ವಾರದ ಸುದ್ದಿ: ವಾಹನ ವಿಮೆ ಹೆಚ್ಚಳ, ಇವಿ ಉತ್ಪಾದನೆಗೆ ಸಿದ್ದವಾದ ಓಲಾ, ಇವಿ6 ಸೇಫ್ಟಿ ರೇಟಿಂಗ್ಸ್ ಬಹಿರಂಗ..

ಇಂಧನಗಳ ದರ ಇಳಿಸುವ ಮೂಲಕ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ್ದ ಕೇಂದ್ರ ಸರ್ಕಾರವು ಇದೀಗ ವಾಹನಗಳ ಥರ್ಡ್ ಪಾಟಿ ಇನ್ಸುರೆನ್ಸ್ ಪ್ರೀಮಿಯಂಗಳನ್ನು ಹೆಚ್ಚಿಸುವುದಾಗಿ ಹೇಳಿಕೊಂಡಿದ್ದು, ಈ ವಾರದ ಪ್ರಮುಖ ಸುದ್ದಿಗಳಲ್ಲಿ ಇನ್ಸುರೆನ್ಸ್ ದರ ಹೆಚ್ಚಳದ ಸುದ್ದಿಯ ಜೊತೆಗೆ ಪ್ರಮುಖ ಕಾರು ಮಾದರಿಗಳ ಬಿಡುಗಡೆ ಸುದ್ದಿ ಕೂಡಾ ಪ್ರಮುಖವಾಗಿವೆ. ಹೀಗಾಗಿ ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ವಾರದ ಆಟೋ ಸುದ್ದಿಗಳು

ಥರ್ಡ್ ಪಾರ್ಟಿ ಇನ್ಸುರೆನ್ಸ್ ಹೆಚ್ಚಳ

ಮೂರನೇ ವ್ಯಕ್ತಿಯ ವಾಹನ ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ಕಾರುಗಳು, ಬೈಕ್‌ಗಳು ಮತ್ತು ವಾಣಿಜ್ಯ ವಾಹನಗಳಿಗೆ ಹೊಸ ಪ್ರೀಮಿಯಂ ದರಗಳನ್ನು ತಿಳಿಸಲಾಗಿದೆ.

ಹೊಸ ಅಧಿಸೂಚನೆಯ ಪ್ರಕಾರ ಜೂನ್ 1, 2022 ರಿಂದ ಜಾರಿಗೆ ಬರುವಂತೆ 150 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಮೇಲೆ ಮೂರನೇ ವ್ಯಕ್ತಿಯ ವಿಮಾ ಪ್ರೀಮಿಯಂ ದರವು ಶೇ. 15 ರಷ್ಟು ಹೆಚ್ಚಿಸಲಾಗಿದ್ದು, 150 ಸಿಸಿ ಒಳಗಿನ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ವಾರದ ಆಟೋ ಸುದ್ದಿಗಳು

150 ಸಿಸಿಯಿಂದ 350 ಸಿಸಿ ಒಳಗಿನ ದ್ವಿಚಕ್ರ ವಾಹನಗಳಿಗೆ ಹೆಚ್ಚಳವಾದ ಪ್ರೀಮಿಯಂ ದರ ಪಟ್ಟಿಯಲ್ಲಿ ರೂ. 1,366 ವಿಧಿಸಲಾಗುತ್ತಿದ್ದು, 350 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ರೂ. 2,804 ವಿಧಿಸಲು ನಿರ್ಧರಿಸಿದೆ. ಅದೇ ರೀತಿ ಕಾರುಗಳ ವಿಭಾಗದಲ್ಲಿ 1000 ಸಿಸಿಯಿಂದ 1500 ಸಿಸಿ ಕಾರುಗಳು ಅಥವಾ ಎಸ್‌ಯುವಿಗಳಂತಹ ಖಾಸಗಿ ನಾಲ್ಕು ಚಕ್ರದ ವಾಹನಗಳ ವಿಮಾ ಮೊತ್ತವನ್ನು ಶೇಕಡಾ 6 ರಷ್ಟು ಹೆಚ್ಚಿಸಲಾಗುತ್ತಿದ್ದು, ಈ ಮೊದಲಿನ ರೂ. 3,221 ಪ್ರೀಮಿಯಂ ಮೊತ್ತವು ರೂ. 3,416 ಕ್ಕೆ ಏರಿಕೆಯಾಗಲಿದೆ.

