Just In
- 11 hrs ago
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- 12 hrs ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 13 hrs ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 14 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
Don't Miss!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- News
ಫೆಬ್ರವರಿ 4ರಂದು 313 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜನಪ್ರಿಯ ಮಾರುತಿ ಓಮ್ನಿ ಉತ್ತರಾಧಿಕಾರಿಯಾದ ಇಕೋ ವ್ಯಾನ್‌ನ ವಿಶೇಷತೆಗಳು
ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ 2022ರ ಇಕೋ ವ್ಯಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಮಾರುತಿ ಇಕೋ ವ್ಯಾನ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.49 ಲಕ್ಷವಾಗಿದೆ.
ಹೊಸ 2022 ಮಾರುತಿ ಸುಜುಕಿ ಇಕೋ ವ್ಯಾನ್ ಹೆಚ್ಚಿನ ಮೈಲೇಜ್ ನೊಂದಿಗೆ ಮತ್ತು ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಬರುತ್ತದೆ. ಇದು ಹೊಸ ಎಂಜಿನ್ ನೊಂದಿಗೆ ಸುಧಾರಿತ ಒಳಾಂಗಣ ಮತ್ತು ವರ್ಧಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 2022 ಮಾರುತಿ ಸುಜುಕಿ ಇಕೋ ವ್ಯಾನ್ 5-ಆಸನಗಳು, 7-ಆಸನಗಳು, ಕಾರ್ಗೋ, ಟೂರ್ ಮತ್ತು ಆಂಬ್ಯುಲೆನ್ಸ್ ಸೇರಿದಂತೆ 13 ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಮಾರುತಿ ಸುಜುಕಿ ಇಕೋ ವ್ಯಾನ್ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಎಂಜಿನ್
ಈ ಹೊಸ ಮಾರುತಿ ಇಕೋ ವ್ಯಾನ್ ನಲ್ಲಿ ಹೊಸ 1.2-ಲೀಟರ್ ಸುಧಾರಿತ ಕೆ-ಸೀರಿಸ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಅದು ಹೆಚ್ಚು ಶಕ್ತಿಶಾಲಿ ಮತ್ತು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಎಂಜಿನ್ 10% ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಈ ಎಂಜಿನ್ 6,000rpm ನಲ್ಲಿ 80.76 ಬಿಹೆಚ್‍ಪಿ ಪವರ್ ಮತ್ತು 3,000rpm ನಲ್ಲಿ 104.4 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇಕೋ ಸಿಎನ್‌ಜಿ
ಈ ಮಾರುತಿ ಸುಜುಕಿ ವ್ಯಾನ್ ಫ್ಯಾಕ್ಟರಿ ಅಳವಡಿಸಲಾಗಿರುವ ಸಿಎನ್‌ಜಿ ಕಿಟ್‌ನೊಂದಿಗೆ ಲಭ್ಯವಿದೆ. ಸಿಎನ್‌ಜಿ ಮೋಡ್‌ನಲ್ಲಿ, ಈ ಎಂಜಿನ್ 6000rpm ನಲ್ಲಿ 71.65 ಬಿಹೆಚ್‍ಪಿ ಪವರ್ ಮತ್ತು 3,000rpm ನಲ್ಲಿ 95 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಮೂಲಕ ಮುಂಭಾಗದ ಚಕ್ರಗಳಿಗೆ ಪವರ್ ರವಾನೆಯಾಗುತ್ತದೆ. ಮಾರುತಿ ಸುಜುಕಿ ಇಕೋ ವ್ಯಾನ್ ಮಾದರಿಯ ಟೂರ್ ರೂಪಾಂತರವು ARAI ಪ್ರಮಾಣೀಕೃತ ಪೆಟ್ರೋಲ್‌ನೊಂದಿಗೆ 20.20 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಸಿಎನ್‌ಜಿ ಮಾದರಿಯು 27.05 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಪ್ಯಾಸೆಂಜರ್ ರೂಪಾಂತರವು ಪೆಟ್ರೋಲ್ ಮತ್ತು ಸಿಎನ್‌ಜಿ ಯೊಂದಿಗೆ ಅನುಕ್ರಮವಾಗಿ 19.7 ಕಿ,ಮೀ ಮತ್ತು 26.78 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆಯಾಮಗಳ ವಿಷಯದಲ್ಲಿ, ಹೊಸ ಮಾರುತಿ ಇಕೋ 3675 ಎಂಎಂ ಉದ್ದ, 1825 ಎಂಎಂ ಎತ್ತರ ಮತ್ತು 1475 ಎಂಎಂ ಅಗಲವನ್ನು ಹೊಂದಿದೆ. ಇದರೊಂದಿಗೆ 2350 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಇನ್ನು ಆಂಬ್ಯುಲೆನ್ಸ್ ರೂಪಾಂತರದ ಎತ್ತರವು 1930 ಎಂಂಗೆ ಹೆಚ್ಚಿಸಲಾಗಿದೆ.
