Just In
- 38 min ago
2023ರಿಂದ ಭಾರತದಲ್ಲಿ ಮಾರಾಟಗೊಳ್ಳಲಿದೆ ಜೈವಿಕ ಇಂಧನ ಒಳಗೊಂಡ ಇ20 ಪೆಟ್ರೋಲ್ ಮಾದರಿ
- 1 hr ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 1 hr ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 2 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
Don't Miss!
- Sports
ಲೆಜೆಂಡ್ಸ್ ಲೀಗ್ ಕ್ರಿಕೆಟ್: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್ ತಂಡಗಳು; ಪಂದ್ಯದ ದಿನಾಂಕ, ಸ್ಥಳ
- Finance
ಗೂಗಲ್ಪೇ, ಫೋನ್ಪೇ, ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಹೀಗೆ ಮಾಡಿ..
- Technology
ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್ಫೋನಿನ ಲಾಂಚ್ ಡೇಟ್ ಬಹಿರಂಗ!
- Movies
ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!
- News
ಮನೆ ಬಾಡಿಗೆ ಮೇಲೂ ಶೇಕಡಾ 18ರಷ್ಟು ಜಿಎಸ್ಟಿ ಕಟ್ಟಬೇಕಾ?: ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
- Lifestyle
ವಿಶ್ವ ಆನೆ ದಿನ 2022: ಆನೆಗಳ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಿದೆಯೇ?
- Travel
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಟೊಯೊಟಾ ಗ್ಲಾಂಝಾ ಕಾರು
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ತನ್ನ ನವೀಕರಿಸಿದ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಮಾರ್ಚ್ 15 ರಂದು ಬಿಡುಗಡೆಗೊಳಿಸಿತ್ತು. ಹೊಸ ಮಾದರಿಯು ಸ್ಲೀಕರ್ ವಿನ್ಯಾಸ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಮತ್ತು ಪವರ್ಟ್ರೇನ್ಗೆ ನವೀಕರಣಗಳನ್ನು ಪಡೆದುಕೊಂಡಿತ್ತು.

ಇದೀಗ ಟೊಯೊಟಾ ಕಂಪನಿಯು ತನ್ನ ಈ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ ಬೆಲೆಯನ್ನು ಹೆಚ್ಚಿಸಿದೆ. ಗ್ಲಾಂಝಾ ಕಾರಿನ ವೆರಿಯೆಂಟ್ ಆಯ್ಕೆಯ ಆಧಾರದ ಮೇಲೆ ರೂ.10,000 ವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ, ಕಳೆದ ತಿಂಗಳ ಬೆಲೆಗಳಿಗೆ ಹೋಲಿಸಿದರೆ ಟೊಯೊಟಾ ಗ್ಲಾಂಝಾ ಜಿ, ಜಿ ಎಎಂಟಿ ಮತ್ತು ವಿ ರೂಪಾಂತರಗಳು ಈಗ 10,000 ರೂ.ಗಳಷ್ಟು ದುಬಾರಿಯಾಗಿದೆ. ಅದೇ ರೀತಿ ವಿ ಎಎಂಟಿ ರೂಪಾಂತರವು ಈಗ ರೂ 7,900 ರಷ್ಟು ದುಬಾರಿಯಾಗಿದೆ, ಟೊಯೊಟಾ ಗ್ಲಾಂಝಾ ಎಸ್ ಮತ್ತು ಎಸ್ ಎಎಂಟಿ ರೂಪಾಂತರಗಳ ಬೆಲೆಗಳನ್ನು 5,000 ರೂ.ಗಳಷ್ಟು ಹೆಚ್ಚಿಸಲಾಗಿದೆ.

ಕಳೆದ ತಿಂಗಳು, ಟೊಯೊಟಾ ಇಂಡಿಯಾ ವೆಲ್ಫೈರ್, ಫಾರ್ಚುನರ್, ಕ್ಯಾಮ್ರಿ ಮತ್ತು ಇನೋವಾ ಕ್ರಿಸ್ಟಾದಂತಹ ಮಾದರಿಗಳ ಬೆಲೆಗಳನ್ನು ಹೆಚ್ಚಿಸಿತು. ಬ್ರ್ಯಾಂಡ್ ಈ ತಿಂಗಳ ಕೊನೆಯಲ್ಲಿ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆಗಳನ್ನು ಘೋಷಿಸಲು ಸಿದ್ಧವಾಗಿದೆ.

