ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಟೊಯೊಟಾ(Toyota) ಕಂಪನಿಯು ಭಾರತದಲ್ಲಿ ತನ್ನ ಸರಣಿ ಕಾರುಗಳ ಮಾರಾಟವನ್ನು ಹೆಚ್ಚಿಸುವತ್ತ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಪ್ರಮುಖ ಕಾರು ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಭಾರತದಲ್ಲಿ ಮಧ್ಯಮ ಗಾತ್ರದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಕಂಪನಿಯು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 6 ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರುಗಳಲ್ಲಿ ಕೆಲವು ಪ್ರೀಮಿಯಂ ಕಾರುಗಳಿದ್ದರೆ ಇನ್ನು ಕೆಲವು ಕಾರುಗಳು ಮಾರುತಿ ಸುಜುಕಿ ಜೊತೆಗಿನ ಪಾಲುದಾರಿಕೆ ಯೋಜನೆ ಅಡಿ ಅಭಿವೃದ್ದಿಗೊಳಿಸಲಾದ ರೀಬ್ಯಾಡ್ಜ್ ಕಾರು ಮಾದರಿಗಳಾಗಿವೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಹೊಸ ಯೋಜನೆಯಲ್ಲಿ ಅಡಿ ಟೊಯೊಟಾ ಕಂಪನಿಯು ಶೀಘ್ರದಲ್ಲಿಯೇ ಹೈಲಕ್ಸ್ ಲೈಫ್‌ಸ್ಟ್ರೈಲ್ ಪಿಕ್ಅಪ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೈಲಕ್ಸ್ ಬಿಡುಗಡೆಯ ನಂತರ ಒಂದು ರೀಬ್ಯಾಡ್ಜ್ ಸೆಡಾನ್ ಮಾದರಿಯನ್ನು ತದನಂತರ ಮಧ್ಯಮ ಗಾತ್ರದ ಎಂಪಿವಿ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಹೊಸ ಎಂಪಿವಿ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಇನೋವಾ ಕ್ರಿಸ್ಟಾ ಮಾದರಿಗಿಂತಲೂ ಕಡಿಮೆ ದರದಲ್ಲಿ ಬಿಡುಗಡೆಯಾಗಲಿದ್ದು, ಹೊಸದಾಗಿ ಬಿಡುಗಡೆಯಾಗುತ್ತಿರುವ ಕಿಯಾ ಕಾರೆನ್ಸ್ ಎಸ್‌ಯುವಿ ಮಾದರಿಗೆ ಪೈಪೋಟಿಯಾಗಿ ಹೊಸ ಎಂಟ್ರಿ ಲೆವಲ್ ಎಂಪಿವಿ ಮಾದರಿಯು ಅಭಿವೃದ್ದಿಗೊಳಿಸಲಾಗುತ್ತಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಹೊಸ ಬಜೆಟ್ ಎಂಪಿವಿ ಕಾರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಅವಾಂಜ್ ಮಾದರಿಯಲ್ಲಿಯೇ ಬಿಡುಗಡೆಯಾಗಲಿದ್ದು, ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವಿನ ಸ್ಥಾನ ತುಂಬಲು ಈ ಹೊಸ ಎಂಪಿವಿ ಕಾರನ್ನು ಅಭಿವೃದ್ದಿಪಡಿಸಲಾಗುತ್ತಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಮಾರುತಿ ಎರ್ಟಿಗಾ ಕಾರು ಸದ್ಯ ಆನ್‌ರೋಡ್ ಪ್ರಕಾರ ರೂ. 9.80 ಲಕ್ಷದಿಂದ ರೂ. 13.52 ಲಕ್ಷ ಬೆಲೆ ಹೊಂದಿದ್ದು, ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಆನ್‌ರೋಡ್ ಪ್ರಕಾರ ರೂ. 21.77 ಲಕ್ಷದಿಂದ ರೂ.31.92 ಲಕ್ಷ ಬೆಲೆ ಹೊಂದಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಈ ಎರಡು ಕಾರುಗಳ ನಡುವಿನ ಬೆಲೆಯಲ್ಲಿ ಸಾಕಷ್ಟು ಅಂತರವಿದ್ದು, ಎರಡು ಕಾರುಗಳ ನಡುವಿನ ಬೆಲೆ ಅಂತರವನ್ನು ಸರಿದೂಗಿಸುವುದಕ್ಕಾಗಿ ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಹೊಸ ಎಂಪಿವಿ ಸಿದ್ದಪಡಿಸುತ್ತಿವೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಹೊಸ ಕಾರು ಆನ್‌ರೋಡ್ ಪ್ರಕಾರ ರೂ. 