Just In
- 8 min ago
ಯಾವುದೇ ಏರ್ಪೋರ್ಟ್ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ
- 17 min ago
ಹೊಸ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್
- 1 hr ago
ಮನಕಲುಕುವ ಘಟನೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್ನಲ್ಲೇ ಸಾಗಿಸಿದ ಮಗ
- 1 hr ago
ಹೊಸ ಆಫ್-ರೋಡರ್ ಆರ್ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ
Don't Miss!
- Finance
4 ತಿಂಗಳಲ್ಲೇ ಭಾರಿ ಏರಿಕೆ ಕಂಡ ಸೆನ್ಸೆಕ್ಸ್: ಆಟೋ, ಪವರ್ ಸ್ಟಾಕ್ ಬಲ
- News
ಬಲವಂತವಾಗಿ ಹಿಡಿದ ಅಭಿಮಾನಿಯ ಕೈಯಿಂದ ತಂದೆಯನ್ನು ರಕ್ಷಿಸಿದ ಆರ್ಯನ್ ಖಾನ್
- Movies
ಕಾಫಿ ನಾಡು ಚಂದು ಕಾಪಿ ಹೊಡೆದ 'ನಾಗಿಣಿ 2' ನಮ್ರತಾ: ವಿಡಿಯೋ ವೈರಲ್
- Technology
ಇದೇ ತಿಂಗಳು 5G ಸೇವೆ ಬರಲಿದೆ ಅಂತಾ ನಿರೀಕ್ಷಿಸುತ್ತಿದ್ದೀರಾ?..ಈ ಸುದ್ದಿಯನ್ನೊಮ್ಮೆ ಗಮನಿಸಿ!
- Sports
CWG 2022: ಬ್ಯಾಡ್ಮಿಂಟನ್ಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಸಿಂಗಲ್ಸ್ನಲ್ಲಿ ಚಾಂಪಿಯನ್ ಆದ ಲಕ್ಷ್ಯಸೇನ್
- Lifestyle
ಬೆಚ್ಚಗಾಗಲು ಬಳಸುವ ರೂಮ್ ಹೀಟರ್ ಎಷ್ಟು ಅಪಾಯಕಾರಿ ಗೊತ್ತಾ?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೈಬ್ರಿಡ್ ಪವರ್‌ಟ್ರೇನ್‌ಗಾಗಿ ಟೊಯೊಟಾ ಪ್ಲಾಂಟ್‌ನಲ್ಲಿ ಹೊಸ ಉತ್ಪಾದನಾ ಘಟಕದ ಉದ್ಘಾಟನೆ
ಮೇಕ್ ಇನ್ ಇಂಡಿಯಾ' ಮತ್ತು 'ಸ್ಕಿಲ್ ಇಂಡಿಯಾ' ಮೂಲಕ ಸ್ವಾವಲಂಬನೆ ಸಾಧಿಸುವ ಸಲುವಾಗಿ ಟೊಯೊಟಾ ಇನ್ ಇಂಡಿಯಾ ಇಂದು (ಮೇ 27) ಎರಡು ಪ್ರಮುಖ ಯೋಜನೆಗಳನ್ನು ಘೋಷಿಸಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM), ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (TTTI) ಯ IIನೇ ಹಂತದ ಯೋಜನೆಗಳನ್ನು ಉದ್ಘಾಟಿಸಿದೆ.

ಈ ಎರಡೂ ಯೋಜನೆಗಳನ್ನು ಭಾರತ ಸರ್ಕಾರದ ಬೃಹತ್ ಕೈಗಾರಿಕೆಗಳ ಇಲಾಖೆಯ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಮತ್ತು ಎರಡನೇ ಹಂತದಲ್ಲಿ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು ಉದ್ಘಾಟಿಸಿದರು.