ಬಣ್ಣಗಳು
ಈ ಹೊಸ ಮಾರುತಿ ವ್ಯಾನ್ ಸಾಲಿಡ್ ವೈಟ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಪರ್ಲ್ ಮಿಡ್ನೈಟ್ ಬ್ಲಾಕ್, ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ ಮತ್ತು ಹೊಸ ಮೆಟಾಲಿಕ್ ಬ್ರಿಸ್ಕ್ ಬ್ಲೂ ಎಂಬ ಐದು ಬಣ್ಣಗಳ ಆಯ್ಜೆಯಲ್ಲಿ ಬಿಡುಗಡೆಗೊಳಿಸಿದೆ. ಈ ಇಕೋ ವ್ಯಾನ್ ನಲ್ಲಿ ಕ್ಯಾಬಿನ್ ಏರ್-ಫಿಲ್ಟರ್ ಮತ್ತು ಬ್ಯಾಟರಿ ಸೇವರ್ ಕಾರ್ಯದೊಂದಿಗೆ ಡೋಮ್ ಲ್ಯಾಂಪ್‌ನೊಂದಿಗೆ ಬರುತ್ತದೆ. ಇನ್ನು ಇಕೋ ಮೂಲ ರೂಪಾಂತರದ ಬೆಲೆ ರೂ.5.49 ಲಕ್ಷ ರೂಪಾಯಿಗಳಾಗಿದ್ದು, ಟಾಪ್-ಸ್ಪೆಕ್ ಮಾಡೆಲ್ ಬೆಲೆಯು ರೂ.8.13 ಲಕ್ಷವಾಗಿದೆ.
ಹೊಸ ಮಾರುತಿ ಸುಜುಕಿ ವ್ಯಾನ್ ಕಾರಿನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಹೊಸ ಸ್ಟೀರಿಂಗ್ ವೀಲ್, ಎಸಿ ಮತ್ತು ಹೀಟರ್‌ಗಾಗಿ ರೋಟರಿ ಕಂಟ್ರೋಲ್ ಗಳನ್ನು ಹೊಂದಿದೆ. ಸುರಕ್ಷತೆ ಮತ್ತು ಭದ್ರತೆಗಾಗಿ, 2022ರ ಮಾರುತಿ ಇಕೋ ಎಂಜಿನ್ ಇಮೊಬಿಲೈಜರ್, ಇಲೆಮೊಟೈಡ್ ಹಝರ್ಡ್ ಸ್ವಿಚ್, ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಸ್ಲೈಡಿಂಗ್ ಡೋರುಗಳು ಮತ್ತು ವಿಂಡೋಗಳನ್ನು ಚೈಲ್ಡ್ ಲಾಕ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರವುಗಳನ್ನು ಪಡೆಯುತ್ತದೆ.
ಮಾರುತಿ ಸುಜುಕಿ ಕಂಪನಿಯ ಇಕೋ ಮಾದರಿಯು ಮಾರಾಟದಲ್ಲಿ ಹೊಸ ಮೈಲುಗಲ್ಲು ಸಾಧಿಸಿತು. ಮಾರುತಿ ಸುಜುಕಿ ಕಂಪನಿಯು ಕಳೆದ 10 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇಕೋ ಮಾದರಿಯ 7 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ಕಂಪನಿಯು ಇಕೋ ವ್ಯಾನ್ ಅನ್ನು ಭಾರತದಲ್ಲಿ 2010ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಮಾರುತಿ ಸುಜುಕಿ ಕಂಪನಿಯು ಕೇವಲ ಎರಡು ವರ್ಷಗಳಲ್ಲಿ ಇಕೋದ 1 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದ್ದರು. 2014ರಲ್ಲಿ ಮಾರುತಿ ಮತ್ತೆ 1 ಲಕ್ಷ ಯುನಿಟ್ ಇಕೋವನ್ನು ಮಾರಾಟ ಮಾಡಲಾಗಿತ್ತು.