ಈ ಟೊಯೊಟಾ ಗ್ಲಾಂಝಾ ಕಾರು ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಈ ಹೊಸ ಟೊಯೊಟಾ ಗ್ಲಾಂಝಾ ಕಾರು ಹಿಂದಿನ ಮಾದರಿಗಿಂತ ಹೆಚ್ಚು ಸ್ಪೋರ್ಟಿಯರ್ ವಿನ್ಯಾಸದ ಶೈಲಿಯನ್ನು ಹೊಂದಿದೆ. ಹೊಸ ಟೊಯೊಟಾ ಗ್ಲಾಂಝಾ ಕಾರಿನ ವಿನ್ಯಾಸದ ಬಗ್ಗೆ ಹೆಳುವುದಾದರೆ, ಈ ಕಾರಿನ ಮುಂಭಾಗದ ಹೊಸ ವಿನ್ಯಾಸ ಶೈಲಿಯೊಂದಿಗೆ ಬಂದಿದೆ.

ಇದು ಟೊಯೊಟಾದ ಜಾಗತಿಕ ಕಾರುಗಳಿಗೆ ಅನುಗುಣವಾಗಿರುತ್ತದೆ. ಇದು ಕ್ಯಾಮ್ರಿ ತರಹದ ಮುಂಭಾಗದ ಗ್ರಿಲ್ ಮತ್ತು ಬಂಪರ್, ಹೊಸ ಕ್ರೋಮ್ ಮತ್ತು ಎಲ್-ಆಕಾರದ ಎಲ್ಇಡಿ ಡಿಆರ್ಎಲ್ (ಡೇಟೈಮ್ ರನ್ನಿಂಗ್ ಲ್ಯಾಂಪ್) ಗಳನ್ನು ಒಳಗೊಂಡಿದೆ. ಈ ಟೊಯೊಟಾ ಗ್ಲಾಂಝಾ ಕಾರಿನ ಹಿಂಭಾಗವು ಸ್ವಲ್ಪ ಪರಿಷ್ಕೃತ ಬಂಪರ್ ಮತ್ತು ಟೈಲ್-ಲೈಟ್ಗಾಗಿ ಹೊಸ ಇನ್ಸರ್ಟ್ಗಳೊಂದಿಗೆ ಬರುತ್ತದೆ.

ಇದು ಹೊಸದಾಗಿ ಟೊಯೊಟಾ ಗ್ಲಾಂಝಾ ವಿನ್ಯಾಸಗೊಳಿಸಲಾದ 16-ಇಂಚಿನ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಈ ಹೊಸ ಗ್ಲಾಂಝಾ ಕಾರು ರೆಡ್, ಬ್ಲೂ, ಗ್ರೇ, ವೈಟ್ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಈ ಹೊಸ ಟೊಯೊಟಾ ಗ್ಲಾಂಝಾ ಹ್ಯಾಚ್ಬ್ಯಾಕ್ ಕಾರಿನ ಕ್ಯಾಬಿನ್ ಹೊಸ ಬಲೆನೊ ಮಾದರಿಗೆ ಹೋಲುವಂತಿದೆ. ಇದು ಬಲೆನೊದಲ್ಲಿ ನೀಡಲಾಗುವ ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಬದಲಿಗೆ ಬ್ಲ್ಯಾಕ್ ಮತ್ತು ಬೀಜ್ ಬಣ್ಣಗಳ ಯೋಜನೆಯೊಂದಿಗೆ ಬರುತ್ತದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಹೊಸ ಗ್ಲಾಂಝಾ ಮಲ್ಟಿ-ಫಂಕ್ಷನಲ್ ಲೆದರ್ ಸುತ್ತಿದ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ನವೀಕರಿಸಿದ ಇನ್ಸ್ಟ್ರುಮೆಂಟ್ ಕನ್ಸೋಲ್, ಸೆಂಟರ್ ಕನ್ಸೋಲ್ನಲ್ಲಿ ಹೊಸ ಏರ್-ಕಾನ್ ವೆಂಟ್ಗಳು ಮತ್ತು ಹಿಂಭಾಗ ಆಟೋಮ್ಯಾಟಿಕ್ ಎಸಿಯನ್ನು ಒಳಗೊಂಡಿವೆ.

ಇದರೊಂದಿಗೆ Apple CarPlay ಮತ್ತು Android Auto, ನ್ಯಾವಿಗೇಶನ್ ಮತ್ತು ವಾಯ್ಸ್ ಕಾಮೆಂಡ್ ಗಳೊಂದಿಗೆ ದೊಡ್ಡ 9-ಇಂಚಿನ SmartPlay Pro+ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಬಂದಿದೆ. ಈ ಕಾರಿನಲ್ಲಿ ಹೊಸದಾಗಿ 360-ಡಿಗ್ರಿ ಕ್ಯಾಮೆರಾ, ಹೆಡ್ಸ್-ಅಪ್ ಡಿಸ್ಪ್ಲೇ (HUD), ವಾಯ್ಸ್ ಅಸಿಸ್ಟ್ ಫೈಂಡ್ ಮೈ ಕಾರ್ ವೈಶಿಷ್ಟ್ಯ ಮತ್ತು ರಿಮೋಟ್ ಲಾಕ್ ಮತ್ತು ಅನ್ಲಾಕ್ ಕಾರ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಕನೆಕ್ಟಿವಿಟಿ ಕಾರ್ ತಂತ್ರಜ್ಞಾನಗಳನ್ನು ಒಳಗೊಂಡಿವೆ.