ಟೊಯೊಟಾ ಕಿರ್ಲೋಸ್ಕರ್ ಆಟೋ ವಿಭಾಗ (TKAP), ತನ್ನ ಹೊಸ ಇ-ಡ್ರೈವ್ (ಎಲೆಕ್ಟ್ರಿಫೈಡ್ ಕಾಂಪೊನೆಂಟ್) ಉತ್ಪಾದನಾ ಸ್ಥಾವರಕ್ಕಾಗಿ ಕರ್ನಾಟಕ ಸರ್ಕಾರದೊಂದಿಗೆ ಇತ್ತೀಚೆಗೆ ಸಹಿ ಮಾಡಿತ್ತು. ಇದರ ಮೂಲ ಉದ್ದೇಶ 'ನೆಟ್ ಝೀರೋ ಕಾರ್ಬನ್ ಸೊಸೈಟಿಯಾಗಿಸುವುದರ ಜೊತೆಗೆ, ಸುಧಾರಿತ ಆಟೋಮೋಟಿವ್ ಜಾಗದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಕೌಶಲ್ಯಗೊಳಿಸುವುದಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಪಾಂಡೆ, "ಟೊಯೊಟಾ ಗ್ರೂಪ್ ಕಂಪನಿಗಳು (ಟಿಐಇಐನಿಂದ 700 ಕೋಟಿ ರೂ.ಗಳೊಂದಿಗೆ) ಕರ್ನಾಟಕ ಸರ್ಕಾರದೊಂದಿಗೆ ಸಹಿ ಮಾಡಿದ ಇತ್ತೀಚಿನ ಒಪ್ಪಂದದ ಮೂಲಕ ದೇಶದ ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ಹಸಿರು ಚಲನಶೀಲತೆಯ (ಗ್ರೀನ್ ಮೊಬಿಲಿಟಿ) ಗುರಿಗಳನ್ನು ಸಾಧಿಸಲು ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ಮುಂದಾಗಿದೆ. ಈ ಯೋಜನೆಗಳ ಮೂಲಕ ಸುರಕ್ಷಿತ ಮತ್ತು ಪರಿಸರ ಸ್ನೇಹಿ ವಾಹನಗಳು ಉತ್ಪಾದನೆಯಾಗಲಿವೆ, ಜೊತೆಗೆ ನುರಿತ ಉದ್ಯೋಗಿಗಳನ್ನು ತಯಾರಿ ಮಾಡುವುದರ ಜೊತೆಗೆ ಸಮಾಜದ ಸುಧಾರಣೆಗೆ ಕೊಡುಗೆ ನೀಡುತ್ತವೆ ಎಂದು ಹೇಳಿದರು.

ಟೊಯೊಟಾ ಇಂಡಿಯಾ ಸುಧಾರಿತ ತಂತ್ರಜ್ಞಾನಗಳು ಮತ್ತು ಉತ್ಪಾದನೆಯಲ್ಲಿ ವಿಶ್ವದರ್ಜೆಯ ಮಾನವಶಕ್ತಿಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯು 200 ರಿಂದ 1,200 ವಿದ್ಯಾರ್ಥಿಗಳ ಸಾಮರ್ಥ್ಯದೊಂದಿಗೆ ಪ್ರಮುಖ ತರಬೇತಿ ಕಾರ್ಯಾಗಾರವನ್ನು ನಿರ್ಮಿಸಲಿದೆ.

ಇದು ಬಿಡದಿ ಸ್ಥಾವರದಲ್ಲಿ ನುರಿತ ಸೌಲಭ್ಯವನ್ನು ಹೆಚ್ಚಿಸುವುದರೊಂದಿಗೆ ಜಾಗತಿಕವಾಗಿ ಪ್ರಮಾಣೀಕರಿಸಿದ ಟೊಯೊಟಾ ಪರಿಣಿತ ತರಬೇತುದಾರರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯು ಸ್ಕಿಲ್ ಇಂಡಿಯಾಗೆ ಕೊಡುಗೆ ನೀಡಲು ಕಂಪನಿಗೆ ಸಹಾಯ ಮಾಡುತ್ತದೆ. ಇಲ್ಲಿಯವರೆಗೆ ಕಂಪನಿಯು ವಿವಿಧ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ 77,360 ಕ್ಕೂ ಹೆಚ್ಚು ಉದ್ಯೋಗಸ್ಥರಿಗೆ ತರಬೇತಿ ನೀಡಿದೆ.

TTTI ಯೊಂದಿಗೆ, ಟೊಯೊಟಾ ಕೌಶಲ್ಯದ ಅಂತರವನ್ನು ಕಡಿಮೆ ಮಾಡಲು ಮತ್ತು ಕರ್ನಾಟಕದ ಯುವಕರಿಗೆ ತಾಂತ್ರಿಕ ಪ್ರಗತಿಯಲ್ಲಿ ಉತ್ತಮ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದ್ದು, ಮೂರು ವರ್ಷಗಳ ವಸತಿ ತರಬೇತಿ ಕಾರ್ಯಕ್ರಮವು ಆಟೋಮೊಬೈಲ್‌ಗಳಲ್ಲಿ ಆಳವಾದ ಜ್ಞಾನವನ್ನು ನೀಡುವ ಮೂಲಕ ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಲಿದೆ.

TTTI ಯನ್ನು ನ್ಯಾಷನಲ್ ಕೌನ್ಸಿಲ್ ಆಫ್ ವೊಕೇಶನಲ್ ಟ್ರೈನಿಂಗ್ (NCVT), ಜಪಾನ್-ಇಂಡಿಯಾ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (JIM), ಆಟೋಮೋಟಿವ್ ಸ್ಕಿಲ್ ಡೆವಲಪ್‌ಮೆಂಟ್ ಕೌನ್ಸಿಲ್ (ASDC) ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಟ್ರೈನಿಂಗ್ (DGT) ನಿಂದ ಗುರುತಿಸಲಾಗಿದೆ.

ಟೊಯೋಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮದ (TTEP) ಮೂಲಕ, TKM ಭಾರತದಲ್ಲಿ 17 ರಾಜ್ಯಗಳಾದ್ಯಂತ 49 ಸಂಸ್ಥೆಗಳಲ್ಲಿ ತರಬೇತಿ ನೀಡುತ್ತಿದೆ. ಈ ಸಂಬಂಧ TKM ಕರ್ನಾಟಕ, ಕೇರಳ, ಒಡಿಶಾ, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ನವದೆಹಲಿ ಮತ್ತು ತೆಲಂಗಾಣ ಸರ್ಕಾರಗಳೊಂದಿಗೆ ಒಪ್ಪಂದವನ್ನು ಸಹ ಹೊಂದಿದೆ.

TKAP ನಲ್ಲಿ, ಈ ಸುಧಾರಿತ ಸೌಲಭ್ಯವನ್ನು ಉತ್ಪಾದಿಸಲು ಹೆಚ್ಚಿನ ಮತ್ತು ಕಟ್ಟುನಿಟ್ಟಾದ ಗುಣಮಟ್ಟದ ಅವಶ್ಯಕತೆಗಳೊಂದಿಗೆ ಹೊಂದಿಸಲಾಗಿದೆ. ಕ್ಲೀನ್ ಕಾರುಗಳ ಉತ್ಪಾದನೆಗೆ ವಿದ್ಯುದ್ದೀಕರಿಸಿದ ಭಾಗವನ್ನು ಪೂರೈಸುತ್ತದೆ. ಅದರ ಬಿಡದಿ ಸ್ಥಾವರದಲ್ಲಿ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು 1,35,000 ಘಟಕಗಳಾಗಿದ್ದು, ಸಮರ್ಥನೀಯ ಮೊಬಿಲಿಟಿಗೆ ಬಲವಾದ ಪೂರೈಕೆ ಸರಪಳಿಯನ್ನು ಸಕ್ರಿಯಗೊಳಿಸುತ್ತದೆ.

ದೇಶೀಯ ಮಾರುಕಟ್ಟೆಯ ಅಗತ್ಯತೆಗಳನ್ನು ಮಾತ್ರ ಪೂರೈಸುವುದಿಲ್ಲದೇ ಮೊದಲ ಬಾರಿಗೆ ಇ-ಡ್ರೈವ್ ಅನ್ನು ಜಪಾನ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಇತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಇ-ಡ್ರೈವ್‌ನ ಸ್ಥಳೀಕರಣದೊಂದಿಗೆ, ದೇಶದಲ್ಲಿ ಪ್ರಬಲ ಹೈಬ್ರಿಡ್ ಎಲೆಕ್ಟ್ರಿಫೈಡ್ ವೆಹಿಕಲ್ಸ್ (SHEV) ಸೇರಿದಂತೆ ವಿದ್ಯುದೀಕೃತ ಚಲನಶೀಲತೆಯ ಹೆಚ್ಚಿನ ಒಳಹೊಕ್ಕು ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಇ-ಡ್ರೈವ್ ಉನ್ನತ-ವೇಗದ ಮೋಟಾರ್‌ನೊಂದಿಗೆ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ (AAT)ವಾಗಿದ್ದು, ಇದನ್ನು PLI (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯ ಅಡಿಯಲ್ಲಿ ಸೂಚಿಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಕಾರ್ಬನ್ ಮುಕ್ತ ವಾಹನಗಳ ನಿರ್ಮಾಣಕ್ಕೆ ನಿರ್ಣಾಯಕವಾಗಿದೆ. 'ನೆಟ್ ಝೀರೋ ಕಾರ್ಬನ್ ಸೊಸೈಟಿ ಎಂಬ ಧ್ಯೇಯ ವಾಕ್ಯದೊಂದಿಗೆ ಹೊರಟಿರುವ ಟೊಯೊಟಾ ಕಂಪನಿಯು ತನ್ನ ಗುರಿ ಸಾಧಿಸಲು ಪ್ರಯತ್ನಗಳನ್ನು ವೇಗಗೊಳಿಸಿದೆ. ಈ ಮೂಲಕ ಆದಷ್ಟು ಬೇಗ ಕಾರ್ಬನ್ ಮುಕ್ತ ದೇಶವನ್ನು ಕಾಣುವ ನಿರೀಕ್ಷೆಯಿದೆ.