ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಪಿಕ್ಅಪ್ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಭಾರತದಲ್ಲಿ ಟೊಯೊಟಾ ಕಂಪನಿಯು ಹೊಸದಾಗಿ ಬಿಡುಗಡೆ ಮಾಡುತ್ತಿರುವ ನಾಲ್ಕು ಹೊಸ ಕಾರು ಮಾದರಿಯಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯು ಸಹ ಒಂದಾಗಿದ್ದು, ಹೊಸ ಪಿಕ್ಅಪ್ ಮಾದರಿಯಾಗಿ ಕಂಪನಿಯು ರೂ.1 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿದ್ದು, ಮುಂಬರುವ ಮಾರ್ಚ್ ಆರಂಭದಲ್ಲಿ ಹೊಸ ಪಿಕ್ಅಪ್ ಮಾದರಿಯ ಬೆಲೆ ಮಾಹಿತಿಯನ್ನು ಘೋಷಣೆ ಮಾಡುವುದಾಗಿ ಮಾಹಿತಿ ನೀಡಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಹೊಸ ಪಿಕ್ಅಪ್ ಮಾದರಿಯು ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಆಕರ್ಷಕ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಆಫ್ ರೋಡ್ ಪ್ರಿಯರ ಪ್ರಮುಖ ಆಕರ್ಷಣೆಯಾಗಲಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಹೈಲಕ್ಸ್ ಪಿಕ್ಅಪ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಎಂಪಿವಿ ಮತ್ತು ಫಾರ್ಚೂನರ್ ಎಸ್‌ಯುವಿ ನಡುವಿನ ಸ್ಥಾನದಲ್ಲಿ ಮಾರಾಟಗೊಳ್ಳಲಿದ್ದು, ಇನೋವೆಟಿವ್ ಮಲ್ಟಿ ಪರ್ಪಸ್ ವೆಹಿಕಲ್(ಐಎಂವಿ2) ಆರ್ಕಿಟೆಕ್ಚರ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಹೊಸ ಪಿಕ್ಅಪ್ ಮಾದರಿಯನ್ನು ಟೊಯೊಟಾ ಕಂಪನಿಯು ಬಿಡದಿ ಕಾರು ಉತ್ಪಾದನಾ ಘಟಕದಲ್ಲಿಯೇ ಉತ್ಪಾದನೆಗಾಗಿ ಈಗಾಗಲೇ ಎಲ್ಲಾ ಸಿದ್ದತೆ ನಡೆಸಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಗಳ ಕಾರುಗಳ ಮಾರಾಟವು ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಚ್ಚಳವಾಗುತ್ತಿರುವುದೇ ಹೊಸ ಕಾರು ಬಿಡುಗಡೆಗೆ ಮುಖ್ಯ ಕಾರಣವಾಗಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಆಧರಿಸಿ ಜಾಗತಿಕ ಮಾರುಕಟ್ಟೆಗಳಲ್ಲಿನ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದ್ದು, ಹೈಲಕ್ಸ್ ನಂತರ ಮತ್ತಷ್ಟು ಹೊಸ ಕಾರು ಮಾದರಿಗಳು ಭಾರತಕ್ಕೆ ಪ್ರವೇಶ ಪಡೆಯಲಿವೆ ಎನ್ನಲಾಗಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಮಧ್ಯಮ ಗಾತ್ರದ ಪಿಕ್ಅಪ್ ಎಸ್‌ಯುವಿ ಮಾದರಿಯಲ್ಲೇ ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೈಲಕ್ಸ್ ಮಾದರಿಯು ಸಹ ವಿದೇಶಿ ಮಾರುಕಟ್ಟೆಯಲ್ಲಿ ವಿವಿಧ ಎಂಜಿನ್ ಮಾದರಿಯೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಹೈಲಕ್ಸ್ ಪಿಕ್ಅಪ್ ಮಾದರಿಯು ಭಾರತೀಯ ಮಾರುಕಟ್ಟೆಗಳಲ್ಲಿನ ಪ್ರತಿಸ್ಪರ್ಧಿ ಪಿಕ್ಅಪ್ ಮಾದರಿಗಳಿಗೆ ಹೋಲಿಕೆ ಮಾಡಿದರೆ ತುಸು ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಮಾದರಿಯಲ್ಲಿ ಬೆಲೆ ಕಡಿತಕ್ಕಾಗಿ ಕೆಲವು ಬದಲಾವಣೆಗಳನ್ನು ತರಲಾಗಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಹೈಲಕ್ಸ್ ಪಿಕ್ಅಪ್ ಮಾದರಿಯು ಇಸುಝ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಗೆ ಪೈಪೋಟಿಯಾಗಿ ಬಿಡುಗಡೆಗೆ ಸಿದ್ದವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಪಿಕ್ಅಪ್‌ನಲ್ಲಿ ಟೊಯೊಟಾ ಕಂಪನಿಯು ಫಾರ್ಚೂನರ್ ಮಾದರಿಯಲ್ಲಿರುವ 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಮಾದರಿಯು 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 4x4 ಡ್ರೈವ್‌ಟ್ರೈನ್‌ನೊಂದಿಗೆ ಮ್ಯಾನುವಲ್ ಮಾದರಿಯು 204 ಬಿಎಚ್‌ಪಿ, 420 ಎನ್ಎಂ ಟಾರ್ಕ್ ಮತ್ತು ಆಟೋಮ್ಯಾಟಿಕ್ ಮಾದರಿಯು 204 ಬಿಎಚ್‌ಪಿ, 500 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಇದರೊಂದಿಗೆ ಹೊಸ ಪಿಕ್ಅಪ್ ಎರಡು-ಬಾಗಿಲು ಮತ್ತು ನಾಲ್ಕು-ಬಾಗಿಲು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದ್ದು, ಸದ್ಯಕ್ಕೆ ಭಾರತದಲ್ಲಿ ಹೊಸ ಪಿಕ್ಅಪ್ ಮಾದರಿಯು ನಾಲ್ಕು-ಬಾಗಿಲು ಮಾದರಿಯಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದು, ಹೈಲಕ್ಸ್ ಗಮನಾರ್ಹವಾದ ರಸ್ತೆ ಉಪಸ್ಥಿತಿಯನ್ನು ಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಹೈಲಕ್ಸ್ ಮಾದರಿಯು ದೊಡ್ಡ ಆಯಾಮದೊಂದಿಗೆ ವಿಶಾಲವಾದ ಟ್ರೆಪೆಜಾಯಿಡಲ್ ಗ್ರಿಲ್, ದೊಡ್ಡದಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, 18-ಇಂಚಿನ ಮಿಶ್ರಲೋಹದ ಚಕ್ರಗಳು, ಸೈಡ್-ಸ್ಟೆಪ್‌ಗಳು ಮತ್ತು ಇ-ಆಕಾರದ ಎಲ್‌ಇಡಿ ಸಿಗ್ನೇಚರ್‌ನೊಂದಿಗೆ ಲಂಬವಾದ ಟೈಲ್ ಲೈಟ್, ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಕಸ್ಟಮೈಸೇಶನ್‌ಗಾಗಿ ಬಿಡಿಭಾಗಗಳ ದೀರ್ಘವಾದ ಪಟ್ಟಿಯನ್ನೇ ಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಜೊತೆಗೆ ಹೊಸ ಪಿಕ್ಅಪ್ ಮಾದರಿಯು ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಹೊಂದಿದ್ದು, 8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಯುನಿಟ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಜೋನ್ ಸ್ವಯಂಚಾಲಿತ ಎಸಿ ಯುನಿಟ್, ಸ್ವಯಂಚಾಲಿತ ರೈನ್ ವೈಪರ್‌ಗಳು, ಪುಶ್-ಬಟನ್ ಸ್ಟಾಪ್/ಸ್ಟಾರ್ಟ್ ಸೇರಿದಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯ ಹೊಸ ಪಿಕ್ಅಪ್ ಮಾದರಿಯಲ್ಲಿ ಪ್ರೀಮಿಯಂ ಫೀಚರ್ಸ್ ಜೊತೆ ಸುರಕ್ಷತಾ ವೈಶಿಷ್ಟ್ಯತೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಮುಂಭಾಗ ಮತ್ತು ಎರಡು ಬದಿಗಳಲ್ಲೂ ಒಟ್ಟು ಏಳು ಏರ್‌ಬ್ಯಾಗ್‌‌ಗಳು, ಎಬಿಡಿ, ಇಬಿಡಿ, ಹಿಲ್ ಅಸಿಸ್ಟ್ ಕಂಟ್ರೋಲ್, ಮುಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹೆಚ್ಚಿನ ವೇಗದಲ್ಲಿ ಸ್ಟೀರಿಂಗ್ ಅನ್ನು ಭಾರವಾಗಿಸುವ ವೇರಿಯಬಲ್ ಫ್ಲೋ ಕಂಟ್ರೋಲ್, ಇಕೋ ಮತ್ತು ಪವರ್ ಡ್ರೈವಿಂಗ್ ಮೋಡ್‌ಗಳು, ಟೈರ್ ಆಂಗಲ್ ಮಾನಿಟರ್ ಸೇರಿದಂತೆ ಪ್ರಮುಖ ಫೀಚರ್ಸ್‌ಗಳಿವೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ ಹೈಲಕ್ಸ್ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ 40ಕ್ಕೂ ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಹೊಸ ಮಾದರಿಯನ್ನು ರೂ.25 ಲಕ್ಷದಿಂದ ರೂ. 30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಗಾಗಿ ಕೆಲವು ಕೆಲವು ವೆರಿಯೆಂಟ್‌ನೊಂದಿಗೆ ಮಾತ್ರ ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

1968ರಿಂದಲೇ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿರುವ ಹೈಲಕ್ಸ್ ಪಿಕ್ಅಪ್ ಮಾದರಿಯು ಟೊಯೊಟಾ ಕಂಪನಿಯ ಯಶಸ್ವಿ ಕಾರು ಮಾದರಿಗಳಲ್ಲಿ ಒಂದಾಗಿದ್ದು, 180ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿರುವ ಹೈಲಕ್ಸ್ ಪಿಕ್ಅಪ್ ಇದುವರೆಗೆ ಸುಮಾರು 2 ಕೋಟಿ ಯುನಿಟ್ ಮಾರಾಟ ದಾಖಲೆ ಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಮೊದಲ ತಲೆಮಾರಿನಿಂದಲೂ ಹೆಚ್ಚಿನ ಬೇಡಿಕೆ ಹೊಂದಿರುವ ಹೈಲಕ್ಸ್ ಮಾದರಿಯು ಕಾಲಾಂತರದಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಇದೀಗ ಹೈಲಕ್ಸ್ ಮಾದರಿಯು ಅಧಿಕೃತವಾಗಿ ಭಾರತದಲ್ಲೂ ಮಾರಾಟಕ್ಕೆ ಲಭ್ಯವಾಗುತ್ತಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣಗೊಳಿಸಿದ ಟೊಯೊಟಾ

ಹೊಸ ಪಿಕ್ಅಪ್ ಮಾದರಿಗಾಗಿ ಟೊಯೊಟಾ ಕಂಪನಿಯು ಭಾರತದಲ್ಲಿ 3 ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ನೀಡಲು ನಿರ್ಧರಿಸಿದ್ದು, ಹೊಸ ಪಿಕ್ಅಪ್ ಮಾದರಿಯು ಎಮೊಷನಲ್ ರೆಡ್, ಗ್ರೆ ಮೆಟಾಲಿಕ್, ವೈಟ್ ಪರ್ಲ್ ಸಿಎಸ್, ಸಿಲ್ವರ್ ಮೆಟಾಲಿಕ್ ಮತ್ತು ಸೂಪರ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota hilux revealed in india design features engine details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X