ವಾರದ ಆಟೋ ಸುದ್ದಿಗಳು

ಅದೇ ಸಮಯದಲ್ಲಿ ವಿಮೆ ದರ ಪರಿಷ್ಕರಣಾ ಪಟ್ಟಿಯಲ್ಲಿ 1500 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಖಾಸಗಿ ಕಾರುಗಳ ಮೇಲಿನ ಪ್ರೀಮಿಯಂನಲ್ಲಿ ಅಲ್ಪ ಪ್ರಮಾಣದ ಕಡಿತವನ್ನು ಮಾಡಲಾಗಿದ್ದು, 1,500 ಸಿಸಿ ಮೇಲ್ಪಟ್ಟ ಕಾರುಗಳುಗಳಿದ್ದ ಪ್ರೀಮಿಯಂ ದರವು ರೂ. 7,890 ರಿಂದ ರೂ. 7,897ಕ್ಕೆ ಏರಿಕೆಯಾಗಿದೆ.

ವಾರದ ಆಟೋ ಸುದ್ದಿಗಳು

10,000 ಕೋಟಿ ಹೂಡಿಕೆಗೆ ಸಿದ್ಧವಾದ ಓಲಾ

ಎಲೆಕ್ಟ್ರಿಕ್ ವಾಹನ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ದೇಶೀಯ ದ್ವಿಚಕ್ರ ವಾಹನ ತಯಾರಕ ಕಂಪನಿ ಓಲಾ ಇವಿ ಕಾರು ಮಾದರಿಗಳಿಗಾಗಿ 10,000 ಕೋಟಿ ಹೂಡಿಕೆಯೊಂದಿಗೆ ಹೊಸ ಸ್ಥಾವರವನ್ನು ಸ್ಥಾಪಿಸಲು ಮುಂದಾಗಿದ್ದು, ಹೊಸ ಸ್ಥಾವರವನ್ನು ಮುಖ್ಯವಾಗಿ ಬ್ಯಾಟರಿ ಉತ್ಪಾದನೆಗೆ ಮತ್ತು ಸಾಧ್ಯವಾದರೆ ಕಾರು ಉತ್ಪಾದನೆಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.

ವಾರದ ಆಟೋ ಸುದ್ದಿಗಳು

ಓಲಾ ಎಲೆಕ್ಟ್ರಿಕ್ ಸದ್ಯ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದ್ದು, 2021 ರಲ್ಲಿ ಆರಂಭವಾಗಿದ್ದ ಓಲಾ ಸ್ಕೂಟರ್ ಮಾರಾಟವು ತನ್ನ ಆರಂಭದಿಂದಲೂ ಸ್ಕೂಟರ್‌ಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿದೆ. ಇದೀಗ ಕಂಪನಿಯು ಭಾರೀ ಹೂಡೆಕೆಯೊಂದಿಗೆ ಇವಿ ವಾಹನ ತಯಾರಿಕೆಗಾಗಿ ಹೊಸ ಉತ್ಪಾದನಾ ಘಟಕ ನಿರ್ಮಿಸಲು ಸಜ್ಜುಗೊಳ್ಳುತ್ತಿದೆ.

