಿಡಿಸ್ ಕಂಪನಿಯು 107.8 kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ ಎಆರ್‌ಎಐ ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ 857 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಕಾರಿನಲ್ಲಿ ಮರ್ಸಿಡಿಸ್ ಕಂಪನಿಯು ಎರಡು ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಆಕ್ಸೆಲ್‌ಗೂ ಪ್ರತ್ಯೇಕವಾಗಿ ಶಕ್ತಿ ಪೂರೈಕೆ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್‌ಗೆ ಸಹಕಾರಿಯಾಗಿದೆ. ಎರಡು ಎಲೆಕ್ಟ್ರಿಕ್ ಮೋಟಾರ್ ಮೂಲಕ ಹೊಸ ಕಾರು 516 ಬಿಎಚ್‌ಪಿ ಮತ್ತು 855 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಹೊಸ ಕಾರು 4.3 ಸೆಕೆಂಡ್‌ಗಳಲ್ಲಿ ಪ್ರತಿಗಂಟೆಗೆ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಬಲ್ಲದು.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707

ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿಯಾದ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಈ ಹೊಸ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.63 ಕೋಟಿಯಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಸ್ಟ್ಯಾಂಡರ್ಡ್ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್‌ನ ಹೆಚ್ಚು ಪ್ರಬಲ ಆವೃತ್ತಿಯಾಗಿದೆ. ಈ ಹೊಸ ಎಸ್‍ಯುವಿಯ ಹೆಸಿರಿನಲ್ಲಿರುವ 707 ಕಾರು ಉತ್ಪಾದಿಸುವ ಬಿಹೆಚ್‍ಪಿ ಪವರ್ ಅನ್ನು ಸೂಚಿಸುತ್ತದೆ, ಆದ್ದರಿಂದ ವಿಶ್ವದ ಅತ್ಯಂತ ಶಕ್ತಿಶಾಲಿ ಐಷಾರಾಮಿ ಎಸ್‍ಯುವಿಯಾಗಿದೆ. ಇದು ಲ್ಯಾಂಬೋರ್ಗಿನಿ ಉರುಸ್‌ಗಿಂತಲೂ ವೇಗವಾಗಿದೆ ಮತ್ತು ಈಗ ಖರೀದಿಸಬಹುದಾದ ಅತ್ಯಂತ ಐಷಾರಾಮಿ ಸೂಪರ್ ಎಸ್‍ಯುವಿಯಾಗಿದೆ. ಈ ಹೊಸ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ಎಸ್‍ಯುವಿ ಮಾದರಿಯು ಬೆಂಟ್ಲಿ ಬೆಂಟೈಗಾ, ಫೆರಾರಿ ಪುರೊಸಾಂಗ್ ಮತ್ತು ಲ್ಯಾಂಬೋರ್ಗಿನಿ ಉರುಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಬಿಡುಗಡೆ

ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿ ಬಿಡುಗಡೆ ಮಾಡಿದೆ. ದೇಶಿಯ ಮಾರುಕಟ್ಟೆಯಲ್ಲಿನ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಇದೀಗ ಯೋಧಾ 2.0, ಇಂಟ್ರಾ ವಿ50, ಇಂಟ್ರಾ ವಿ20 ಸಿಎನ್‌ಜಿ ಮಾದರಿಯನ್ನು ಹೊಸ ಬದಲಾವಣೆಯೊಂದಿಗೆ ಪರಿಚಯಿಸಿದ್ದು, ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿನ ಹೊಸ ಬದಲಾವಣೆಗಳ ನಂತರ ವಾಣಿಜ್ಯ ಪಿಕಪ್ ಟ್ರಕ್‌ಗಳ ಶ್ರೇಣಿಯನ್ನು ಸಹ ನವೀಕರಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ವಾಹನಗಳಲ್ಲಿ ಯೋಧಾ 2.0 ಪಿಕ್ಅಪ್ ಟ್ರಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷ ಬೆಲೆ ಹೊಂದಿದ್ದರೆ ವಿ50 ಮತ್ತು ವಿ20 ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.67 ಲಕ್ಷ ಬೆಲೆ ಹೊಂದಿವೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಬಿಡುಗಡೆಗೆ ಸಜ್ಜಾದ ಎಂಜಿ ಹೆಕ್ಟರ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ ತನ್ನ ಅತ್ಯಂತ ಜನಪ್ರಿಯ ಹೆಕ್ಟರ್ ಎಸ್‍ಯುವಿಯನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ 2022ರ ಎಂಜಿ ಹೆಕ್ಟರ್ ಎಸ್‍ಯುವಿಯು ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಭಾರತದಲ್ಲಿ ತ್ವರಿತವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಬ್ರ್ಯಾಂಡ್‌ಗಳಲ್ಲಿ ಎಂಜಿ ಕೂಡಾ ಒಂದಾಗಿದೆ. ಎಂಜಿ ಕಂಪನಿಯು ಹೆಕ್ಟರ್, ಗ್ಲೋಸ್ಟರ್, ಆಸ್ಟರ್ ಮತ್ತು ಜೆಡ್ಎಸ್ ಇವಿ ಯಂತಹ ಮಾದರಿಗಳನ್ನು ಹೊಂದಿವೆ. ಎಂಜಿ ಮೋಟಾರ್ ಇಂಡಿಯಾ ಮೊದಲು ಬಿಡುಗಡೆಗೊಳಿಸಿದ ಮಾದರಿ ಹೆಕ್ಟರ್ ಆಗಿದೆ. ಈ ಎಸ್‍ಯುವಿಯನ್ನು 2019ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದನ್ನು 2021 ರಲ್ಲಿ ನವೀಕರಿಸಲ್ಪಟ್ಟಿದೆ. ಮತ್ತು ಇದೀಗ ಭಾರತದಲ್ಲಿ ನವೀಕರಿಸಿದ ಹೆಕ್ಟರ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

Most Read Articles

Kannada
English summary
Top auto news of the week tata tiago ev aston martin dbx 707 launched and more
Story first published: Sunday, October 2, 2022, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X