ಈ ಹೊಸ ಗ್ಲಾಂಝಾ ಹ್ಯಾಚ್ಬ್ಯಾಕ್ ನಲ್ಲಿ ಸುರಕ್ಷೆತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷೆತೆಗೆಗಾಗಿ, ಆರು ಏರ್ಬ್ಯಾಗ್ಗಳು, ಕ್ರೂಸ್ ಕಂಟ್ರೋಲ್, ಇಎಸ್ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್, ಇಬಿಡಿಯೊಂದಿಗೆ ಎಬಿಎಸ್ ಇತ್ಯಾದಿಗಳಂತಹ ಉನ್ನತ-ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಿದೆ.

ಈ ಹೊಸ ಟೊಯೊಟಾ ಗ್ಲಾಂಝಾ ಕಾರಿನಲ್ಲಿ 1.2-ಲೀಟರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಟೊಯೊಟಾ ಕಂಪನಿಯು ಗ್ಲಾಂಝಾ ಕಾರಿಗಾಗಿ 5 ವರ್ಷಗಳು/220,000 ಕಿಮೀ ವರೆಗೆ ವಿಸ್ತೃತ ವಾರಂಟಿಯನ್ನು ಆಯ್ಕೆ ಮಾಡುವ ಆಯ್ಕೆಯೊಂದಿಗೆ 3 ವರ್ಷಗಳು/100,000 ಕಿಮೀ ವಾರಂಟಿಯನ್ನು ನೀಡುತ್ತಿದೆ. ಕಂಪನಿಯು EM60 ಮೂಲಕ ಕೇವಲ 60 ನಿಮಿಷಗಳಲ್ಲಿ ಪಿರಿಯೋಡಿಕ್ ಸರ್ವಿಸ್ ನೀಡುತ್ತದೆ, ಇನ್ನು ರೋಡ್ ಅಸಿಸ್ಟ್ ಪ್ರಯೋಜನಗಳು ಮತ್ತು ಹೆಚ್ಚಿನವುಗಳನ್ನು ಹೊಂದಿವೆ. ಈ ಟೊಯೊಟಾ ಗ್ಲಾಂಝಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೋಜ್, ಹೋಂಡಾ ಜಾಝ್ ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳುಗೆ ಪೈಪೋಟಿ ನೀಡುತ್ತಿದೆ.

ಟೊಯೊಟಾ ಕಂಪನಿಯು ಗ್ಲಾಂಝಾ ಕಾರಿನ ಅಧಿಕೃತ ಟಿವಿಸಿಯನ್ನು ಈ ಹಿಂದೆ ಬಿಡುಗಡೆಗೊಳಿಸಿತ್ತು. ಇದು ಕಾರಿನ ಒಳಭಾಗವನ್ನು ತೋರಿಸುತ್ತದೆ. ಈ ವಿಡಿಯೋವನ್ನು ಟೊಯೊಟಾ ಇಂಡಿಯಾ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ, ಕಾರು ಹಿಂದಿನ ಆವೃತ್ತಿಗಿಂತ ಭಿನ್ನವಾಗಿ ಕಾಣುತ್ತದೆ. ಈ ಹೊಸ ಮಾದರಿಯಲ್ಲಿ ಹೊಸ ವೈಶಿಷ್ಟ್ಯಗಳು, ಸುಧಾರಿತ ಸ್ಟೈಲಿಂಗ್ ಮತ್ತು ಸಮರ್ಥ ಎಂಜಿನ್ ಅನ್ನು ಒಳಗೊಂಡಿದೆ. ಹಿಂದಿನ ಗ್ಲಾಂಝಾ ಬಲೆನೊಗೆ ಹೋಲುವಂತಿದ್ದರೆ, ಹೊಸ ಮಾದರಿಯು ವಿಭಿನ್ನ ವಿನ್ಯಾಸದೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಒಟ್ಟಾರೆಯಾಗಿ ಟೊಯೊಟಾ ಕಂಪನಿಯು ಹೊಸ ಗ್ಲಾಂಝಾಗೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಇದು 2022ರ ಮಾರುತಿ ಸುಜುಕಿ ಬಲೆನೊದಿಂದ ದೃಶ್ಯಾತ್ಮಕವಾಗಿ ಪ್ರತ್ಯೇಕಿಸುತ್ತದೆ. ಈ 2022ರ ಟೊಯೊಟಾ ಗ್ಲಾಂಝಾ ಕಾರಿನ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೀಕಿದೆ.