ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್‌ಗಳ ಆಗಮನ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ 75 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಸಜ್ಜಾಗಿದೆ. 75 ಹೊಸ ಬಸ್‌ಗಳ ಸಂಚಾರಕ್ಕೆ ಇದೇ 15ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್‌ಗಳ ಆಗಮನ

ಇನ್ನು ಆಗಸ್ಟ್ 15ರಂದು ಬಿಎಂಟಿಸಿ ಎಲ್ಲ ಬಸ್​ಗಳಲ್ಲಿ ಸಾರ್ವಜನಿಕರು ಉಚಿತ ಪ್ರಯಾಣ ಮಾಡಬಹುದಾಗಿದೆ. ಎಸಿ ಬಸ್ ಸಹಿತ ಎಲ್ಲ ರೀತಿಯ ಬಿಎಂಟಿಸಿ ಬಸ್​ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಸ್ವಾತಂತ್ರ್ಯ ದಿನೋತ್ಸವ ಹಾಗೂ ಬಿಎಂಟಿಸಿಗೆ 25 ವರ್ಷ ಪೂರೈಸಿದ ಕಾರಣದಿಂದಲೂ ಈ ಕೊಡುಗೆಯನ್ನು ಘೋಷಿಸಲಾಗಿದೆ.

ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್‌ಗಳ ಆಗಮನ

ಇನ್ನು ಹೊಸ ಎಲೆಕ್ಟ್ರಿಕ್ ಬಸ್‌ಗಳ ವಿಶಯಕ್ಕೆ ಬಂದರೆ ಅಶೋಕ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ವೆಹಿಕಲ್ ಆರ್ಮ್ ಸ್ವಿಚ್ ಮೊಬಿಲಿಟಿ ಲಿಮಿಟೆಡ್‌ನಿಂದ 12 ಮೀಟರ್ ಉದ್ದದ ನಾನ್-ಎಸಿ ಇ-ಬಸ್‌ಗಳನ್ನು ಮುಖ್ಯವಾಗಿ ದೂರದ ಮಾರ್ಗಗಳಲ್ಲಿ ನಿಯೋಜಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್‌ಗಳ ಆಗಮನ

ಮೊದಲ ಹಂತದಲ್ಲಿ ಯಲಹಂಕ ಡಿಪೋದಿಂದ ಇ-ಬಸ್‌ಗಳನ್ನು ಓಡಿಸಲು ಯೋಜಿಸಲಾಗಿದೆ. BMTC 401K ಯಲಹಂಕ - ಕೆಂಗೇರಿ, 290E ಶಿವಾಜಿ ನಗರ - ಯಲಹಂಕ, 402B, 402D ಕೆಂಪೇಗೌಡ ಬಸ್ ನಿಲ್ದಾಣ - ಯಲಹಂಕ ಸ್ಯಾಟಲೈಟ್ ಟೌನ್ ಮುಂತಾದ ಮಾರ್ಗಗಳನ್ನು ಗುರುತಿಸಿದೆ. ಯಲಹಂಕದಲ್ಲಿ ಚಾರ್ಜಿಂಗ್ ಸ್ಟೇಷನ್ ಈಗಾಗಲೇ ಸಿದ್ಧವಾಗಿದ್ದು, ಬಿಡದಿ ಮತ್ತು ಅತ್ತಿಬೆಲೆಯಲ್ಲಿ ಪ್ರಗತಿಯಲ್ಲಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್‌ಗಳ ಆಗಮನ

ಕೇಂದ್ರ ಸರ್ಕಾರದ 'ಫೇಮ್-2' ಯೋಜನೆಯಡಿ 300 ಇ-ಬಸ್ ಖರೀದಿಗೆ ಬಿಎಂಟಿಸಿ ಟೆಂಡರ್ ಆಹ್ವಾನಿಸಿತ್ತು. ಪ್ರತಿ ಕಿ.ಮೀ.ಗೆ 48.95 ರೂ.ಗಳನ್ನು ಉಲ್ಲೇಖಿಸಿದ ಸ್ವಿಚ್ ಮೊಬಿಲಿಟಿ ಲಿಮಿಟೆಡ್, ಗುತ್ತಿಗೆ ಆಧಾರದ ಮೇಲೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಿಸುವ ಗುತ್ತಿಗೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್‌ಗಳ ಆಗಮನ

