ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಎಂಪಿವಿ ವಿಭಾಗವು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಇದರ ನಡುವೆ ಹಲವು ಜನಪ್ರಿಯ ಕಂಪನಿಗಳು ಎಂಪಿವಿ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಭಾರತದಲ್ಲಿ ಎಸ್‍ಯುವಿ ವಿಭಾಗದ ರೀತಿಯಲ್ಲೇ ಎಂಪಿವಿ ವಿಭಾಗದ ಕಾರುಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಹಲವು ಕಂಪನಿಗಳು ಈ ಎಂಪಿವಿ ವಿಭಾಗದ ಕಡೆ ಹೆಚ್ಚಿನ ಗಮನ ಹರಿಸುತ್ತಿದೆ. ಈ ವರ್ಷ ಭಾರತದಲ್ಲಿ ಹಲವು ಎಂಪಿವಿಗಳು ಬಿಡುಗಡೆಯಾಗಲಿದೆ. ಸದ್ಯ ಅತಿ ಹೆಚ್ಚು ಮಾರಾಟವಾಗುವ ಎಂಪಿವಿ ಮಾರುತಿ ಎರ್ಟಿಗಾ ಆಗಿದೆ. ಎಂಪಿವಿ ವಿಭಾಗದಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರುವ ಕಾರುಗಳು ಕೂಡ ಇದೆ. ಇನ್ನು ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಎಂಪಿವಿ ಕಾರುಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಟೊಯೊಟಾ ಸಿ-ಸೆಗ್ಮೆಂಟ್ ಎಂಪಿವಿ

ಜಪಾನಿನ ವಾಹನ ತಯಾರಕರಾದ ಟೊಯೊಟಾ ಎರಡು ಹೊಚ್ಚ ಹೊಸ ಮಾದರಿಗಳನ್ನು ಸಿದ್ಧಪಡಿಸುತ್ತಿದೆ. ಇದು ಮಿಡ್ ಸೈಜ್ ಎಸ್‍ಯುವಿ ಮತ್ತು ಹೊಸ ಸಿ-ಸೆಗ್ಮೆಂಟ್ ಎಂಪಿವಿಯಾಗಿದೆ. 2022ರ ಹಬ್ಬದ ಸೀಸನ್ ನಲ್ಲಿ ಹೊಸ ಎಂಪಿವಿಯು ಬಿಡುಗಡೆಯಾಗುತ್ತದೆ. ಹೊಸ ಎಂಪಿವಿಯು 2023 ರಲ್ಲಿ ಆಗಮಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

560B ಕೋಡ್ ನೇಮ್, ಹೊಸ ಸಿ-ಸೆಗ್ಮೆಂಟ್ ಎಂಪಿವಿಯನ್ನು ಟೊಯೊಟಾದ ಬಿಡದಿ ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ. ಇದು ಜಾಗತಿಕ ರೈಜ್ ಮತ್ತು ನ್ಯೂ ಜನರೇಷನ್ ಅವನ್ಜಾವನ್ನು ಆಧಾರವಾಗಿರುವ ಟೊಯೋಟಾದ DNGA (ದೈಹತ್ಸು ನ್ಯೂ ಜನರೇಷನ್ ಆರ್ಕಿಟೆಕ್ಚರ್) ಅನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದೆ. ಟೊಯೊಟಾ ಅವನ್ಜಾ ಎಂಪಿವಿಯ ಸ್ಪೋರ್ಟಿಯರ್ ಆವೃತ್ತಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಟೊಯೊಟಾ ಸಿ-ಸೆಗ್ಮೆಂಟ್ ಎಂಪಿವಿಯು ಕಿಯಾ ಕಾರೆನ್ಸ್ ಮತ್ತು ಮಹೀಂದ್ರಾ ಮರಾಜೊಗೆ ಪ್ರತಿಸ್ಪರ್ಧಿಯಾಗಲಿದೆ. ಈ ಹೊಸ ಎಂಪಿವಿ ಟೊಯೊಟಾದ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ. ಈ ಹೊಸ ಟೊಯೋಟಾ ಎಂಪಿವಿಯನ್ನು ಸಹ ಮಾರುತಿ ಸುಜುಕಿಯೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಟೊಯೊಟಾ ರೂಮಿಯನ್

ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರೂಮಿಯನ್ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದರಿಂದ 7-ಸೀಟರ್ ಎಂಪಿವಿಯನ್ನು ಭಾರತದಲ್ಲಿ ಅದೇ ಹೆಸರಿನಲ್ಲಿ ಪರಿಚಯಿಸಲಾಗುವುದು ಎಂದು ತಿಳಿಯುತ್ತದೆ. ಆದರೆ ಟೊಯೊಟಾ ಕಂಪನಿಯು ಇದರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಎಂಪಿವಿ ಮಾದರಿಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಅಲ್ಲದೇ ಕೈಗೆಟುಕು ದರದಲ್ಲಿ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಿ ಮಾರಾಟವನ್ನು ಹೆಚ್ಚಿಸಿ ತಂತ್ರವನ್ನು ಹೊಂದಿರಬಹುದು. ಟೊಯೊಟಾ ರೂಮಿಯನ್ (Toyota Rumion) ಎಂದು ಕರೆಯಲ್ಪಡುವ ಹೊಸ ಎಂಪಿವಿ ಭಾರತದಲ್ಲಿ ಮಾರಾಟದಲ್ಲಿರುವ ಮಾರುತಿ ಸುಜುಕಿ ಎರ್ಟಿಗಾವನ್ನು ಹೋಲುತ್ತದೆ. ಈ ಹೊಸ ಟೊಯೊಟಾ ರೂಮಿಯನ್ ಎಂಪಿವಿ ತನ್ನನ್ನು ಮಾರುತಿ ಎರ್ಟಿಗಾದಿಂದ ಪ್ರತ್ಯೇಕಿಸಲು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ರೂಮಿಯನ್ ಗ್ಲೆನ್ಜಾ/ಸ್ಟಾರ್ಟ್ಲೆಟ್ ಮತ್ತು ಅರ್ಬನ್ ಕ್ರೂಸರ್ ಸೇರಿದಂತೆ ಇತರ ರೀ-ಬ್ಯಾಡ್ಜ್ಡ್ ಟೊಯೊಟಾ ಕಾರುಗಳನ್ನು ಕ್ರಮವಾಗಿ ಬಲೆನೊ ಮತ್ತು ಬ್ರೆಝಾವನ್ನು ಆಧರಿಸಿದೆ. ಇದು ಶೀಘ್ರದಲ್ಲೇ ಭಾರತದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಇನ್ನು ಟೊಯೊಟಾ ರೂಮಿಯನ್ ಎಂಪಿವಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸ ರೂಮಿಯನ್ ಎಂಪಿವಿಯು ಟೊಯೋಟಾ ಬ್ಯಾಡ್ಜ್‌ನೊಂದಿಗೆ ವಿಭಿನ್ನ ಗ್ರಿಲ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಕಿಯಾ ಕಾರೆನ್ಸ್ ಎಂಪಿವಿ

ಕಿಯಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ನಾಲ್ಕನೇ ಕಾರು ಮಾದರಿಯಾಗಿ ಕಾರೆನ್ಸ ಎಂಪಿವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಲಿದೆ, ಅತ್ಯುತ್ತಮ ಎಂಜಿನ್ ಆಯ್ಕೆ, ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡಿರುವ ಈ ಹೊಸ ಎಂಪಿವಿ ಕಾರು ಫೆಬ್ರವರಿ ಎರಡನೇ ವಾರದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಹೊಸ ಮಾದರಿಯು ಸೆಲ್ಟೋಸ್ ಎಸ್‍ಯುವಿಗೆ ಆಧಾರವಾಗಿರುವ ಮಾರ್ಪಡಿಸಿದ SP2 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.ಕಿಯಾ ಕಾರೆನ್ಸ್ ಮಾದರಿಯು ಭಾರತದಲ್ಲಿ ಮಹೀಂದ್ರ ಮರಾಜೊಗೆ ಪೈಪೋಟಿ ನೀಡುತ್ತದೆ, ಇನ್ನು ಕಾರೆನ್ಸ್ ಎಂಪಿವಿಯನ್ನು 5ಟ್ರಿಮ್ ಹಂತಗಳಲ್ಲಿ ನೀಡಲಾಗುವುದು. ಈ ಎಂಪಿವಿಯು ಆರು ಏರ್‌ಬ್ಯಾಗ್‌ಗಳು, ಎಲ್ಲಾ-4 ಡಿಸ್ಕ್ ಬ್ರೇಕ್‌ಗಳು ಮತ್ತು ESP ಯಂತಹ ಹಲವಾರು ವಿಭಾಗ-ಪ್ರಮುಖ ವೈಶಿಷ್ಟ್ಯಗಳೊಂದಿಗೆ ಬರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಕ್ಸ್‌ಎಲ್6

