ನಮ್ಮ ಬೆಂಗಳೂರಿನಲ್ಲಿ ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ದೇಶದ ಮುಂಚೂಣಿ ಕಾರು ಮಾರಾಟ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್(ಟಿಕೆಎಂ) ಮೊದಲ ಬಾರಿಗ ಉಪಯೋಗಿಸಿದ ಕಾರುಗಳ ಮಾರಾಟ ಮಳಿಗೆ ಆರಂಭಿಸಿದ್ದು, ಕಂಪನಿಯು ತನ್ನ ಮೊದಲ ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಯನ್ನು ನಮ್ಮ ಬೆಂಗಳೂರಿನಲ್ಲಿ ಆರಂಭಿಸಿದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಜೊತೆಗೆ ಬಳಕೆ ಮಾಡಿದ ವಾಹನಗಳ ಮರುಮಾರಾಟ ಮತ್ತು ಖರೀದಿ ಪ್ರಕ್ರಿಯೆ ಸಹ ಜೋರಾಗಿದ್ದು, ಹೊಸ ಉದ್ಯಮ ವ್ಯವಹಾರದಲ್ಲಿ ಈಗಾಗಲೇ ಪ್ರಮುಖ ಕಾರು ಕಂಪನಿಗಳು ಹೆಚ್ಚಿನ ಮಟ್ಟದ ವ್ಯವಹಾರದೊಂದಿಗೆ ಉತ್ತಮ ಆದಾಯ ಕಂಡುಕೊಂಡಿವೆ. ಹೀಗಾಗಿ ಟೊಯೊಟಾ ಕಂಪನಿಯು ಕೂಡಾ ತನ್ನ ಗ್ರಾಹಕರಿಗೆ ವಿಶ್ವಾರ್ಹ ಸೇವೆಗಳನ್ನು ಖಚಿತಪಡಿಸಲು ಟೊಯೊಟಾ ಟ್ರಸ್ಟ್ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಭಾರತದಲ್ಲಿ ಉಪಯೋಗಿಸಿದ ಕಾರುಗಳನ್ನು ಮಾರಾಟ ಮಾಡಲು ಕಂಪನಿಯು ಮೂಲ ಸಲಕರಣೆ ತಯಾರಕರನ್ನು ಸಹ(OEMs) ಸೇರಿಕೊಂಡಿದ್ದು, ಟೊಯೊಟಾ ಟ್ರಸ್ಟ್‌ ನ ಪ್ರಾಯೋಗಿಕ ಯೋಜನೆಯಾಗಿ ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಬಳಕೆ ಮಾಡಿದ ಕಾರು ಮಾರಾಟ ವಿಭಾಗದಲ್ಲಿ ಮಾರುತಿ ಸುಜುಕಿಯ ಒಡೆತನ ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ಮತ್ತು ಮಹೀಂದ್ರಾ ಒಡೆತನದ ಫಸ್ಟ್ ಚಾಯ್ಸ್ ಸೇರಿದಂತೆ ವಿವಿಧ ಕಂಪನಿಗಳು ತಮ್ಮದೇ ಆದ ಪ್ರತ್ಯೇಕ ಯೂಸ್ಡ್ ಕಾರು ಮಾರಾಟ ವಿಭಾಗಗಳನ್ನು ಹೊಂದಿದ್ದು, ಇದೀಗ ಟೊಯೊಟಾ ಕಂಪನಿಯು ಸಹ ಗ್ರಾಹಕರ ಬೇಡಿಕೆ ಆಧರಿಸಿ ಟೊಯೊಟಾ ಟ್ರಸ್ಟ್ ಮಾರಾಟ ಮಳಿಗೆಯನ್ನ ತೆರೆದಿದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಹೊಸ ಕಾರುಗಳ ಮಾದರಿಯಲ್ಲೇ ಹಲವಾರು ಆಫರ್ ನೀಡುತ್ತಿರುವುದಲ್ಲದೆ ಗರಿಷ್ಠ ವಾರಂಟಿ ರೋಡ್ ಸೈಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಹೊಸ ವಾಹನ ಖರೀದಿ ಪ್ರಕ್ರಿಯೆ ಹೆಚ್ಚಳವಾಗಿರುವ ಹಿನ್ನಲೆ ಎಕ್ಸ್‌ಚೆಂಜ್ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿವೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಹೀಗಾಗಿ ಗ್ರಾಹಕರಿಗೆ ಹಳೆಯ ಕಾರುಗಳನ್ನು ಮರುಮಾರಾಟ ಮತ್ತು ಬಳಕೆ ಮಾಡಿದ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಪ್ರಮಾಣೀಕೃತ ಸೇವೆ ಒದಗಿಸುವ ಗುರಿಹೊಂದಿರುವ ಟೊಯೊಟಾ ಕಂಪನಿಯು ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಮೊದಲ ಟೊಯೊಟಾ ಟ್ರಸ್ಟ್ ಆರಂಭಿಸಿದ್ದು, ಕಂಪನಿಯು ಶೀಘ್ರದಲ್ಲಿಯೇ ದೇಶಾದ್ಯಂತ 111 ನಗರಗಳಲ್ಲಿ ಕಾರ್ಯನಿರ್ವಹಣೆಯಲ್ಲಿರುವ ತನ್ನ ಪ್ರಮುಖ ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಸೇವೆಯನ್ನು ಆರಂಭಿಸಲಿದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಟೊಯೊಟಾದ ಉಪಯೋಗಿಸಿದ ಕಾರು ಮಾರಾಟ ಮಳಿಗೆಗಳಲ್ಲಿ ಪಟ್ಟಿಮಾಡುವ ಮೊದಲು ಪ್ರತಿ ಉಪಯೋಗಿಸಿದ ಕಾರು ಮಾದರಿಯುವ ವಿವಿಧ ಹಂತಗಳಲ್ಲಿ ಪರೀಕ್ಷೆಗೆ ಒಳಪಡಲಿದ್ದು, ಟೊಯೊಟಾ ಕಂಪನಿಯ ಮಾನದಂಡಗಳ ಆಧಾರದ ಮೇಲೆ ಹಳೆಯ ಕಾರಿನ ಮೌಲ್ಯಮಾಪನವನ್ನು ಅಳೆಯಲಾಗುತ್ತದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಕಾರಿನ ಮೌಲ್ಯಮಾಪನದ ಸಂದರ್ಭದಲ್ಲಿ 203 ಅಂಶಗಳನ್ನು ತಪಾಸಣೆಗೊಳಿಸಿದ ನಂತರವೇ ಮಾರಾಟ ಮಾಡಲಿದ್ದು, ಕೂಲಂಕುಶವಾದ ತಪಾಸಣೆಗಳು ಗ್ರಾಹಕರಿಗೆ ಉನ್ನತ ಮಟ್ಟದ ಗುಣಮಟ್ಟ ಮತ್ತು ಕಾರಿನ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಟೊಯೊಟಾ ಕಂಪನಿಯು ಟೊಯೊಟಾ ಟ್ರಸ್ಟ್‌ನಲ್ಲಿ ಕೇವಲ ಬಳಕೆ ಮಾಡಿದ ಕಾರುಗಳನ್ನು ಮಾತ್ರ ಮಾರಾಟ ಮಾಡದೆ ಗ್ರಾಹಕರಿಗೆ ಹಣಕಾಸು, ವಿಮೆ ಮತ್ತು ವಾಹನದ ಬಿಡಿಭಾಗಗಳ ಸೇವೆಯನ್ನು ಸಹ ಒದಗಿಸಲಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಇಲ್ಲಿ ಮರುಮಾರಾಟ ಮಾಡಲು ಮತ್ತು ಖರೀದಿಸಲು ಸಾಕಷ್ಟು ಅನುಕೂಲಕರವಾಗಿದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಬಳಸಿದ ಕಾರುಗಳನ್ನು ಉತ್ತಮ ಬೆಲೆಗೆ ಮರು ಮಾರಾಟ ಮಾಡಲು ಟೊಯೊಟಾ ಟ್ರಸ್ಟ್ ಉತ್ತಮ ಪ್ಲ್ಯಾಟ್‌ಫಾರ್ಮ್ ಒದಗಿಸುತ್ತಿದ್ದು, ನೀವು ನಿಮ್ಮ ಹಳೆಯ ಕಾರನ್ನು ಮಾರಾಟ ಮಾಡಲು ಬಯಸಿದರೆ ಅಥವಾ ವಿನಿಮಯದ ಮೂಲಕ ಹೊಸ ಕಾರನ್ನು ಖರೀದಿಸಲು ಬಯಸಿದರೆ ಟೊಯೊಟಾ ಈ ಸೌಲಭ್ಯವನ್ನು ಸಹ ಒದಗಿಸುತ್ತದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಹೀಗಾಗಿ ಟೊಯೊಟಾ ಗ್ರಾಹಕರು ತಮ್ಮ ಬಳಸಿದ ಕಾರುಗಳನ್ನು ಸಂಪೂರ್ಣ ವಿಶ್ವಾಸ ಮತ್ತು ಪಾರದರ್ಶಕತೆಯೊಂದಿಗೆ ಮಾರಾಟ ಮಾಡಬಹುದಾಗಿದ್ದು, ಕಂಪನಿಯು ಬಳಸಿದ ಕಾರುಗಳ ಮಾರಾಟ ಮಳಿಗೆಗಳಲ್ಲಿ ಪರಿಶೀಲಿಸಿದ ನಂತರ ಅವುಗಳ ಬೆಲೆಯನ್ನು ನಿಗದಿಪಡಿಸುತ್ತದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಹೊಸ ಟೊಯೊಟಾ ಕಾರನ್ನು ಖರೀದಿಸುವಾಗ ಹಳೆಯ ಕಾರಿನ ಬೆಲೆಯನ್ನು ಹೊಸ ಕಾರಿನ ಬೆಲೆಯಿಂದ ಕಡಿತಗೊಳಿಸಲಿದ್ದು, ಗ್ರಾಹಕರು ತಮ್ಮ ವಾಹನವನ್ನು ಆನ್‌ಲೈನ್‌ ಮೂಲಕ 'ಯು ಟ್ರಸ್ಟ್' ವೆಬ್‌ಸೈಟ್‌ನಲ್ಲಿ ಮೌಲ್ಯಮಾಪನ ಕೂಡಾ ಮಾಡಬಹುದು.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಮತ್ತೊಂದು ಗಮನಿಸಬೇಕಾದ ಅಂಶವೆನೆಂದರೆ ಟೊಯೊಟಾ ಟ್ರಸ್ಟ್ ಬಳಸಿದ ಕಾರು ಮಾರಾಟ ಮಳಿಗೆಯಲ್ಲಿ ಗ್ರಾಹಕರು 7 ವರ್ಷಕ್ಕಿಂತ ಕಡಿಮೆ ಹಳೆಯದಾದ ಮತ್ತು 1.50 ಲಕ್ಷ ಕಿಮೀಗಿಂತ ಕಡಿಮೆ ಸಂಚರಿಸಿದ ಕಾರುಗಳನ್ನು ಮಾತ್ರ ಮಾರಾಟ ಮಾಡಬಹುದೆ. ಹೀಗಾಗಿ ಟೊಯೊಟಾ ಟ್ರಸ್ಟ್‌ನಲ್ಲಿ ಹಳೆಯ ಕಾರು ಖರೀದಿಸುವ ಗ್ರಾಹಕರಿಗೂ 7 ವರ್ಷದ ವರ್ಷದೊಳಗಿನ ಕಾರುಗಳೇ ಖರೀದಿಗೆ ಲಭ್ಯವಿರಲಿದ್ದು, ಹಳೆಯ ಕಾರು ಖರೀದಿಸುವ ಗ್ರಾಹಕರಿಗೆ ಕಂಪನಿಯು ಎರಡು ವರ್ಷ ಅಥವಾ 30 ಸಾವಿರ ಕಿ.ಮೀ ವಾರಂಟಿ ಸಹ ನೀಡುತ್ತದೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಇನ್ನು ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಬಳಸಿದ ಕಾರು ಮಾರಾಟವನ್ನು ವ್ಯವಸ್ಥಿತವಾಗಿ ಮಾರಾಟಗೊಳಿಸುವ ಗುರಿ ಯೋಜನೆ ಹೊಂದಿರುವ ಕಾರು ಕಂಪನಿಗಳು ದೇಶದ ಪ್ರಮುಖ ನಗರಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿವೆ.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು.

ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಖರೀದಿ ಮತ್ತು ಮರುಮಾರಾಟ ಪಾದರ್ಶಕವಾಗಿರುವುದರಿಂದ ಇಲ್ಲಿ ಮೋಸ ವ್ಯವಹಾರಗಳಿಗೆ ಯಾವುದೇ ಅವಕಾಶವಿರುವುದಿಲ್ಲ.

Most Read Articles

Kannada
English summary
Toyota started used car outlet in bengaluru details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X