Just In
- 5 min ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
- 41 min ago
ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ಬಿಡುಗಡೆ
- 1 hr ago
ಪ್ರಯಾಣಿಕ ಕಾರು ಮಾದರಿಗಳಿಗಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ಟೈರ್ ಬಿಡುಗಡೆ ಮಾಡಿದ ಮೈಕೆಲಿನ್
- 3 hrs ago
ಬರೋಬ್ಬರಿ 40 ವೆರಿಯೆಂಟ್ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್
Don't Miss!
- Movies
ಗಾಯಕಿಗೆ ಅಸಹ್ಯಕರ ಚಿತ್ರ ಕಳಿಸಿದವರ ವಿರುದ್ಧ ದೂರು: ಗಾಯಕಿಯ ಖಾತೆಯೇ ಬ್ಲಾಕ್!
- News
ಭೂಕಂಪನ ಮಹಾಮಳೆಯ ಮುನ್ಸೂಚನೆಯಾ?... ಅವತ್ತು ಹಾಗೆಯೇ ಆಗಿತ್ತು!
- Technology
ಪೊಕೊ F4 5G V/S ಪೊಕೊ F3 GT: ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್?
- Sports
ENG vs NZ 2ನೇ ಟೆಸ್ಟ್: ನೆಲಕಚ್ಚಿದ್ದ ಇಂಗ್ಲೆಂಡ್ಗೆ ಬೈರ್ಸ್ಟೋ, ಓವರ್ಟನ್ ಆಸರೆ; 3ನೇ ದಿನದ ಲೈವ್ ಸ್ಕೋರ್
- Lifestyle
ಅಪಘಾತದಿಂದ ಕ್ಷಣಾರ್ಧದಲ್ಲಿ ಮಗುವಿನ ರಕ್ಷಿಸಿ, ತಾಯಿಯ ಮೊಬೈಲ್ ಪುಡಿ ಮಾಡಿದ ಸೈನಿಕ: ಸೈನಿಕನ ಕಾರ್ಯಕ್ಕೆ ನೆಟ್ಟಿಗರು ಫುಲ್ ಫಿದಾ
- Finance
ಪಿಎಂ ಕಿಸಾನ್ 12ನೇ ಕಂತು: ಶೀಘ್ರ ಈ ಕಾರ್ಯ ಮಾಡಿ
- Education
Vijayapura District Court Recruitment 2022 : 28 ಜವಾನ, ಆದೇಶ ಜಾರಿಕಾರ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಭಾರತದಲ್ಲಿ ಹೊಸ ಹೈಬ್ರಿಡ್ ಎಸ್ಯುವಿಯನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ
ದೇಶದಲ್ಲಿ ಹೈಬ್ರಿಡ್ ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಟೊಯೊಟಾ ಇತ್ತೀಚೆಗೆ ಭಾರತದಲ್ಲಿ 'ಹಮ್ ಹೈ ಹೈಬ್ರಿಡ್' ಅಭಿಯಾನವನ್ನು ಪ್ರಾರಂಭಿಸಿದೆ, ಇದರ ಜೊತೆಗೆ, 'ಹಮ್ ಹೈ ಹೈಬ್ರಿಡ್' ಅಭಿಯಾನವು ಜಪಾನಿನ ವಾಹನ ತಯಾರಕರ ಮುಂಬರುವ ಹೈಬ್ರಿಡ್ ಎಸ್ಯುವಿಗೆ ಬಲವಾದ ಅಡಿಪಾಯವನ್ನು ಹಾಕುವ ಗುರಿಯನ್ನು ಹೊಂದಿದೆ.

ಟೊಯೊಟಾದ ಈ ಹೊಸ ಹೈಬ್ರಿಡ್ ಎಸ್ಯುವಿಗೆ ಟೊಯೋಟಾ ಡಿ22 ಎಂಬ ಕೋಡ್ ನೇಮ್ ಅನ್ನು ನೀಡಲಾಗಿದೆ. ಈ ಮುಂಬರುವ ಹೈಬ್ರಿಡ್ ಎಸ್ಯುವಿಗೆ 'ಹೈರೈಡರ್' ಎಂದು ಹೆಸರಿಸಲಾಗುವುದು ಎಂದು ಇತ್ತೀಚಿನ ವರದಿಗಳು ಹೇಳುತ್ತವೆ. ಇದಲ್ಲದೆ, ಹೈಬ್ರಿಡ್ ಎಸ್ಯುವಿ ಅನ್ನು ಭಾರತೀಯ ಮಾರುಕಟ್ಟೆಗಾಗಿ ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಮೂಲಗಳ ಪ್ರಕಾರ, ಮುಂಬರುವ ಹೈಬ್ರಿಡ್ ಎಸ್ಯುವಿ ಜೂನ್ 2022ರ ಅಂತ್ಯದೊಳಗೆ ಅನಾವರಣಗೊಳ್ಳುವ ಸಾಧ್ಯತೆಯಿದೆ.