ಮಾರುತಿ ಸುಜುಕಿಯು ಎರ್ಟಿಗಾ ಮತ್ತು ಎಕ್ಸ್‌ಎಲ್6 ನವೀಕರಿಸಿದ ಆವೃತ್ತಿಗಳನ್ನು 2022 ರಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಿದೆ. ನವೀಕರಿಸಿದ ಮಾಡೆಲ್‌ಗಳನ್ನು ಈಗಾಗಲೇ ಹಲವು ಬಾರಿ ಪರೀಕ್ಷಿಸಲಾಗಿದೆ. ಎರ್ಟಿಗಾ ಸ್ವಲ್ಪ ಪರಿಷ್ಕೃತ ಗ್ರಿಲ್ ಮತ್ತು ಬಂಪರ್ ರೂಪದಲ್ಲಿ ಕನಿಷ್ಠ ಬದಲಾವಣೆಗಳನ್ನು ಪಡೆಯುತ್ತದೆ. ಕ್ಯಾಬಿನ್ ವಿನ್ಯಾಸವು ಒಂದೇ ಆಗಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಈ ಮಾದರಿಯು ಒಳಗೆ ಮತ್ತು ಹೊರಗೆ ಸಣ್ಣ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಮಾರುತಿ ಎಕ್ಸ್‌ಎಲ್6 ಅರೆನಾ ಮೂಲಕ ಮಾರಾಟವಾಗುವ ಎರ್ಟಿಗಾವನ್ನು ಆಧರಿಸಿದೆ. ಪ್ರಸ್ತುತ ತಲೆಮಾರಿನ ಎರ್ಟಿಗಾದ ನಂತರ ಮಾರುತಿ ಎಕ್ಸ್‌ಎಲ್6 ಎಂಪಿವಿಯನ್ನು 2019 ರಲ್ಲಿ ಬಿಡುಗಡೆ ಮಾಡಿತು. ವಿನ್ಯಾಸದ ದೃಷ್ಟಿಯಿಂದ, ಎರ್ಟಿಗಾಕ್ಕಿಂತ ಎಕ್ಸ್‌ಎಲ್6 ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಮಾರುತಿ ಸಾಮಾನ್ಯ ಎರ್ಟಿಗಾದಿಂದ ಪ್ರತ್ಯೇಕಿಸಲು ಕಾರಿನ ಒಟ್ಟಾರೆ ನೋಟಕ್ಕೆ ಅಗತ್ಯ ಬದಲಾವಣೆಗಳನ್ನು ಮಾಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಪಿವಿ ಕಾರುಗಳಿವು..

ಮುಂಭಾಗವನ್ನು ಮರುವಿನ್ಯಾಸಗೊಳಿಸಲಾಗಿದೆ. ಇದು ಈಗ ಪ್ರೀಮಿಯಂ ಲುಕಿಂಗ್ ಫ್ರಂಟ್ ಗ್ರಿಲ್ ಅನ್ನು ಪಡೆಯುತ್ತದೆ, ಎಕ್ಸ್‌ಎಲ್6 ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಅದರ ಜೊತೆಗೆ, ಕಂಪನಿಯು ಕ್ರಾಸ್ಒವರ್-ಎಂಪಿವಿಯ 7-ಸೀಟರ್ ಮಾದರಿಯನ್ನು ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಪಡೆಯಬಹುದು, ಇದನ್ನು ಬಲೆನೊ ಫೇಸ್‌ಲಿಫ್ಟ್‌ನಲ್ಲಿ ಸಹ ನೀಡಲಾಗುವುದು. ಎರಡೂ ಮಾದರಿಗಳು 1.5L K15ಬಿ ಪೆಟ್ರೋಲ್ ಎಂಜಿನ್ ಅನ್ನು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ನೀಡುವುದನ್ನು ಮುಂದುವರಿಸುತ್ತವೆ.

Most Read Articles

Kannada
English summary
Upcoming new mpv models in indian market details
Story first published: Saturday, January 22, 2022, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X