ಎಕ್ಸ್‌ಕ್ಲೂಸಿವ್: ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಟೊಯೊಟಾ(Toyota) ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಹೈಲಕ್ಸ್ ಪಿಕ್ಅಪ್ ಬಿಡುಗಡೆಗೆ ಸಂಬಂಧಿಸಿದಂತೆ ಡ್ರೈವ್‌ಸ್ಪಾರ್ಕ್ ತಂಡಕ್ಕೆ ಎಕ್ಸ್‌ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯ ಬಿಡುಗಡೆ, ಬೆಲೆ, ಪಿಕ್ಅಪ್ ಎಂಜಿನ್ ಮಾಹಿತಿ, ವಿತರಣೆಗೆ ಸಂಬಂಧಿಸಿದಂತೆ ಡ್ರೈವ್‌ಸ್ಪಾರ್ಕ್ ತಂಡಕ್ಕೆ ಖಚಿತ ಮಾಹಿತಿ ಲಭ್ಯವಾಗಿದ್ದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಹೊಸ ಪಿಕ್ಅಪ್ ಆವೃತ್ತಿಯು ಈ ತಿಂಗಳು 20 ರಂದು ಮಾರುಕಟ್ಟೆ ಪ್ರವೇಶಿಸುವುದು ಖಚಿತವಾಗಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಭಾರತದಲ್ಲಿ ಟೊಯೊಟಾ ಕಂಪನಿಯು ಹೊಸದಾಗಿ ನಾಲ್ಕು ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರುಗಳಲ್ಲಿ ಹೈಲಕ್ಸ್ ಪಿಕ್ಅಪ್ ಮಾದರಿಯು ಸಹ ಒಂದಾಗಿದೆ. ಹೊಸ ಪಿಕ್ಅಪ್ ಮಾದರಿಯಾಗಿ ಕಂಪನಿಯು ಈಗಾಗಲೇ ರೂ.1 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿದ್ದು, ಹೊಸ ಪಿಕ್ಅಪ್ ಮಾದರಿಯು ಮುಂಬರುವ ಮಾರ್ಚ್‌ನಲ್ಲಿ ಗ್ರಾಹಕರ ಕೈಸೇರಲಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಸದ್ಯ ಅಧಿಕೃತ ಬಿಡುಗಡೆಯೊಂದಿಗೆ ಬುಕ್ಕಿಂಗ್ ಸ್ವಿಕರಿಸಲಿರುವ ಟೊಯೊಟಾ ಕಂಪನಿಯು ಮಾರ್ಚ್ ಆರಂಭದಲ್ಲಿ ಟೆಸ್ಟ್ ಡ್ರೈವ್ ಆರಂಭಿಸುವ ಮೂಲಕ ಖರೀದಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲಿದ್ದು, ಹೊಸ ಪಿಕ್ಅಪ್ ಮಾದರಿಯನ್ನು ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ನಡುವಿನ ಸ್ಥಾನದಲ್ಲಿ ಮಾರಾಟಗೊಳಿಸಲಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಗಳ ಕಾರುಗಳ ಮಾರಾಟವು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದ್ದು, ಟೊಯೊಟಾ ಕಂಪನಿಯು ಸಹ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಆಧರಿಸಿ ಜಾಗತಿಕ ಮಾರುಕಟ್ಟೆಗಳಲ್ಲಿನ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

2022ರ ಅಂತ್ಯಕ್ಕೆ ಒಟ್ಟು ನಾಲ್ಕು ಹೊಸ ಕಾರುಗಳನ್ನು ರಸ್ತೆಗಿಳಿಸುವ ಸಿದ್ದತೆಯಲ್ಲಿರುವ ಟೊಯೊಟಾ ಕಂಪನಿಯು ಮೊದಲ ಮಾದರಿಯಾಗಿ ಹೈಲಕ್ಸ್ ಪಿಕ್‌ಅಪ್ ನಂತರ ರಾವ್4 ಹಾಗೂ ಮತ್ತೆರಡು ರೀಬ್ಯಾಡ್ಜ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಕೇಂದ್ರ ಸರ್ಕಾರದ ಹೊಸ ಆಮದು ನೀತಿಯು ವಿದೇಶಿ ಕಾರು ಉತ್ಪಾದನಾ ಕಂಪನಿಗಳಿಗೆ ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಆಮದು ನೀತಿ ಅಡಿಯಲ್ಲಿ ವಿದೇಶಿ ಕಾರು ಕಂಪನಿಗಳು ವಾರ್ಷಿಕವಾಗಿ 2,500 ಯುನಿಟ್ ಕಾರುಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದು ಟೊಯೊಟಾ ಕಂಪನಿಗೂ ಇದು ವರದಾನವಾಗಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಟೊಯೊಟಾ ಕಂಪನಿಯು ಹೊಸ ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಪ್ರಮುಖ ಕಾರುಗಳನ್ನು ಹೊಸ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡುವ ಯೋಜನೆಯಲ್ಲಿದ್ದು, ಈಗಾಗಲೇ ಹೊಸ ಆಮದು ನೀತಿ ಅಡಿಯಲ್ಲಿ ವೆಲ್‌ಫೈರ್ ಐಷಾರಾಮಿ ಎಂಪಿವಿ ಮಾದರಿಯನ್ನು ಮಾರಾಟ ಮಾಡುತ್ತಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಮಧ್ಯಮ ಗಾತ್ರದ ಪಿಕ್ಅಪ್ ಎಸ್‌ಯುವಿ ಮಾದರಿಯಲ್ಲೇ ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೈಲಕ್ಸ್ ಮಾದರಿಯು ವಿದೇಶಿ ಮಾರುಕಟ್ಟೆಯಲ್ಲಿ ವಿವಿಧ ಎಂಜಿನ್ ಮಾದರಿಯೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