ಟೊಯೊಟಾದ ಹೈಬ್ರಿಡ್ ಎಸ್ಯುವಿ ಆವೃತ್ತಿಯು ಮಾರುತಿ ಸುಜುಕಿಯ ಆವೃತ್ತಿಗಿಂತ ಸ್ವಲ್ಪ ಮುಂಚಿತವಾಗಿ ಬಿಡುಗಡೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದಲ್ಲದೆ, ಮುಂಬರುವ ಟೊಯೊಟಾ ಹೈಬ್ರಿಡ್ ಎಸ್ಯುವಿ ಇತರ ಮಧ್ಯಮ ಗಾತ್ರದ ಎಸ್ಯುವಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್ ಮತ್ತು ಫೋಕ್ಸ್ವ್ಯಾಗನ್ ಟೈಗನ್ಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿದೆ.

ಮುಂಬರುವ ಟೊಯೊಟಾ ಡಿ22 ಎಸ್ಯುವಿ ಬಗ್ಗೆ ಹೇಳಿವುದಾದರೆ, ಈ ಹೈಬ್ರಿಡ್ ಎಸ್ಯುವಿ ಟೊಯೊಟಾದ 3-ಸಿಲಿಂಡರ್, 1.5-ಲೀಟರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ 1.5-ಲೀಟರ್ ಎಂಜಿನ್ ಹೆಚ್ಚು ಇಂಧನ-ಸಮರ್ಥ ಅಟ್ಕಿನ್ಸನ್ ಸೈಕಲ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಇದೇ ಪವರ್ಟ್ರೇನ್ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಟೊಯೊಟಾ ಯಾರಿಸ್ ಕ್ರಾಸ್ಗೆ ಶಕ್ತಿ ನೀಡುತ್ತದೆ. ಮೇಲೆ ತಿಳಿಸಿದ 1.5-ಲೀಟರ್ ಇಂಟರ್ನಲ್ ದಹನಕಾರಿ ಎಂಜಿನ್ (ICE) ಮತ್ತು ಎಲೆಕ್ಟ್ರಿಕ್ ಮೋಟಾರ್ ಒಟ್ಟಾಗಿ 113.5bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

ಇನ್ನು ಈ ಎಂಜಿನ್ 120 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಆದರೆ ಎಲೆಕ್ಟ್ರಿಕ್ ಮೋಟಾರ್ 141 ಎನ್ಎಂ ನಲ್ಲಿ ಸ್ವಲ್ಪ ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂದಿನ ದಿನಗಳಲ್ಲಿ ಅಧಿಕೃತ ಅಂಕಿಅಂಶಗಳು ಹೊರಬರುತ್ತದೆ.

ವೈಶಿಷ್ಟ್ಯಗಳ ವಿಷಯದಲ್ಲಿ, ಮುಂಬರುವ ಟೊಯೊಟಾ ಡಿ22 ಹೈಬ್ರಿಡ್ ಎಸ್ಯುವಿಯು, ದೊಡ್ಡ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಯೂನಿಟ್, ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಸಂಪರ್ಕಿತ ಕಾರ್ ಟೆಕ್, ಕ್ಲೈಮೇಟ್ ಕಂಟ್ರೋಲ್, ವೈರ್ಲೆಸ್ ಚಾರ್ಜಿಂಗ್, ಏರ್ ಪ್ಯೂರಿಫೈಯರ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿರುವ ದೀರ್ಘ ವೈಶಿಷ್ಟ್ಯಗಳ ಪಟ್ಟಿಯನ್ನು ಹೊಂದಿರುವ ಸಾಧ್ಯತೆಯಿದೆ. ಇದರಲ್ಲಿ ಸನ್ರೂಫ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ.

ಅದರ ಜೊತೆಗೆ, ಹೈಬ್ರಿಡ್ ಎಸ್ಯುವಿ 6 ಏರ್ಬ್ಯಾಗ್ಗಳನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿರುತ್ತದೆ ಮತ್ತು ಎಬಿಎಸ್, ಇಬಿಡಿ, ಟ್ರಾಕ್ಷನ್ ಕಂಟ್ರೋಲ್ (TC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ನಂತಹ ಇತರ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಹಿಂಭಾಗದ ಪಾರ್ಕಿಂಗ್ ಸೆನ್ಸರ್, ಹಿಂಬದಿಯ ವೀಕ್ಷಣೆ ಕ್ಯಾಮೆರಾ ಮತ್ತು ಇನ್ನಷ್ಟನ್ನು ಹೊಂದಿರುತ್ತದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ನವೀಕರಿಸಿದ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಕಾರನ್ನು ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ನವೀಕರಿಸಿದ ಟೊಯೊಟಾ ಕ್ಯಾಮ್ರಿ ಅದರ ಬಾಹ್ಯ ವಿನ್ಯಾಸ, ಕ್ಯಾಬಿನ್ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಪಟ್ಟಿಯನ್ನು ಒಳಗೊಂಡಿರುವ ನವೀಕರಣಗಳನ್ನು ಪಡೆದಿದೆ.