ಸ್ವಿಚ್ ಮೊಬಿಲಿಟಿ ಚಾಲಕರನ್ನು ಒದಗಿಸುವುದಲ್ಲದೆ, ಬಸ್‌ಗಳ ಚಾರ್ಜಿಂಗ್ ಮೂಲಸೌಕರ್ಯ ಮತ್ತು ನಿರ್ವಹಣೆಯನ್ನು ಸಹ ನೋಡಿಕೊಳ್ಳುತ್ತದೆ. BMTC ಕೇವಲ ನಿರ್ವಾಹಕರನ್ನು ನೇಮಿಸಬೇಕಾಗುತ್ತದೆ. ಇ-ಬಸ್‌ಗಳು 41 ಆಸನಗಳನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 150 ಕಿ.ಮೀ ಓಡುತ್ತವೆ. 45 ನಿಮಿಷ ಚಾರ್ಜ್ ಮಾಡಿದರೆ ಮತ್ತೆ 75 ಕಿ.ಮೀ ಓಡುತ್ತದೆ. ಒಂದು ದಿನದಲ್ಲಿ 225 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಬಹುದು.

ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್‌ಗಳ ಆಗಮನ

ನಷ್ಟ ಕಡಿತ

ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಡೀಸೆಲ್ ಬಳಸಿ ಬಸ್ ಓಡಿಸಿದರೆ ಬಿಎಂಟಿಸಿ ಶಾಶ್ವತ ನಷ್ಟದಲ್ಲಿ ಮುಂದುವರಿಯಬೇಕಾಗುತ್ತದೆ. ಇ-ಬಸ್‌ಗಳು ಲಾಭ ಗಳಿಸುವ ನಿರೀಕ್ಷೆಯಿಲ್ಲದಿದ್ದರೂ, ಪ್ರಯಾಣಿಕರ ಮೇಲಿನ ಟಿಕೆಟ್ ದರದ ಹೊರೆಯನ್ನು ಕಡಿಮೆ ಮಾಡಲು ಅವು ಸಾಕಷ್ಟು ಸಹಾಯ ಮಾಡುತ್ತವೆ.

ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್‌ಗಳ ಆಗಮನ

ಕೋವಿಡ್ ನಂತರ ಬಿಎಂಟಿಸಿ ಹೆಚ್ಚು ನಷ್ಟ ಅನುಭವಿಸುತ್ತಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ಅನುದಾನದಲ್ಲಿ ಖರೀದಿಸಿರುವ ಸುಮಾರು 90 ಇ-ಬಸ್‌ಗಳು ಈಗಾಗಲೇ 9 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಈ ಬಸ್ಸುಗಳು ಮುಖ್ಯವಾಗಿ ಮೆಟ್ರೋ ಫೀಡರ್ ಮಾರ್ಗಗಳಲ್ಲಿ ಸಂಚರಿಸುತ್ತಿವೆ. 300 ಇ-ಬಸ್‌ಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಕೆಬಿಎಸ್, ಕೆಂಗೇರಿ, ಯಶವಂತಪುರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಡಿಪೋಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್‌ಗಳ ಆಗಮನ

ಲೋ ಫ್ಲೋರ್ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಲು ಆಗ್ರಹ

ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಸೂಕ್ತವಾದ ಲೋ ಫ್ಲೋರ್ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರಿಸಲು ಅನೇಕ ಪ್ರಯಾಣಿಕರು ಬಿಎಂಟಿಸಿಯನ್ನು ಒತ್ತಾಯಿಸಿದ್ದಾರೆ. ಎರಡು ಮೀಟರ್ ಉದ್ದದ ನಾನ್-ಎಸಿ ಸ್ವಿಚ್ಡ್ ಮೊಬಿಲಿಟಿ ಇ-ಬಸ್‌ಗಳು 900 ಎಂಎಂ ನೆಲದ ಎತ್ತರವನ್ನು ಹೊಂದಿವೆ(ಗ್ರೌಂಡ್ ಕ್ಲಿಯರೆನ್ಸ್). ಅವುಗಳಲ್ಲಿ ಪ್ರತಿಯೊಂದೂ ವೀಲ್-ಚೇರ್ ಎತ್ತುವ ಸೌಲಭ್ಯವನ್ನು ಹೊಂದಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Most Read Articles

Kannada
English summary
Two gifts for BMTC passengers on Independence Day free travel and arrival of 75 EV buses
Story first published: Thursday, August 11, 2022, 16:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X