ವಾರದ ಆಟೋ ಸುದ್ದಿಗಳು

ವೆನ್ಯೂ 3 ಲಕ್ಷ ಮಾರಾಟದ ಮೈಲಿಗಲ್ಲು

ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟವು ವೇಗವಾಗಿ ಬೆಳವಣಿಗೆ ಕಂಡಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗಿರುವ ಬಹುತೇಕ ಕಾರು ಮಾದರಿಗಳು ಭಾರೀ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ವಾರದ ಆಟೋ ಸುದ್ದಿಗಳು

ಸಬ್ ಫೋರ್ ಮೀಟರ್ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹ್ಯುಂಡೈ ಕಂಪನಿಯ ವೆನ್ಯೂ ಮಾದರಿಯು ಕೂಡಾ ಅತ್ಯುತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ವೆನ್ಯೂ ಕಾರು ಮಾದರಿಯು ಬಿಡುಗಡೆಯಾದ ನಂತರ ಭಾರತದಲ್ಲಿ ಇದುವರೆಗೆ 3 ಲಕ್ಷ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಘೋಷಿಸಿದೆ. ಈ ಮಾದರಿಯು 2021 ರಲ್ಲಿ 1.08 ಲಕ್ಷ ಯುನಿಟ್‌ಗಳ ಮಾರಾಟವನ್ನು ಹೊಂದಿದೆ. ಪ್ರಾರಂಭವಾದಾಗಿನಿಂದ ಮಾರಾಟವಾದ ಒಟ್ಟು ವೆನ್ಯೂ ಯೂನಿಟ್‌ಗಳಲ್ಲಿ ಸುಮಾರು 18 ಪ್ರತಿಶತದಷ್ಟು ಬ್ಲೂಲಿಂಕ್ ಸಂಪರ್ಕಿತ ಕಾರು ತಂತ್ರಜ್ಞಾನವನ್ನು ಹೊಂದಿದೆ.

ವಾರದ ಆಟೋ ಸುದ್ದಿಗಳು

ಮರಳಿ ಬರಲಿದೆ ಜನಪ್ರಿಯ ಅಂಬಾಸಿಡರ್ ಕಾರು

ಅಂಬಾಸಿಡರ್ ಆವೃತ್ತಿ 2.0 ಭಾರತದಲ್ಲಿ ಮತ್ತೆ ಲಭ್ಯವಾಗಲಿದ್ದು, ಇನ್ನು 2 ವರ್ಷಗಳಲ್ಲಿ ಭಾರತದ ರಸ್ತೆಗಿಳಿಯಲಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಕಾರು ಹೊಸ ಅವತಾರ ಮತ್ತು ಹೊಸ ವಿಶೇಷ ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಪ್ರಸ್ತುತ ಈ ಕಾರನ್ನು ಹಿಂದ್ ಮೋಟಾರ್ ಫೈನಾನ್ಶಿಯಲ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಫ್ರೆಂಚ್ ಕಾರು ತಯಾರಕ ಫ್ಯೂಜೊ ಅಭಿವೃದ್ಧಿಪಡಿಸುತ್ತಿದೆ.

ವಾರದ ಆಟೋ ಸುದ್ದಿಗಳು

ಹೊಸ ಅಂಬಾಸಿಡರ್ ಕಾರು ಎಲೆಕ್ಟ್ರಿಕ್ ಎಂಜಿನ್ ಆಯ್ಕೆಯೊಂದಿಗೆ ಹೊಸ ಯಾಂತ್ರಿಕ ವೈಶಿಷ್ಟ್ಯಗಳು ಮತ್ತು ವಿನ್ಯಾಸವನ್ನು ಪಡೆಯಲಿದೆ. ಈಗಾಗಲೇ ಹೊಸಯ ಕಾಮಗಾರಿಗಳು ಮುಂದುವರಿದ ಹಂತ ತಲುಪಿದೆ ಎಂದು ಹಿಂದೂಸ್ತಾನ್ ಮೋಟಾರ್ ಕಂಪನಿಯ ನಿರ್ದೇಶಕ ಉತ್ತಮ್ ಬೋಸ್ ತಿಳಿಸಿದ್ದಾರೆ.