ಜಾಗತಿಕವಾಗಿ ಟೊಯೊಟಾ ಕ್ಯಾಮ್ರಿ ಎಂಬ ನೇಮ್ ಪ್ಲೇಟ್ ಅನ್ನು ಮೊದಲು 1979 ರಲ್ಲಿ ಪರಿಚಯಿಸಲಾಯಿತ. ಜನವರಿ 1980 ರಲ್ಲಿ ಟೊಯೊಟಾ ಸೆಲಿಕಾ ಕ್ಯಾಮ್ರಿ ಎಂಬ ಮಾದರಿಯನ್ನು ಮಾರಾಟಕ್ಕೆ ಪಾದಾರ್ಪಣೆ ಮಾಡಿತು. 1982 ರಲ್ಲಿ, ಟೊಯೊಟಾ ಕಂಪನಿಯು ಮೊದಲ ತಲೆಮಾರಿನ ಟೊಯೊಟಾ ಕ್ಯಾಮ್ರಿಯನ್ನು ಪರಿಚಯಿಸಿತು ಮತ್ತು ಹಿಂದೆ ಪರಿಚಯಿಸಲಾದ 'ಸೆಲಿಕಾ ಕ್ಯಾಮ್ರಿ' ಗಿಂತ ಭಿನ್ನವಾಗಿದೆ. 1982 ಟೊಯೊಟಾ ಕ್ಯಾಮ್ರಿ ಮುಂಭಾಗದ ವ್ಹೀಲ್-ಡ್ರೈವ್ ಮಾದರಿಯಾಗಿತ್ತು. 2013ರಲ್ಲಿ ಭಾರತದಲ್ಲಿ ಮೊದಲು ಪರಿಚಯಿಸಲಾದ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಸಾವಿರಾರು ಯುನಿಟ್ ಗಳನ್ನು ಮಾರಾಟ ಕಂಡಿತ್ತು,

ರಿಫ್ರೆಶ್ ಮಾಡಲಾದ ಮಾದರಿಯನ್ನು ಪ್ರಾರಂಭಿಸುವುದರೊಂದಿಗೆ, ಕಂಪನಿಯು ಭಾರತದಲ್ಲಿ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಈ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನಲ್ಲಿ 2.5-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಡೈನಾಮಿಕ್ ಫೋರ್ಸ್ ಎಂಜಿನ್ ಅನ್ನು ಹೊಂದಿದೆ, ಇದು ಶಕ್ತಿಯುತ ಮೋಟಾರ್ ಜನರೇಟರ್ನೊಂದಿಗೆ ಜೋಡಿಯಾಗಿ 160kW (218PS) ಸಂಯೋಜಿತ 218 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೈಬ್ರಿಡ್ ಕಾರಿನ ಒಳಭಾಗದಲ್ಲಿ, ಕ್ಯಾಬಿನ್ ರಿಫ್ರೆಶ್ ವಿನ್ಯಾಸವನ್ನು ಪಡೆಯುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಲೇ ಹೊಂದಿಕೆಯಾಗುವ ಫ್ಲೋಟಿಂಗ್-ಟೈಪ್ ದೊಡ್ಡ 9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ, ಸಂಯೋಜಿತ ಮಾದರಿಯೊಂದಿಗೆ ಬರುವ ಬ್ಲ್ಯಾಕ್ ಇಂಜಿನಿಯರ್ಡ್ ವುಡ್ ಎಫೆಕ್ಟ್ ಫಿಲ್ಮ್ನೊಂದಿಗೆ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ.

ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಎಸ್ಯುವಿಗಳ ಬೆಳವಣಿಗೆಗೆ, ಟೊಯೊಟಾದ ಮುಂಬರುವ ಹೈಬ್ರಿಡ್ ಎಸ್ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ಮಾರಾಟಕ್ಕೆ ನೆರವಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಭಾರತೀಯ ಮಾರುಕಟ್ಟೆಯು ಬೆಲೆಯು ಪ್ರಮುಖ ಪಾತ್ರವಹಿಸುತ್ತದೆ. ಟೊಯೋಟಾ ಮುಂಬರುವ ಹೈಬ್ರಿಡ್ ಎಸ್ಯುವಿಗೆ ಸ್ಪರ್ಧಾತ್ಮಕ ಬೆಲೆಯನ್ನು ನೀಡಬಹುದು.