1968ರಿಂದಲೇ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿರುವ ಹೈಲಕ್ಸ್ ಪಿಕ್ಅಪ್ ಮಾದರಿಯು ಟೊಯೊಟಾ ಕಂಪನಿಯ ಯಶಸ್ವಿ ಕಾರು ಮಾದರಿಗಳಲ್ಲಿ ಒಂದಾಗಿದ್ದು, 180ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿರುವ ಹೈಲಕ್ಸ್ ಪಿಕ್ಅಪ್ ಇದುವರೆಗೆ ಸುಮಾರು 2 ಕೋಟಿ ಯುನಿಟ್ ಮಾರಾಟ ದಾಖಲೆ ಹೊಂದಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಮೊದಲ ತಲೆಮಾರಿನಿಂದಲೂ ಹೆಚ್ಚಿನ ಬೇಡಿಕೆ ಹೊಂದಿರುವ ಹೈಲಕ್ಸ್ ಮಾದರಿಯು ಕಾಲಾಂತರದಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಇದೀಗ ಹೈಲಕ್ಸ್ ಮಾದರಿಯು ಅಧಿಕೃತವಾಗಿ ಭಾರತದಲ್ಲೂ ಮಾರಾಟಕ್ಕೆ ಲಭ್ಯವಾಗುತ್ತಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಹೈಲಕ್ಸ್ ಪಿಕ್ಅಪ್ ಮಾದರಿಯು ಭಾರತೀಯ ಮಾರುಕಟ್ಟೆಗಳಲ್ಲಿನ ಪ್ರತಿಸ್ಪರ್ಧಿ ಪಿಕ್ಅಪ್ ಮಾದರಿಗಳಿಗೆ ಹೋಲಿಕೆ ಮಾಡಿದರೆ ತುಸು ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮಾದರಿಯಲ್ಲಿ ಬೆಲೆ ಕಡಿತಕ್ಕಾಗಿ ಕೆಲವು ಬದಲಾವಣೆಗಳನ್ನು ತರಲಾಗಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಹೈಲಕ್ಸ್ ಪಿಕ್ಅಪ್ ಮಾದರಿಯು ಇಸುಝ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಗೆ ಪೈಪೋಟಿಯಾಗಿ ಬಿಡುಗಡೆಗೆ ಸಿದ್ದವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಪಿಕ್ಅಪ್‌ನಲ್ಲಿ 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಬಿಡುಗಡೆ ಮಾಡಬಹುದಾಗಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ ಹೈಲಕ್ಸ್ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ 40ಕ್ಕೂ ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಹೊಸ ಮಾದರಿಯನ್ನು ರೂ.18 ಲಕ್ಷದಿಂದ ರೂ. 25 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಗಾಗಿ ಕೆಲವು ಕೆಲವು ವೆರಿಯೆಂಟ್‌ನೊಂದಿಗೆ ಬಿಡುಗಡೆಯಾಗುತ್ತಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಜೊತೆಗೆ ಹೊಸ ಪಿಕ್ಅಪ್ ಮಾದರಿಯಲ್ಲಿ ಹಲವಾರು ಸೇಫ್ಟಿ ಫೀಚರ್ಸ್‌ಗಳನ್ನು ಸಹ ನೀಡಲಾಗಿದ್ದು, ಆಫ್ ರೋಡ್ ಪ್ರಿಯರು ಹೊಸ ಕಾರು ಮಾದರಿಯನ್ನು ವಿವಿಧ ಬಗೆಯಲ್ಲಿ ಮಾಡಿಫೈ ಸೌಲಭ್ಯಗಳನ್ನು ಮಾರ್ಪಾಡುಗೊಳಿಸಲು ಸೂಕ್ತ ಕಾರು ಮಾದರಿಯಾಗಿದೆ.

ಟೊಯೊಟಾ ಹೈಲಕ್ಸ್ ಬಿಡುಗಡೆ ಮಾಹಿತಿ, ಬುಕ್ಕಿಂಗ್, ವಾರಂಟಿ, ವಿತರಣೆ ಮಾಹಿತಿ ಬಹಿರಂಗ..

ಹೊಸ ಪಿಕ್ಅಪ್ ಮಾದರಿಗಾಗಿ ಟೊಯೊಟಾ ಕಂಪನಿಯು ಭಾರತದಲ್ಲಿ 3 ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ನೀಡಲು ನಿರ್ಧರಿಸಿದ್ದು, ಹೊಸ ಪಿಕ್ಅಪ್ ಮಾದರಿಯು ಎಮೊಷನಲ್ ರೆಡ್, ಗ್ರೆ ಮೆಟಾಲಿಕ್, ವೈಟ್ ಪರ್ಲ್ ಸಿಎಸ್, ಸಿಲ್ವರ್ ಮೆಟಾಲಿಕ್ ಮತ್ತು ಸೂಪರ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota hilux pickup india launch date price warranty bookings delivery details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X