ವಾರದ ಆಟೋ ಸುದ್ದಿಗಳು

ಕಿಯಾ ಇವಿ6 ಸೇಫ್ಟಿ ರೇಟಿಂಗ್ಸ್ ಬಹಿರಂಗ

ದಕ್ಷಿಣ ಕೊರಿಯಾದ ಕಾರು ತಯಾರಕರಾದ ಕಿಯಾ ತನ್ನ ಬಹುನಿರೀಕ್ಷಿತ ಇವಿ6 ಎಲೆಕ್ಟ್ರಿಕ್ ಕಾರಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು 2022ರ ಜೂನ್ 2 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ವಾರದ ಆಟೋ ಸುದ್ದಿಗಳು

ಕಿಯಾ ಕಂಪನಿಯು ಇತ್ತೀಚೆಗೆ ತನ್ನ ಇವಿ6 ಎಲೆಕ್ಟ್ರಿಕ್ ಕಾರ್ ಅನ್ನು ಎನ್‌ಸಿಎಪಿ (ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದೆ. ಕಿಯಾ ಇವಿ6 ಪೂರ್ಣ 5 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ವಯಸ್ಕರ ಸುರಕ್ಷತೆಗಾಗಿ ಲಭ್ಯವಿರುವ 38 ರಲ್ಲಿ 34.48 ಅಂಕಗಳನ್ನು ಗಳಿಸಿದೆ. ಮಕ್ಕಳ ಸುರಕ್ಷತೆಗಾಗಿ, ಇದು 49 ರಲ್ಲಿ 42.96 ಅಂಕಗಳನ್ನು ಗಳಿಸಿದೆ. ರಸ್ತೆ ಬಳಕೆದಾರರ ರಕ್ಷಣೆಯನ್ನು 64% ಎಂದು ರೇಟ್ ಮಾಡಲಾಗಿದೆ ಆದರೆ ಸುರಕ್ಷತಾ ಸಹಾಯದ ವೈಶಿಷ್ಟ್ಯಗಳನ್ನು 88% ಎಂದು ರೇಟ್ ಮಾಡಲಾಗಿದೆ.

ವಾರದ ಆಟೋ ಸುದ್ದಿಗಳು

ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ಹೊಸ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ವಾರದ ಆಟೋ ಸುದ್ದಿಗಳು

ಇದು ಕಾರ್ಪೊರೇಟ್ ಎಡಿಷನ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಟಿ ಮತ್ತು ಎಎಂಟಿ ರೂಪಾಂತರಗಳಾಗಿದೆ. ಈ ರೂಪಾಂತರಗಳ ಬೆಲೆಗಳು ಕ್ರಮವಾಗಿ ಎಕ್ಸ್ ಶೋರೂಂ ಪ್ರಕಾರ ರೂ.6.29 ಲಕ್ಷ ಮತ್ತು ರೂ.6.98 ಲಕ್ಷಗಳಾಗಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಕಾರ್ಪೊರೇಟ್ ಎಡಿಷನ್ ಹೊಸ ಸ್ಪೋರ್ಟಿ ಮತ್ತು ಹೈ-ಟೆಕ್ ವಿನ್ಯಾಸವನ್ನು ಒಳಗೊಂಡಿದೆ. ಇದರಿಂದ ಈ ಹೊಸ ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಹೆಚ್ಚು ಯುವ ಖರೀದಿದಾರರನ್ನು ಸೆಳೆಯಬಹುದು.