12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಟೊಯೊಟಾ ಕಂಪನಿಯು ಬಿಡುಗಡೆ ಮಾಡಲಿರುವ ಹೊಸ ಎಂಪಿವಿ ಕಾರಿಗೆ ಮಾರುತಿ ಸುಜುಕಿ ಕಾರುಗಳ ಬಿಡಿಭಾಗಗಳನ್ನ ಬಳಕೆ ಮಾಡಿಕೊಳ್ಳುವ ಮೂಲಕ ಬಜೆಟ್ ಬೆಲೆಯಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಈ ಮೂಲಕ ಹೊಸ ಎಂಪಿವಿ ಕಾರಿನೊಂದಿಗೆ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಸಹ ಸೆಳೆಯುವ ಯೋಜನೆಯಲ್ಲಿರುವ ಟೊಯೊಟಾ ಕಂಪನಿಯು ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆ ಮಾಡಬಹುದಾಗಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಟೊಯೊಟಾ ಹೊಸ ಎಂಪಿವಿ ಕಾರು 6 ಸೀಟರ್ ಮತ್ತು 7 ಸೀಟರ್ ಆಯ್ಕೆಯಲ್ಲಿ ಮಾರುತಿ ಸುಜುಕಿ ಕಂಪನಿಯ 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಇದು ಇತರೆ ಕಾರುಗಳಿಂತಲೂ ಹೆಚ್ಚು ಇಂಧನ ಕಾರ್ಯಕ್ಷಮತೆ ಪಡೆದುಕೊಂಡಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ 1.5 ಲೀಟರ್ ಎಂಜಿನ್ ಮಾದರಿಯನ್ನು ಈಗಾಗಲೇ ಮಾರುತಿ ಸುಜುಕಿ ಕಂಪನಿಯ ಪ್ರಮುಖ ಕಾರುಗಳಲ್ಲಿ ಜೋಡಣೆ ಮಾಡಲಾಗಿದ್ದು, ಇದು ಡೀಸೆಲ್ ಎಂಜಿನ್ ಕಾರುಗಳ ಕೊರತೆಯನ್ನು ನಿಗಿಸಲು ಇದು ಸಹಕಾರಿಯಾಗಲಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಸದ್ಯ ಮಾರುಕಟ್ಟೆಯಲ್ಲಿ ಪ್ರಮುಖ ಕಾರು ಕಂಪನಿಗಳು ಇನೋವಾ ಕ್ರಿಸ್ಟಾ ಮಾದರಿಗೆ ಪೈಪೋಟಿಯಾಗಿ ಮಧ್ಯಮ ಎಸ್‌ಯುವಿ ಮಾದರಿಗಳಲ್ಲಿ 7 ಸೀಟರ್ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಪ್ರತಿಸ್ಪರ್ಧಿ ಮಾದರಿಗಳ ಅಬ್ಬರದ ನಡುವೆಯೂ ಇನೋವಾ ಕ್ರಿಸ್ಟಾ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಆದರೆ ಹೊಸದಾಗಿ ಬಿಡುಗಡೆಗೆ ಸಿದ್ದವಾಗುತ್ತಿರುವ ಕಿಯಾ ಕಾರೆನ್ಸ್ ಎಸ್‌ಯುವಿ ಮಾದರಿಯು ಸದ್ಯ ತನ್ನ ಪ್ರತಿಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ವೈಶಿಷ್ಟ್ಯತೆಯೊಂದಿಗೆ ಎಂಪಿವಿ ಕಾರಿಗಳಿಗೂ ಪೈಪೋಟಿ ನೀಡುವ ತನಕದಲ್ಲಿದ್ದು, ಕಾರೆನ್ಸ್ ಮಾದರಿಗೆ ಪೈಪೋಟಿಯಾಗಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆಗೂಡಿ ಹೊಸ ಎಂಪಿವಿ ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೊಸ್, ಸೊನೆಟ್ ಮತ್ತು ಕಾರ್ನಿವಾಲ್ ನಂತರ ನಾಲ್ಕನೇ ಕಾರು ಮಾದರಿಯಾಗಿ ಕಾರೆನ್ಸ್ 7 ಸೀಟರ್ ಎಸ್‌ಯುವಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರೆನ್ಸ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಹೊಸ ಕಾರೆನ್ಸ್ ಕಾರು ಪ್ರಮುಖ ಮೂರು ಎಂಜಿನ್ ಆಯ್ಕೆಗಳೊಂದಿಗೆ ರೂ. 12 ಲಕ್ಷದಿಂದ ರೂ. 18 ಲಕ್ಷ ಬೆಲೆಯೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಹೊಸ ಕಾರು 1.5-ಲೀಟರ್ ಪೆಟ್ರೋಲ್, 1.4-ಲೀಟಪ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗುತ್ತಿದೆ.

ಕಿಯಾ ಕಾರೆನ್ಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಎಂಪಿವಿ ಕಾರು!

ಹೀಗಾಗಿ ಕಾರೆನ್ಸ್ ಕಾರು ಮಾದರಿಗೆ ಉತ್ತಮ ಪೈಪೋಟಿ ನೀಡಬಲ್ಲ ಎಂಟ್ರಿ ಲೆವಲ್ ಎಂಪಿವಿ ಮಾದರಿಯನ್ನು ಪರಿಚಯಿಸಲು ಟೊಯೊಟೊ ಕಂಪನಿಯು ಬೃಹತ್ ಯೋಜನೆ ರೂಪಿಸಿದ್ದು, ಬಜೆಟ್ ಎಂಪಿವಿ ಜೊತೆಗೆ ಟೊಯೊಟಾ ಕಂಪನಿಯು ವಿವಿಧ ಸೆಗ್ಮೆಂಟ್ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota india to introduce new low cost mpv soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X