ವಾರದ ಆಟೋ ಸುದ್ದಿಗಳು

ಸಿಟಿ ಪಿಕ್-ಅಪ್ ಬಿಡುಗಡೆ

ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಬೊಲೆರೊ ಸಿಟಿ ಪಿಕ್ಅಪ್ ಮಾದರಿಯು ಎಂಟ್ರಿ ಲೆವಲ್ ಮಾದರಿಯಾಗಿದ್ದು, ಹೊಸ ವಾಣಿಜ್ಯ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.79 ಲಕ್ಷ ಬೆಲೆ ಹೊಂದಿದೆ. ಹೊಸ ಆವೃತ್ತಿಯಲ್ಲಿ ಈಗಾಗಲೇ ಖರೀದಿಗೆ ಲಭ್ಯವಿರುವ ಎಕ್ಸ್‌ಟ್ರಾ ಲಾಂಗ್ ಮತ್ತು ಎಕ್ಸ್‌ಟ್ರಾ ಸ್ಟ್ರಾಂಗ್ ರೂಪಾಂತರಗಳಿಂತಲೂ ಕಡಿಮೆ ದರ್ಜೆಯ ಮಾದರಿಯಾಗಿದ್ದು, ಸಿಟಿ ಪಿಕ್-ಅಪ್ ಅನ್ನು ಕಿರಿದಾದ ಮತ್ತು ವಾಹನ ದಟ್ಟಣೆಯ ರಸ್ತೆಗಳಲ್ಲಿ ನಿರ್ವಹಿಸಲು ಸುಲಭವಾಗುವಂತೆ ಸಿದ್ದಪಡಿಸಲಾಗಿದೆ.

ವಾರದ ಆಟೋ ಸುದ್ದಿಗಳು

ಹೊಸ ಬೊಲೆರೊ ಸಿಟಿ ರೂಪಾಂತರವು ಉತ್ತಮ ಇನ್-ಕ್ಲಾಸ್ ಮೈಲೇಜ್, ಎಂಜಿನ್ ಟಾರ್ಕ್, ಸೆಗ್ಮೆಂಟ್-ಲೀಡಿಂಗ್ ಪೇ-ಲೋಡ್ ಸಾಮರ್ಥ್ಯ ಮತ್ತು ವಿಸ್ತರಿತ ಕಾರ್ಗೊ ಗ್ರಾಹಕರ ಬೇಡಿಕೆಗಳಿಗೆ ಪೂರಕವಾಗಿದೆ. ಜೊತೆಗೆ ಹೊಸ ವಾಣಿಜ್ಯ ವಾಹನವು ಸೆಗ್ಮೆಂಟ್ ಫಸ್ಟ್ ಪೇ-ಲೋಡ್ ಸಾಮರ್ಥ್ಯದೊಂದಿಗೆ ಹೆಚ್ಚಿನ ಮೈಲೇಜ್ ಹೊಂದಿದ್ದು, ಹೊಸ ವಾಹನವು ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 17.2 ಕಿ.ಮೀ ಮೈಲೇಜ್ ನೀಡಲಿದೆ.

ವಾರದ ಆಟೋ ಸುದ್ದಿಗಳು

ಸ್ಕಾರ್ಪಿಯೋ-ಎನ್ ಎಂಜಿನ್ ಮಾಹಿತಿ ಬಹಿರಂಗ

ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‌ಯುವಿ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿರುವ ಮಹೀಂದ್ರಾ ಕಂಪನಿಯು ಹೊಸ ಮಾದರಿಯನ್ನು ಮಹತ್ವದ ಬದಲಾವಣೆಯೊಂದಿಗೆ ಬಿಡುಗಡೆಗೊಳಿಸುತ್ತಿದ್ದು, ಸಂಪೂರ್ಣ ಹೊಸ ಚಾಸಿಸ್‌ನೊಂದಿಗೆ ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಹೊಸ ಎಂಜಿನ್ ಆಯ್ಕೆ ಹೊಂದಿರಲಿದೆ.

ವಾರದ ಆಟೋ ಸುದ್ದಿಗಳು

ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ-ಎನ್ ಕಾರಿನಲ್ಲಿ ನ್ಯೂ ಜನರೇಷನ್ ಮಾದರಿಗಳಾದ ಥಾರ್ ಮತ್ತು ಎಕ್ಸ್‌ಯುವಿ700 ಮತ್ತು ಥಾರ್ ಮಾದರಿಯಲ್ಲಿರುವಂತೆ 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯು ಈ ಹಿಂದಿನಂತೆಯೇ 2.2-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಮಾರಾಟ ಮುಂದುವರಿಯಲಿದೆ.

Most Read Articles

Kannada
English summary
Top auto news of the week vehicle insurance hiked ambassador ev plan and more
Story first published: Sunday, May 29, 2022, 2:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X